Latest Updates
-
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು -
ಅರ್ನಬ್ ಚಂಡಮಾರುತದ ಅಬ್ಬರ: ಅಡುಗೆ ಇಲ್ಲದೆ 48 ಗಂಟೆಗಳ ಕಾಲ ಬದುಕುವುದು ಹೇಗೆ? -
ಅರ್ನಬ್ ಚಂಡಮಾರುತ ಅಬ್ಬರ: ಆಂಧ್ರ ಕರಾವಳಿಯತ್ತ ಭೀಕರ ಸೈಕ್ಲೋನ್, ಇಂದೇ ಮಾಡಿಕೊಳ್ಳಿ ಈ ಮುನ್ನೆಚ್ಚರಿಕೆ! -
2026ರ ಕರ್ವಾ ಚೌತ್: ಆಫೀಸ್ ಕೆಲಸದ ನಡುವೆ ಉಪವಾಸ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ!
ಮಾರ್ಚ್ 20ಕ್ಕೆ ವಸಂತ ಋತು ಪ್ರಾರಂಭ: ಹಗಲು-ರಾತ್ರಿ ಸಮಾನವಾಗಿರುವುದೇ ಇದರ ವಿಶೇಷ
ಮಾರ್ಚ್ 20ರಿಂದ ವಿಶೇಷ ದಿನದ ಪ್ರಾರಂಭ, ಅದನ್ನು ಈಕ್ಯೂನೊಕ್ಸ್ ಅಥವಾ ವಸಂತ ಋತು ಎಂದು ಕರೆಯಲಾಗುವುದು.

ಈಕ್ಯೂನೊಕ್ಸ್ ಎಂದರೇನು? ಏಕೆ ಇದು ಉಂಟಾಗುತ್ತದೆ, ಏಕೆ ವರ್ಷದಲ್ಲಿ ಎರಡು ಈಕ್ಯೂನೆಕ್ಸ್ ಇರುತ್ತದೆ ಎಂದು ನೋಡೋಣ ಬನ್ನಿ:

ಈಕ್ಯೂನೊಕ್ಸ್ ಎಂದರೇನು?
ಈಕ್ಯೂನೊಕ್ಸ್ ಎಂದರೆ ಆ ದಿನದಲ್ಲಿ ರಾತ್ರಿ ಮತ್ತು ಹಗಲಿನ ಸಮಯಬಹುತೇಕ ಒಂದೇ ಇರುತ್ತದೆ. ಸಾಮಾನ್ಯವಾಗಿ ಹಗಲು ಅಧಿಕವಿದ್ದು ರಾತ್ರಿ ಕಡಿಮೆ ಇರುತ್ತದೆ, ಆದರೆ ಈ ದಿನದಲ್ಲಿ ರಾತ್ರಿ ಮತ್ತು ಹಗಲಿನ ಸಮಯ ಒಂದೇ ಇರುತ್ತದೆ, ಅಲ್ಲದೆ ವಿಶ್ವದ ಎಲ್ಲಾ ಕಡೆ ರಾತ್ರಿ ಒಂದೇ ಸಮಯದಲ್ಲಿ ಇರುತ್ತದೆ.

2022ರಲ್ಲಿ ವಸಂತ ಋತುವಿನ ಪ್ರಾರಂಭ ಯಾವಾಗ?
ಖಗೋಳ ವಸಂತ ಋತು ಯೂನಿವರ್ಸ್ ಟೈಮ್ 15:33 UTCಗೆ ಪ್ರಾರಂಭ ಅಂದರೆ ಬೆಳಗ್ಗೆ 08:33ರಿಂದ (PDT)ಪ್ರಾರಂಭ, ಹಾಗೂ ಯುಕೆಯಲ್ಲಿ ಸಂಜೆ 3.33 (GMT).

ಖಗೋಳ ವಸಂತ ಎಷ್ಟರವರೆಗೆ ಇರುತ್ತದೆ?
ಖಗೋಳ ವಸಂತ ಉತ್ತಾರಾರ್ಧ ಗೋಳದಲ್ಲಿ ಪ್ರಾರಂಭವಾಗುತ್ತದೆ. ಇದು ಜೂನ್ 21, 2022ರವರೆಗೆ ಇರಲಿದೆ.

ಈಕ್ಯೂನೋಕ್ಸ್ ಹೇಗೆ ಉಂಟಾಗುತ್ತದೆ?
ಭೂಮಿಯು ಸೂರ್ಯನ ಸುತ್ತದ ತನ್ನ ಕಕ್ಷೆಯಲ್ಲಿ 23.5ºಯಲ್ಲಿ ಸುತ್ತುತ್ತಿರುತ್ತದೆ, ಇದರಿಂದ ರಾತ್ರಿ-ಹಗಲು ಉಂಟಾಗುವುದು. ಭೂಮಿ ಸೂರ್ಯನ ಸುತ್ತ ಹೀಗೆ ಸುತ್ತಿದಾಗ ಹಗಲು ಹೆಚ್ಚಿರುತ್ತದೆ, ರಾತ್ರಿ ಕಡಿಮೆ ಇರುತ್ತದೆ.
ಆದರೆ ಮಾರ್ಚ್ 20, ಭಾನುವಾರ ಭೂಮಿಯು ತನ್ನ ಕಕ್ಷೆಯಲ್ಲಿ ಲಂಬವಾಗಿ ಸುತ್ತುವುದು. ಇದರಿಂದ ಉತ್ತಾರಾರ್ಧ ಗೋಳ ಹಾಗೂ ದಕ್ಷಿಣಾರ್ಧ ಗೋಳಕ್ಕೆ ಒಂದೇ ರೀತಿಯಲ್ಲಿ ಸೂರ್ಯನ ಬೆಳಕು ಸಿಗುವುದು.
ಈ ವರ್ಷ ಮತ್ತೊಂದು ಈಕ್ಯೂನೊಕ್ಸ್ ಸೆಪ್ಟೆಂಬರ್ 23, 2022ಕ್ಕೆ ಇದೆ.

ಈಕ್ಯೂನೊಕ್ಸ್ ನೋಡಬಹುದೇ?
ನೀವು ಭಾನುವಾರ ಬೆಳಗ್ಗೆ ಸೂರ್ಯೋದಯ ಹಾಗೂ ಸೂರ್ಯಾಸ್ತಮ ಗಮನಿಸಿ, ಇಲ್ಲದಿದ್ದರೆ ಮಧ್ಯಾಹ್ನ ಸೂರ್ಯನನ್ನು ನೋಡಿ (ಬರೀಗಣ್ಣಿನಲ್ಲಿ ನೋಡಬೇಡಿ, ಕನ್ನಡಕ ಬಳಸಿ ನೋಡಿ). ಖಗೋಳದಲ್ಲಿ ನಡೆಯುವ ಅನೇಕ ಚಮತ್ಕಾರಗಳಲ್ಲಿ ಇದೂ ಒಂದಾಗಿದೆ.



Click it and Unblock the Notifications
