Women's Equality Day 2022: ಮಹಿಳಾ ಸಮಾನತೆ ದಿನದ ಮಹತ್ವವೇನು: ಯಾವಾಗ ಮತ್ತು ಯಾಕೆ ಆಚರಣೆ ಮಾಡಲಾಗುತ್ತೆ?

ಗ್ರಾಮ ಪಂಚಾಯತ್ ಸದಸ್ಯೆಯಿಂದ ಹಿಡಿದು ದೇಶದ ರಾಷ್ಟ್ರಪತಿವರೆಗೆ, ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಕೆಲಸದವರೆಗೆ. ಇದು ಈಗ ಮಹಿಳೆಯರು ಬೆಳೆಯುತ್ತಿರುವ ಮಾರ್ಗ. ಹೌದು, ಹಲವಾರು ವರ್ಷಗಳ ಹಿಂದೆ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ಇರಲಿಲ್ಲ. ಆದರೆ ಇದೀಗ ಮಹಿಳೆಯರು ಪುರುಷರಂತೆ ಸಮಾನರಾಗಿ ಬಾಳುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದಾರೆ.

Womens Equality Day 2022: Date, Theme And Significance Of The Day in kannada

ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಇತ್ತೀಚಿನ ದಿನಗಳಲ್ಲಿ ಸಮಾನತೆಯನ್ನು ನೀಡಲಾಗಿದ್ದು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆದರೆ ಈಗಾಗಲೇ ಹೇಳಿದ ಹಾಗೇ ಹಲವು ವರ್ಷಗಳ ಹಿಂದೆ ಅವರಿಗೆ ಪ್ರತಿಕೂಲವಾದ ವಾತಾವರಣ ಇರಲಿಲ್ಲ. ಅವರಿಗೆ ಸಮಾನತೆ ಸಿಕ್ಕುತ್ತಿರಲಿಲ್ಲ. ಆದರೆ ಇದೀಗ ಆಗಸ್ಟ್ 26 ರಂದು ರಾಷ್ಟ್ರೀಯ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ದಿನವನ್ನು ಏಕೆ ಆಚರಿಸುತ್ತಾರೆ? ಇದರ ಹಿಂದಿರುವ ವಿಶೇಷತೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಹಿಳಾ ಸಮಾನತೆ ದಿನದ ಇತಿಹಾಸ!

ಮಹಿಳಾ ಸಮಾನತೆ ದಿನದ ಇತಿಹಾಸ!

ಈಗಾಗಲೇ ಹೇಳಿದ ಹಾಗೇ ಈ ಮೊದಲು ಮಹಿಳೆಯರ ಸಮಾನತೆಗೆ ಸಂಬಂಧಪಟ್ಟಂತೆ ಅನಾನುಕೂಲಕರ ವಾತಾವರಣ ಏರ್ಪಟ್ಟಿತ್ತು. ಆದರೆ ಮುಂದಿನ ದಿನಗಳಲ್ಲಿ ಅದು ಬದಲಾಗಿತ್ತು. ಅಮೆರಿಕಾದಲ್ಲಿ ಮಹಿಳಾ ಸಮಾನತೆಯ ಕುರಿತಂತೆ ಮೊದಲ ಕಿಚ್ಚು ಹೊತ್ತಿಕೊಂಡಿತ್ತು. 1848 ರಲ್ಲಿ ನ್ಯೂಯಾರ್ಕ್‌ನಲ್ಲಿ ಸಮಾನತೆಗಾಗಿ ಸಾವಿರಾರು ಮಹಿಳೆಯರಿಂದ ಪ್ರತಿಭಟನೆ ನಡೆಯಿತು. ಇದಕ್ಕೆ ಮಣಿದ ಅಮೆರಿಕ ಸರ್ಕಾರ 1920 ರ ಆಗಸ್ಟ್ 26 ರಂದು ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡುವ ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಯಶಸ್ಸಿನ ನೆನಪಿಗಾಗಿ 1973 ರಲ್ಲಿ ಪ್ರಥಮ ಬಾರಿಗೆ ಆಗಸ್ಟ್ 26 ರಂದು ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು. ಮಹಿಳೆಯರ 72 ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ 1920ರಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತ್ತು. ನಂತರ ಮಹಿಳೆಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯುತ್ತ ಹೋದರು.

ಸಮಾನತೆ ನೀಡದೆ ಇರೋದಕ್ಕೆ ಕಾರಣವೇನು?

ಸಮಾನತೆ ನೀಡದೆ ಇರೋದಕ್ಕೆ ಕಾರಣವೇನು?

ಮಹಿಳೆಯರು ನೋಡಲು ಸುಂದರವಾಗಿರುತ್ತಾರಷ್ಟೇ. ಆದರೆ ಅವರು ಯಾವುದೇ ಗಂಭೀರ ಕೆಲಸಗಳನ್ನು ಮಾಡಲಾರರು ಎಂಬ ಧೋರಣೆ ಇದಕ್ಕೂ ಮುನ್ನ ಅಮೆರಿಕಾದಲ್ಲಿ ಮನೆ ಮಾಡಿತ್ತು. ಕೊನೆಗೂ ಇಂಥದೊಂದು ತಾರತಮ್ಯವನ್ನು ಹೋಗಲಾಡಿಸಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳು ಸಿಗಲಾರಂಭಿಸಿದವು. ಎಲ್ಲಾ ರೀತಿಯಲ್ಲೂ ಮಹಿಳೆಯರು ಬೆಳವಣಿಗೆ ಕಂಡರೂ. ಈಗ ಅಮೆರಿಕ ಸೇರಿ ಎಲ್ಲಾ ದೇಶಗಳ ಪ್ರಮುಖ ಹುದ್ದೆಯನ್ನು ಮಹಿಳೆಯರು ನಿರ್ವಹಿಸುತ್ತಿದ್ದಾರೆ.

ಮಹಿಳಾ ಸಮಾನತೆ ದಿನ ಯಾವಾಗ ಆಚರಿಸಲಾಗುತ್ತೆ?

ಮಹಿಳಾ ಸಮಾನತೆ ದಿನ ಯಾವಾಗ ಆಚರಿಸಲಾಗುತ್ತೆ?

ಪ್ರತಿ ವರ್ಷ ಆಗಸ್ಟ್ 26 ರಂದು ವಿಶ್ವ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಸಮಾನತೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯ ಯಶಸ್ಸಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕದಲ್ಲಿ ನಡೆದ ಕ್ರಾಂತಿಯಿಂದ ಇಂದು ಜಗತ್ತಿನೆಲ್ಲೆಡೆ ಆಗಸ್ಟ್ 26 ರಂದು ವಿಶ್ವ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. 1920 ರ ಆಗಸ್ಟ್ 26 ರಂದು ಅಮೆರಿಕದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡುವ ಅವರಿಗೆ ಸಮಾನತೆಯ ಗೌರವ ನೀಡಲಾಯಿತು. ಇದೀಗ ಪ್ರತಿ ವರ್ಷ ಎಲ್ಲ ಕಚೇರಿಗಳಲ್ಲು ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ.

ಈ ದಿನದ ಮಹತ್ವವೇನು?

ಈ ದಿನದ ಮಹತ್ವವೇನು?

ಮಹಿಳೆಯರು ನೋಡಲು ಸುಂದರವಾಗಿರುತ್ತಾರಷ್ಟೇ. ಆದರೆ ಅವರು ಯಾವುದೇ ಗಂಭೀರ ಕೆಲಸಗಳನ್ನು ಮಾಡಲಾರರು ಎಂಬ ಧೋರಣೆ ಇತ್ತು. ಅವರಿಗೂ ಸಮಾನತೆ ನೀಡುವ ಮೂಲಕ ಈ ಧೋರಣೆಯನ್ನು ನಿವಾರಿಸಲಾಗಿದೆ. ಮಹಿಳೆಯರಿಗೆ ಸಮಾನತೆ ನೀಡುವ ಮೂಲಕ ಅವರ ಸಾಧನೆ, ಅವರ ಪ್ರಗತಿ, ಅವರ ಸೃಜನಶೀಲತೆ ಬಗ್ಗೆ ಜನರ ಅರಿವಿಗೆ ಬಂದಿದೆ. ಇನ್ನು ಈ ದಿನದ ಮಹತ್ವ ಏನು ಅಂದರೆ ಹೆಣ್ಣು, ಗಂಡು ಎಂಬ ಭೇದ ಭಾವವಿಲ್ಲದೆ ಎಲ್ಲರು ಒಂದೆ ಎಂದು ಬಧುಕುವುದು. ಹೆಣ್ಣು, ಗಂಡು ಇಬ್ಬರಿಗೂ ಸಮಾಜದಲ್ಲಿ ಸಮನಾವಾಗಿ ಬದಕುವ ಹಕ್ಕಿದೆ ಎಂದು ತೋರಿಸಿಕೊಡುವುದು. ವೇತನ ಅಸಮಾನತೆ, ಗರ್ಭಪಾತ, ಲಿಂಗ ಆಧಾರಿತ ಹಿಂಸೆ, ತಾರತಮ್ಯವನ್ನು ಹೊಗಲಾಡಿಸುವ ಉದ್ದೇಶವಾಗಿದೆ. ಅಲ್ಲದೇ ಈ ದಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದು ಮತ್ತು ಮಹಿಳೆಯರ ಪ್ರಗತಿಗೆ ಪೂರಕವಾದ ಅವಕಾಶ ಕಲ್ಪಿಸಿಕೊಡುವುದು ಈ ದಿನದ ಉದ್ದೇಶವಾಗಿದೆ.

ಈಗ ಹೇಗಿದೆ ಮಹಿಳೆಯರ ಸ್ಥಿತಿ!

ಈಗ ಹೇಗಿದೆ ಮಹಿಳೆಯರ ಸ್ಥಿತಿ!

ಸದ್ಯ ಅನೇಕ ದೇಶಗಳಲ್ಲಿ ಮಹಿಳೆಯರನ್ನು ಸಮಾನರಾಗಿ ನೋಡಲಾಗುತ್ತಿದೆ. ಎಲ್ಲಾ ವಿವಿಧ ದೇಶಗಳಲ್ಲಿ ಮಹಿಳೆಯರು ಪುರುಷರಂತೆ ಸಮಾನ ಗೌರವ ಪಡೆಯುತ್ತಿದ್ದಾರೆ. ಭಾರತದಲ್ಲಿ ಸದ್ಯ ರಾಷ್ಟ್ರಪತಿ ಮಹಿಳೆಯೇ ಆಗಿದ್ದರು. ಕೆಲ ದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೇ ಮಹಿಳೆಯರಿಗೆ ಸಮಾನ ವೇತನ ಹಕ್ಕು, ಮಹಿಳೆಯರ ಲೈಂಗಿಕ ಕಿರುಕುಳ ಕಾಯಿದೆ, ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನು, ಗರ್ಭಪಾತ ಮಾಡಿಸುವ ಹಕ್ಕು, ಕೌಟಂಬಿಕ ಹಿಂಸೆಯ ವಿರುದ್ಧ ಹಕ್ಕು ಸೇರಿದಂತೆ ಹಲವು ಹಕ್ಕುಗಳ ಮೂಲಕ ಮಹಿಳೆಯರನ್ನು ಸಮಾನರಾಗಿ ನೋಡುವ ಕೆಲಸ ಆಗುತ್ತಿದೆ. ಇನ್ನು ಮಹಿಳೆಯರು ಮೀಸಲು ವ್ಯವಸ್ಥೆ ಕೂಡ ಇದೆ.

English summary

Women's Equality Day 2022: Date, Theme And Significance Of The Day in kannada

Here we are discussing about Women's Equality Day 2022: Date, Theme And Significance Of The Day in kannada. Read more.
X
Desktop Bottom Promotion