Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
ಬ್ರಿಟನ್ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ರಿಷಿ ಸುನಕ್ ಯಾರು? ಭಾರತದ 75ನೇ ಸ್ವಾತಂತ್ರ್ಯಕ್ಕೆ ಯುಕೆಯಲ್ಲಿ ಭಾರತ ಮೂಲದ ಪಿಎಂ
ರಿಷಿ ಸುನಕ್, ಈ ಹೆಸರಿನ ವ್ಯಕ್ತಿ ಇದೀಗ ಸದ್ಯ ಯುಕೆಯ ರಾಜಕೀಯದಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದಾರೆ. ಯುಕೆಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಿಷಿ ಸುನಕ್ ಭಾರತ ಮೂಲದವರು ಎನ್ನುವುದು ಹೆಮ್ಮೆಯ ವಿಚಾರ. ಬ್ರಿಟನ್ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಹಿನ್ನೆಲೆ ಇದೀಗ ಪ್ರಧಾನಿ ಹುದ್ದೆಗೇರಲು ಹಲವು ಅಭ್ಯರ್ಥಿಗಳು ಓಟ ಆರಂಭಿಸಿದ್ದಾರೆ. ವಿಶೇಷ ಬೆಳವಣಿಗೆಯಲ್ಲಿ ಈಗ ಪಿಎಂ ಅಭ್ಯರ್ಥಿಗಳ ರೇಸ್‌ನಲ್ಲಿ ಭಾರತ ಮೂಲದ ರಿಷಿ ಸುನಕ್ ಹೆಸರು ಕೂಡ ಕೇಳಿ ಬಂದಿದೆ.
ರಿಷಿ ಸುನಕ್ ಅವರು ಮುಂದಿನ ಯುಕೆ ಪ್ರಧಾನ ಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಇದು ಸಂಭವಿಸಿದಲ್ಲಿ, ಯುಕೆ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಿಷಿ ಸುನಕ್ ಸಾಕ್ಷಿಯಾಗಲಿದ್ದಾರೆ. ಇನ್ನು ಬ್ರಿಟನ್ ಪ್ರಧಾನಿ ರೇಸ್ ನಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರು ಇದ್ದಾರೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾರು ಈ ರಿಷಿ ಸುನಕ್? ಭಾರತಕ್ಕೂ ಅವರಿಗೂ ಏನು ಸಂಬಂಧ ಎನ್ನುವುದರ ಬಗ್ಗೆ ಅನೇಕರು ಇಂಟರ್ನೆಟ್ ನಲ್ಲಿ ಹುಡುಕಾಡಿದ್ದಾರೆ. ಹಾಗಾದರೆ ನಿಜಕ್ಕೂ ಯಾರಿದು ರಿಷಿ ಸುನಕ್? ಭಾರತಕ್ಕೂ ಅವರಿಗೂ ಇರುವ ಸಂಬಂಧವೇನು? ಇಲ್ಲಿದೆ ಅವರ ಬಗ್ಗೆ ಸಂಪೂರ್ಣ ಮಾಹಿತಿ.

ಯಾರಿದು ರಿಷಿ ಸುನಕ್?
42 ವರ್ಷ ಪ್ರಾಯದ ರಿಷಿ ಸುನಕ್ ಮೇ 12ರ 1980ರಲ್ಲಿ ಯುಕೆಯ ಸೌತಾಂಪ್ಟನ್ ಎಂಬಲ್ಲಿ ಜನಿಸಿದರು. ರಿಷಿ ಸುನಾಕ್ ಅವರ ಅಜ್ಜ-ಅಜ್ಜಿ(ಅಪ್ಪನ ಪೋಷಕರು) ಭಾರತ ಮೂಲದವರಾಗಿದ್ದ ಹಿನ್ನೆಲೆ ಅವರಿಗೆ ಕೂಡ ಭಾರತ ಮೂಲದ ವ್ಯಕ್ತಿ ಎಂಬ ಪಟ್ಟ ಸಿಕ್ಕಿದೆ. ರಿಷಿ ಸುನಕ್ ಅಜ್ಜ ಹಾಗೂ ಅಜ್ಜಿ ಭಾರತದ ಪಂಜಾಬ್ ನಲ್ಲಿ ಜನಿಸಿದ್ದರು. ಕೆಲಸದ ನಿಮಿತ್ತ 1960ರಲ್ಲಿ ಪೂರ್ವ ಆಫ್ರಿಕಾಕ್ಕೆ ವಲಸೆ ಹೋಗಿದ್ದರು. ಅಲ್ಲಿ ಆಡಳಿತಾತ್ಮಕ ಉದ್ಯೋಗಗಳಲ್ಲಿ ಇವರ ಅಜ್ಜ-ಅಜ್ಜಿ ಕೆಲಸ ಮಾಡಿದ್ದರು. ಇನ್ನು ಇದಾದ ಬಳಿಕ ರಿಷಿ ಸುನಾಕ್ ಪೋಷಕರು ಯುಕೆಗೆ ಬಂದಿದ್ದರು. ತಂದೆ ಯಶ್ವೀರ್, ಆಕ್ಸ್ ಫರ್ಡ್ ಮತ್ತು ಸ್ಟ್ಯಾನ್ಫೋರ್ಡ್ ಪದವೀಧರರು. ಇಂಗ್ಲೆಂಡಿನ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಆರೋಗ್ಯ ಸೇವೆ (NHS)ನೊಂದಿಗೆ ಸಾಮಾನ್ಯ ವೈದ್ಯರಾಗಿದ್ದಾರೆ.. ತಾಯಿ ಸ್ಥಳೀಯವಾಗಿ ಫಾರ್ಮಸಿ ವಿಭಾಗದಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ರಿಷಿ ಸುನಾಕ್ ಸೇರಿ ಇವರ ಪೋಷಕರಿಗೆ ಒಟ್ಟು ಮೂರು ಮಕ್ಕಳಿದ್ದಾರೆ. ರಿಷಿ ಸುನಕ್ ಅಜ್ಜ-ಅಜ್ಜಿ ಭಾರತದಲ್ಲಿ ಜನಿಸಿದ್ದರಿಂದ ರಿಷಿ ಕೂಡ ಭಾರತ ಮೂಲದವರಾಗಿದ್ದಾರೆ. ಇದಲ್ಲದೆ ಇವರಿಗೆ ಪತ್ನಿ ಮೂಲಕವು ಭಾರತದ ನಂಟಿದೆ.

ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!
ರಿಷಿ ಸುನಕ್ ಅವರು ತಮ್ಮ ಬಾಲ್ಯವನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದರು. ವಿಂಚೆಸ್ಟರ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು. ನಂತರ ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಬಳಿಕ ಎಂಬಿಎಗಾಗಿ ಕ್ಯಾಲಿಫೋರ್ನಿಯಾ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಸೇರಿದರು. ಇಲ್ಲಿಯೇ ಅವರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಪರಿಚಯವಾಗಿತ್ತು. ಬಳಿಕ ಇವರಿಬ್ಬರು ಪ್ರೀತಿಸಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ವಿವಾಹದ ಮೂಲಕ ಸುನಕ್ ಭಾರತಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.

ರಿಷಿ ರಾಜಕೀಯ ಜೀವನ!
ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್ ತಮ್ಮ ತಾಯಿಯ ಫಾರ್ಮಸಿ ವ್ಯವಹಾರಕ್ಕೆ ಸಹಾಯ ಮಾಡುತ್ತಿದ್ದರು. ಈ ಫಾರ್ಮಸಿ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ರಿಷಿ ತೆಗೆದುಕೊಂಡು ಹೋದರು. ಹಲವಾರು ಬ್ಯುಸಿನೆಸ್ ಮಾಡುತ್ತ, ಹಲವಾರು ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಪಡೆಯುವ ಮೂಲಕ ಪ್ರಸಿದ್ದಿ ಹೊಂದಿದ್ದರು ರಿಷಿ ಸುನಕ್. ಹೀಗಿರುವಾಗ ಸುನಕ್ 2015ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಕನಸರ್ವೇಟಿವ್ ಪಕ್ಷದ ಸಂಸದನಾಗಿ 2015ರಲ್ಲಿ ರಿಷಿ ಸುನಾಕ್ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಇನ್ನು ಅದು ಬ್ರೆಕ್ಸಿಟ್ ಆಂದೋಲನ ಸಮಯವಾಗಿದ್ದರಿಂದ, ರಿಷಿ ರಾಜಕೀಯಕ್ಕೆ ಸೇರುವ ಮುನ್ನ ಬ್ರೆಕ್ಸಿಟ್ ಆಂದೋಲನದಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರಿಗೆ ಅಂದಿನ ಪ್ರಧಾನಿಯಾಗಿದ್ದ ತೇರೆಸಾ ಮೇ ಸರ್ಕಾರದಲ್ಲಿ ಜೂನಿಯರ ಮಂತ್ರಿಯಾಗಿ ಆಯ್ಕೆಯಾದರು. 2019ರಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಚುನಾವಣೆಯಲ್ಲಿ ರಿಷಿ ಬೋರಿ ಜಾನ್ಸನ್ ರನ್ನು ಬೆಂಬಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿಗೆ ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಯ ಜವಾಬ್ದಾರಿ ನೀಡಲಾಯಿತು. ಸುನಕ್ ಕಾರ್ಯಕ್ಷಮತೆ ಶ್ಲಾಘಿಸಿದ ಜಾನ್ಸನ್ ಸಂಪುಟ ವಿಸ್ತರಣೆ ವೇಳೆ 2020ರ ಫೆಬ್ರವರಿಯಲ್ಲಿ ಪೂರ್ಣ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಅಂದರೆ ಚಾನ್ಸಲರ್ ಆಗಿ ನೇಮಕ ಮಾಡಲಾಗಿತ್ತು. ಇದು ಬೋರಿಸ್ ಜಾನ್ಸನ್ ಸರ್ಕಾರದ ನಂಬರ್ ತ್ರಿ ಹುದ್ದೆಯಾಗಿದೆ. ಇನ್ನು ರಿಷಿ ಬ್ರಿಟನ್‌ನ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಜನಪ್ರಿಯತೆ ಪಡೆದುಕೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಅವರಿಗೆ ವರವಾಗಲಿದೆ ಎಂದು ಹೇಳಲಾಗಿತ್ತು.

ಮುಂಚೂಣಿಯಲ್ಲಿ ರಿಷಿ ಸುನಕ್!
ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು, ಬ್ರಿಟನ್ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನ ಆಯ್ಕೆ ಮತ್ತು ಬ್ರಿಟನ್ ಪ್ರಧಾನಿ ಆಯ್ಕೆಯ ಮೊದಲ ಎರಡು ಸುತ್ತುಗಳ ಮತದಾನದಲ್ಲಿ ಅತಿ ಹೆಚ್ಚು ಮತ ಪಡೆದು ಜಯಶಾಲಿಯಾಗಿದ್ದಾರೆ. ಸದ್ಯ, ರೇಸ್‌ನಲ್ಲಿ ಐದು ಮಂದಿ ಇದ್ದು, ಮುಂದಿನ ಗುರುವಾರದ ಹೊತ್ತಿಗೆ ಇನ್ನೂ ಕೆಲ ಸುತ್ತುಗಳ ಚುನಾವಣೆ ನಡೆದು ಅಂತಿಮ ಹಂತಕ್ಕೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಸೋತ ಅಭ್ಯರ್ಥಿಗಳ ಬೆಂಬಲಿಗರು ರಿಷಿ ಸುನಕ್ ಅವರ ವಿರುದ್ಧವಾಗಿ ಮತ ಚಲಾಯಿಸಿದರೆ ಭಾರತೀಯನ ಬ್ರಿಟನ್ ಪ್ರಧಾನಿ ಗಾದಿಯ ಹಾದಿ ಕಠಿಣವಾಗಲಿದೆ. ವಾಣಿಜ್ಯ ಸಚಿವ ಪೆನ್ನಿ ಮರಡೌಂಟ್, ರಿಷಿ ಸುನಕ್ ಅವರ ಅತ್ಯಂತ ಸಮೀಪದ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಮೂಲಗಳ ಪ್ರಕಾರ ಕನ್ಸರ್ವೇಟಿವ್ ಪಕ್ಷದ ನಾಯಕರು ರಿಷಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.



Click it and Unblock the Notifications











