Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಗಸ್ಟ್‌ನಲ್ಲಿ 13 ದಿನ ಮುಚ್ಚಿರಲಿದೆ ಬ್ಯಾಂಕ್..! ಯಾವಾಗೆಲ್ಲಾ ರಾಜ್ಯದಲ್ಲಿ ರಜೆ..!
ಜುಲೈ ತಿಂಗಳು ಅಂತ್ಯಗೊಂಡು ಆಗಸ್ಟ್ ತಿಂಗಳು ಆರಂಭಗೊಳ್ಳುತ್ತಿದೆ. ಒಂದು ಕಡೆ ಆಷಾಢ ಮಾಸ ಮುಗಿಯಲಿದ್ದು ಶುಭ ಕಾರ್ಯಗಳ ಆರಂಭಕ್ಕೆ ಮುನ್ನುಡಿ ಸಿಗಲಿದೆ. ಆಗಸ್ಟ್ ನಿಂದ ಹಿಂದೂ ಹಬ್ಬಗಳು ಆರಂಭಗೊಳ್ಳುತ್ತವೆ. ಹೀಗಾಗಿ ಆಸಗ್ಟ್‌ನಿಂದ ಸಾಲು ಸಾಲು ರಜೆಗಳು ಸಹ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗಳು ಬರಪೂರ ರಜೆ ಸಿಗಲಿದೆ.
ಇತ್ತೀಚಿಗೆ ನಮ್ಮ ದೈನಂದಿನ ವ್ಯವಹಾರದಲ್ಲಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ. ಬ್ಯಾಂಕ್ ಒಂದು ದಿನ ಮುಚ್ಚಿದರೆ ಅದರಿಂದ ಸಮಸ್ಯೆಯಾಗದಿದ್ದರೂ ವ್ಯವಹಾರಗಳು ನಿಧಾನವಾಗುತ್ತದೆ. ಹೀಗಾಗಿ ಎರಡು ದಿನಗಳ ನಂತರ ಬ್ಯಾಂಕ್ ತುಂಬಾನೆ ಜನಜಂಗುಳಿಯಿಂದ ಕೂಡಿರುತ್ತದೆ. ಅದ್ರಲ್ಲೂ ಸೋಮವಾರದಂದು ಬ್ಯಾಂಕ್ ಗ್ರಾಹಕರಿಂದ ತುಂಬಿಕೊಳ್ಳುವುದನ್ನು ನಾವು ನೋಡಿರುತ್ತೇವೆ.

ಆಗಸ್ಟ್ ತಿಂಗಳಲ್ಲಿ ದೇಶದಾದ್ಯಂತ ಸುಮಾರು 13 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಜೆಯ ಕ್ಯಾಲೆಂಡರ್ ಪ್ರಕಾರ ಈ ತಿಂಗಳು ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಸಾಮಾನ್ಯವಾಗಿ, ಬ್ಯಾಂಕ್ ಶಾಖೆಗಳನ್ನು ಪ್ರತಿ ಶನಿವಾರ (ಎರಡನೇ ಮತ್ತು ನಾಲ್ಕನೇ) ಮತ್ತು ಎಲ್ಲಾ ಭಾನುವಾರ ಮುಚ್ಚಲಾಗುತ್ತದೆ.
ರಾಜ್ಯ-ನಿರ್ದಿಷ್ಟ ಹಬ್ಬಗಳ ಸಂದರ್ಭದಲ್ಲಿ, ಆ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ, ಆದರೆ ಕ್ರಿಸ್‌ಮಸ್‌ನಂತಹ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅದ್ರಲ್ಲೂ ಆಗಸ್ಟ್‌ನಲ್ಲಿ ಹಲವು ನಿರ್ಬಂಧಿತ ರಜಾ ದಿನಾಗಳಿವೆ. ಹಾಗೆ ಸಾರ್ವತ್ರಿಕಾ ರಜಾ ದಿನಗಳು ಸಹ ಅದರಲ್ಲಿ ಸೇರಿವೆ.
ಕೇಂದ್ರೀಯ ಬ್ಯಾಂಕ್ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜಾದಿನಗಳನ್ನು ಮೂರು ವಿಭಾಗಗಳ ಅಡಿಯಲ್ಲಿ ವಿಂಗಡಿಸುತ್ತದೆ- ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ರಜಾದಿನಗಳು, ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನಗಳು. ಹಾಗಾದ್ರೆ ಆಗಸ್ಟ್ ತಿಂಗಳಲ್ಲಿ ಯಾವ ದಿನ ಯಾವ ರಾಜ್ಯದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಆಗಸ್ಟ್‌ನಲ್ಲಿ ಬ್ಯಾಂಕ್ ರಜಾ ದಿನಗಳು
ಆಗಸ್ಟ್ 3 ಶನಿವಾರ: ಕೆರ್ ಪೂಜೆ ಅಂಗವಾಗಿ ಅಗರ್ತಲಾದ ಎಲ್ಲಾ ಬ್ಯಾಂಕ್‌ಗಳಿಗೂ ರಜಾ
ಆಗಸ್ಟ್ 4 ಭಾನುವಾರ: ವಾರಾಂತ್ಯದ ಕಾರಣ ದೇಶದ ಎಲ್ಲಾ ಬ್ಯಾಂಕ್‌ಗಳಿಗೂ ರಜೆ
ಆಗಸ್ಟ್ 8 ಸೋಮವಾರ: ಗ್ಯಾಂಗ್ಟಾಕ್‌ನಲ್ಲಿ, ಟೆಂಡಾಂಗ್ ಲ್ಹೋ ರಮ್ ಫಾತ್ ಸಂದರ್ಭದಲ್ಲಿ ಬ್ಯಾಂಕ್‌ಗಳಿಗೆ ರಜೆ
ಆಗಸ್ಟ್ 10 ಶನಿವಾರ: ಎರಡನೇ ಶನಿವಾರ ಹಿನ್ನೆಲೆ ದೇಶದಾದ್ಯಂತ ಬ್ಯಾಂಕ್‌ಗಳು ರಜೆ
ಆಗಸ್ಟ್ 11 ಭಾನುವಾರ: ವಾರಾಂತ್ಯದ ಕಾರಣ ದೇಶದ ಎಲ್ಲಾ ಬ್ಯಾಂಕ್‌ಗಳಿಗೂ ರಜೆ
ಆಗಸ್ಟ್ 13 ಮಂಗಳವಾರ: ದೇಶಪ್ರೇಮಿಗಳ ದಿನದ ಅಂಗವಾಗಿ ಇಂಫಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸೇರಿ ಎಲ್ಲಾ ಬ್ಯಾಂಕ್‌ಗಳು ರಜೆ
ಆಗಸ್ಟ್ 15 ಗುರುವಾರ: ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
ಆಗಸ್ಟ್ 18 ಭಾನುವಾರ: ವಾರಾಂತ್ಯದ ಕಾರಣ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೂ ರಜೆ
ಆಗಸ್ಟ್ 19 ಸೋಮವಾರ: ರಕ್ಷಾ ಬಂಧನ ಅಂಗವಾಗಿ ತ್ರಿಪುರಾ, ಗುಜರಾತ್, ಒಡಿಶಾ, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ
ಆಗಸ್ಟ್ 20 ಮಂಗಳವಾರ: ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ಕೊಚ್ಚಿ ಸೇರಿ ಕೆಲವೆಡೆ ರಜೆ
ಆಗಸ್ಟ್ 24 ಶನಿವಾರ: ನಾಲ್ಕನೇ ಶನಿವಾರದ ಕಾರಣ ರಜೆ
ಆಗಸ್ಟ್ 25 ಭಾನುವಾರ: ದೇಶದಾದ್ಯಂತ ಬ್ಯಾಂಕ್ ರಜೆ
ಆಗಸ್ಟ್ 26 ಸೋಮವಾರ: ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಗುಜರಾತ್, ಒಡಿಶಾ, ಚಂಡೀಗಢ, ತಮಿಳುನಾಡು, ಉತ್ತರಾಖಂಡ, ಸಿಕ್ಕಿಂ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.



Click it and Unblock the Notifications
