Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
2024ರಲ್ಲಿ ಭಾರತೀಯರು ಗೂಗಲ್ ಮಾಡಿದ ಹೆಸರುಗಳಿವು..! ಯಾರ ಹೆಸರು ಹುಡುಕಿದ್ದಾರೆ ಗೊತ್ತಾ?
Year Ender 2024: 2024ನೇ ವರ್ಷ ಮುಗಿದು ಇನ್ನೇನು 2025ಕ್ಕೆ ನಾವು ಕಾಲಿಡುತ್ತಿದ್ದೇವೆ. ಈ ನಡುವೆ 2024ರ ಕೆಲವು ಘಟನೆಗಳು, ವಿಚಾರಗಳನ್ನು ನಾವು ಮತ್ತೆ ನೆನಪು ಮಾಡಿಕೊಳ್ಳಬೇಕಾಗಿದೆ. ಅದ್ರಲ್ಲೂ ಈ 2024ರಲ್ಲಿ ಭಾರತದಲ್ಲಿ ಹಲವು ವಿಚಾರಗಳು ವೈರಲ್ ಆಗಿವೆ, ಆಗಾಗ ಸಂಭವಿಸಿರುವ ಕೆಲವೊಂದು ವಿಚಾರಗಳು ಎಲ್ಲರ ಗಮನ ಸೆಳೆದಿವೆ.
ಅದರಲ್ಲೂ ಒಂದಿಷ್ಟು ವಿಚಾರಗಳು ಗೂಗಲ್‌ನಲ್ಲೂ ಟ್ರೆಂಡ್ ಆಗಿದ್ದವು. 2024ರಲ್ಲಿ ಕೆಲವೊಬ್ಬರ ಹೆಸರುಗಳು ಗೂಗಲ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದವು. ಜನರು ಅವರನ್ನು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಹಾಗಾದ್ರೆ 2024ರಲ್ಲಿ ಭಾರತದ ಯಾವ ವ್ಯಕ್ತಿಯ ಹೆಸರನ್ನು ಜನರು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಗೊತ್ತಾ? ಯಾರ ಹೆಸರನ್ನು ಯಾವ ಕಾರಣಕ್ಕೆ ಜನರು ಹುಡುಕಾಡಿದ್ದಾರೆ ಎಂಬುದನ್ನು ನಾವಿಂದು ತಿಳಿಯೋಣ.

2025ರ ಸನಿಹಕ್ಕೆ ಬಂದಿರುವಾಗ ಗೂಗಲ್ ಭಾರತದಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಜನರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಯಾರ ಹೆಸರು ಮೊದಲಿಗಿದೆ ಹಾಗೂ ಯಾರ ಹೆಸರು ಕೊನೆಯಲ್ಲಿದೆ ಎಂಬುದನ್ನು ನೋಡೋಣ.
2024ರಲ್ಲಿ ಜನರು ಅತೀ ಹೆಚ್ಚು ಹುಡುಕಾಡಿರುವ ಹೆಸರು ಅಂದ್ರೆ ವಿನೇಶ್ ಫೋಗಟ್. ಭಾರತದಲ್ಲಿ 2024ರಲ್ಲಿ ಹಲ್ ಚಲ್ ಎಬ್ಬಿಸಿದ್ದ ಹೆಸರುಗಳಲ್ಲಿ ಈ ವಿನೇಶ್ ಫೋಗಟ್ ಕೂಡ ಒಬ್ಬರು ಜನರು ಅತೀ ಹೆಚ್ಚು ಹುಡುಕಿದವರ ಪಟ್ಟಿಯಲ್ಲಿ ವಿನೇಶ್ ಫೋಟ್ ಮೊದಲ ಸ್ಥಾನದಲ್ಲಿದೆ.
ವಿನೇಶ್ ಫೋಗಟ್
ವಿನೇಶ್ ಫೋಗಟ್ ಭಾರತೀಯ ಕ್ರೀಡಾಪಟು. ಆಗಸ್ಟ್ 6 ರಂದು ಒಲಿಂಪಿಕ್ಸ್‌ನಲ್ಲಿ ನಡೆದ ಮಹಿಳೆಯರ ಕುಸ್ತಿ ಪಂದ್ಯದಲ್ಲಿ ಅನರ್ಹತೆಯಿಂದ ಅವರು ಹೊರಗುಳಿಯಬೇಕಾಗಿತ್ತು. ಕೇವಲ ಗ್ರಾಮ್ ಲೆಕ್ಕದಲ್ಲಿ ತೂಕ ಹೆಚ್ಚಾದ ಕಾರಣಕ್ಕೆ ಅವರು ಸ್ಪರ್ಧೆಯಿಂದ ಹೊರಬಿದ್ದಿದ್ದು, ಭಾರತಕ್ಕೆ ಚಿನ್ನ ಬರುವುದು ಖಚಿತ ಎನ್ನುವಂತಿದ್ದ ಸಮಯದಲ್ಲಿ ಅವರ ಅನರ್ಹೆ ಸುದ್ದಿ ಇಡೀ ದೇಶಕ್ಕೆ ಶಾಕ್ ನೀಡಿತ್ತು. ಇನ್ನು ಅವರು ಭಾರತಕ್ಕೆ ವಾಪಾಸಾದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹುಮಾನ ಘೋಷಿಸಿದ್ದವು. ಹಾಗೆ ಕುಸ್ತಿಗೆ ವಿದಾಯ ಹೇಳಿದ್ದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು, ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಹೀಗಾಗಿ ಅವರ ಕುರಿತು 2024ರಲ್ಲಿ ಭಾರೀ ಚರ್ಚೆ ನಡೆದಿತ್ತು, ಅವರ ಹೆಸರನ್ನು ಹೆಚ್ಚಾಗಿ ಸರ್ಚ್ ಮಾಡಲಾಗಿತ್ತು.
ನಿತೀಶ್ ಕುಮಾರ್
ಈ ಪಟ್ಟಿಯಲ್ಲಿ 2ನೇ ಹೆಸರೆಂದರೆ ಅದು ನಿತೀಶ್ ಕುಮಾರ್. ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರನ್ನು ಬಹಳಷ್ಟು ಮಂದಿ ಗೂಗಲ್‌ನಲ್ಲಿ ಹುಡುಕಿದ್ದಾರೆ. ಬಿಜೆಪಿಯಿಂದ ಹೊರಬಂದ ಅವರು ಚುನಾವಣೆ ಎದುರಿಸಿ ಮತ್ತೆ ಅವರೊಂದಿಗೆ ಕ ಜೋಡಿಸಿದ್ದು ಸೇರಿ ಹಲವು ರೀತಿಯ ಅಚ್ಚರಿಯ ಘಟನೆಗೆ ಅವರು ಸಾಕ್ಷಿಯಾಗಿದ್ದರು.
ಚಿರಾಗ್ ಪಸ್ವಾನ್
ಈ ಪಟ್ಟಿಯಲ್ಲಿರುವ ಮೂರನೇ ಹೆಸರು ಚಿರಾಗ್ ಪಾಸ್ವಾನ್, ಬಿಹಾರದ ಜಾಮುಯ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು ಕೇಂದ್ರ ಸಚಿವರ ಪಟ್ಟಿಯಲ್ಲೂ ಸ್ಥಾನ ಪಡೆದರು. ಹೀಗಾಗಿ ಅವರ ಹೆಸರನ್ನು ಜನ ಹುಡುಕಾಡಿದ್ದಾರೆ.
ಹಾರ್ದಿಕ್ ಪಾಂಡ್ಯ
ಈ ಪಟ್ಟಿಯಲ್ಲಿ ನಾಲ್ಕನೆ ಹೆಸರಾಗಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಹೆಸರಿದೆ. ಪಾಂಡ್ಯ ಈ ವರ್ಷ ಹತ್ತು ಹಲವು ವಿಚಾರಗಳಿಂದಾಗಿ ಸುದ್ದಿಯಾಗಿದ್ದರು. ಅದರಲ್ಲೂ ತಮ್ಮ ವೈಯಕ್ತಿಕ ವಿಚಾರಗಳು ಹಾಗೂ ಕ್ರಿಕೆಟ್‌ನಿಂದ ಅವರು ಸುದ್ದಿಯಾದರು.
ಪವನ್ ಕಲ್ಯಾಣ್
ನಟ ರಾಜಕಾರಣಿ ಪವನ್ ಕಲ್ಯಾಣ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ ಅವರು ಸುದ್ದಿಯಾಗಿದ್ದೇ ಹೆಚ್ಚು, ಹಿಂದೂ ಧರ್ಮದ ಪರವಾಗಿ ಮಾತನಾಡಿದ್ದ ಅವರು ಆಂಧ್ರ ಪ್ರದೇಶ ರಾಜಕೀಯ ಮಾತ್ರವಲ್ಲ ಇಡಿ ಭಾರತದಲ್ಲಿ ಸುದ್ದಿಯಾಗಿದ್ದರು.
ಶಶಾಂಕ್ ಸಿಂಗ್
ಈ ಪಟ್ಟಿಯಲ್ಲಿ ಸೇರಿರುವ ಅಚ್ಚರಿಯ ಹೆಸರೆಂದರೆ ಅದರು ಶಶಾಂಗ್ ಸಿಂಗ್. ಪಂಜಾಬ್ ಕಿಂಗ್ಸ್ ಐಪಿಎಲ್ ತಂಡ ಆಟಗಾರ ಈ ಬಾರಿಯ ಹರಾಜು ಪ್ರಕ್ರಿಯೆ ಸೇರಿದಂತೆ ಮುಂದಿನ ನಾಯಕನಾಗುವ ಸುದ್ದಿಯಲ್ಲಿ ಅವರ ಹೆಸರು ಹರಿದಾಡುತ್ತಿದೆ. ಹೀಗಾಗಿ ಅವರ ಹೆಸರು ಅಚ್ಚರಿಯಾಗಿ 6ನೇ ಸ್ಥಾನದಲ್ಲಿದೆ.
ಪೂನಂ ಪಾಂಡೆ
ನಟಿ, ಮಾಡೆಲ್ ಪೂನಂ ಪಾಂಡೆ ಈ ವರ್ಷ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದಾಗಿ ಸುದ್ದಿ ಹಂಚಿಕೊಂಡು ಸುದ್ದಿಯಾಗಿದ್ದರು. ಆದ್ರೆ ಆಕೆ ಮೃತಪಟ್ಟಿರಲಿಲ್ಲ. ಬದಲಿಗೆ ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಆಕೆ ತಾನೇ ಮೃತಪಟ್ಟಿರುವುದಾಗಿ ಒಂದು ವಿಡಿಯೋ ಹಂಚಿಕೊಂಡಿದ್ದರು, ಈ ಘಟನೆ ಬಳಿಕ ಆಕೆಯ ಹೆಸರು ಎಲ್ಲೆಡೆ ಹರಿದಾಡಿತ್ತು.
ರಾಧಿಕಾ ಮರ್ಚೆಂಟ್
ಅನಂತ್ ಅಂಬಾನಿಯನ್ನು ಮದುವೆಯಾದ ರಾಧಿಕಾ ಮರ್ಚೆಂಟ್ ಹೆಸರು ಈ ಪಟ್ಟಿಯಲ್ಲಿದೆ. ಮದುವೆಯ ಸುದ್ದಿಯಿಂದ ಆಕೆ ಯಾರು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಜನ ಹುಡುಕಾಡಿದ್ದಾರೆ.



Click it and Unblock the Notifications