August Month Love Horoscope 2023: ಆಗಸ್ಟ್ ತಿಂಗಳು ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಆಗಸ್ಟ್ ತಿಂಗಳಿನಲ್ಲಿ ಗ್ರಹಗತಿಗಳು ಬದಲಾವಣೆ ಆಗುತ್ತಿರೋದ್ರಿಂದ ದ್ವಾದಶ ರಾಶಿಗಳ ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ಸಾಕಷ್ಟು ಏರು ಪೇರುಗಳಾಗಲಿದೆ. ಕೆಲವರ ಜೀವನದಲ್ಲಿ ಸಂತೋಷವೇ ತುಂಬಿದ್ದರೆ, ಇನ್ನೂ ಕೆಲವರು ಸಂಸಾರದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಲಿದ್ದಾರೆ. ಅಷ್ಟಕ್ಕು ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ನೀವು ವಿಹಾರಕ್ಕೆ ಹೋಗುವ ಸಾಧ್ಯತೆಗಳಿದೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಿ. ನೀವು ಮನಸ್ಸು ಬಿಚ್ಚಿ ಮಾತನಾಡದೇ ಹೋದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ. ಈ ತಿಂಗಳು ಪ್ರೇಮ ಸಂಬಂಧಗಳಿಗೆ ಅನುಕೂಲಕರವಾಗಿದೆ.

Love Horoscope August 2023 for All the 12 Zodiac Signs

ವೃಷಭ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಸಂಗಾತಿ ಕೆಲವು ವಿಷಯಗಳಲ್ಲಿ ನಿಮ್ಮೊಂದಿಗೆ ಕೋಪಗೊಳ್ಳಬಹುದು. ಅವರಿಗೆ ನಿಮ್ಮ ಕೆಲವು ವಿಚಾರಗಳು ಗೊತ್ತಾದರೆ ಅವರು ನಿಮ್ಮಿಂದ ದೂರವಾಗಬಹುದು. ಈ ತಿಂಗಳು ನಿಮ್ಮಿಬ್ಬರ ನಡುವೆ ತಿಳುವಳಿಕೆಯ ಕೊರತೆ ಇರುತ್ತದೆ. ಪರಸ್ಪರ ಸಾಮರಸ್ಯವನ್ನು ಸೃಷ್ಟಿಸಲು ನೀವು ಸಾಕಷ್ಟು ಹೋರಾಟ ಮಾಡಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸುಮಧುರವಾದ ಕ್ಷಣಗಳನ್ನು ಕಳೆಯಿರಿ. ನಿಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಕುಳಿತು ಚರ್ಚಿಸಿ. ಇದರಿಂದ ನಿಮ್ಮ ಸಂಬಂಧದಲ್ಲಿನ ಬಿರುಕುಗಳನ್ನು ತೆಗೆದುಹಾಕಬಹುದು.

ಮಿಥುನ ರಾಶಿ

ಪ್ರೇಮ ಜೀವನದ ಬಗ್ಗೆ ಮಿಥುನ ರಾಶಿಯವರು ಈ ತಿಂಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಸಂಬಂಧವನ್ನು ಒಪ್ಪಿಕೊಳ್ಳದಿದ್ದರೆ, ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಹಳೆಯ ವಿಷಯಗಳನ್ನು ಮರೆತು ಕುಟುಂಬ ಸದಸ್ಯರು ನಿಮ್ಮ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಉತ್ತಮ ಭಾವನೆ ಹೊಂದುತ್ತಾರೆ.

ಕರ್ಕಾಟಕ ರಾಶಿ

ಈ ತಿಂಗಳು ಪ್ರೀತಿಯಲ್ಲಿ ಇರುವವರಿಗೆ ಆಹ್ಲಾದಕರ ಮತ್ತು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ನೀವು ಹೊರಗಡೆ ಹೋಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಈ ತಿಂಗಳು ಸ್ವಲ್ಪ ಸಮಯವನ್ನು ಕಳೆಯುತ್ತೀರಿ. ಇದರಿಂದ ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಕಂಡುಕೊಳ್ಳಬಹುದು. ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳೋದಕ್ಕೆ ಪ್ರಯತ್ನಿಸಿ.

ಸಿಂಹ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಅಷ್ಟೇನೂ ಒಳ್ಳೆಯದಲ್ಲ. ನಿಮ್ಮ ಸಂಬಂಧವನ್ನು ಹಾಳುಮಾಡಲು ಇನ್ನೊಬ್ಬ ವ್ಯಕ್ತಿಯೂ ಪಿತೂರಿ ಮಾಡಬಹುದು. ಇದಕ್ಕೆ ಅವಕಾಶ ಕೊಡೋದಕ್ಕೆ ಹೋಗಬೇಡಿ. ಇದರಿಂದಾಗಿ ನಿಮ್ಮಿಬ್ಬರ ಮಧ್ಯೆ ಪ್ರತ್ಯೇಕತೆಯ ಪರಿಸ್ಥಿತಿ ಉದ್ಭವಿಸಬಹುದು. ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಇದರಿಂದ ನಿಮ್ಮ ಸಂಬಂಧವು ಹದಗೆಡಬಹುದು.

ಕನ್ಯಾ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮಿಬ್ಬರ ಮಧ್ಯೆ ಪ್ರೀತಿ, ಪ್ರೇಮ ಹೆಚ್ಚಾಗುತ್ತದೆ. ಹಾಗೂ ನಿಮ್ಮ ಸಂಬಂಧ ಉತ್ತಮಗೊಳ್ಳುತ್ತದೆ. ಅಲ್ಲದೆ, ನಿಮ್ಮ ಸಂಗಾತಿಯೊಂದಿಗೆ ನೀವು ವಿಹಾರಕ್ಕೆ ಹೋಗಬಹುದು. ಈ ತಿಂಗಳು ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷದ ಕ್ಷಣವನ್ನು ಕಳೆಯುತ್ತೀರಿ. ಈ ತಿಂಗಳು ನಿಮ್ಮ ಸಂಗಾತಿ ನಿಮಗೆ ಒಳ್ಳೆಯ ಸುದ್ದಿ ನೀಡಬಹುದು.

ತುಲಾ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಎಲ್ಲವೂ ಒಳ್ಳೆಯದಾಗಲಿದೆ. ನೀವು ಏಕಪಕ್ಷೀಯ ಪ್ರೀತಿಯನ್ನು ಹೊಂದಿದ್ದರೆ ಈ ತಿಂಗಳು ನಿಮ್ಮ ಪ್ರೀತಿಪಾತ್ರರು ತಮ್ಮ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡಬಹುದು. ನೀವು ಪ್ರೀತಿಸುತ್ತಿರುವವರು ನಿಮ್ಮ ಪ್ರೀತಿ ಪ್ರಸ್ತಾಪವನ್ನು ಸ್ವೀಕರಿಸಬಹುದು. ಇದರಿಂದಾಗಿ ನೀವು ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ಸಂತೋಷದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಸಮಸ್ಯೆಯಾಗಬಹುದು. ಈ ತಿಂಗಳು ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆಯ ಕೊರತೆ ಇರುತ್ತದೆ. ಕೆಲವು ವಿಷಯಗಳ ಬಗ್ಗೆ ನಿಮ್ಮಿಬ್ಬರ ಮಧ್ಯೆ ಅನಗತ್ಯ ಚರ್ಚೆ ಉದ್ಭವಿಸಬಹುದು. ಈ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿವಾದಗಳಿಂದ ದೂರವಿರುವುದು ಮತ್ತು ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಅಂತಹ ಸಂದರ್ಭ ಬಂದರೂ ಕೂಡ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಧನು ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಅದ್ಭುತವಾಗಿರುತ್ತದೆ. ಕುಟುಂಬದಲ್ಲಿ ಹೊಸ ವ್ಯಕ್ತಿಯ ಆಗಮನವಾಗಬಹುದು. ಈ ಆಹ್ಲಾದಕರ ಸುದ್ದಿಯು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ. ನಿಮ್ಮ ಸಂಗಾತಿ ತನ್ನ ಮನಸ್ಸಿನ ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ನೀವು ಪ್ರೀತಿಸಿದವರೊಂದಿಗೆ ನೀವು ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ.

ಮಕರ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಸಮಸ್ಯೆಗಳು ಹೆಚ್ಚಾಗುತ್ತದೆ. ಪ್ರೀತಿಗೆ ನಿಮ್ಮ ಕುಟುಂಬದಿಂದ ನೀವು ವಿರೋಧವನ್ನು ಎದುರಿಸಬೇಕಾಗಬಹುದು. ಇದರಿಂದ ನೀವು ಮಾನಸಿಕವಾಗಿ ತೊಂದರೆಗೊಳಗಾಗಬಹುದು. ನಿಮ್ಮ ಸಂಗಾತಿ ನಿಮ್ಮ ಪರವಾಗಿ ಇರುತ್ತಾರೆ. ಈ ತಿಂಗಳು ನಿಮ್ಮ ಪ್ರೇಮ ಜೀವನದಲ್ಲಿ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಕುಂಭ ರಾಶಿ

ಪ್ರೇಮ ಜೀವನದಲ್ಲಿ ಇರುವವರಿಗೆ ಈ ತಿಂಗಳು ಅಸ್ಥಿರವಾಗಿರುತ್ತದೆ. ನಿಮ್ಮ ಪ್ರೀತಿಯ ಸಂಗಾತಿ ಕೆಲವು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಕೋಪಗೊಳ್ಳಬಹುದು. ಈ ವಿಚಾರಕ್ಕೆ ನಿಮ್ಮ ಮನೆಯವರ ವಿರೋಧವನ್ನೂ ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಈ ತಿಂಗಳು ತೊಂದರೆಗಳು ಹೆಚ್ಚಾಗಿರುತ್ತದೆ. ನಿಮ್ಮ ಸಂಗಾತಿಯ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿ. ನಿಮ್ಮ ಮನಸ್ಸಿನ ಮಾತನ್ನು ನಿಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳಿ.

ಮೀನ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ತುಂಬಾ ಒಳ್ಳೆಯದು. ಈ ತಿಂಗಳು ನೀವು ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ನೀವು ಯಾವುದೇ ಗಿರಿಧಾಮ ಇತ್ಯಾದಿಗಳಿಗೆ ಭೇಟಿ ನೀಡುವ ಸಾಧ್ಯತೆಗಳಿದೆ. ಈ ಸಮಯವು ನಿಮಗೆ ಅದ್ಭುತವಾಗಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಈ ಸಮಯವು ನಿಮಗೆ ಸೂಕ್ತವಾಗಿದೆ. ನಿಮ್ಮ ಸಂಗಾತಿಯೂ ನಿಮ್ಮ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆ.

English summary

Love Horoscope August 2023 for All the 12 Zodiac Signs in Kannada

Here are August love horoscope in Kannada read on.
Story first published: Friday, July 28, 2023, 14:30 [IST]
X
Desktop Bottom Promotion