July Month Love Horoscope 2023: ಜುಲೈ ತಿಂಗಳು ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಜುಲೈ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಹೀಗಾಗಿ ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಧನಾತ್ಮಕವಾಗಿ ಇದ್ದರೆ ಇನ್ನೂ ಕೆಲವು ರಾಶಿಗಳು ಮೇಲೆ ಋಣಾತ್ಮಕವಾಗಿ ಇರಲಿದೆ. ಇದರ ಪರಿಣಾಮ ಪ್ರೀತಿ ಹಾಗೂ ಸಂಬಂಧದ ಮೇಲೂ ಆಗಲಿದೆ. ಕೆಲವರ ಬಾಳಿನಲ್ಲಿ ತಮ್ಮ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಇನ್ನೂ ಕೆಲವರ ಬಾಳಿನಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಅಷ್ಟಕ್ಕು ಜುಲೈ ತಿಂಗಳಿನಲ್ಲಿ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

Love Horoscope July 2023 for All the 12 Zodiac SignsinKannada

ಮೇಷ ರಾಶಿ
ಮೇಷ ರಾಶಿವರು ಜುಲೈ ತಿಂಗಳಲ್ಲಿ ತಮ್ಮ ಸಂಗಾತಿಯ ಜೊತೆಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ರಜಾ ದಿನದಲ್ಲಿ ನಿಮ್ಮ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ. ಒಂಟಿಯಾಗಿ ಇರುವವರು ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ. ಹಾಗೂ ಅವರ ಜೊತೆಗೆ ಉತ್ತಮ ಸಮಯ ಕಳೆಯುತ್ತಾರೆ. ಇನ್ನೂ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರ ಬಳಿ ನಿಮ್ಮ ಪ್ರೀತಿ ಹೇಳಿಕೊಳ್ಳೋದಕ್ಕೆ ಇದು ಉತ್ತಮ ಸಮಯ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಜುಲೈ ತಿಂಗಳು ಅಷ್ಟೊಂದು ಉತ್ತಮವಾಗಿ ಇರೋದಿಲ್ಲ. ದಂಪತಿಗಳ ನಡುವಿನ ಕೆಲವು ತಪ್ಪುಗ್ರಹಿಕೆಯು ಒತ್ತಡವನ್ನು ಉಂಟುಮಾಡುತ್ತದೆ. ಹೀಗಾಗಿ ಸಂಗಾತಿಯ ಜೊತೆಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಅವಿವಾಹಿತರು ಒಂಟಿತನ ಅನುಭವಿಸಬಹುದು. ಈ ತಿಂಗಳು ನಿಮಗೆ ತಕ್ಕ ಜೋಡಿ ಸಿಗುವ ಸಾಧ್ಯತೆ ಕಡಿಮೆ. ಇನ್ನೂ ಸಂಬಂಧದಲ್ಲಿ ಇರುವವರು ತಮ್ಮ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ.

ಮಿಥುನ ರಾಶಿ
ಈ ತಿಂಗಳು ಮಿಥುನ ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ಚೆನ್ನಾಗಿದೆ.ದಂಪತಿಗಳ ನಡುವೆ ತಿಳುವಳಿಕೆ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ನೀವು ಹೆಚ್ಚು ಕಾಳಜಿ ಮಾಡೋದ್ರಿಂದ ಅವರು ತುಂಬಾನೇ ಖುಷಿ ಪಡುತ್ತಾರೆ. ಕುಟುಂಬದ ಇತರ ಸದಸ್ಯರ ನಡುವೆ ಶಾಂತಿ ಮತ್ತು ಸಾಮರಸ್ಯ ಇರುತ್ತದೆ. ಒಂಟಿಯಾಗಿರುವವರಿಗೆ ಉತ್ತಮ ಸಂಗಾತಿ ಲಭ್ಯವಾಗುವ ಸಾಧ್ಯತೆಯಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಈ ತಿಂಗಳು ಸಂಗಾತಿಯೊಂದಿಗೆ ತಪ್ಪು ಗ್ರಹಿಕೆ ಮಾಡಿಕೊಂಡು ತಮ್ಮ ಸಂಬಂಧವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ನೀವು ಮಾಡುವ ಹಾಸ್ಯವೇ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಹೀಗಾಗಿ ಮಾತನಾಡುವಾಗ ಕೊಂಚ ಹುಷಾರಾಗಿರಿ. ಕುಟುಂಬ ಸದಸ್ಯರೊಂದಿಗೆ ಕೆಲವು ಕಲಹಗಳು ಉಂಟಾಗಬಹುದು. ಈ ತಿಂಗಳು ಕೂಡ ಅವಿವಾಹಿತರು ಏಕಾಂಗಿಯಾಗಿ ಇರುತ್ತೀರಿ. ಈ ತಿಂಗಳ ಆದಷ್ಟು ಶಾಂತವಾಗಿರಿ.

ಸಿಂಹ ರಾಶಿ
ಸಿಂಹ ರಾಶಿಯವರ ಜುಲೈ ತಿಂಗಳ ಪ್ರೇಮ ಜಾತಕ ಉತ್ತಮವಾಗಿದೆ. ದಂಪತಿಗಳ ಮಧ್ಯೆ ಉತ್ತಮ ಬಾಂಧವ್ಯ ಇರುತ್ತದೆ. ಹಾಗೂ ನಿಮ್ಮ ಮಧ್ಯೆ ತಿಳುವಳಿ ಹೆಚ್ಚಾಗುತ್ತದೆ. ಸಂಗಾತಿಯ ಜೊತೆಗಿನ ಭಾವನಾತ್ಮಕ ಸಂಬಂಧ ನಿಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಈ ತಿಂಗಳ ದ್ವಿತೀಯಾರ್ಧದಲ್ಲಿ ನಿಮ್ಮ ಸೌಹಾರ್ದವನ್ನು ಹಾಳಾಗದಂತೆ ನಿಮ್ಮ ಅಹಂಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅವಿವಾಹಿತರು ನಿಮ್ಮ ಸಿಂಗಲ್ ಜೀವನವನ್ನೇ ಆನಂದಿಸಬೇಕು.

ಕನ್ಯಾ ರಾಶಿ
ಈ ತಿಂಗಳಿನಲ್ಲಿ ಕನ್ಯಾ ರಾಶಿಯವರು ಸಂಗಾತಿಯ ಜೊತೆಗೆ ಕಠಿಣವಾಗಿ ವರ್ತಿಸುವ ಸಂದರ್ಭ ಎದುರಾಗುತ್ತದೆ. ಹೀಗಾಗಿ ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ನಿಮ್ಮ ಸಂಗಾತಿಗೆ ನೋವಾಗದಂತೆ ಜಾಗೃತೆ ವಹಿಸಿ. ಅವಿವಾಹಿತರು ತಮ್ಮ ಸಂಬಂಧದಲ್ಲಿ ಪ್ರಾಮಾಣಿಕರಾಗಿರಬೇಕು. ಯಾಕಂದ್ರೆ ಆ ಪ್ರಾಮಾಣಿಕತೆಯೇ ನಿಮ್ಮ ಪ್ರೀತಿಯನ್ನು ಉಳಿಸುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಜುಲೈ ತಿಂಗಳ ಪ್ರೇಮ ಭವಿಷ್ಯ ಮಧ್ಯಮವಾಗಿರುತ್ತದೆ. ಕೆಲವೊಂದು ವಿಚಾರಗಳಿಗಾಗಿ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಬಿರುಕುಂಟಾಗುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಸಂಗಾತಿಗೆ ಇಷ್ಟ ಇರದೇ ಇರೋದನ್ನು ಮಾಡೋದಕ್ಕೆ ಹೋಗಬೇಡಿ. ಈ ತಿಂಗಳ ದ್ವಿತೀಯಾರ್ಧದಲ್ಲಿ ಸಂಬಂಧ ಸುಧಾರಿಸುವ ಸಾಧ್ಯತೆಯಿದೆ. ಆದಷ್ಟು ಅಹಂಕಾರವನ್ನು ಕಡಿಮೆ ಮಾಡೋದಕ್ಕೆ ಪ್ರಯತ್ನಿಸಿ. ಇನ್ನೂ ಅವಿವಾಹಿತರಿಗೆ ಜೋಡಿಯಾಗುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ
ಈ ತಿಂಗಳು ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯ ಜೊತೆಗಿನ ಸಂಬಂಧ ಅಷ್ಟೊಂದು ಚೆನ್ನಾಗಿ ಇರೋದಿಲ್ಲ. ಸಂಗಾತಿಯ ಜೊತೆಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಹೊರೆ ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಇದರಿಂದ ನಿಮ್ಮ ತಲೆನೋವು ಅರ್ಧದಷ್ಟು ಕಡಿಮೆಯಾಗುತ್ತದೆ. ಪ್ರೀತಿಯಲ್ಲಿ ಇರುವವರು ಪ್ರೀತಿಸುವವರ ಜೊತೆಗೆ ಪ್ರಾಮಾಣಿಕವಾಗಿರಿ.

ಧನು ರಾಶಿ
ಧನು ರಾಶಿಯವರು ಈ ತಿಂಗಳು ಸಂಗಾತಿಯ ಜೊತೆಗೆ ಸಂತೋಷವಾಗಿ ಇರುತ್ತಾರೆ. ನಿಮ್ಮ ಸಂಬಂಧ ಬೆಳವಣಿಗೆಗೆ ಇದು ಅನುಕೂಲಕರ ಸಮಯ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಒಡನಾಟವನ್ನು ಆನಂದಿಸುವಿರಿ. ಇನ್ನೂ ಅವಿವಾಹಿತರು ಹೊಸ ಜನರನ್ನು ಭೇಟಿಯಾಗುತ್ತಾರೆ ಮತ್ತು ಉತ್ತಮ ಸಮಯವನ್ನು ಕಳೆಯುತ್ತಾರೆ. ಮದುವೆ ಪ್ರಸ್ತಾಪಗಳಿಗೆ ಇದು ಉತ್ತಮ ಸಮಯ.

ಮಕರ ರಾಶಿ
ಈ ತಿಂಗಳ ಮೊದಲಾರ್ಧದಲ್ಲಿ ಮಕರ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ದ್ವಿತೀಯಾರ್ಧವು ಕೆಲವು ಏರಿಳಿತಗಳು ಆಗುವ ಸಾಧ್ಯತೆಯಿದೆ. ಅಗತ್ಯ ಇರುವಾಗ ಒಬ್ಬರಿಗೊಬ್ಬರು ಸಹಾಯವಾಗಿ ನಿಲ್ಲಿ. ಆದಷ್ಟು ತಾಳ್ಮೆ ಹಾಗೂ ಸಂಯಮವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಒಂಟಿಯಾಗಿರುವವರೇ ಸಂಗಾತಿಗಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ.

ಕುಂಭ ರಾಶಿ
ಈ ತಿಂಗಳಲ್ಲಿ ತಾಳ್ಮೆಯನ್ನು ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಸಂಗಾತಿಯ ಜೊತೆಗೆ ಕ್ರೂರವಾಗಿ ವರ್ತಿಸಬೇಡಿ. ಶಾಂತವಾಗಿರಿ ಮತ್ತು ಕಟುವಾದ ಮಾತುಗಳನ್ನು ಆಡಬೇಡಿ. ಒಂಟಿಯಾಗಿರುವವರು ಒಂಟಿತನ ಅನುಭವಿಸಬಹುದು ಮತ್ತು ಸೂಕ್ತ ಸಂಗಾತಿ ಸಿಗದೇ ಇರಬಹುದು. ಸಂಬಂಧದಲ್ಲಿರುವವರು ತಮ್ಮ ಸಂಬಂಧಗಳಲ್ಲಿ ಅಸ್ಪಷ್ಟತೆ ಮತ್ತು ಅನಿಶ್ಚಿತತೆಯನ್ನು ಅನುಭವಿಸುತ್ತಾರೆ.

ಮೀನ ರಾಶಿ
ಈ ತಿಂಗಳಿನಲ್ಲಿ ಕೆಲಸದ ಸಲುವಾಗಿ ನೀವು ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುತ್ತೀರಿ. ಹೀಗಾಗಿ ಕೆಲಸದ ಜೊತೆಗೆ ಸಂಗಾತಿಯ ಕಡೆಗೆ ಗಮನ ಕೊಡೋದನ್ನು ಮರೀಬೇಡಿ. ಒಂಟಿಯಾಗಿರುವವರಿಗೆ ನಿರಾಶೆ ಆಗಬಹುದು. ಈ ತಿಂಗಳು ಮದುವೆ ಯೋಗ ನಿಮಗೆ ಇಲ್ಲದ ಕಾರಣ ಮಂಕಾಗದರಿ. ನಿಮ್ಮೊಳಗೆ ನೀವು ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ.

English summary

Love Horoscope July 2023 for All the 12 Zodiac Signs in Kannada

Here are July love horoscope in Kannada read on..
Story first published: Friday, June 30, 2023, 17:50 [IST]
X
Desktop Bottom Promotion