Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ಎಂದಾದರೂ ಸಿಂಹ ಸೊಪ್ಪು ತಿನ್ನೋದನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ!
ಸಿಂಹ ಕಾಡಿನ ರಾಜ. ಇದ್ರು ಕ್ರೂರ ಪ್ರಾಣಿಗಳ ಪಟ್ಟಿಯಲ್ಲಿ ಬರುತ್ತದೆ. ಈ ಕ್ರೂರ ಪ್ರಾಣಿಗಳು ಪಕ್ಕಾ ಮಾಂಸಹಾರಿಗಳು. ಎಲ್ಲೋ ಸತ್ತು ಬಿದ್ದರೋ ಪ್ರಾಣಿಗಳ ಮಾಂಸವನ್ನು ಇದು ತಿನ್ನೋದಿಲ್ಲ. ಈ ಸಿಂಹಗಳು ರಾಜ ರೋಷವಾಗಿ ಭೇಟಿಯಾಡಿ, ತನ್ನ ಪರಾಕ್ರಮವನ್ನು ಮೆರೆದು. ಸಾಧು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ತಿಂದು ಬದುಕುತ್ತದೆ.
ಪ್ಯೂರ್ ನಾನ್ ವೆಜಿಟೇರಿಯನ್ ಆಗಿರೋ ಈ ಸಿಂಹಗಳು ಸಸ್ಯಾಹಾರವನ್ನು ಸೇವಿಸುತ್ತವೆ ಅಂದ್ರೆ ಎಂತವರಿಗೆ ಕೂಡ ಶಾಕ್ ಆಗದೇ ಇರೋದಿಲ್ಲ. ಇತ್ತೀಚಿಗಷ್ಟೇ ಸಿಂಹವೊಂದು ಸೊಪ್ಪು ತಿನ್ನುತ್ತಿರೋ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಸಿಂಹ ಸೊಪ್ಪು ತಿನ್ನುತ್ತಾ ಚಾನ್ಸೇ ಇಲ್ಲ ಅಂತ ಅನೇಕರು ಹೇಳೋದುಂಟು. ಆದ್ರೆ ಈ ವಿಡಿಯೋ ನೋಡಿದ್ರೆ ಎಂತವರಾದ್ರು ಒಂದು ಕ್ಷಣ ಶಾಕ್ ಆಗದೇ ಇರೋದಿಲ್ಲ. ಫಾರೆಸ್ಟ್ ಆಫೀಸರ್ ಒಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಈ ವಿಡಿಯೋದಲ್ಲಿ ಸಿಂಹವೊಂದು ಮರದ ಕೊಂಬೆಯನ್ನು ಎಳೆದು ಅದರಲ್ಲಿರುವ ಸೊಪ್ಪನ್ನು ಆರಾಮಾಗಿ ತಿನ್ನುತ್ತಿದೆ.
ದನ, ಜಿಂಕೆಯಂತಹ ಸಾಧು ಪ್ರಾಣಿಗಳು ಈ ರೀತಿ ಸೊಪ್ಪು ತಿನ್ನೋದನ್ನು ನೋಡಿರ್ತೀರಿ. ಆದ್ರೀಗ ಅಚ್ಚರಿಯ ಬೆಳವಣಿಗೆ ಎಂಬಂತೆ ಸಿಂಹವು ಕೂಡ ಅವುಗಳ ರೀತಿ ಸೊಪ್ಪು ತಿನ್ನುತ್ತಿದೆ. ಈ ವಿಡಿಯೋ ನೋಡಿದ ಅನೇಕ ಮಂದಿ ಸಿಂಹ ಯಾವಾಗಿನಿಂದ ವೆಜಿಟೇರಿಯನ್ ಆಗೋಯ್ತು ಅಂತ ಪ್ರಶ್ನಿಸ್ತಿದ್ದಾರೆ.
ಸಿಂಹ ಸೊಪ್ಪು ತಿನ್ನೋದಕ್ಕೆ ಕಾರಣವೇನು?
ಈ ವಿಡಿಯೋವನ್ನು ಪೋಸ್ಟ್ ಮಾಡಿರೋ ಭಾರತೀಯ ಅರಣ್ಯ ಇಲಾಖೆಯ ಆಫಿಸರ್ (IFS) ಆದ ಸುಸಾಂತ ನಂದಾ ಅವರು ಹೇಳುವ ಪ್ರಕಾರ ಕೆಲವೊಮ್ಮೆ ಸಿಂಹಗಳು ಅನಿರೀಕ್ಷಿತ ವರ್ತನೆಯನ್ನು ಪ್ರದರ್ಶಿಸುತ್ತದೆ. ಸಿಂಹಗಳು ಕೂಡ ಕೆಲವೊಂದು ಸಲ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತವೆ. ಇದು ಒಂದು ರೀತಿ ಅಚ್ಚರಿಯ ವಿಚಾರವೇ ಸರಿ.
ಆದರೆ ಸಿಂಹ ಏನಾದರೂ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತಿದೆ ಅಂದ್ರೆ ಅದ್ರ ಹಿಂದೆ ಅನೇಕ ಕಾರಣಗಳು ಇರುತ್ತದೆ. ಇದು ಅವುಗಳ ಹೊಟ್ಟೆ ನೋವಿನ ಸಮಸ್ಯೆಯನ್ನು ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ. ಇದ್ರ ಜೊತೆಗೆ ಕೆಲವು ಸಂದರ್ಭಗಳಲ್ಲಿ ಅವುಗಳಿಗೆ ನೀರನ್ನು ಒದಗಿಸುತ್ತದೆ.
ಈ ವಿಡಿಯೋ 55 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡ್ಕೊಂಡಿದೆ. ಒಟ್ಟಿನಲ್ಲಿ ಈ ವಿಡಿಯೋ ಒಂದು ರೀತಿ ಎಲ್ಲರಲ್ಲೂ ಅಚ್ಛರಿಯನ್ನು ಮೂಡಿಸಿರೋದಂತೂ ಸುಳ್ಳಲ್ಲ.



Click it and Unblock the Notifications
