Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಮ್ಮನ ಸಮಾಧಿಗೆ ಮುತ್ತಿಕ್ಕಿದ ಕಂದಮ್ಮ: ಅಜ್ಜಿ ಶೇರ್ ಮಾಡಿದ ವೀಡಿಯೋ ವೈರಲ್
ಕೆಲವೊಂದು ವೀಡಿಯೋಗಳನ್ನು ನೋಡಿದಾಗ ಅವರು ನಮಗೆ ಸಂಬಂಧಿಸಿದ ವಿಷಯವಲ್ಲದಿದ್ದರೂ ನಮ್ಮ ಕಣ್ಣಂಚಿನಲ್ಲಿ ನೀರು ಬರುವುದು, ಹೃದಯ ಭಾರವಾಗುವುದು ಅಂಥದ್ದೊಂದು ವೀಡಿಯೋ ಸಾಮಾಜಿಕ ತಾಣದಲ್ಲಿ ಗಮನ ಸೆಳೆಯುತ್ತಿದೆ.

ಪುಟ್ಟ ಮಗುವೊಂದು ತಾಯಿ ಸಮಾಧಿಗೆ ಹೋಗಿ ಮುತ್ತಿಕ್ಕುವ ವೀಡಿಯೋವನ್ನು ಅವನ ಅಜ್ಜಿ ಶೇರ್ ಮಾಡಿದ್ದು ಆ ವೀಡಿಯೋ ನೋಡುಗರ ಕಣ್ಣಂಚು ಒದ್ದೆ ಮಾಡುತ್ತದೆ. ಅಮ್ಮನಿಗೆ ಹಾಯ್ ಹೇಳಲು ಹೋಗುತ್ತಾನೆ, ಅವರ ಅಮ್ಮ ವಿಶ್ರಾಂತಿಯಲ್ಲಿರುವ ಸ್ಥಳಕ್ಕೆ ಯಾವಾಗಲೂ ಹೋಗುತ್ತಾನೆ, ನಾವಿಂದು ಅವಳಿಗೆ ಸೂರ್ಯಕಾಂತಿ, ಟ್ಯೂಲಿಪ್ಸ್ ಹೂವುಗಳನ್ನು ತಂದೆವು, ಈ ಹೂಗಳು ತುಂಬಾ ಫ್ರೆಶ್ ಆಗಿರುತ್ತದೆ(Saying hi to mommy 💙 He always loves visiting his momma's resting place. Today we brought her sunflowers and tulips that will last till the fresh) ಎಂದು ಬರೆದು ಆ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಮಗು ಪ್ರತಿದಿನ ಹೋಗಿ ಸಮಾಧಿಯ ಫೋಟೋದಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಿ ಬರುತ್ತಾನೆ ಎಂದು ಅವರ ಅಜ್ಜಿ ಹೇಳಿದ್ದಾರೆ.
ಆ ಪುಟ್ಟ ಮಗು ನೋಡಲು 4-5 ವರ್ಷ ಇರಬಹುದು, ಅದು ಪುಟ್ಟ ಸೈಕಲ್‌ನಲ್ಲಿ ತಾಯಿ ಬಳಿ ಹೋಗಿ ಅವರ ಫೋಟೋಗೆ ಮುತ್ತಿಕ್ಕುತ್ತಾನೆ.. ಇತ್ತೀಚೆಗೆ ಇಂಥದ್ದೇ ಒಂದು ವೀಡಿಯೋ ಕರ್ನಾಟಕದಲ್ಲಿ ವೈರಲ್ ಆಗಿತ್ತು, ಪುಟ್ಟ ಮಗುವೊಂದು ತಾಯಿಯನ್ನು ಮಣ್ಣು ಮಾಡಿದ ಜಾಗಕ್ಕೆ ಹೋಗಿ ಅಮ್ಮಾ... ಅಮ್ಮಾ ಎಂದು ಕರೆಯುತ್ತಿರುವ ವೀಡಿಯೋ ವೈರಲ್ ಆಗಿತ್ತು. ಆ ಮಕ್ಕಳ ಸ್ಥಿತಿ ನೋಡುವಾಗ ಎಂಥವರ ಹೃದಯ ಕರಗುತ್ತದೆ, ಚಿಕ್ಕ ಪ್ರಾಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಆ ಮಕ್ಕಳ ಸ್ಥಿತಿ ಯಾವ ಮಕ್ಕಳಿಗೂ ಬಾರದಿರಲಿ ಎಂದು ದೇವರಲ್ಲಿ ಬೇಡುತ್ತೇವೆ.
ತಾಯಿ ಪ್ರೀತಿಗೆ ಸಮ ಯಾವುದೂ ಇಲ್ಲ
ತಾಯಿ ಯಾವತ್ತಿಗೂ ಎಲ್ಲಕ್ಕಿಂತ ಮಿಗಿಲು, ಅವಳ ಪ್ರೀತಿಗೆ ಸಮ ಯಾವುದೂ ಇಲ್ಲ, ಅವಳ ಪ್ರೀತಿ ಮಗುವಿಗೆ ಎಲ್ಲಿಯೂ ಸಿಗುವುದಿಲ್ಲ, ತಾಯಿ ಏನೇ ಆಗಿರಲಿ ತಾಯಿ ತಾಯಿನೇ... ಆ ಪ್ರೀತಿಯೇ ಕಳೆದುಕೊಂಡರೆ ಅದರ ಕಠೋರ ಅನುಭವ ಹೇಳಲು ಸಾಧ್ಯವಿಲ್ಲ, ಮಗುವಿಗೆ ಆ ಪ್ರೀತಿ ಯಾವತ್ತಿಗೂ ಖಾಲಿ ಖಾಲಿಯೇ....
.ಅಮ್ಮನನ್ನು ಕೊನೆಯವರೆಗೂ ನೋಡಿಕೊಳ್ಳಿ
ಅಮ್ಮನ ಬೆಲೆ ಏನು ಎಂಬುವುದು ಅಮ್ಮನನ್ನು ಕಳೆದುಕೊಂಡ ಮಕ್ಕಳಿಗೆ ಮಾತ್ರ ಗೊತ್ತಿರುತ್ತದೆ, ಆದರೆ ಇಂದಿನ ವೃದ್ಧಾಶ್ರಮಗಳನ್ನು ನೋಡುವಾಗ ಎಷ್ಟೋ ವೃದ್ಧರು ಮಕ್ಕಳ ಕ್ರೌರ್ಯದಿಂದ ವೃದ್ಧಾಶ್ರಮದಲ್ಲಿ ಕಣ್ಣೀರಿನಲ್ಲಿ ಕಳೆಯುತ್ತಿದ್ದಾರೆ, ಅಂಥ ಮಕ್ಕಳು ಇಂಥ ವೀಡಿಯೋ ನೋಡಿದಾಗ ಖಂಡಿತ ಅವರಿಗೆ ಅವರ ತಪ್ಪಿನ ಅರಿವು ಉಂಟಾಗುವುದು.
ತಾಯಿ ಮಗುವಿಗೆ ಜನ್ಮ ನೀಡುವಾಗ ತನ್ನ ಪ್ರಾಣವನ್ನು ಒತ್ತೆ ಇಟ್ಟು ಜನ್ಮ ನೀಡಿರುತ್ತಾಳೆ, ಅಲ್ಲಿಂದ ಮಕ್ಕಳನ್ನು ಒಂದು ನೆಲೆಗೆ ತರಲು ಅವಳು ಸಾಕಷ್ಟು ಕಷ್ಟಪಡುತ್ತಾಳೆ, ಅಂಥ ತಾಯಿಯನ್ನು ಕೊನೆಯವರೆಗೂ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಆಗಿರುತ್ತದೆ.
ಅಮ್ಮಾ ಎಂಬುವುದು ಸೆಂಟಿಮೆಂಟ್ ಅಲ್ಲ ಅವಳು ನಮ್ಮ ಶ್ರೀರಕ್ಷೆ, ಹೆತ್ತ ತಾಯಿಯನ್ನು ಗೌರವಿಸಿ, ಪ್ರೀತಿಸಿ ವೃದ್ಧಾಶ್ರಮ ಅವರು ಕಾಣುವಂತೆ ಮಾಡಬೇಡಿ.



Click it and Unblock the Notifications