August Month Love Horoscope 2023: ಆಗಸ್ಟ್ ತಿಂಗಳಲ್ಲಿ 31 ರಿಂದ 6 ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಗ್ರಹಗತಿಗಳ ಬದಲಾವಣೆಯಿಂದಾಗಿ ಈ ವಾರ ನಿಮ್ಮ ಪ್ರೀತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿದೆ. ಕೆಲವು ರಾಶಿಯವರ ದಾಂಪತ್ಯ ಚೆನ್ನಾಗಿದ್ದರೆ, ಇನ್ನೂ ಕೆಲವು ರಾಶಿಯವರ ದಾಂಪತ್ಯದಲ್ಲಿ ಕೆಲವೊಂದು ಸಮಸ್ಯೆಗಳು, ಕಿರಿಕಿರಿ ಎದುರಾಗಲಿದೆ. ಇನ್ನೂ ಪ್ರೀತಿಯಲ್ಲಿ ಇರುವವರಿಗೆ ಕೂಡ ಈ ವಾರ ಅಡ್ಡಿ-ಆತಂಕಗಳನ್ನು ಎದುರಿಸುವ ಸಾಧ್ಯತೆಯಿದೆ. ಅಷ್ಟಕ್ಕು ಈ ವಾರ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ಈ ವಾರ ಸ್ವಲ್ಪ ತೊಂದರೆಯಾಗಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ಯಾವುದೇ ರೀತಿಯ ಬಾಹ್ಯ ಹಸ್ತಕ್ಷೇಪವು ನಿಮಗೆ ತೊಂದರೆ ತರಬಹುದು. ವಾರದ ಕೊನೆಯಲ್ಲಿಯೂ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮ. ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳಬಹುದು ಮತ್ತು ಪ್ರೇಮ ಜೀವನದಲ್ಲಿ ಚಡಪಡಿಕೆ ಕೂಡ ಹೆಚ್ಚಾಗಬಹುದು. ಯಾವುದೇ ಕಾರಣಕ್ಕೂ ಯೋಚಿಸಿದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಿ.

Love Weekly Horoscope 31 August To 6 August 2023: Love interests Predictions on All Zodiac Signs

ವೃಷಭ ರಾಶಿ

ವೃಷಭ ರಾಶಿಯವರು ಈ ವಾರ ಪ್ರೀತಿಯ ವಿಷಯದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಸಂಬಂಧದಲ್ಲಿ ಅಹಂಕಾರಕ್ಕೆ ಆಸ್ಪದ ಕೊಡಬಾರದು. ಇದರಿಂದ ನಿಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಮೂರನೇ ಮಹಿಳೆಯನ್ನು ನಿಮ್ಮ ಸಂಬಂಧದಲ್ಲಿ ಒಳ ಬರೋದಕ್ಕೆ ಆಸ್ಪದ ಕೊಡಬೇಡಿ. ಈ ವಾರ ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಪ್ರೇಮಿಗಳು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಈ ವಾರ ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ಕ್ಷಣಗಳನ್ನು ನೀವು ಕಳೆಯುತ್ತೀರಿ. ವಾರದ ಕೊನೆಯಲ್ಲಿ ನಿಮ್ಮ ಪ್ರೀತಿಯ ಜೀವನದ ಬಗ್ಗೆ ನೀವು ತುಂಬಾ ಸಕಾರಾತ್ಮಕವಾಗಲು ಪ್ರಾರಂಭಿಸುತ್ತೀರಿ. ಇದರಿಂದಾಗಿ ನಿಮಗೆ ಮಾನಸಿಕ ತೊಂದರೆಗಳು ಹೆಚ್ಚಾಗಬಹುದು. ಈ ವಾರ ನೀವು ಪ್ರತಿಯೊಂದು ವಿಷಯದಲ್ಲೂ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನೀವು ನಷ್ಟ ಅನುಭವಿಸುತ್ತೀರಿ.

ಕರ್ಕಾಟಕ ರಾಶಿ

ಈ ವಾರ ಕರ್ಕಾಟಕ ರಾಶಿಯವರು ಪ್ರೀತಿಯ ಜೀವನದಲ್ಲಿ ಸಂತೋಷವನ್ನು ಕಾಣುತ್ತಾರೆ. ನಿಮ್ಮ ಭವಿಷ್ಯಕ್ಕಾಗಿ ಕೆಲವು ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ವಾರದ ಕೊನೆಯಲ್ಲಿ ಕೆಲವು ಸಂದರ್ಭಗಳು ನಿಮಗೆ ಪ್ರತಿಕೂಲವಾಗಬಹುದು. ಮತ್ತು ನೀವು ಜೀವನದಲ್ಲಿ ಸ್ವಲ್ಪ ನಿರ್ಬಂಧವನ್ನು ಅನುಭವಿಸಬಹುದು. ಕುಟುಂಬ ಸದಸ್ಯರು ನಿಮ್ಮ ಮೇಲೆ ಒತ್ತಡ ವಿಧಿಸುವ ಸಾಧ್ಯತೆಯಿದೆ.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯ ದಂಪತಿಗಳ ಪ್ರೀತಿ ಪರಸ್ಪರ ಪ್ರೀತಿ ಬಲವಾಗಿರುತ್ತದೆ. ಮತ್ತು ಮಹಿಳೆಯ ಸಹಾಯದಿಂದ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ಸಾಧಿಸುತ್ತೀರಿ. ಈ ವಾರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೇಮ ಜೀವನದಲ್ಲಿ ಸಂತೋಷವು ಬಡಿಯುತ್ತದೆ. ಪ್ರೀತಿಯ ವಿಚಾರದಲ್ಲಿ ಈ ವಾರ ಯಾವುದೇ ತೀರ್ಮಾನಕ್ಕೆ ಬರಬೇಡಿ. ವಾರದ ಕೊನೆಯಲ್ಲಿ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಈ ವಾರ ಅದೃಷ್ಟವು ನಿಮ್ಮ ಪರವಾಗಿರುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಪ್ರೇಮ ಸಂಬಂಧದಲ್ಲಿ ಪರಸ್ಪರ ಪ್ರೀತಿ ಬಲವಾಗುತ್ತದೆ. ಮತ್ತು ಪ್ರೇಮ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ನಿಮ್ಮ ಪ್ರೀತಿಯ ಸಂಬಂಧವನ್ನು ಬಲಪಡಿಸುವಲ್ಲಿ ನೀವು ತಾಯಿಯ ಸಹಾಯವನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ನೀವು ಎಂದಿಗೂ ಯೋಚಿಸದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ವಾರವು ಅನುಕೂಲಕರವಾಗಿದೆ. ಈ ವಾರ ಪ್ರೇಮ ಸಂಬಂಧದಲ್ಲಿ ಶಾಂತಿ ಇರುತ್ತದೆ ಮತ್ತು ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಯ ಜೀವನವನ್ನು ಸಂತೋಷದಿಂದ ನಡೆಸಲು ನೀವು ನಿಮ್ಮ ತಂದೆಯ ಸಹಾಯವನ್ನು ಪಡೆಯಬಹುದು. ಮತ್ತು ಅವರ ಆಶೀರ್ವಾದದಿಂದ ಜೀವನದಲ್ಲಿ ಶಾಂತಿ ಇರುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿದರೆ ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ವಾರ ಪ್ರೀತಿಯ ವಿಚಾರದಲ್ಲಿ ಅನುಕೂಲಕರವಾಗಿರುತ್ತದೆ. ಯಶಸ್ಸನ್ನು ಸಾಧಿಸುವಿರಿ ಮತ್ತು ಪ್ರೇಮ ಜೀವನದಲ್ಲಿ ಸಂಭಾಷಣೆಯ ಮೂಲಕ ಸನ್ನಿವೇಶಗಳು ಸುಧಾರಿಸುತ್ತವೆ. ವಾರದ ಕೊನೆಯಲ್ಲಿ ಮನಸ್ಸಿನಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ಬೇಸರವಿರುತ್ತದೆ. ಮತ್ತು ಜೀವನದಲ್ಲಿ ಚಂಚಲತೆಯೂ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರ ಸಹಕಾರದಿಂದ ಎಲ್ಲಾ ಸಮಸ್ಯೆ ಬಗೆ ಹರಿಯುವ ಸಾಧ್ಯತೆಯಿದೆ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಅನುಕೂಲಕರವಾಗಿಲ್ಲ. ಪ್ರೀತಿಯ ವಿಚಾರಕ್ಕಾಗಿ ಮನಸ್ಸು ದುಃಖಿತವಾಗಬಹುದು. ಮತ್ತು ಅಹಂಕಾರದಿಂದಾಗಿ ಸಂಘರ್ಷಗಳು ಹೆಚ್ಚಾಗಬಹುದು. ನಿಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ತೊಂದರೆ ಇರುತ್ತದೆ. ಮತ್ತು ನಿಮ್ಮಬ್ಬರ ಮಧ್ಯೆ ಅಂತರವೂ ಹೆಚ್ಚಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ನೀವು ಕೆಲವು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಉತ್ತಮ.

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರದ ಆರಂಭವು ಪ್ರೇಮ ಸಂಬಂಧದಲ್ಲಿ ಸ್ವಲ್ಪ ಸವಾಲಾಗಿರುತ್ತದೆ. ಮತ್ತು ಯಾವುದೇ ಪ್ರಾರಂಭದ ಬಗ್ಗೆ ಮನಸ್ಸಿನಲ್ಲಿ ಅನುಮಾನವಿರುತ್ತದೆ. ನೀವು ತುಂಬಾ ಒಂಟಿತನವನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ವಾರ ಸ್ವಲ್ಪ ಯೋಚಿಸಿದ ನಂತರ ನೀವು ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡರೆ ಉತ್ತಮ ಫಲಿತಾಂಶಗಳು ಹೊರಬರುತ್ತವೆ. ವಾರದ ಕೊನೆಯಲ್ಲಿ ಇಬ್ಬರ ಮಧ್ಯೆ ಪರಸ್ಪರ ಪ್ರೀತಿ ಹೆಚ್ಚಾಗುವ ಸಾಧ್ಯತೆಯಿದೆ.

ಕುಂಭ ರಾಶಿ

ಕುಂಭ ರಾಶಿಯವರು ಈ ವಾರ ಪ್ರೀತಿಯ ವಿಚಾರದಲ್ಲಿ ಕೊಂಚ ನೋವು ಅನುಭವಿಸುತ್ತಾರೆ. ಪ್ರೇಮ ಜೀವನದಲ್ಲಿ ಶಾಂತಿಯನ್ನು ಪಡೆಯಲು ನಿಮ್ಮ ಕಡೆಯಿಂದ ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ವಾರದ ಅಂತ್ಯದ ವೇಳೆಗೆ ಜೀವನದಲ್ಲಿ ಶಾಂತಿ ಇರುತ್ತದೆ. ಈ ವಾರ ನೀವು ಮದುವೆ ಸಮಾರಂಭದಲ್ಲಿ ಭಾಗವಹಿಸಬಹುದು. ಈ ವಾರ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ವಾರ ಚೆನ್ನಾಗಿರುತ್ತದೆ. ಪ್ರೇಮ ಸಂಬಂಧದಲ್ಲಿ ಪರಸ್ಪರ ಪ್ರೀತಿ ಹೆಚ್ಚುತ್ತದೆ. ಮತ್ತು ನಿಮ್ಮ ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ನಿಮ್ಮ ಇಚ್ಛೆಯಂತೆ ನಿಮ್ಮ ಪ್ರೇಮ ಜೀವನದಲ್ಲಿ ಬದಲಾವಣೆಗಳನ್ನು ತರಲು ನಿಮಗೆ ಸಾಧ್ಯವಾಗುತ್ತದೆ. ವಾರದ ಕೊನೆಯಲ್ಲಿ ನೀವು ಮಾಡುವ ಕಠಿಣ ಕೆಲಸವು ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಶಾಂತಿ ಹೆಚ್ಚಾಗುವಂತೆ ಮಾಡುತ್ತದೆ. ಕುಟುಂಬ ಸದಸ್ಯರಿಂದ ನೀವು ಎಲ್ಲಾ ರೀತಿಯ ಬೆಂಬಲವನ್ನು ಪಡೆಯುತ್ತೀರಿ.

English summary

Love Weekly Horoscope 31 August To 6 August 2023: Love interests Predictions on All Zodiac Signs

Here are July love horoscope of 31 August To 6 August 2023 in Kannada read on.
X
Desktop Bottom Promotion