Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
'3ನೇ ವಿಶ್ವ ಯುದ್ಧಕ್ಕೆ' ಅರ್ಥ ವ್ಯವಸ್ಥೆ ಕುಸಿತ: 2025ರ ಭಯಾನಕ ಭವಿಷ್ಯ ನುಡಿದ ಸಲೋಮ್
2024 ಮುಗಿಯುವ ಹಂತಕ್ಕೆ ತಲುಪಿದ್ದೇವೆ. ಇನ್ನು 2025ರಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬುದು ಈಗಲೇ ಸುದ್ದಿಯಾಗುತ್ತಿದೆ, ಚರ್ಚೆಯಾಗುತ್ತಿದೆ. ಈ ನಡುವೆ ಮುಂದಿನ ವರ್ಷ ಯಾವೆಲ್ಲಾ ಘಟನೆಗಳು ನಡೆಯುತ್ತಿವೆ ಎಂಬುದನ್ನು ಹಲವರು ಊಹಿಸಿ ಮೊಲದೇ ಹೇಳಿರುವುದು ಭಾರೀ ಆತಂಕ ಹುಟ್ಟಿಸುವಂತಹ ವಿಚಾರಗಳಾಗಿವೆ.
ಅದರಲ್ಲೂ ನಾಸ್ಟ್ರಾಡಾಮಸ್, ಬಾಬಾ ವಂಗಾ ಹೇಳಿರುವ ಭವಿಷ್ಯಗಳ ಕುರಿತಂತೆ ಈಗಾಗಲೇ ಬಹಳಷ್ಟು ಚರ್ಚೆ ಆರಂಭವಾಗಿದೆ. ಅದರಲ್ಲೂ ಬಾಬಾ ವಂಗಾ ಹೇಳಿರುವಂತೆ ವರ್ಷದ ಆರಂಭದಲ್ಲಿ ಯುದ್ಧಕಾಂಡಗಳ ಭವಿಷ್ಯ ಈಗಾಗಲೇ ನಿಜವಾಗುವ ಸೂಚನೆಗಳು ಎದುರಾಗಿದೆ. ಹಾಗೆ ಲಿವಿಂಗ್ ನಾಸ್ಟ್ರಾಡಾಮಸ್ ಎಂದು ಕರೆಲ್ಪಡುವ ಅಥೋಸ್ ಸಲೋಮ್ ಎಂಬಾತ ನುಡಿದಿರುವ ಭವಿಷ್ಯ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.

'ಲಿವಿಂಗ್ ನಾಸ್ಟ್ರಡಾಮಸ್' ಎಂದು ಕರೆಯಲ್ಪಡುವ ಅಥೋಸ್ ಸಲೋಮ್, 2024ರಲ್ಲಿ ಕ್ಷುದ್ರಗ್ರಹದ ಅಪಾಯ ಕುರಿತಂತೆ ಭವಿಷ್ಯ ನುಡಿದಿದ್ದರು ಇದು ನಿಜವಾಗಿತ್ತು ಕೂಡ. ಈಗ ಈ 36 ವರ್ಷದ ಬ್ರೆಜಿಲಿಯನ್ ವ್ಯಕ್ತಿ ವಿಶ್ವದಲ್ಲಿ ಮೂರನೇ ಮಹಾಯುದ್ಧ ನಾವು ಆಲೋಚಿಸುವುದಕ್ಕಿಂತ ಮುನ್ನವೇ ಬರಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ, ಎಲೋನ್ ಮಸ್ಕ್ ಟ್ವಿಟರ್ (ಈಗ ಎಕ್ಸ್) ಖರೀದಿಸುತ್ತಿದ್ದಾರೆ ಮತ್ತು ರಾಣಿ ಎಲಿಜಬೆತ್ II ರ ಮರಣವನ್ನು ಸ್ಪಷ್ಟವಾಗಿ ಭವಿಷ್ಯ ನುಡಿದ ವ್ಯಕ್ತಿ ಇವರಾಗಿದ್ದಾರೆ. ಈಗ ವಿಶ್ವದ ಪ್ರಮುಖ ಘಟನಾವಳಿಗಳ ಕುರಿತು ಭವಿಷ್ಯ ನುಡಿದು ಹೊಸ ಆತಂಕಕ್ಕೆ ಕಾರಣವಾಗಿದ್ದಾರೆ. ಮುಂದಿನ ವರ್ಷದಲ್ಲಿ 3ನೇ ಮಹಾಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಅವರು ಹಿಂದೆಯೇ ಹೇಳಿದ್ದಾರೆ. ಅಂದರೆ ನಾವು ಆಲೋಚಿಸಿರುವುದಕ್ಕಿಂತಲೂ ಮೊದಲೇ 3ನೇ ಮಹಾಯುದ್ಧ ಉಂಟಾಗಲಿದೆ ಎಂಬುದು ಅವರ ಭವಿಷ್ಯವಾಗಿದೆ.
ಮಧ್ಯಪ್ರಾಚ್ಯ ಮತ್ತು ರಷ್ಯಾದಲ್ಲಿ ಘರ್ಷಣೆಗಳು ಮತ್ತು ಹೆಚ್ಚುತ್ತಿರುವ ಮೂರನೇ ದೇಶಗಳ ಹಸ್ತಕ್ಷೇಪವು ಮುಂದೆ ಯುದ್ಧಕ್ಕೆ ಹತ್ತಿರವಾಗುತ್ತಿರುವ ಮುನ್ಸೂಚನೆ ನೀಡುತ್ತಿದೆ ಎಂದಿದ್ದಾರೆ. ಹಾಗೆ ಈ ಯುದ್ಧ ತಂತ್ರಜ್ಞಾನದ ಮೂಲಕವೂ ನಡೆಯಬಹುದು ಎಂದಿದ್ದಾರೆ.
2024 ರ ಅಂತ್ಯದ ವೇಳೆಗೆ ಯುದ್ಧದ ಹಲವಾರು ಚಿಹ್ನೆಗಳು ಕಂಡುಬರುತ್ತವೆ. ಆದಾಗ್ಯೂ, ಇದು ಆರಂಭದಲ್ಲಿ ಯೋಚಿಸಿದ್ದಕ್ಕಿಂತ ಹೆಚ್ಚು ಆನ್‌ಲೈನ್ ರೀತಿಯ ಯುದ್ಧ ಆಗಿರಬಹುದು ಎಂದು ಅವರು ಹೇಳಿದ್ದಾರೆ. ಇದು ಕೇವಲ ಮಾನವರ ಯುದ್ಧವಲ್ಲ, ಆದರೆ ಯಂತ್ರಗಳ ಯುದ್ಧ. ರಷ್ಯಾ ಉಕ್ರೇನ್ ಕಡೆಗೆ ಆಕ್ರಮಣಶೀಲತೆಯ ಹೊಸ ಹಂತ ತಲುಪಿದೆ, ಡ್ನಿಪ್ರೋ ನಗರದ ಕಡೆಗೆ ಓರೆಶ್ನಿಕ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಹಾರಿಸಿತು. ಇಂತಹ ಹಲವು ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ನಾವಂದುಕೊಂಡಿದ್ದಕ್ಕಿಂತ ಬಹುಬೇಗ ಉಂಟಾದ ಕ್ಷಿಪ್ರ ಬೆಳವಣಿಗೆ ಎಂದೇ ಊಹಿಸಲಾಗಿದೆ.
ಬಾಬಾ ವಂಗಾ ಹೇಳಿದ್ದೂ ಇದನ್ನೇ
ಬಲ್ಗೇರಿಯಾದ ಬಾಬಾ ವಂಗಾ ಕೂಡ 2025ರ ಕುರಿತಂತೆ ಹೇಳಿರುವ ತನ್ನ ಭವಿಷ್ಯದಲ್ಲಿ ಆಕೆ ಯುದ್ಧ ಭೀತಿ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಿದ್ದಾಳೆ. 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾರೆ, ಅಲ್ಲಿಂದ ಭವಿಷ್ಯ ನುಡಿಯುವ ದಿವ್ಯದೃಷ್ಟಿ ಆಕೆಗೆ ಪ್ರಾಪ್ತಿಯಾಗಿತ್ತು ಎಂದು ನಂಬಲಾಗಿದೆ. ಆಕೆ ಅಮೆರಿಕದ ಟ್ವಿನ್ ಟವರ್ ಮೇಲಿನ ದಾಳಿಯನ್ನೂ ಮೊದಲೇ ಊಹಿಸಿದ್ದಳು ಎಂಬ ವಾದವಿದೆ.
ಆಕೆಯ ಪ್ರಕಾರ 2025ರ ವರ್ಷ ಈ ಭೂಮಿಯಲ್ಲಿ ಹಲವು ವಿನಾಶಕಾರಿ ಘಟನೆಗಳು ನಡೆಯಲಿದೆ, ಸರಣಿ ದುರಂತಗಳು ನಡೆಯುತ್ತದೆ, ಯುದ್ದಗಳು ನಡೆದು ನೇಕ ಸಾವು-ನೋವುಗಳು ಸಂಭವಿಸಲಿದೆ, ಯುರೋಪ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹದಗೆಡಲಿದೆ ಎಂಬ ಭವಿಷ್ಯ ನುಡಿದಿದ್ದಾಳೆ. ಬಲಾಡ್ಯ ದೇಶಗಳು ತಮ್ಮ ರಕ್ಷಣೆಯ ನೆಪದಲ್ಲಿ ಆಯುಧಗಳ ಹೆಚ್ಚಿಸಿಕೊಳ್ಳುವುದು, ಅಣುಗಳ ಸಂಗ್ರಹ ಹೆಚ್ಚಳದಂತಹ ಸ್ಥಿತಿಯನ್ನು ಕೂಡ ಆಕೆ ಮೊದಲೇ ಹೇಳಿದ್ದಾಳೆ.



Click it and Unblock the Notifications