Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಲಾಲ್ ಎಂದರೇನು? ಭಾರತದಲ್ಲಿ ಈ ಸರ್ಟಿಫಿಕೇಟ್ ಸರ್ಕಾರ ಕೊಡಲ್ಲ, ಹಾಗಾದರೆ ಮತ್ತೆ ಯಾರು ಕೊಡುತ್ತಾರೆ?
ಇದೀಗ 'ಹಲಾಲ್' ಎಂಬ ಪದ ತುಂಬಾನೇ ಟ್ರೆಂಡ್ ಮಾಡುತ್ತಿದೆ. ಹಿಂದೂಗಳು ಹಲಾಲ್ ಮುದ್ರೆ ಇರುವ ಆಹಾರ ವಸ್ತುಗಳನ್ನು ಸೇವಿಸಬೇಡಿ #BoycottHalalProducts ಎಂಬ ಟ್ರೆಂಡ್ ಹುಟ್ಟಿಕೊಂಡಿದೆ.

ಹಲಾಲ್ ಎಂಬುವುದು ಮುಸ್ಲಿಂರ ಆಹಾರ ಪದ್ಧತಿಯಾಗಿದೆ. ಹಲಾಲ್ ಅಲ್ಲದೆ ಆಹಾರ ಹರಾಮ್ ಎಂಬುವುದು ಮುಸ್ಲಿಂ ಧರ್ಮದ ನಂಬಿಕೆಯಾಗಿದೆ, ಆದ್ದರಿಂದ ಅವರು ಹಲಾಲ್ ಆಹಾರ ಪದ್ಧತಿ ಬೆಂಬಲಿಸುತ್ತಾರೆ, ಅಲ್ಲದೆ ಮಾರುಕಟ್ಟೆಯಲ್ಲೂ ಹಲಾಲ್ ಎಂಬ ಸರ್ಟಿಫಿಕೇಟ್ ಇರುವ ಆಹಾರ ಉತ್ಪನ್ನಗಳು ಕಾಣ ಸಿಗುತ್ತವೆ.
ಭಾರತದಲ್ಲಿ ಆಹಾರ ವಸ್ತುಗಳಿಗೆ ಈ ಹಲಾಲ್ ಎಂಬ ಸರ್ಟಿಫಿಕೇಟ್ ಯಾರು ಕೊಡುತ್ತಾರೆ, ಈ ಹಲಾಲ್ ಎಂದರೇನು ಎಂದು ನೋಡೋಣ ಬನ್ನಿ:

ಹಲಾಲ್ ಮತ್ತು ಹರಾಮ್ ಎಂದರೇನು?
ಹಲಾಲ್ ಎಂಬುವುದು ಅರೆಬಿಕ್ ಹೆಸರಾಗಿದೆ. ಅಂದರೆ ಮುಸ್ಲಿಂ ಕಾನೂನು ಪ್ರಕಾರ ಸೇವಿಸಬಹುದಾದ ಆಹಾರ. ಹರಾಮ್ ಎಂದರೆ ಮುಸ್ಲಿಂ ಕಾನೂನು ಪ್ರಕಾರ ತಿನ್ನಲು ಯೋಗ್ಯವಲ್ಲದ ಆಹಾರ. ಮದ್ಯ, ಕಡಿಯುವುದಕ್ಕೂ ಮೊದಲು ಸತ್ತ ಪ್ರಾಣಿ, ಹಂದಿ ಮಾಂಸ ಇವೆಲ್ಲಾ ತಿನ್ನಲು ಹರಾಮ್ ಎಂಬುವುದನ್ನು ಮುಸ್ಲಿಂ ಕಾನೂನು ಹೇಳುತ್ತೆ.

ಹಲಾಲ್ ಕಾನೂನು ಏನು ಹೇಳುತ್ತೆ?
1. ಪ್ರಾಣಿಯನನ್ನು ಮುಸ್ಲಿಂರೇ ಕಡಿಯಬೇಕು.
2. ಪ್ರಾಣಿಯ ಕುತ್ತಿಗೆಯ ರಕ್ತನಾಳವನ್ನು ಹರಿತವಾದ ಕತ್ತಿಯಿಂದ ಕತ್ತರಿಸಬೇಕು, ಹೃದಯಕ್ಕೆ ಹರಿಯುವ ರಕ್ತವು ಹೊರಚೆಲ್ಲಬೇಕು.
3. ಕತ್ತರಿಸುವಾ ಕುರಾನ್ ಶಬ್ದಗಳನ್ನು ಹೇಳಬೇಕು ಇದನ್ನು ಶಹದ ಅಥವಾ ತಸ್ಮಿಯಾ ಎಂದು ಹೇಳಲಾಗುವುದು.
4. ಪ್ರಾಣಿಯ ಕುತ್ತಿಗೆ ಕುಯ್ಯುವಾಗ ಪ್ರಾಣಿ ಜೀವಂತವಾಗಿರಬೇಕು, ಹೆಚ್ಚಿನ ರಕ್ತ ಪ್ರಾಣಿಯ ದೇಹದಿಂದ ಹೊರ ಹೋಗಬೇಕು.
5. ಕುತ್ತಿಗೆ ಕಡಿಯುವ ಮುನ್ನವೇ ಸತ್ತ ಪ್ರಾಣಿ ತಿನ್ನಲು ಯೋಗ್ಯವಲ್ಲ.

ಹಲಾಲ್ ಸರ್ಟಿಫಿಕೇಟ್ ಯಾರು ಕೊಡುತ್ತಾರೆ?
ಇಸ್ಲಾಂ ರಾಷ್ಟ್ರಗಳಲ್ಲಿ ಹಲಾಲ್ ಸರ್ಟಿಫಿಕೇಟ್ ಅನ್ನು ಅಲ್ಲಿಯ ಸರ್ಕಾರ ನೀಡುತ್ತೆ. ಭಾರತದಲ್ಲಿ ಸಂಸ್ಕರಿಸಿದ ಮಾಂಸಾಹಾರಕ್ಕೆ (Food Safety and Standards Authority of India) FSSAI ಸರ್ಟಿಫಿಕೇಟ್ ನೀಡುತ್ತೆ ಆದರೆ ಹಲಾಲ್ ಸರ್ಟಿಫಿಕೇಟ್ ನೀಡಲ್ಲ. ಅನೇಕ ಖಾಸಗಿ ಕಂಪನಿಗಳು ಹಲಾಲ್ ಸರ್ಟಿಫಿಕೇಟ್ ನೀಡುತ್ತೆ.

ಭಾರತದಲ್ಲಿ ಹಲಾಲ್ ಸರ್ಟಿಫಿಕೇಟ್ ನೀಡುವ ಕಂಪನಿಗಳೆಂದರೆ
1. ಹಲಾಲ್ ಇಂಡಿಯಾ ಪ್ರೈ.ಲಿ
2. ಹಲಾಲ್ ಸರ್ಟಿಫಿಕೇಷನ್ ಸರ್ವೀಸ್ ಇಮಡಿಯಾ ಪ್ರೈ.ಲಿ
* ಜಮೈತ್ ಉಲ್ಮಾ-ಇ-ಮಹಾರಾಷ್ಟ್ರ
* ಜಮೈತ್ ಉಲ್ಮಾ ಇ-ಹಿಂದ್ ಹಲಾಲ್ ಟ್ರಸ್ಟ್ ನೀಡುತ್ತೆ.

ಮಾಂಸಾಹಾರವಲ್ಲದೆ ಸೌಂದರ್ಯ ಉತ್ಪನ್ನಗಳು ಹಾಗೂ ಇತರ ವಸ್ತುಗಳಿಗೆ ಹಲಾಲ್ ಸರ್ಟಿಫಿಕೇಟ್ ಏಕೆ?
ಸೌಂದರ್ಯವರ್ಧಕಗಳಿಗೆ ಹಂದಿ, ಚಿಕನ್, ದನ, ಅಡು ಮುಂತಾದ ಪ್ರಾಣಿಗಳ ಕೊಬ್ಬನ್ನು ಬಳಸಲಾಗುವುದು. ಮುಸ್ಲಿಂ ಕಾನೂನಿಗೆ ವಿರುದ್ಧವಾದ ಯಾವುದೇ ವಸ್ತುಗಳನ್ನು ಬಳಸಿಲ್ಲ ಎಂದು ಖಾತರಿ ಪಡಿಸಲು ಹಲಾಲ್ ಸರ್ಟಿಫಿಕೇಟ್ ನೀಡಲಾಗುವುದು.
ಮುಸ್ಲಿಂರ ಆಹಾರ ಪದ್ಧತಿಯಂತೆ ಈಗ ಹಲವಾರು ಹೋಟೆಲ್‌ಗಳಲ್ಲಿ, ಮಾಂಸದ ಅಂಗಡಿಗಳಲ್ಲಿ ಬೋರ್ಡ್‌ಗಳಿವೆ. ಇದೀಗ ಹಲಾಲ್ ಆಹಾರಗಳು ಹಿಂದೂಗಳಿಗೆ ಏಕೆ, ಮುಸ್ಲಿಂ ಪದ್ಧತಿಯಲ್ಲಿ ತಯಾರಿಸಿದ ಮಾಂಸ ಹಿಂದೂಗಳು ಸೇವಿಸಬೇಡಿ ಎಂದು ಹಿಂದೂ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ.



Click it and Unblock the Notifications
