Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಡಿಮೆ ಖರ್ಚಿನಲ್ಲಿ ಈ 7 ದೇಶ ಸುತ್ತಬಹುದು! ವಾರ ಕಳೆದರು ಖರ್ಚಾಗಲ್ಲ..!
2025ನೇ ವರ್ಷದಲ್ಲಿ ಈಗ 5 ತಿಂಗಳು ಮುಕ್ತಾಯಗೊಂಡಿದೆ. ಅನೇಕರು ಈ ವರ್ಷದ ಆರಂಭದಲ್ಲಿ ಹಲವು ಪ್ರವಾಸಗಳ ಮಾಡಬೇಕು ಎಂಬ ಆಲೋಚನೆ ಮಾಡಿರುತ್ತಾರೆ. ಅದರಂತೆ ಹಲವು ಕಡೆಗೆ ಪ್ರಯಾಣಿಸಿರುತ್ತಾರೆ. ಹಾಗೆ ಈ ವರ್ಷ ಉಳಿದಿರುವ ತಿಂಗಳುಗಳಲ್ಲಿ ಅವರು ದೊಡ್ಡ ದೊಡ್ಡ ದೇಶಗಳ ನೋಡಲು ಮುಂದಾಗಬಹುದು. ಹಾಗೆ ಭಾರತದ ರೂಪಾಯಿ ಆಧಾರದ ಮೇಲೆ ವ್ಯವಹರಿಸುವುದರಿಂದ ಕೆಲವೊಂದು ದೇಶಗಳು ನಮಗೆ ದುಬಾರಿಯಾಗಿಯೂ ಮತ್ತೆ ಕೆಲವು ಬಹಳ ದುಬಾರಿ ಅಲ್ಲದೆ ಇರಬಹುದು.
ಭಾರತೀಯರು ಹೆಚ್ಚಾಗಿ ಹಣ ಹೊಂದಿಸಿಕೊಂಡು ಪ್ರವಾಸ ಕೈಗೊಳ್ಳುವ ಮಂದಿ ಆಗಿದ್ದಾರೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಸುಂದರ ದೇಶಗಳ ನೋಡಲು ಅವರು ಬಯಸುತ್ತಾರೆ. ಇಂತಹ ಪ್ರವಾಸ ಪ್ರಿಯರಿಗಾಗಿ ನಾವಿಂದು 2025ರಲ್ಲಿ ಪ್ರವಾಸ ಮಾಡಬಹುದಾದ ಅತ್ಯಂತ ಕಡಿಮೆ ವೆಚ್ಚದ ದೇಶಗಳ ಪಟ್ಟಿಯನ್ನು ತಿಳಿದುಕೊಳ್ಳೋಣ.

ಈ 07 ದೇಶಗಳಿಗೆ ನೀವು ಕಡಿಮೆ ಹಣದಲ್ಲಿ ಪ್ರವಾಸ ಮಾಡಬಹುದು. ಹಾಗೆ ಅಲ್ಲಿನ ಪ್ರಾಕೃತಿಕ ಸೌಂದರ್ಯದ ಜೊತೆಗೆ ನಿಮ್ಮ ಜ್ಞಾನ ವೃದ್ಧಿಗೂ ಮುಂದಾಗಬಹುದು. ಹಾಗಾದ್ರೆ ಅತ್ಯಂತ ಕಡಿಮೆ ಹಣದಲ್ಲಿ ಯಾವ ದೇಶಗಳಿಗೆ ನಾವು ಪ್ರಯಾಣಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ವಿಯೆಟ್ನಾಂ
ವಿಯೆಟ್ನಾಂ ಏಷ್ಯಾದ ಸುಂದರ ದೇಶಗಳಲ್ಲಿ ಒಂದಾಗಿದೆ. ಸುಂದರ ಪ್ರಾಕೃತಿಕ ದೃಶ್ಯಗಳು, ಬಾಯಲ್ಲಿ ನೀರು ತರಿಸುವ ಆಹಾರ ಪದ್ಧತಿಗಳು, ಹೋ ಚಿ ಮಿನ್ಹ್ ನಗರದ ಇತಿಹಾಸ, ಸಂಪ್ರದಾಯಗಳು, ವಿಚಿತ್ರ ಎನಿಸುವ ಅಲ್ಲಿನ ಜಾನಪದ ಕಲೆಗಳು ನಿಮ್ಮನ್ನು ಬೆರಗುಗೊಳಿಸಬಹುದು. ಇನ್ನು ಒಬ್ಬರಿಗೆ ಈ ದೇಶಕ್ಕೆ ಪ್ರವಾಸ ಮಾಡಲು ಒಂದು ವಾರಕ್ಕೆ ಎಲ್ಲಾ ಖರ್ಚುಗಳನ್ನು ಸೇರಿಸಿದರೆ ಸರಾಸರಿ 50 ಸಾವಿರದಿಂದ 70 ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇಂಡೋನೇಷ್ಯಾ
ಅತೀ ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ದೇಶಗಳಲ್ಲಿ ಇಂಡೋನೇಷ್ಯಾ ಕೂಡ ಒಂದು. ಅಲ್ಲಿನ ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೆ ಮ್ಯೂಸಿಯಂಗಳು, ದ್ವೀಪ ಸಮೂಹಗಳು, ಬುಡಕಟ್ಟು ಸಮುದಾಯ, ಇಂಡೋನೇಷ್ಯಾದಲ್ಲಿ ಬರೋಬ್ಬರಿ 17 ಸಾವಿರಕ್ಕೂ ಹೆಚ್ಚು ದ್ವೀಪಗಳಿವೆ. ಇನ್ನು ಇಂಡೋನೇಷ್ಯಾಗೆ ಪ್ರವಾಸಕ್ಕೆ ತೆರಳಬೇಕಾದರೆ ವಾರಕ್ಕೆ 57,400ರಿಂದ 73,800 ರೂಪಾಯಿ ಖರ್ಚಾಗಬಹುದು.
ದಕ್ಷಿಣ ಆಫ್ರಿಕಾ
ಸುಂದರ ವನ್ಯಜೀವಿ ಸಂಕುಲ, ಸಫಾರಿಗೆ ಮನಸೋಲುವ ಮಂದಿ ದಕ್ಷಿಣ ಆಫ್ರಿಕಾಗೆ ಪ್ವಾಸ ಕೈಗೊಳ್ಳುತ್ತಾರೆ. ಕೇಪ್‌ಟೌನ್ ಸೌಂದರ್ಯ, ಕ್ರುಗರ್ ರಾಷ್ಟ್ರೀಯ ಉದ್ಯಾವನವನ್ನು ಸಫಾರಿ ಮಾಡಲೆಂದು ವಿದೇಶದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿದೆ ತೆರಳಲು ವಾರವೊಂದಕ್ಕೆ ನಿಮಗೆ 82,000ರಿಂದ 98,400 ರೂಪಾಯಿ ವ್ಯಯವಾಗುತ್ತದೆ.
ಕಾಂಬೋಡಿಯಾ
ಪರಿಶುದ್ಧ ಕಡಲತೀರ ಹಾಗೆ ಇಲ್ಲಿರುವ ಹಿಂದೂ ದೇವಾಲಯ ಅಂಕೂರ್ ವಾಟ್ ನೋಡಲೆಂದು ಹಿಂದೂಗಳು ಪ್ರವಾಸ ಕೈಗೊಳ್ಳುತ್ತಾರೆ. ಶ್ರೀಮಂತ ಇತಿಹಾಸ, ಆಹಾರಗಳು ಅಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿ ಪ್ರವಾಸ ತೆರಳಬೇಕಾದರೆ ವಾರಕ್ಕೆ ಸುಮಾರು 41,000ದಿಂದ 57,400 ರೂಪಾಯಿ ವೆಚ್ಚವಾಗಲಿದೆ.
ಮಲೇಷ್ಯಾ
ಮಲೇಷ್ಯಾ ಭಾರತೀಯರ ಕನಸಿನ ಪ್ರವಾಸಿ ತಾಣವಾಗಿದೆ. ಮಲೇಷ್ಯಾದ ಮಳೆ ಕಾಡುಗಳು, ಕೌಲಾಲಂಪುರ್‌ನ ಗಗನಚುಂಬಿ ಕಟ್ಟಡಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಎಲ್ಲರನ್ನು ನಿಬ್ಬೆರಗಾಗಿಸುತ್ತೆ. ಇನ್ನು ಮಲೇಷ್ಯಾ ಸುತ್ತಬೇಕು ಎಂದುಕೊಂಡವರು ವಾರವೊಂದಕ್ಕೆ 65,600 ರೂಪಾಯಿಯಿಂದ 82,000 ರೂಪಾಯಿ ಖರ್ಚು ಮಾಡಲು ಕೂಡ ಸಿದ್ದರಿರಬೇಕು.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)
ಭಾರತೀಯರು ಹೆಚ್ಚಾಗಿ ಯುಎಇ ಪ್ರವಾಸ ತೆರಳಲು ಮುಂದಾಗುವುದು ನೋಡಬಹುದು. ಅದರಲ್ಲೂ ಸ್ನೇಹಿತರು, ಕುಟುಂಬಸ್ಥರೊಂದಿಗೆ ಅವರು ಯುಎಇ ಪ್ರವಾಸದ ಕನಸು ಕಂಡಿರುತ್ತಾರೆ. ಸುಂದರ ನಗರಗಳು, ಅಲ್ಲಿನ ಕಠಿಣ ಕಾನೂನುಗಳು, ಶ್ರೀಮಂತ ಪರಂಪರೆ, ಆತಿಥ್ಯಕ್ಕೆ ಮನಸೋಲದವರೇ ಇಲ್ಲ. ಆದ್ರೆ ವಾರವೊಂದಕ್ಕೆ ನಿಮಗೆ 98,400 ರೂಪಾಯಿಯಿಂದ 1,23,000 ರೂಪಾಯಿ ಖರ್ಚಾಗಬಹುದು.
ಶ್ರೀಲಂಕಾ
ಪಕ್ಕದ ದೇಶ ಶ್ರೀಲಂಕಾಗೆ ನೀವು ಕಡಿಮೆ ಹಣದಲ್ಲಿ ಪ್ರವಾಸ ಮಾಡಬಹುದು. ಅಲ್ಲಿನ ಟೀ ಎಸ್ಟೇಟ್‌ಗಳು, ಕಡಲ ತೀರಗಳು ಪ್ರವಾಸಿಗರ ಕೈ ಬೀಸಿ ಕರೆಯಲಿದೆ. ಅಲ್ಲಿಗೆ ಒಂದು ವಾರಕ್ಕೆ ನಿಮಗೆ 57,400 ರಿಂದ 73 ಸಾವಿರ ರೂಪಾಯಿ ಖರ್ಚಾಗಬಹುದು. ಹಾಗೆ ನೇಪಾಳಕ್ಕೆ ಕೂಡ ಅತ್ಯಂತ ಕಡಿಮೆ ಹಣದಲ್ಲಿ ಪ್ರವಾಸ ಮುಗಿಸಬಹುದು.



Click it and Unblock the Notifications












