Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ವಿಶ್ವ ಭೂಮಿ ದಿನ 2022: ನಾವು ಉಳಿಯಬೇಕೆಂದರೆ ಇದು ಮಾಡಲೇಬೇಕು
ಏಪ್ರಿಲ್ 22 ವಿಶ್ವ ಭೂಮಿ ದಿನ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರ.

ಆಧುನಿಕತೆ ಬೆಳೆದಂತೆ ಅದು ಭೂಮಿಗೆ ಕಂಟಕವಾಗುತ್ತಿದೆ,ಅದರ ವ್ಯತಿರಿಕ್ತ ಪರಿಣಾಮ ಈಗಾಗಲೇ ಅರಿವಾಗಿದೆ. ಭೂಮಿಗೆ ಕಂಟಕವಾದರೆ ಮನುಷ್ಯರಿಗೆ ಮಾತ್ರವಲ್ಲ, ಯಾವುದೇ ಜೀವಿಗಳಿಗೆ ಉಳಿಗಾಲವಿಲ್ಲ. ಈ ಭೂಮಿಯ ರಕ್ಷಣೆಯ ಬಗ್ಗೆ ಜಾಗ್ರತೆ ಮೂಡಿಸಲು ವಿಶ್ವ ಭೂಮಿ ದಿನವನ್ನು ಆಚರಿಸಲಾಗುವುದು.
2022ರ ಥೀಮ್
"Invest In our Planet" ಅಂದರೆ 'ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ' ಎಂಬುವುದಾಗಿದೆ. ಅಂದರೆ ಪರಸರಕ್ಕೆ ನಾಶ ಮಾಡಬೇಡಿ, ಅದಕ್ಕೆ ಲಾಭ ಆಗುವಂತೆ ವರ್ತಿಸಿ ಎಂಬುವುದಾಗಿದೆ.
ವಿಶ್ವ ಭೂಮಿ ದಿನದ ಇತಿಹಾಸ
ಶ್ವ ಭೂ ದಿನವನ್ನು ಮೊದಲ ಬಾರಿಗೆ1970 , ಏಪ್ರಿಲ್ 22ರಂದು ಆಚರಿಸಲಾಯಿತು. 1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ UNSEO ಸಮ್ಮೇಳನದ ಸಮಯದಲ್ಲಿ, ಶಾಂತಿ ಕಾರ್ಯಕರ್ತ ಜಾನ್ ಮೆಕ್ ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಇದರ ಬಗ್ಗೆ ಪ್ರಸ್ತಾಪಿಸಿದರು. ವಿಶ್ವ ಭೂ ದಿನವನ್ನು ಮೊದಲು 1970 ಮಾರ್ಚ್ 21ರಂದು ನಡೆಸಲು ಪ್ರಸ್ತಾಪಿಸಲಾಗಿತ್ತು. ನಂತರ, ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ 22 ಏಪ್ರಿಲ್ 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯವನ್ನು ನಡೆಸಲು ಪ್ರಸ್ತಾಪಿಸಿದರು ಮತ್ತು ಅದನ್ನು 'ಅರ್ಥ್ ಡೇ' ಎಂದು ಮರುನಾಮಕರಣ ಮಾಡಿದರು. ಅಲ್ಲಿಂದ ವಿಶ್ವ ಭೂಮಿಯ ದಿನ ಆಚರಿಸಲಾಗುತ್ತಿದೆ.
ಈ ದಿನದ ಆಚರಣೆ ಇಂದಿಗೆ ಮಾತ್ರ ಸೀಮಿತವಲ್ಲ. ನಾವೆಲ್ಲಾ ಪ್ರತಿ ದಿನ ಪ್ರತಿಯೊಂದು ಕಾರ್ಯ ಮಾಡುವಾಗ ಭೂಮಿಯ ಬಗ್ಗೆ ಚಿಂತಿಸಬೇಕು. ಭೂಮಿಗೆ ಹಾನಿಯಾಗುವ ಕಾರ್ಯಗಳನ್ನು ಮಾಡಬಾರದು. ಈ ಭೂಮಿಯ ರಕ್ಷಣೆ ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡುತ್ತಿರುವ ಅತೀ ಬೆಲೆ ಬಾಳುವ ಕೊಡುಗೆಯಾಗಿದೆ. ಆಸ್ತಿ, ಅಂತಸ್ತು ಏನೇ ಮಾಡಿದರೂ ಈ ಭೂಮಿ ಹಾಳಾದರೆ ಉಳಿಯಲು ಸಾಧ್ಯವೇ? ಆದ್ದರಿಂದ ಈ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಅನಿವಾರ್ಯವಾಗಿದೆ.
ವಿಶ್ವ ಭೂಮಿ ದಿನ: ಭೂಮಿಗೆ ನಾವು ನೀಡಬಹುದಾದ 10 ಚಿಕ್ಕ ಕೊಡುಗೆಗಳು
1. ಪರಿಸರ ಜೊತೆ ಬೆರೆಯಿರಿ: ಪರಿಸರ ಜೊತೆ ಬೆರೆತಷ್ಟೂ ಅದರ ಮೇಲೆ ಪ್ರೀತಿ ಹೆಚ್ಚುವುದು
2. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.
3. ಮರು ಬಳಕೆಯ ವಸ್ತುಗಳನ್ನು ಬಳಸಿ.
4. ಸಾವಯವ ವಸ್ತುಗಳನ್ನು ಖರೀದಿಸಿ.
5. ಕಸದಿಂದ ಸಾವಯವ ಗೊಬ್ಬರ ತಯಾರಿಸಿ.
6. ಚಿಕ್ಕದಾದರೂ ಗಾರ್ಡನ್ ಮಾಡಿ.
7. ಪ್ಲಾಸ್ಟಿಕ್ ಬಾಟಲಿ ಬಳಸಬೇಡಿ.
8. ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ.
9. ಗಿಡ ಬೆಳೆಸಿ.
10. ಓಡಾಡಲು ಬೈಕ್, ಕಾರು ಬದಲಿಗೆ ಸೈಕಲ್ ಹೆಚ್ಚು ಬಳಸಿ.



Click it and Unblock the Notifications
