Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಂಥ ಮಾರಾಯ್ರೆ ಸಿಂಹವನ್ನು ನಾಯಿಯನ್ನು ಒಡಿಸಿದಂತೆ ಓಡಿಸುವುದಾ?: ವೀಡಿಯೋ ಅಂತು ಸಿಕ್ಕಾಪಟ್ಟೆ ವೈರಲ್
ವ್ಯಕ್ತಿಯೊಬ್ಬ ಸಾಮಾಜಿಕ ತಾಣದಲ್ಲಿ ನಾಯಿಯನ್ನು ಓಡಿಸಿದಂತೆ ಸಿಂಹವನ್ನು ಓಡಿಸುತ್ತಿರುವ ವೀಡಿಯೋವೊಂದು ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡುವಾಗ ಅಯ್ಯೋ... ಸಿಂಹವನ್ನು ಹೀಗೂ ಓಡಿಸಿದರಲ್ಲಪ್ಪಾ ಎಂದು ನಗು ಬಾರದೆ ಇರಲ್ಲ.
ವೀಡಿಯೋದಲ್ಲಿ ದೇವಾಲಯದ ಒಳಗಡೆ ಇರುವ ವ್ಯಕ್ತಿಯೊಬ್ಬರು ಸಿಂಹ ಬಂದಾಗ ಓಯ್.. ಓಯ್ ಅಂತ ಓಡಿಸುತ್ತಿದ್ದಾರೆ. ಇನ್ನು ಆ ದೇವಾಲದೊಳಗಡೆ ಇರುವ ವ್ಯಕ್ತಿಗೆ ಯಾವುದೇ ಬಯವಿರಲಿಲ್ಲ, ಏಕೆಂದರೆ ಆ ದೇವಾಲಯದ ಸುತ್ತ ಸರಳುಗಳಿದ್ದು ಅದನ್ನು ದಾಟಿ ಬರುವುದು ಸುಲಭವಲ್ಲ ಎಂಬುವುದು ಅವರಿಗೂ ಗೊತ್ತಿತ್ತು, ಆದ್ದರಿಂದಲೇ ಅಷ್ಟು ಧೈರ್ಯವಾಗಿ ಓಡಿಸುವ ಪ್ರಯತ್ನ ಮಾಡಿದ್ದಾರೆ.

ಸಿಂಹವನ್ನು ಮೃಗಾಲಯದಲ್ಲಿ ನೋಡುವಾಗಲೇ ಭಯವಾಗುತ್ತೆ, ಅಂಥ ಸಿಂಹ ನಾಡಿಗೆ ಬಂದರೆ ಜೀವ ಕೈಗೆ ಬಂದಂತಾಗುವುದು ಅಲ್ವಾ, ಈ ಸಿಂಹ ಕೂಡ ಕಾಡಿನಿಂದ ನಾಡಿಗೆ ಬಂದಿದೆ, ಒಳಗಡೆ ನೋಡುತ್ತೆ, ಒಳಗಡೆ ವ್ಯಕ್ತಿ ಅದನ್ನು ಬೆರೆಸಿದಾಗ ಅದು ಅದರ ಪಾಡಿಗೆ ಹೋಗಿದೆ, ಒಳಗಡೆ ಹೋಗಲು ಸಾಧ್ಯವಿಲ್ಲ ಎಂದು ಅದಕ್ಕೂ ಗೊತ್ತಾಗಿರುತ್ತೆ ಹಾಗಾಗಿ ಅದರ ಪಾಡಿಗೆ ಅದು ಹೋಗಿದೆ.
ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕೆಲವರು ದೇವಾಲಯಕ್ಕೆ ಬಂದ ಸಿಂಹ ಹಾಗೇ ಸುಮ್ಮನೆ ಹೋಗಿರುವುದಕ್ಕೆ ಹರ ಹರ ಮಹದೇವ ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ನಾಯಿಯನ್ನು ಓಡಿಸಿದಂತೆ ಕಿರುಚುತ್ತಿದ್ದಾರಲ್ಲಾ ಎಂದು ಕಮೆಂಟ್ ಮಾಡುತ್ತಿದ್ದಾರೆ.



Click it and Unblock the Notifications
