Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ನೇ ಸಾಲಿನ ಮಳೆ ನಕ್ಷತ್ರಗಳ ವಿವರ ಇಲ್ಲಿದೆ..! ಮೊದಲ ಮಳೆ ಯಾವಾಗಿಂದ ಆರಂಭ..?
ಬೇಸಿಗೆಯ ಬಿಸಿ ಕಾಡಿದ ಏಪ್ರಿಲ್ ಅಂತ್ಯಗೊಂಡಿದೆ. ಮೇ ತಿಂಗಳಿನಲ್ಲೂ ಬೇಸಿಗೆಯ ಬಿಸಲು ಕಾಡಬಹುದಾದರು ಮೇ ತಿಂಗಳಿನಲ್ಲಿ ಮಳೆ ಆಗಮನದ ನಿರೀಕ್ಷೆ ಹೆಚ್ಚಾಗುತ್ತದೆ. ಇದರಿಂದ ಮೇ ತಿಂಗಳ ಅಂತ್ಯ ಹಾಗೆ ಜೂನ್‌ನ ಆರಂಭದಲ್ಲಿ ಮಳೆ ಬೀಳಲು ಆರಂಭವಾಗುತ್ತದೆ. ಆದ್ರೆ ಅದಕ್ಕೂ ಮೊದಲೇ ಅಕಾಲಿಕ ಮಳೆಯಾಗುವುದು ಸಾಮಾನ್ಯ, ಆದ್ರೆ ಮೇ ತಿಂಗಳಿನ ಅಂತ್ಯದಿಂದ ಮಾನ್ಸೂನ್ ಮಾರುತಗಳು ದೇಶವನ್ನು ತಲುಪುತ್ತವೆ.
ಹಾಗೆ ಮುಂಗಾರು ಮಳೆ ಆರಂಭವನ್ನು ಈ ತಿಂಗಳ ಅಂತ್ಯದಲ್ಲಿ ನಿರೀಕ್ಷಿಸಬಹುದು. ಅಲ್ಲದೆ ಅಲ್ಲಲ್ಲಿ ನಿತ್ಯ ಸಂಜೆ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇರಲಿದೆ. ಏಪ್ರಿಲ್ ಮುಗಿಯುತ್ತಿದ್ದಂತೆಯೇ ವಾತಾವರಣದಲ್ಲಿ ಬದಲಾವನೆ ನೋಡಬಹುದು. ಮಳೆಗಾಲದ ಆರಂಭಿಕ ದಿನಗಳಂತೆ ಸಂಜೆ ಸಮಯದಲ್ಲಿ ತಂಪಿನ ಗಾಳಿ ಹಾಗೆ ಅಲ್ಲಲ್ಲಿ ಮಳೆಯಾಗುವುದು ಸಾಮಾನ್ಯವಾಗುತ್ತದೆ.

ಕಳೆದ ವರ್ಷದ ಏಪ್ರಿಲ್ ಕೊನೆಯ ವಾರದಿಂದ ಮಳೆಯಾಗಿತ್ತು. ಇದರಿಂದ ಮಳೆಗಾಲದ ಆರಂಭದಲ್ಲೇ ರಾಜ್ಯದ ಕೆಲವು ಜಲಾಶಯಗಳಲ್ಲು ನೀರು ಸಂಗ್ರಹ ಏರಿಕೆಯಾಗಿತ್ತು. ಹಿಂಗಾರು ಮಳೆಯಿಂದ ರೈತರಲ್ಲಿ ಕೃಷಿ ಚಟುವಟಿಕೆ ವೇಗ ಪಡೆಯಲು ಕಾರಣವಾಗಿತ್ತು. ಮಳೆ ಸರಿಯಾದ ಸಮಯಕ್ಕೆ ಆರಂಭಗೊಂಡರೆ ರೈತರಿಗೆ ನೆರವಾಗುತ್ತದೆ. ಅವರ ಕೃಷಿ ಸಂಬಂಧಿ ಚಟುವಟಿಕೆಗಳು ಸರಾಗವಾಗಿ ನಡೆಯಲಿದೆ.
ಜ್ಯೋತಿಷ್ಯಶಾಸ್ತ್ರ 27 ನಕ್ಷತ್ರಗಳನ್ನು ಗುರುತಿಸಿದೆ. ಇದರಲ್ಲಿ 11 ಮಳೆ ನಕ್ಷತ್ರಗಳು ಹೆಚ್ಚು ಮಳೆಯನ್ನು ಸುರಿಸುತ್ತವೆ ಎಂದು ಅಂದಾಜಿಸಲಾಗುತ್ತದೆ.
ಹಾಗಾದ್ರೆ 2025ನೇ ಸಾಲಿನ ಮಳೆ ನಕ್ಷತ್ರಗಳು ಯಾವಾಗ ಆರಂಭ? ಯಾವ ಮಳೆ ನಕ್ಷತ್ರ ಯಾವಾಗ ಆರಂಭವಾಗಲಿದೆ? ಅಧಿಕೃತವಾಗಿ ಮೊದಲು ಮಳೆ ತರುವ ನಕ್ಷತ್ರ ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಶ್ವಿನಿ
ದಿನಾಂಕ-14-4-2025
ಸಾಮಾನ್ಯ ಮಳೆ
ಭರಣಿ
ದಿನಾಂಕ-28-4-2025
ಸಾಮಾನ್ಯ ಮಳೆ
ಕೃತಿಕಾ
ದಿನಾಂಕ-11-5-2025
ಉತ್ತಮ ಮಳೆ
ರೋಹಿಣಿ
ದಿನಾಂಕ-25-5-2025
ಸಾಮಾನ್ಯ ಮಳೆ
ಮೃಗಶಿರ
ದಿನಾಂಕ-ಜೂನ್ 8 ರಿಂದ ಜೂನ್ 21ರವರೆಗೆ
ಸಾಮಾನ್ಯ ಮಳೆ
ಆರಿದ್ರಾ
ದಿನಾಂಕ(ಜೂನ್ 22 ರಿಂದ ಜುಲೈ 4ರವರೆಗೆ)
ಉತ್ತಮ ಮಳೆ
ಪುನರ್ವಸು
ದಿನಾಂಕ-6-7-2025
ಉತ್ತಮ ಮಳೆ
ಪುಷ್ಯ
ದಿನಾಂಕ-20-7-2025
ಉತ್ತಮ ಮಳೆ
ಆಶ್ಲೇಷ
ದಿನಾಂಕ-ಆಗಸ್ಟ್ 3 ರಿಂದ ಆಗಸ್ಟ್ 15ರವರೆಗೆ
ಉತ್ತಮ ಮಳೆ
ಮಘ
ದಿನಾಂಕ-ಆಗಸ್ಟ್ 17 ರಿಂದ ಆಗಸ್ಟ್ 29ರವರೆಗೆ
ಉತ್ತಮ ಮಳೆ
ಹುಬ್ಬ
ದಿನಾಂಕ-31-8-2025
ಉತ್ತಮ ಮಳೆ
ಉತ್ತರ
ದಿನಾಂಕ-13-09-2025
ಉತ್ತಮ ಮಳೆ
ಹಸ್ತ
ದಿನಾಂಕ-27-9-2025
ಉತ್ತಮ ಮಳೆ
ಚಿತ್ತ
ದಿನಾಂಕ-11-10-2025
ಉತ್ತಮ ಮಳೆ
ಸ್ವಾತಿ
ದಿನಾಂಕ-24-10-2025
ಉತ್ತಮ ಮಳೆ
ವಿಶಾಖ
ದಿನಾಂಕ-6-11-2025
ಉತ್ತಮ ಮಳೆ
ಈ ಮೇಲಿನ ಮಳೆ ನಕ್ಷತ್ರಗಳ ದಿನಾಂಕದಲ್ಲಿ ನಿಖರತೆ ಇದೆ. ಆದರೆ ಮಳೆ ಬರುವ ಪ್ರಮಾಣ ಆ ಸಮಯದಲ್ಲಿನ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಬದಲಾವಣೆಯಾಗಬಹುದು. ಸದ್ಯ ರಾಜ್ಯದ ಹಲವು ಕಡೆಗಳಲ್ಲಿ ಮಲೆಯಾಗಲು ಆರಂಭಗೊಂಡಿದೆ. ಅಂದುಕೊಂಡಂತೆ ನಡೆದರೆ ಈ ತಿಂಗಳ
11ನೇ ತರೀಖಿನಿಂದ ಕೃತಿಕಾ ಮಳೆ ಹಲವು ಕಡೆಗಳಲ್ಲಿ ಸುರಿಯಬಹುದು. ಮೇ ಕೊನೆಯ ವಾರದಿಂದ ಅಲ್ಲಲ್ಲಿ ನಿರಂತರ ಮಳೆಯ ನಿರೀಕ್ಷೆ ಮಾಡಬಹುದು. ಹಾಗೆ ಜೂನ್‌ನಲ್ಲಿ ಮಾನ್ಸೂನ್ ಮಾರುತಗಳು ಕೇರಳ ತಲುಪಿದರೆ ಮುಂದೆ ರಾಜ್ಯದಲ್ಲೂ ಮಳೆ ನಿರೀಕ್ಷೆ ಮಾಡಬಹುದು.
ಮಳೆ ನಕ್ಷತ್ರಗಳ ಅನುಸಾರ ಪ್ರತಿ ವರ್ಷವೂ ಯಾವಾಗ ಮಳೆಯಾಗುತ್ತದೆ ಎಂಬುದನ್ನು ಅಂದಾಜಿಸಲಾಗುತ್ತದೆ. 2025ರ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಈಗಾಗಲೇ ಅಂದಾಜಿಸಿದ್ದಾರೆ. ಇನ್ನು ಹಲವು ಕಡೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ, ಕರಾವಳಿ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಕೊಡಗು, ಶಿವಮೊಗ್ಗ ಸೇರಿ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ವಾರದಲ್ಲಿ ಒಂದೆರಡು ಮಳೆಯಾಗುತ್ತಿರುವುದು ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಹೆಚ್ಚಿಸಿದೆ.



Click it and Unblock the Notifications









