Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
2024ನೇ ಸಾಲಿನ ಮಳೆ ನಕ್ಷತ್ರಗಳ ವಿವರ ಇಲ್ಲಿದೆ..! ಮೊದಲ ಮಳೆ ಯಾವಾಗಿಂದ..?
ಮೈಸುಡುವ ಬೇಸಿಗೆ ಆರಂಭವಾಗಿದೆ. ಮನೆಯಿಂದ ಹೊರಬರುವುದು ಸಹ ಈಗ ಅತ್ಯಂತ ಕಷ್ಟದ ಕೆಲಸವಾಗುತ್ತಿದೆ. ಹೊರಬಂದರೆ ಸಾಕು ಮೈಸುಡುವ ಅನುಭವವಾಗುತ್ತಿದೆ. ಇದರ ಜೊತೆ ಬಿಸಿಗಾಳಿಯು ಅನಾರೋಗ್ಯ ಸಮಸ್ಯೆಯನ್ನು ತರುತ್ತಿದೆ. ಇದೆಲ್ಲದರ ನಡುವೆ ನೀರಿಗೆ ಹಾಹಾಕಾರ ಆರಂಭವಾಗುತ್ತಿದೆ. ಬೆಂಗಳೂರಿನಲ್ಲಿಯೇ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಹಲವು ಭಾಗದಲ್ಲಿ ನದಿಯಲ್ಲಿ ನೀರಿಲ್ಲದೆ ಒಣಗುತ್ತಿದೆ.
ಹೀಗಾಗಿ ಎಲ್ಲಾ ಕಡೆಗಳಲ್ಲೂ ಮಳೆಗಾಗಿ ಪ್ರಾರ್ಥನೆ ಆರಂಭಗೊಂಡಿದೆ. ಅದರಲ್ಲೂ ಮುಂಗಾರು ಮಳೆ ಆರಂಭವಾಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಎದ್ದಿದೆ. ಆದ್ರೆ ಜನರಿಗೆ ಖುಷಿ ವಿಚಾರ ಏನೆಂದರೆ ಈ ವರ್ಷ ಮುಂಗಾರು ಅವಧಿಗೂ ಮುನ್ನವೇ ಆರಂಭಗೊಳ್ಳುವ ಸೂಚನೆಯಂತೂ ಇದೆ. ಆದ್ರೆ ಆ ಸಮಯದಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಇನ್ನು ಮಾರ್ಚ್ ಮುಗಿಯುತ್ತಿದ್ದಂತೆ ಮಳೆ ಬರಲು ಆರಂಭವಾದರೆ ನೀರಿನ ಸಮಸ್ಯೆಗೆ ಕಡಿವಾಣ ಬೀಳಲಿದೆ. ಅಚ್ಚರಿ ವಿಚಾರ ಅಂದ್ರೆ ಏಪ್ರಿಲ್‌ನಲ್ಲಿ ಮಳೆಯಾಗುವ ನಿರೀಕ್ಷೆಯಂತು ಇದೆ. ಆದರೆ ಕಳೆದ ವರ್ಷ ಸಹ ಮಳೆ ಕೈಕೊಟ್ಟಿತ್ತು. ಅಂದುಕೊಂಡಂತೆ ಮಳೆಯಾಗದೆ ರಾಜ್ಯದ ಕೆರೆ ಕಟ್ಟೆಗಳು ತುಂಬಿರಲಿಲ್ಲ. ಜೊತೆಗೆ ಡ್ಯಾಮ್‌ಗಳು ಸಹ ತುಂಬದ ರೈತರಿಗೂ ಸಮಸ್ಯೆ ಆಗಿತ್ತು. ಸರಿಯಾಗಿ ಮುಂಗಾರು ಹಿಡಿಯುವ ಸಮಯದಲ್ಲಿ ಚಂಡಮಾರುಗಳು ಸಂಭವಿಸಿದ್ದ ಪರಿಣಾಮ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಬ್ಬರಿಸಬೇಕಿದ್ದ ಮಳೆಗಳು ಸುರಿಯಲೇ ಇಲ್ಲ. ಹೀಗಾಗಿ ನೀರಿನ ಅಭಾವಕ್ಕೆ ಕಾರಣವಾಗಿತ್ತು.
ಆದರೆ ವರ್ಷದಿಂದ ವರ್ಷ ಈ ಮಳೆ ನಕ್ಷತ್ರಗಳ ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಒಂದು ವರ್ಷದ ಸುರಿದ ಮಳೆ ಮತ್ತೆ ಮುಂದಿನ ವರ್ಷವೂ ಬರಲೇಬೇಕು ಅಂತೇನಿಲ್ಲ. ಹಾಗೆ ಒಮ್ಮೆ ಕೈಕೊಟ್ಟಿದ್ದ ಮಳೆ ಈ ವರ್ಷವೂ ಕೈಕೊಡಲಿದೆ ಎನ್ನುವಂತ ನಿಯಮವೇನು ಇಲ್ಲ. ಆದರೆ ಸರಿಯಾದ ಸಮಯಕ್ಕೆ ಮಳೆ ಆರಂಭಗೊಂಡರೆ ಎಲ್ಲವೂ ಸಸೂತ್ರವಾಗಿ ನಡೆಯಲಿದೆ. ಎಲ್ಲಾ ಮಳೆಗಳು ಸರಿಯಾದ ಪ್ರಮಾಣದಲ್ಲಿ ಸುರಿಯಲಿದೆ.
ಹಾಗಾದ್ರೆ 2024ನೇ ಸಾಲಿನ ಮಳೆ ನಕ್ಷತ್ರಗಳು ಯಾವಾಗ ಆರಂಭ. ಯಾವ ಮಳೆ ನಕ್ಷತ್ರ ಯಾವಾಗ ಆರಂಭವಾಗಲಿದೆ ಎಂಬುದನ್ನು ನೋಡಿ.
1. ಅಶ್ವಿನಿ
ದಿನಾಂಕ-13-4-2024
ಶನಿವಾರ
ಸಾಮಾನ್ಯ ಮಳೆ
ಬರುವ ಸಾಧ್ಯತೆ ಕಡಿಮೆ
2. ಭರಣಿ
ದಿನಾಂಕ-27-4-2024
ಶನಿವಾರ
ಸಾಮಾನ್ಯ ಮಳೆ
3. ಕೃತಿಕಾ
ದಿನಾಂಕ-11-5-2024
ಶುಕ್ರವಾರ
ಉತ್ತಮ ಮಳೆ
4. ರೋಹಿಣಿ
ದಿನಾಂಕ-24-5-2024
ಶುಕ್ರವಾರ
ಸಾಮಾನ್ಯ ಮಳೆ
ಮಳೆಯಾಗುವ ಸಾಧ್ಯತೆ ಹೆಚ್ಚು
5.ಮೃಗಶಿರ
ದಿನಾಂಕ 07-06-2024
ಶುಕ್ರವಾರ
ಸಾಮಾನ್ಯ ಮಳೆ
6. ಆರಿದ್ರಾ
ದಿನಾಂಕ 21-06-2024
ಶುಕ್ರವಾರ
ಸಾಮಾನ್ಯ ಮಳೆ
7. ಪುನರ್ವಸು
ದಿನಾಂಕ 05-7-2024
ಶುಕ್ರವಾರ
ಸಾಮಾನ್ಯ ಮಳೆ
8. ಪುಷ್ಯ
ದಿನಾಂಕ-19-7-2024
ಶುಕ್ರವಾರ
ಉತ್ತಮ ಮಳೆ
9. ಆಶ್ಲೇಷ
ದಿನಾಂಕ-02-08-2024
ಶುಕ್ರವಾರ
ಸಾಮಾನ್ಯ ಮಳೆ
10. ಮಘ
ದಿನಾಂಕ 16-08-2024
ಶುಕ್ರವಾರ
ಉತ್ತಮ ಮಳೆ
11.ಹುಬ್ಬ
ದಿನಾಂಕ-30-8-2024
ಶುಕ್ರವಾರ
ಸಾಮಾನ್ಯ ಮಳೆ
12. ಉತ್ತರ
ದಿನಾಂಕ-13-09-2024
ಶುಕ್ರವಾರ
ಸಾಮಾನ್ಯ ಮಳೆ
13. ಹಸ್ತ
ದಿನಾಂಕ-26-09-2024
ಗುರುವಾರ
ಉತ್ತಮ ಮಳೆ
14. ಚಿತ್ತ
ದಿನಾಂಕ-10-10-2024
ಗುರುವಾರ
ಉತ್ತಮ ಮಳೆ
15. ಸ್ವಾತಿ
ದಿನಾಂಕ-23-10-2024
ಬುಧವಾರ
ಸಾಮಾನ್ಯ ಮಳೆ
16. ವಿಶಾಖ
ದಿನಾಂಕ-6-11-2024
ಬುಧವಾರ
ಸಾಮಾನ್ಯ ಮಳೆ
ಈ ದಿನಾಂಕಗಳಲ್ಲಿ ನಿಖರತೆ ಇದ್ದರೂ ಮಳೆ ಸುರಿಯುವ ಪ್ರಮಾಣದಲ್ಲಿ ಏರಿಳಿತವಾಗಬಹುದು. ಏಕೆಂದರೆ ಮಳೆ ಆರಂಭವಾಗುವ ಸಮಯದಲ್ಲಿ ಇರುವ ಹವಾಮಾನ ಪರಿಸ್ಥಿತಿ ಸಹ ಆ ಮಳೆ ನಕ್ಷತ್ರ ಎಷ್ಟು ಪ್ರಮಾಣದಲ್ಲಿ ಮಳೆ ತರಲಿದೆ ಎಂಬುದನ್ನು ನಿರ್ಧಾರ ಮಾಡುತ್ತದೆ. ಸದ್ಯ ಈ ವರ್ಷ ಮಳೆಗಾಗಿ ಈಗಲೇ ಪ್ರಾರ್ಥನೆ ಆರಂಭವಾಗಿದೆ. ಆದರೆ ಮಳೆ ನಕ್ಷತ್ರದ ಪ್ರಕಾರ ನೋಡುವುದಾದರೆ ಮೊದಲ ಮಳೆ ಆರಂಭವಾಗುವುದು ಏಪ್ರಿಲ್ 13ರಂದು ಆದರೆ ಈ ಮಳೆ ನಕ್ಷತ್ರ ಮಳೆ ತಂದಿರುವ ಉದಾಹರಣೆ ಬಹಳ ಕಡಿಮೆ. ಹೀಗಾಗಿ ಏಪ್ರಿಲ್ ಅಂತ್ಯದವರೆಗೆ ಮಳೆಯಾಗುವ ನಿರೀಕ್ಷೆ ಕಡಿಮೆ ಇದೆ.



Click it and Unblock the Notifications