Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ರಿಲೀಸ್..! ಮೈಸೂರಿಗಿಲ್ಲ ಸ್ಥಾನ..!
ಸ್ವಚ್ಛ ಭಾರತ್ ಅಭಿಯಾನದಿಂದಾಗಿ ಭಾರತದ ಒಂದಿಷ್ಟು ನಗರಗಳು ಸ್ವಚ್ಛತೆ ಕಡೆಗೆ ಮುಖಮಾಡಿವೆ. ಹೀಗಾಗಿ ಸ್ವಚ್ಛತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರತಿ ವರ್ಷ ಭಾರತದ ಅತ್ಯಂತ ಸ್ವಚ್ಛನಗರ ಎಂಬ ಪ್ರಶಸ್ತಿ ನೀಡಲಾಗುತ್ತದೆ. ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮದ ಮೂಲಕ ನಗರವನ್ನು ಸ್ವಚ್ಛವಾಗಿಡುವ ಕಾರ್ಯ ನಡೆಯುತ್ತಿದೆ, ಇದೀಗ ಸ್ವಚ್ಛ ಸರ್ವೇಕ್ಷಣ್ 2023ರ ಪಟ್ಟಿಯೂ ಬಿಡುಗಡೆಯಾಗಿದೆ.
ಸ್ವಚ್ಛ ಸರ್ವೇಕ್ಷಣ್ 2023ರಲ್ಲಿ ಸತತವಾಗಿ 7ನೇ ಬಾರಿಯೂ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಕೇಂದ್ರಗಳಲ್ಲಿ ಮಹಾರಾಷ್ಟ್ರದ ಸಾಸ್ವಾದ್ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಚತ್ತೀಸ್‌ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಲೋನಾವ್ಲಾ ಈ ವಿಭಾಗದಲ್ಲಿ ಎರಡನೇ ಮತ್ತು ಮೂರನೇ ಸ್ವಚ್ಛ ನಗರಗಳಾಗಿವೆ. ವಾರಣಾಸಿ ಮತ್ತು ಪ್ರಯಾಗ್‌ರಾಜ್‌ಗಳು ಸ್ವಚ್ಛವಾದ ಗಂಗಾ ಪಟ್ಟಣಗಳೆಂದು ಗುರುತಿಸಲ್ಪಟ್ಟವೆ.
ಮಧ್ಯಪ್ರದೇಶದ MHOW ಕಂಟೋನ್ಮೆಂಟ್ ಬೋರ್ಡ್‌ಗೆ ಸ್ವಚ್ಛ ಕಂಟೋನ್ಮೆಂಟ್ ಪಟ್ಟಣ ಎಂಬ ಪ್ರಶಸ್ತಿ ಒಲಿದುಬಂದಿದೆ. 2016 ರಿಂದ ಸ್ವಚ್ಛ ಭಾರತ್ ಅರ್ಬನ್ ಮಿಷನ್ ಅಡಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮ ನಡೆಸುತ್ತಿದೆ. ಇದು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತೆಯ ಸಮೀಕ್ಷೆಯಾಗಿದೆ.
ದೊಡ್ಡ ಪ್ರಮಾಣದ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಪಟ್ಟಣಗಳು ಮತ್ತು ನಗರಗಳನ್ನು ವಾಸಿಸಲು ಉತ್ತಮ ಸ್ಥಳಗಳನ್ನು ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಮಹತ್ವದ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲಿ ಜಾಗೃತಿ ಮೂಡಿಸುವುದು ಸ್ವಚ್ಛ ಸರ್ವೇಕ್ಷಣ್‌ನ ಪ್ರಾಥಮಿಕ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಎಂಟನೇ ವರ್ಷದ ಸಮೀಕ್ಷೆಯಾಗಿದ್ದು, ಒಟ್ಟು 3,000 ಮೌಲ್ಯಮಾಪಕರು 46 ಸೂಚಕಗಳಲ್ಲಿ 4,500 ಕ್ಕೂ ಹೆಚ್ಚು ನಗರಗಳ ಮೌಲ್ಯಮಾಪನವನ್ನು ನಡೆಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ್ 2023 ರಲ್ಲಿ ಮಹಾರಾಷ್ಟ್ರವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ 1ನೇ ಸ್ಥಾನವನ್ನು ಪಡೆದುಕೊಂಡಿದೆ. ಮಧ್ಯಪ್ರದೇಶವು 2 ನೇ ಅತ್ಯುತ್ತಮ ಕಾರ್ಯಕ್ಷಮತೆಯ ರಾಜ್ಯವಾಗಿ ಸ್ಥಾನ ಪಡೆದಿದ್ದರೆ, ಛತ್ತೀಸ್‌ಗಢವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ಸ್ಥಾನ ಕಳೆದುಕೊಂಡ ಮೈಸೂರು
ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಈ ಬಾರಿ ಕರ್ನಾಟಕದ ಒಂದೇ ಒಂದು ನಗರವು ಟಾಪ್ 10ರಲ್ಲಿ ಸ್ಥಾನ ಪಡೆದಿಲ್ಲ. 2022ರಲ್ಲಿ 8ನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಟಾಪ್ 10ರಿಂದಲೂ ಮರೆಯಾಗಿದೆ.
ಟಾಪ್ 10 ಸ್ವಚ್ಛ ನಗರಗಳು ಇವು
1 ಇಂದೋರ್ ಮತ್ತು ಸೂರತ್
2. ಸೂರತ್
3. ನವಿ ಮುಂಬೈ
4. ವಿಶಾಖಪಟ್ಟಣ
5. ಭೋಪಾಲ್
6. ವಿಜಯವಾಡ
7. NDMC (ನವದೆಹಲಿ ಮುನ್ಸಿಪಲ್ ಕೌನ್ಸಿಲ್)
8. ತಿರುಪತಿ
9. ಗ್ರೇಟರ್ ಹೈದರಾಬಾದ್
10. ಪುಣೆ
"ಸಮೀಕ್ಷೆಯು ನಾಗರಿಕರ ತೊಡಗಿಸಿಕೊಳ್ಳುವಿಕೆ ಮತ್ತು ಪ್ರತಿಕ್ರಿಯೆಗೆ ಒತ್ತು ನೀಡಿರುವುದು ಅದರ ಯಶಸ್ಸಿಗೆ ಪ್ರಮುಖವಾಗಿದೆ. ಒಟ್ಟಾರೆ ಸಮೀಕ್ಷೆಯು ಸುಮಾರು 409 ಮಿಲಿಯನ್ ಜನಸಂಖ್ಯೆಯನ್ನು ಒಳಗೊಂಡಿದೆ. ಈ ವರ್ಷದ ಮೌಲ್ಯಮಾಪನದ ಸಮಯದಲ್ಲಿ 12 ಕೋಟಿ ನಾಗರಿಕರ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ, ಇದು ವಿಶ್ವದ ಅತ್ಯಂತ ದೊಡ್ಡ ಸಮೀಕ್ಷೆ ಎಂಬ ಹೆಗ್ಗಳಿಗೂ ಪಾತ್ರವಾಗಿದೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Click it and Unblock the Notifications
