Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಲೋಕಸಭೆ ಚುನಾವಣೆ: ಭಾರತದ ಚುನಾವಣೆ ಕುರಿತ ಅಚ್ಚರಿಯ ಅಂಶಗಳು ಇಲ್ಲಿವೆ..!
ಭಾರತದಲ್ಲಿ ಇನ್ನೇನು ಲೋಕಸಭೆ ಚುನಾವಣೆ ನಡೆಯಲು ಸಿದ್ಧತೆ ಆರಂಭಗೊಂಡಿದೆ. ಏಪ್ರಿಲ್, ಮೇ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ದಿನಾಂಕ ಘೋಷಣೆ ಬಾಕಿ ಇದೆ. ಭಾರತದ ಚುನಾವಣೆ ಎಂದರೆ ಅದೊಂದು ಹಬ್ಬದ ವಾತಾವರಣ ಇದ್ದ ಹಾಗೆ. ಏಕೆಂದರೆ ಇದು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬ.
ಹಾಗಾದರೆ ಭಾರತದ ಚುನಾವಣೆ ಕುರಿತು ನಿಮಗೆ ಗೊತ್ತಿಲ್ಲದ ಅಚ್ಚರಿಯ ಮಾಹಿತಿಯನ್ನು ನಾವಿಂದು ತಿಳಿಸಿಕೊಡಲಿದ್ದೇವೆ ನೋಡಿ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಚುನಾವಣೆಗಳು ವಿಶ್ವದ ಪ್ರಜಾಪ್ರಭುತ್ವದ ಅತಿದೊಡ್ಡ ಚುನಾವಣೆಯಾಗಿದೆ. ಭಾರತದ ಜನಸಂಖ್ಯೆಯು ಹೆಚ್ಚಾದಂತೆ, ಮತದಾನವನ್ನು ಸಂಘಟಿಸುವುದು ವಿಶಾಲವಾದ ವ್ಯವಸ್ಥಾಪನಾ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ, ಇದು ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಒಂದು ಸಂಘಟನಾತ್ಮಕ ಕಾರ್ಯತಂತ್ರವಾಗಿದೆ.

ಭಾರತದ ಜನಸಂಖ್ಯೆಯು ಸರಿಸುಮಾರು 1.3 ಶತಕೋಟಿ, ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಭಾರತದ ಚುನಾವಣಾ ಆಯೋಗವು ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತದೆ.
1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಗೆ ಸುಮಾರು Rs104.5 ಮಿಲಿಯನ್ ವೆಚ್ಚವಾಗಿದ್ದರೆ, 2014ರ ಸಾರ್ವತ್ರಿಕ ಚುನಾವಣೆಗೆ ಸುಮಾರು 38.7 ಬಿಲಿಯನ್ (3,870.3 ಕೋಟಿ) ವೆಚ್ಚವಾಗಿದೆ.
ಮೊದಲ ಲೋಕಸಭೆ ಚುನಾವಣೆ 489 ಸ್ಥಾನಗಳಿಗೆ ಸ್ಪರ್ಧಿಸಿತ್ತು. 1977ರಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು 543ಕ್ಕೆ ಹೆಚ್ಚಿಸಲಾಯಿತು. 1952ರ ಚುನಾವಣೆಯಲ್ಲಿ 489 ಸ್ಥಾನಗಳಿಗೆ ಒಟ್ಟು 53 ಪಕ್ಷಗಳು ಮತ್ತು 533 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2014ರಲ್ಲಿ 543 ಸ್ಥಾನಗಳಿಗೆ 464 ರಾಜಕೀಯ ಪಕ್ಷಗಳು ಮತ್ತು 3,234 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
2014ರ ಚುನಾವಣೆಯಿಂದ 2019ರ ಲೋಕಸಭಾ ಚುನಾವಣೆಗೆ ಒಟ್ಟು ಮತದಾರರ ಸಂಖ್ಯೆ 84.3 ಮಿಲಿಯನ್ ಹೆಚ್ಚಾಗಿದೆ. ಹೊಸ ಮತದಾರರು ಒಟ್ಟು ಮತದಾರರ ಸಂಖ್ಯೆಯನ್ನು 900 ಮಿಲಿಯನ್‌ಗೆ ತೆಗೆದುಕೊಂಡಿದ್ದಾರೆ ಅದರಲ್ಲಿ ಸುಮಾರು 15 ಮಿಲಿಯನ್ ಜನರು 18-19 ವರ್ಷ ವಯಸ್ಸಿನವರಾಗಿದ್ದಾರೆ.
2014ರಲ್ಲಿ 9 ಲಕ್ಷ ಮತಗಟ್ಟೆಗಳು ಸ್ಥಾಪನೆಯಾಗಿದ್ದರೆ 2019ರಲ್ಲಿ 10 ಲಕ್ಷ ಮತಗಟ್ಟೆಗಳ ಸ್ಥಾಪಿಸಲಾಗಿತ್ತು. ಇದು ಯಾವುದೇ ದೇಶಕ್ಕೆ ಹೋಲಿಸಿದರು ಅತೀ ಹೆಚ್ಚು ಮತಗಟ್ಟೆ ಸಂಖ್ಯೆಯಾಗಿದೆ.
ವಿದ್ಯುನ್ಮಾನ ಮತಯಂತ್ರಗಳು (EVM) ಮತ್ತು ಅಂಚೆ ಮತಪತ್ರಗಳು ಮೊದಲ ಬಾರಿಗೆ ಎಲ್ಲಾ ಅಭ್ಯರ್ಥಿಗಳ ಭಾವಚಿತ್ರವನ್ನು ಹೊಂದಿದ್ದು, ಚುನಾವಣಾ ಕಣದಲ್ಲಿರುವ ರಾಜಕೀಯ ನಾಯಕರನ್ನು ಮತದಾರರಿಗೆ ಗುರುತಿಸಲು ಸಹಾಯ ಮಾಡುತ್ತವೆ. ಲೋಕಸಭೆ ಚುನಾವಣೆಯ ವೆಚ್ಚವನ್ನು ಭಾರತ ಸರ್ಕಾರ ಭರಿಸುತ್ತದೆ. ಚುನಾವಣಾ ವೀಕ್ಷಕರ ಗೌರವಧನವನ್ನು ಮಾತ್ರ ಚುನಾವಣಾ ಆಯೋಗ ಪಾವತಿಸುತ್ತದೆ.
ಅಸೆಂಬ್ಲಿ ಚುನಾವಣೆಯೊಂದಿಗೆ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ, ವೆಚ್ಚವನ್ನು ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು 50:50 ಆಧಾರದ ಮೇಲೆ ಹಂಚಿಕೊಳ್ಳುತ್ತವೆ. 2014ರ ಲೋಕಸಭಾ ಚುನಾವಣೆಯಲ್ಲಿ, ಎಂಟು ಕ್ಷೇತ್ರಗಳಲ್ಲಿ ಮತದಾರರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರೇಲ್‌ಗಳನ್ನು (ವಿವಿಪಿಎಟಿ) ಬಳಸಲಾಯಿತು. ಈ ಬಾರಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ಗಳನ್ನು ಬಳಸಲಾಗುವುದು.
ಈ ಬಾರಿ ಮತದಾನಕ್ಕೆ ದಿನಾಂಕ ನಿಗದಿಯಾಗಬೇಖಿದ್ದು, ಈ ಬಾರಿಯೂ ಹಲವು ದಾಖಲೆಗಳ ಬರೆಯಲಿದೆ. ಇದೆಲ್ಲಾ ಕಾರಣದಿಂದಾಗಿಯೇ ಭಾರತದ ಚುನಾವಣೆ ವಿಶ್ವದ ಗಮನ ಸೆಳೆಯುತ್ತದೆ. ಇದೊಂದು ಪ್ರಜಾಪ್ರಭುತ್ವದ ಹಬ್ಬವಾಗಿಯೂ ಕರೆಯಲ್ಪಟ್ಟಿದೆ.



Click it and Unblock the Notifications
