ವಿಮಾನದಲ್ಲಿ ಸುರಕ್ಷಿತವಾದ ಸೀಟ್‌ಗಳು ಯಾವುವು ಗೊತ್ತಾ? ಏವಿಯೇಷನ್ ಎಕ್ಸ್‌ಪರ್ಟ್‌ ಏನು ಹೇಳಿದ್ದಾರೆ ನೋಡಿ

ವಿಮಾನ ಪ್ರಯಾಣ ಅನ್ನೋದು ಹಲವರ ಕನಸು. ಇನ್ನು ಕೆಲವರಿಗೆ ಅದು ಮಾಮೂಲಿ ವಿಷಯ ಕೂಡ ಆಗಿರಬಹುದು. ನೀವು ಇತರ ಯಾವುದೇ ವಾಹನ ಪ್ರಯಾಣಕ್ಕೆ ಹೋಲಿಸಿದರೆ ವಿಮಾನ ಪ್ರಯಾಣ ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತದೆ. ಆದರೆ ವಿಮಾನದ ಪ್ರಯಾಣದಲ್ಲಿ ಯಾವ ಸೀಟ್ ಆಯ್ದುಕೊಂಡರೆ ಹೆಚ್ಚು ಸುರಕ್ಷಿತ ಎಂಬುದರ ಬಗ್ಗೆ ಬಹುಶಃ ಯಾರು ಯೋಚಿಸುವುದೇ ಇಲ್ಲ.

What Is The Safest Seat On A Plane? Know what Aviation Expert Says

ವಿಮಾನದಲ್ಲಿ ಸೀಟ್ ಕಾಯ್ದಿರಿಸುವಾಗ ಜನರು ಹೆಚ್ಚು ಆರಾಮದಾಯಕ ಸೀಟ್ ಅನ್ನು ನೋಡುತ್ತಾರೆ. ಉದಾಹರಣೆಗೆ ಹೆಚ್ಚು ಸ್ಥಳಾವಕಾಶ ಇರುವ ಅಥವಾ ಲೆಗ್ ರೂಮ್ ಇರುವ ಶೌಚಾಲಯಕ್ಕೆ ಹೋಗಲು ಹತ್ತಿರವಾಗಿರುವ ಸೀಟ್, ಮೊದಲ ಬಾರಿಗೆ ಪ್ರಯಾಣಿಸುವವರು ಕಿಟಕಿ ಪಕ್ಕದಲ್ಲಿರುವ ಆಸನವನ್ನು ಆಯ್ದುಕೊಳ್ಳುತ್ತಾರೆ. ಅಲ್ಲದೆ ಮುಂಭಾಗದ ಆಸನವನ್ನು ಕೂಡ ಆಯ್ದುಕೊಳ್ಳುವವರಿದ್ದಾರೆ. ಇಲ್ಲಿ ಯಾರು ಸುರಕ್ಷತೆಯ ಬಗ್ಗೆ ಯೋಚನೆ ಮಾಡುವುದಿಲ್ಲ. ನೀವು ಮುಂದಿನ ಬಾರಿ ವಿಮಾನದಲ್ಲಿ ಸೀಟ್ ಕಾಯ್ದಿರಿಸುವುದಾದರೆ ಕೊನೆಯ ಸಾಲಿನಲ್ಲಿ ಮಧ್ಯದ ಸೀಟ್ ಗಳಲ್ಲಿ ಒಂದು ಸೀಟನ್ನು ಆಯ್ದುಕೊಳ್ಳುವುದು ಅತ್ಯಂತ ಸುರಕ್ಷಿತ. ಅಂಕಿಅಂಶಗಳ ಪ್ರಕಾರ ವಿಮಾನದ ತಜ್ಞರು ಈ ಸೀಟ್ ಹೆಚ್ಚು ಸುರಕ್ಷಿತ ಎಂದು ಸಲಹೆ ನೀಡುತ್ತಾರೆ.

ವಿಮಾನ ಪ್ರಯಾಣ ಸುರಕ್ಷಿತ ಪ್ರಯಾಣ:

ಇತರ ಯಾವುದೇ ಪ್ರಯಾಣಕ್ಕೆ ಹೋಲಿಸಿದರೆ ವಿಮಾನ ಪ್ರಯಾಣ ಹೆಚ್ಚು ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿದೆ. 2019 ರಲ್ಲಿ ಜಾಗತಿಕ ಮಟ್ಟದಲ್ಲಿ ಸುಮಾರು 70 ಮಿಲಿಯನ್ ಗಿಂತಲೂ ಹೆಚ್ಚಿನ ವಿಮಾನಗಳು ಪ್ರಯಾಣ ಮಾಡಿವೆ. ಅದರಲ್ಲಿ ಕೇವಲ 287 ಸಾವು ಮಾತ್ರ ಸಂಭವಿಸಿವೆ. ಯು ಎಸ್ ನ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ವಿಶ್ಲೇಷಣೆಯ ಪ್ರಕಾರ, ಕಾರಿನಲ್ಲಿ ಪ್ರಯಾಣ ಮಾಡುವವರಲ್ಲಿ ಪ್ರತಿ 102 ಜನರಿಗೆ ಒಬ್ಬ ಅಪಘಾತದಲ್ಲಿ ಸಾವಿಗೀಡಾದರೆ, ಅದೇ ವಿಮಾನದಲ್ಲಿ ಸುಮಾರು 2,05,552 ಜನರಲ್ಲಿ ಸಾವಿನ ಪ್ರಮಾಣ ಕೇವಲ ಒಂದು (ಒಬ್ಬ). ಆದರೂ ನೇಪಾಳದಲ್ಲಿ ATR72 ಅಪಘಾತಕೀಡಾಗಿರುವ ವಿಷಯವನ್ನು ಕೇಳಿದರೆ ವಿಮಾನದಲ್ಲಿ ನಾವು ಸೇಫ್ಟಿಗೋಸ್ಕರ ಸ್ವಲ್ಪ ಯೋಚನೆ ಮಾಡುವ ಅಗತ್ಯವಿದೆ.

ವಿಮಾನ ಅಪಘಾತಗಳಾದಾಗ ನಮಗೆ ಅದರ ಬಗ್ಗೆ ತುಸು ಆಸಕ್ತಿ ಹೆಚ್ಚಿರುತ್ತದೆ. ಇದು ಹೇಗೆ ಸಂಭವಿಸಿತು? ಇದಕ್ಕೆ ಕಾರಣ ಏನು? ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ತಪ್ಪೇನಲ್ಲ ಯಾಕಂದ್ರೆ ದುರಂತ ನಡೆದ ಸಮಯದಲ್ಲಿ ಸರಿಯಾದ ತನಿಖೆ ಮಾಡಿ ವಿಮಾನ ಕ್ರಾಶ್ ಯಾಕೆ ಆಯ್ತು ಎನ್ನುವುದನ್ನು ಖಚಿತಪಡಿಸಲಾಗುತ್ತದೆ. ಇವುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ನಾವು ವಿಮಾನ ಪ್ರಯಾಣದಲ್ಲಿ ಇನ್ನಷ್ಟು ಸುರಕ್ಷಿತವಾಗಿ ಇರಲು ಸಾಧ್ಯ.

ವಿಮಾನದ ಹಿಂಭಾಗದ ಮಧ್ಯದ ಆಸನಗಳು ಹೆಚ್ಚು ಸುರಕ್ಷಿತ.

ವಿಮಾನದಲ್ಲಿ ಹಿಂಭಾಗದಿಂದ ಮಧ್ಯದಲ್ಲಿ ಇರುವಂತಹ ಆಸನಗಳು ಹೆಚ್ಚು ಸುರಕ್ಷಿತ ಎಂಬುದನ್ನ ಗಮನಿಸಬೇಕು. ಇದಕ್ಕೆ ಒಂದು ಉದಾಹರಣೆ ಹೇಳುವುದಾದರೆ 1989ರಲ್ಲಿ ಅಯೋವಾ ಸಿಯೋಕ್ಸ್ ಸಿಟಿಯಲ್ಲಿ ಯುನೈಟೆಡ್ ಫ್ಲೈಟ್ 232 ಅಪಘಾತಕ್ಕೆ ಇಡಾಗಿತ್ತು. ಈ ಸಮಯದಲ್ಲಿ ಆ ಫ್ಲೈಟ್ ನಲ್ಲಿ ಪ್ರಯಾಣಿಸುತ್ತಿದ್ದ 269 ಜನರಲ್ಲಿ 184 ಜನರು ಅಪಘಾತದಿಂದ ಬದುಕುಳಿದಿದ್ದರು. ಹೀಗೆ ಬದುಕುಳಿದವರಲ್ಲಿ ಹೆಚ್ಚಿನವರು ಪ್ರಥಮ ದರ್ಜೆಯ ಹಿಂಭಾಗದಲ್ಲಿ ಹಾಗೂ ವಿಮಾನದ ಮುಂಭಾಗದಲ್ಲಿ ಕುಳಿತಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಟೈಮ್ ವಿಶ್ಲೇಷಣೆಯ ಪ್ರಕಾರ ಕಳೆದ 35 ವರ್ಷಗಳ ವಿಮಾನ ಅಪಘಾತದ ದತ್ತಾಂಶವನ್ನು ಗಮನಿಸಿದರೆ ವಿಮಾನದಲ್ಲಿ ಮಧ್ಯದ ಹಿಂಭಾಗದ ಆಸನಗಳಲ್ಲಿ ಕುಳಿತಿದ್ದವರಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದು ದಾಖಲಾಗಿದೆ. ಅಂದಹಾಗೆ ತಾರ್ಕಿಕವಾಗಿಯೂ ಆಸನಗಳನ್ನು ಸರಿಯಾಗಿ ಕಾಯ್ದಿರಿಸುವುದು ಅರ್ಥಪೂರ್ಣವಾಗಿದೆ ಯಾಕೆಂದರೆ ನಿರ್ಗಮದ ಸಾಲಿನ ಪಕ್ಕದಲ್ಲಿ ಕುಳಿತುಕೊಂಡರೆ ತುರ್ತು ಪರಿಸ್ಥಿತಿಯಲ್ಲಿ ವೇಗವಾಗಿ ಹೊರಗೆ ಬರುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಆ ಭಾಗದಲ್ಲಿ ಬೇಗ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಮಧ್ಯಭಾಗ ಕಿಟಕಿ ಅಥವಾ ಹಜಾರದ ಆಸನಗಳು ಎರಡು ಬದಿಯಲ್ಲಿ ಜನರನ್ನು ಹೊಂದಿರುವ ಬಫರ್ ನಿಂದಾಗಿ ಸುರಕ್ಷಿತ ಎಂದು ಪರಿಗಣಿಸಲ್ಪಡುತ್ತವೆ. ಆದರೂ ವಿಮಾನ ರೆಕ್ಕೆಗಳಲ್ಲಿಯೂ ಕೂಡ ಇಂಧನ ಇರುವುದರಿಂದ ಮಧ್ಯದ ಸೀಟ್ ಎಗ್ಸಿಟ್ ಅಷ್ಟು ಸೇಫ್ ಅಲ್ಲ. ಇದೆಲ್ಲಾ ದೃಷ್ಟಿಯಿಂದ ನೋಡುವುದಾದರೆ ಹಿಂಭಾಗದ ಸೀಟ್ ಹೆಚ್ಚು ಸುರಕ್ಷಿತ.

ಪೈಲೆಟ್ ಗಳಿಗೆ ತರಬೇತಿ

ಎಲ್ಲಾ ವಿಮಾನ ಅಪಘಾತಗಳೂ ಕೂಡ ಒಂದೇ ತೆರನಾಗಿ ಇರುವುದಿಲ್ಲ. ಕೆಲಮೊಮ್ಮೆ ಅಪಘಾತಗಳ ತೀರ್ವತೆಯೂ ಅಧಿಕವಾಗಿರುತ್ತದೆ. ಆಗ ನಮ್ಮ ಯಾವ ಲಾಜಿಕ್ ಕೂಡ ಅಲ್ಲಿ ವರ್ಕ್ ಆಗುವುದಿಲ್ಲ. ಬೆಟ್ಟಕ್ಕೆ ಹೋಗಿ ವಿಮಾನ ಹೊಡೆದುಕೊಂಡರೆ ಅದರಲ್ಲಿ ಬದುಕಿ ಉಳಿಯುವವರ ಸಂಖ್ಯೆ ಕಡಿಮೆ. ಅದೇ ರೀತಿಯಾಗಿ ಸಮುದ್ರದಲ್ಲೋ, ಕಡಲಿನಲ್ಲೋ ಬಿದ್ದ ವಿಮಾನಗಳಿಂದ ಜನರನ್ನು ರಕ್ಷಿಸುವುದು ಕೂಡ ಅಷ್ಟು ಸುಲಭವಲ್ಲ. ಆದರೆ ವಿಮಾನದಲ್ಲಿ ಪೈಲೆಟ್ ಗಳಿಗೆ ಬಹಳ ಮುಖ್ಯವಾದ ತರಬೇತಿ ನೀಡಲಾಗುತ್ತದೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಮತಟ್ಟಾದ ನೆಲದಲ್ಲಿಯೇ ವಿಮಾನ ಇಳಿಸುವಂತೆ ತರಬೇತಿ ಪಡೆದುಕೊಂಡಿರುತ್ತಾರೆ.

ವಿಮಾನದ ರಚನೆಯಲ್ಲಿಯೂ ಹೆಚ್ಚು ಸುರಕ್ಷತೆ

ವಿಮಾನ ತಯಾರಿಸುವಾಗ ಸುರಕ್ಷತೆಯ ಬಗ್ಗೆ ಗಮನ ಕೊಡುವುದು ಸಹಜ. ಅದರಲ್ಲೂ ಈಗ ಗಾಳಿಗೆ ಹೆಚ್ಚು ತಡೆಯುವ ಸಾಮರ್ಥ್ಯವಿರುವ, ಹೆಚ್ಚು ಭಾರವಾದ ವಿಮಾನಗಳನ್ನು ತಯಾರುಮಾಡಲಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣ ಸುರಕ್ಷಿತವೆ. ಆದರೂ ನೀವು ವಿಮಾನದಲ್ಲಿ ಹಿಂಭಾಗದ ಮಧ್ಯದ ಸೀಟ್ ಗಳನ್ನು ಆಯ್ದುಕೊಂಡರೆ ಇನ್ನಷ್ಟು ಸುರಕ್ಷಿತ.

English summary

What Is The Safest Seat On A Plane? Know what Aviation Expert Says

Do you know what is the safest seat on plane , what aviation expert says read on....
Story first published: Wednesday, February 22, 2023, 9:30 [IST]
X
Desktop Bottom Promotion