Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
September Month Love Horoscope 2023: ಸೆಪ್ಟೆಂಬರ್ ತಿಂಗಳಲ್ಲಿ 4 ರಿಂದ 10 ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ
ಪ್ರತಿವಾರ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ. ಇದರ ನೇರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಆಗಲಿದೆ. ಅದ್ರಲ್ಲೂ ಮುಖ್ಯವಾಗಿ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಕೆಲ ರಾಶಿಯವರಿಗೆ ಈ ವಾರ ಚೆನ್ನಾಗಿದ್ದರೆ, ಇನ್ನೂ ಕೆಲ ರಾಶಿಯವರಿಗೆ ಇದ್ರಿಂದ ಕೆಟ್ಟದಾಗಲಿದೆ. ಅಷ್ಟಕ್ಕೂ ಈ ವಾರ ದ್ವಾದಶ ರಾಶಿಗಳ ಪ್ರೀತಿ ಭವಿಷ್ಯ ಹೇಗಿರಲಿದೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.
ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ತಮ್ಮ ಸಂಗಾತಿಯೊಂದಿಗಿನ ವಿವಾದವು ಕೊನೆಗೊಳ್ಳುತ್ತದೆ. ಮತ್ತು ನಿಮ್ಮ ಸಂಬಂಧ ಉತ್ತಮಗೊಳ್ಳುತ್ತವೆ. ನಿಮ್ಮ ತಪ್ಪಿಗಾಗಿ ನಿಮ್ಮ ಸಂಗಾತಿ ನಿಮ್ಮಲ್ಲಿ ಕ್ಷಮೆ ಕೇಳಬೇಕಾಗಬಹುದು. ನೀವು ಹಳೆಯ ವಿಷಯಗಳನ್ನು ಸಹ ಮರೆತು ಬಿಡುತ್ತೀರಿ. ಹೀಗಾಗಿ ಎಲ್ಲವನ್ನೂ ಮರೆತು ಹೊಸ ಜೀವನವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಮತ್ತು ಹೆಚ್ಚು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಈ ವಾರ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ವಾರ ನಿಮ್ಮ ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಮತ್ತು ನಿಮ್ಮ ಆಸೆಗಳನ್ನು ಪೂರೈಸುತ್ತಾರೆ. ನಿಮ್ಮ ಕೆಲಸದಲ್ಲಿ ನಿಮ್ಮ ಸಂಗಾತಿ ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ.
ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರು ತಮ್ಮ ಸಂಗಾತಿಯೊಂದಿಗೆ ದೊಡ್ಡ ಜಗಳ ಆಡುವ ಸಾಧ್ಯತೆಯಿದೆ. ನಿಮ್ಮ ಸಂಗಾತಿ ಕೂಡ ಸ್ವಲ್ಪ ಸಮಯದವರೆಗೆ ನಿಮ್ಮಿಂದ ದೂರ ಹೋಗಬಹುದು. ಮಿಥುನ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಕುಳಿತು ಮಾತನಾಡುವುದು ಉತ್ತಮ.
ಕರ್ಕಾಟಕ ರಾಶಿ
ಈ ವಾರ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ನಿಮ್ಮ ಜೀವನದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಪ್ರೀತಿಯ ಸಂಗಾತಿ ನಿಮ್ಮ ಜೀವನ ಸಂಗಾತಿಯಾಗಬಹುದು. ಈ ವಾರ ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಬಹುದು.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರು ತಮ್ಮ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಸಂಗಾತಿಯೊಂದಿಗೆ ಕೆಲವು ವಾದ-ವಿವಾದಗಳು ಆಗುವ ಸಾಧ್ಯತೆಯಿದೆ. ಸಿಂಹ ರಾಶಿಯವರು ಈ ವಾರ ತಮ್ಮ ಸಂಬಂಧ ಹಾಳಾಗದಂತೆ ಜಾಗರೂಕತೆ ವಹಿಸಿದ್ರೆ ಉತ್ತಮ.
ಕನ್ಯಾ ರಾಶಿ
ಈ ವಾರ ಕನ್ಯಾ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ಕೆಲವು ಗುಪ್ತ ವಿಷಯಗಳನ್ನು ತಿಳಿದುಕೊಳ್ಳಬಹುದು. ಇದರಿಂದ ನೀವು ಒತ್ತಡಕ್ಕೆ ಒಳಗಾಗುವುದಿಲ್ಲ. ಆದರೆ ನಿಮ್ಮ ಮನಸ್ಸು ತುಂಬಾ ಅಸಮಾಧಾನಗೊಳ್ಳುತ್ತದೆ. ಆದರೆ ಯಾವುದೇ ಕಾರಣಕ್ಕೂ ನೀವು ಆತುರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು.
ತುಲಾ ರಾಶಿ
ಈ ವಾರ ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲೋ ಹೊರಗೆ ಹೋಗಬಹುದು. ಈ ವಾರ ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಮತ್ತು ಪರಸ್ಪರ ಅರ್ಥಮಾಡಿಕೊಳ್ಳಿ. ನಿಮ್ಮ ಸಂಗಾತಿಗೆ ಸಮಯ ನೀಡಿ ಅವರೊಂದಿಗೆ ಕೆಲವು ಕ್ಷಣಗಳನ್ನು ಕಳೆಯಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ಪ್ರೇಮ ಜೀವನದಲ್ಲಿ ಸಂಗಾತಿಯೊಂದಿಗೆ ವಿವಾದಗಳನ್ನು ಹೊಂದಿರಬಹುದು. ವಿವಾದವು ಸಂಬಂಧವನ್ನು ಮುರಿಯುವ ಹಂತಕ್ಕೂ ಕೊಂಡೊಯ್ಯಬಹುದು. ನಿಮ್ಮ ಸಂಗಾತಿಗೆ ಸ್ವಲ್ಪ ಸಮಯ ನೀಡಿ ಅವರೊಂದಿಗೆ ಪ್ರೀತಿಯಿಂದ ನಡೆದುಕೊಂಡರೆ ಉತ್ತಮ.
ಧನು ರಾಶಿ
ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಈ ವಾರ ನೀವು ತುಂಬಾನೇ ಸಂತೋಷವಾಗಿ ಇರುತ್ತೀರಿ. ನಿಮ್ಮ ಸಂಗಾತಿಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚಿನ ಸಮಯವನ್ನು ಕಳೆದು ಅವರನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿ. ಒಟ್ಟಾರೆಯಾಗಿ ಈ ವಾರ ನಿಮಗೆ ಅತ್ಯುತ್ತಮವಾಗಿರಲಿದೆ.
ಮಕರ ರಾಶಿ
ಈ ವಾರ ನಿಮ್ಮ ಮತ್ತು ನಿಮ್ಮ ಪ್ರೀತಿಯ ಸಂಗಾತಿಯ ನಡುವೆ ಸ್ವಲ್ಪ ಅಂತರವಿರಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಅಸಮಾಧಾನಗೊಳ್ಳಬೇಡಿ. ಯಾವುದೇ ವಿಆರವಾದರೂ ತಾಳ್ಮೆಯಿಂದ ನಿರ್ವಹಿಸಿ. ನಿಮ್ಮ ಸಂಗಾತಿ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಹೆಚ್ಚು ತಲೆ ಕೆಡಿಸಿಕೊಳ್ಳೋದಕ್ಕೆ ಹೋಗಬೇಡಿ. ಅವರಿಗೆ ಬೇರೆ ಏನಾದರೂ ಕೆಲಸ ಇರಬಹುದು. ಅವರನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಪ್ರೀತಿಯ ಸಂಗಾತಿಯ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಈ ಭಿನ್ನಾಬಿಪ್ರಾಯಗಳು ಸಂಬಂಧವನ್ನು ಉಳಿಸುವ ಸಲುವಾಗಿ ಅಥವಾ ಸಂಬಂಧದ ಸುಧಾರಣೆಗಾಗಿ ಇರಬಹುದು. ಹೀಗಾಗಿ ತಾಳ್ಮೆಯಿಂದಿರಿ ಮತ್ತು ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಮೀನ ರಾಶಿ
ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಪ್ರೀತಿಸಿದವರೊಂದಿಗೆ ನಿಮ್ಮ ಮದುವೆಯ ಸಮಸ್ಯೆಯು ಕುಟುಂಬದಲ್ಲಿ ಉದ್ಭವಿಸುವ ಸಾಧ್ಯತೆಯಿದೆ. ಮತ್ತು ನೀವು ಈ ವರ್ಷ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಈ ವಾರ ನಿಮ್ಮ ಸಂಗಾತಿಯೊಂದಿಗೆ ನೀವು ತುಂಬಾ ಸಂತೋಷವಾಗಿರುತ್ತೀರಿ.



Click it and Unblock the Notifications


