Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
35 ಲಕ್ಷ ಗುರು! ಇದು ಆಟೋನಾ, ಬ್ಯಾಗಾ? ಯಾಕೆ ಇಷ್ಟು ದುಬಾರಿ? ವಿಡಿಯೋ ವೈರಲ್
ಅಬ್ಬಾ.. 35 ಲಕ್ಷದ ಆಟೋರಿಕ್ಷಾ ಬ್ಯಾಗ್! 2.5 ಲಕ್ಷದ ರಿಯಲ್ ಆಟೋಗೆ ಹೋಲಿಕೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ. ಯಾಕೆ ಇಷ್ಟು ದುಬಾರಿ? ಹೌದು, ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್ (Louis Vuitton) ಇತ್ತೀಚೆಗೆ ಆಟೋರಿಕ್ಷಾದ ಆಕಾರವನ್ನು ಹೋಲುವ ಹ್ಯಾಂಡ್‌ಬ್ಯಾಗ್ (Auto Rickshaw Bag) ಒಂದನ್ನು ಬಿಡುಗಡೆ ಮಾಡಿದೆ. ಈ ವಿಶಿಷ್ಟ ವಿನ್ಯಾಸದ ಹ್ಯಾಂಡ್‌ಬ್ಯಾಗ್ (Hand Bag) ಬಿಡುಗಡೆಯಾದ ತಕ್ಷಣವೇ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. 35 ಲಕ್ಷ ರೂಪಾಯಿ ಬೆಲೆಯ ರಿಕ್ಷಾ ಬ್ಯಾಗನ್ನು ಕಂಡು ಜನರು ಆಘಾತಗೊಂಡಿದ್ದಾರೆ. ಇಂತಹ ದುಬಾರಿ ವಸ್ತುಗಳನ್ನು ಉಚಿತವಾಗಿ ಕೊಟ್ಟರೂ ಬಳಸುವುದಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಲೂಯಿ ವಿಟಾನ್ ಮೆನ್ಸ್ (ಸ್ಪ್ರಿಂಗ್) ಸಮ್ಮರ್ 2026ರ ಕಲೆಕ್ಷನ್‌ನಲ್ಲಿ ಈ ಬ್ಯಾಗ್ ಒಂದು ಭಾಗವಾಗಿದೆ. ಈ ಹ್ಯಾಂಡ್‌ಬ್ಯಾಗ್, ಭಾರತೀಯ ಸಾಂಸ್ಕೃತಿಕ ಪ್ರಭಾವಗಳಿಗೆ ಮನ್ನಣೆ ನೀಡುವಂತಿದೆ. ಫ್ಯಾರೆಲ್ ವಿಲಿಯಮ್ಸ್ ನೇತೃತ್ವದಲ್ಲಿ ಮೂಡಿಬಂದಿರುವ ಈ ವಿನ್ಯಾಸ, ಭಾರತೀಯ ಬೀದಿ ಜೀವನ ಮತ್ತು ಲೂಯಿ ವಿಟಾನ್‌ನ ವಿಶಿಷ್ಟ ಶೈಲಿಯ ಸಮ್ಮಿಲನವಾಗಿದೆ. ಲೂಯಿ ವಿಟಾನ್‌ನ ಸಿಗ್ನೇಚರ್ ಮೊನೊಗ್ರಾಮ್ ಕ್ಯಾನ್ವಾಸ್‌ನಲ್ಲಿ ರಚಿಸಲಾದ ಈ ಬ್ಯಾಗ್, ಚಕ್ರಗಳು ಮತ್ತು ಚರ್ಮದ ಹ್ಯಾಂಡಲ್‌ಗಳನ್ನು ಹೊಂದಿದೆ. ಈ ಬ್ಯಾಗ್‌ನ ವಿಡಿಯೋವನ್ನು 'ಡಯಟ್ ಪರಾಥಾ' (diet paratha) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ತಕ್ಷಣವೇ ಇದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ 1BHK ಫ್ಲ್ಯಾಟ್ ಖರೀದಿಸಬಹುದು!
ಈ ಆಟೋರಿಕ್ಷಾ ಬ್ಯಾಗಿನ ಬೆಲೆ 35 ಲಕ್ಷ ರೂ. ಆಗಿದೆ. ಬೆಂಗಳೂರಿನಲ್ಲಿ ಒಂದು 1BHK ಫ್ಲ್ಯಾಟ್ ಅನ್ನು ಖರೀದಿಸಬಹುದು. ಈ ಬ್ಯಾಗ್ ಭಾರತದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, ಇದು ನಮ್ಮ ರಸ್ತೆಗಳಲ್ಲಿ ಓಡಾಡುವ ಆಟೋ ರಿಕ್ಷಾದಂತೆ ಕಾಣುತ್ತದೆ. ಬ್ಯಾಗಿನ ಪ್ರತಿಯೊಂದು ವಿವರವು ಆಟೋ ರಿಕ್ಷಾದ ಚಿಕ್ಕ ಆವೃತ್ತಿಯಂತೆ ಕಾಣುವಂತಿದೆ. ಬಣ್ಣ, ವಿನ್ಯಾಸ ಮತ್ತು ನೋಟವು ಜನರನ್ನು ಆಕರ್ಷಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಬ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು, 'ಇದಕ್ಕಿಂತ ನಾನು ನೇರವಾಗಿ ಆಟೋವನ್ನೇ ಖರೀದಿಸುತ್ತೇನೆ' ಎಂದು ಹೇಳುತ್ತಿದ್ದಾರೆ.
ಎರಡು ಆಟೋಗಳನ್ನು ಖರೀದಿಸಬಹುದು
ಈ ಬ್ಯಾಗಿನ ಫೋಟೋಗಳು ಸಹ ಸೋಶಯಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಳಕೆದಾರರೊಬ್ಬರು, 'ಇಷ್ಟರಲ್ಲಿ ನಾನು ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸುತ್ತೇನೆ, ಫ್ಯಾನ್ಸಿ ಬ್ಯಾಗ್ ಬೇಡ' ಎಂದು ಹೇಳಿದ್ದಾರೆ. ಇನ್ನೊಬ್ಬರು, '35 ಲಕ್ಷದಲ್ಲಿ ಎರಡು ಆಟೋಗಳನ್ನು ಖರೀದಿಸಬಹುದು. ಮತ್ತು ಉಳಿದ ಹಣವನ್ನು ಫ್ಯಾಮಿಲಿ ಟ್ರಿಪ್‌ಗೆ ಬಳಸಬಹುದು' ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ಯಾಗೋ ಅಥವಾ ಆಟೋ ರಿಕ್ಷಾವೋ?
ನೀವು ಲೂಯಿ ವಿಟಾನ್‌ನ ಮಿನಿ ಆಟೋ ರಿಕ್ಷಾ ಬ್ಯಾಗ್‌ನ್ನು ನೋಡಿದಾಗ, ಆಟಿಕೆ ನೋಡಿದಂತೆ ಭಾಸವಾಗುತ್ತದೆ. ಭಾರತದಲ್ಲಿ ವಾಸಿಸುವ ಯಾರಾದರೂ ಅದನ್ನು ನೋಡಿದ ತಕ್ಷಣ ಆಟೋ ರಿಕ್ಷಾ ನೆನಪಾಗುತ್ತದೆ. ಬ್ಯಾಗಿನ ಮುಂಭಾಗವನ್ನು ಪಾರದರ್ಶಕವಾಗಿ ಇರಿಸಲಾಗಿದೆ. ಪರಿಪೂರ್ಣ ನೋಟಕ್ಕಾಗಿ ಟೈರ್‌ಗಳನ್ನು ಸಹ ಜೋಡಿಸಲಾಗಿದೆ. ಹಾಗೆಯೇ, ಮೊನೊಗ್ರಾಮ್ ಪ್ರಿಂಟ್ ಮತ್ತು 2 ಹಳದಿ ಹ್ಯಾಂಡಲ್‌ಗಳನ್ನು ಸೇರಿಸಲಾಗಿದೆ. ಇದು ಬ್ಯಾಗ್‌ಗೆ ಸಂಪೂರ್ಣ ಲುಕ್ ನೀಡುತ್ತದೆ.
ಬೆಲೆ 35 ಲಕ್ಷ, ಯಾಕೆ ಇಷ್ಟು ದುಬಾರಿ?
ಲೂಯಿ ವಿಟಾನ್ ಇನ್ನೂ ಮಿನಿ ಆಟೋ ರಿಕ್ಷಾ ಬ್ಯಾಗ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬ್ರ್ಯಾಂಡ್ ಬೆಲೆಯ ಬಗ್ಗೆಯೂ ಏನನ್ನೂ ಹೇಳಿಲ್ಲ. ಆದರೆ, ವರದಿಗಳ ಪ್ರಕಾರ, ಈ ಆಟೋರಿಕ್ಷಾ ಬ್ಯಾಗಿನ ಬೆಲೆ 35 ಲಕ್ಷ ರೂ. ಎಂದು ಹೇಳಲಾಗಿದೆ. ಇದು ನಿಜವಾದ ಆಟೋ ರಿಕ್ಷಾದ ಬೆಲೆಗಿಂತ ಸುಮಾರು 30 ಪಟ್ಟು ಹೆಚ್ಚಾಗಿದೆ. ಲೂಯಿ ವಿಟಾನ್‌ನ ವೆಬ್‌ಸೈಟ್‌ನಲ್ಲಿರುವ ಇತರೆ ಬ್ಯಾಗ್‌ಗಳ ಬೆಲೆ ಲಕ್ಷಗಳಲ್ಲಿವೆ ಎನ್ನುವುದನ್ನು ಗಮನಿಸಬೇಕಿದೆ.
ನೆಟ್ಟಿಗರಿಂದ ಟ್ರೋಲ್.. ಫ್ರೀ ಕೊಟ್ಟರೂ ಬಳಸಲ್ಲ
ಪ್ರಾಡಾ ಕಂಪನಿಯವರು ಕೋಲ್ಹಾಪುರಿ ಚಪ್ಪಲಿಗಳನ್ನು ಬಿಡುಗಡೆ ಮಾಡಿದ ಕೆಲ ದಿನಗಳ ನಂತರ, ಲೂಯಿ ವಿಟಾನ್‌ನ ಬ್ಯಾಗ್‌ನ್ನು ಕಂಡು ಜನರು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಬ್ಯಾಗಿನ ವಿನ್ಯಾಸದೊಂದಿಗೆ, ಬೆಲೆಯನ್ನು ಕೇಳಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಒಬ್ಬ ಬಳಕೆದಾರರು, 'ಹೌದು, ಪ್ರಾಡಾ ಬ್ರ್ಯಾಂಡ್ ಹೆಸರಿನಲ್ಲಿ ಕೋಲ್ಹಾಪುರಿ ಚಪ್ಪಲಿಯನ್ನು ಬಿಡುಗಡೆ ಮಾಡಿದೆ. ಲೂಯಿ ವಿಟಾನ್ ಈಗ ತಾನೇ ರಿಕ್ಷಾ ಶೈಲಿಯ ಬ್ಯಾಗ್ ಅನ್ನು 35 ಲಕ್ಷ ರೂಪಾಯಿಗಳಿಗೆ ಬಿಡುಗಡೆ ಮಾಡಿದೆ. ಅದನ್ನು ನಾನು ಉಚಿತವಾಗಿ ಕೊಟ್ಟರೂ ಬಳಸುವುದಿಲ್ಲ' ಎಂದು ಕಮೆಂಟ್ ಮಾಡಿದ್ಧಾರೆ.
ರಿಯಲ್ ಆಟೋ ಖರೀದಿಸುವುದು ಬೆಸ್ಟ್
ಈ ಬ್ಯಾಗಿನ ಬೆಲೆಯನ್ನು ಕೇಳಿ ಜನರು ಶಾಕ್ ಆಗಿರುವುದು ನಿಜ. ಜೊತೆಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರು 'ಈ ಬ್ಯಾಗ್ ಖರೀದಿಸುವುದಕ್ಕಿಂತ ಮೂಲ ಆಟೋ ರಿಕ್ಷಾವನ್ನು ಖರೀದಿಸುವುದು ಉತ್ತಮ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನಾನು ಇದನ್ನು ಉಚಿತವಾಗಿ ಕೊಟ್ಟರೂ ಬಳಸುವುದಿಲ್ಲ' ಎಂದಿದ್ದಾರೆ. 'ಹಾಗಾದರೆ ಅವರು ಮೀಟರ್‌ನಿಂದ ಇದರ ಬೆಲೆ ಫಿಕ್ಸ್ ಮಾಡುತ್ತಾರೆಯೇ?' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಕೆಲವರು ಅದನ್ನು ಗೇಲಿ ಮಾಡುತ್ತಿದ್ದಾರೆ. ಆದರೆ, ಕೆಲವರು ಬ್ರ್ಯಾಂಡ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಐಷಾರಾಮಿ ಮತ್ತು ದುಬಾರಿ ಬ್ಯಾಗ್‌ಗಳು ನಿಮಗೆ ಜಗತ್ತಿನಾದ್ಯಂತ ಸಿಗುತ್ತವೆ. ಬಾಲಿವುಡ್ ನಟಿಯರು ಕೂಡ ಬ್ಯಾಗ್‌ಗಳ ಮೇಲೆ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುತ್ತಾರೆ.
ಒಟ್ಟಾರೆಯಾಗಿ, ಲೂಯಿ ವಿಟಾನ್‌ನ ಈ ವಿಚಿತ್ರ ವಿನ್ಯಾಸದ ಆಟೋ ರಿಕ್ಷಾ ಬ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಲೆಯು ಅನೇಕರನ್ನು ಬೆಚ್ಚಿಬೀಳಿಸಿದೆ.



Click it and Unblock the Notifications

