ಜನವರಿ ತಿಂಗಳ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು

ಜನವರಿ ಎನ್ನುವುದು ವರ್ಷದ ಆರಂಭವನ್ನು ತೋರಿಸುವ ತಿಂಗಳು. 31 ದಿನಗಳಿಂದ ಕೂಡಿರುವ ಈ ತಿಂಗಳನ್ನು ಅತ್ಯಂತ ಶುಭ ಮಾಸ ಎಂದು ಸಹ ಕರೆಯಲಾಗುವುದು. ವರ್ಷದ ಪ್ರಾರಂಭವನ್ನು ಸೂಚಿಸುವ ಈ ತಿಂಗಳಲ್ಲಿ ವರ್ಷದ ಅಂತ್ಯದವರೆಗೆ ಹೊಂದಬೇಕಾದ ಯೋಜನೆಗಳು ಹಾಗೂ ಕೆಲಸದ ಪಟ್ಟಿಗಳನ್ನು ಸಹ ಸಿದ್ಧಪಡಿಸುವ ಸಮಯ. ಪ್ರಾರಂಭದಲ್ಲಿ ಕೈಗೊಳ್ಳುವ ಕೆಲಸ ಕಾರ್ಯಗಳು ಅಥವಾ ಯೋಜನೆಗಳು ಸೂಕ್ತ ರೀತಿಯಲ್ಲಿ ನೆರವೇರಿದರೆ ವರ್ಷ ಪೂರ್ತಿ ಉತ್ತಮ ಅದೃಷ್ಟಗಳು ಹಾಗೂ ಅವಕಾಶಗಳಿಂದ ಕೂಡಿರುತ್ತದೆ ಎನ್ನುವ ನಂಬಿಕೆಯನ್ನು ಹೊಂದಿರುತ್ತಾರೆ. ಹಾಗಾಗಿ ಆದಷ್ಟು ಉತ್ತಮ ಕೆಲಸಗಳನ್ನು ಹಾಗೂ ಶುಭ ಆರಂಭವನ್ನು ಪಡೆಯಲು ಜನರು ಬಯಸುತ್ತಾರೆ.

January Month

ಹೊಸ ವರ್ಷದ ಸಂಭ್ರಮವನ್ನು ನೀಡುವ ಜನವರಿ ತಿಂಗಳಲ್ಲಿ ಅನೇಕ ವಿಶೇಷ ಆಚರಣೆ, ಹಬ್ಬಗಳು ಹಾಗೂ ಶುಭ ದಿನಗಳು ಬರುತ್ತವೆ. ಅವುಗಳ ಆಚರಣೆಯ ಸಂಭ್ರಮವು ತಿಂಗಳ ಪೂರ್ತಿ ಹೊಸತನ ಹಾಗೂ ಸಂತೋಷವನ್ನು ನೀಡುತ್ತವೆ. ನಿಜ, ಇಂಗ್ಲಿಷ್ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳಾದ ಜನವರಿಯು ವಿವಿಧ ಆಸಕ್ತಿದಾಯಕ ಸಂಗತಿಗಳನ್ನು ಒಳಗೊಂಡಿದೆ. ನಮಗೆ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಜನವರಿ ತಿಂಗಳಲ್ಲಿ ಆಚರಿಸುವ ವಿಶೇಷ ದಿನಗಳು ಹಾಗೂ ಹಬ್ಬಗಳ ಪರಿಚಯವಿರುತ್ತದೆ. ಅದೇ ಇತರ ದೇಶಗಳಲ್ಲಿ ಜನವರಿ ತಿಂಗಳನ್ನು ಯಾವ ಬಗೆಯಲ್ಲಿ ಪರಿಗಣಿಸುತ್ತಾರೆ? ಅವರು ಯಾವೆಲ್ಲಾ ಆಚರಣೆಯನ್ನು ಕೈಗೊಳ್ಳುವರು ಎನ್ನುವುದು ತಿಳಿದಿಲ್ಲ.

ನಮ್ಮ ದೇಶದಲ್ಲಿ ನಾವು ವಾತಾವರಣ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಲವು ಆಚರಣೆಯನ್ನು ಮಾಡುತ್ತೇವೆ. ಅಂತೆಯೇ ಇತರ ದೇಶಗಳಲ್ಲಿಯೂ ಜನವರಿ ತಿಂಗಳಲ್ಲಿ ವಿವಿಧ ಆಚರಣೆಯನ್ನು ಕೈಗೊಳ್ಳುತ್ತಾರೆ. ಜನವರಿಯಲ್ಲಿ ಬದಲಾಗುವ ವಾತಾವರಣ ಹಾಗೂ ಹಬ್ಬದ ಸಂಭ್ರಮಗಳು ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಹಾಗೂ ಬದಲಾವಣೆಯನ್ನು ತರುತ್ತವೆ. ಈ ಹಿನ್ನೆಲೆಯಲ್ಲಿಯೇ ವಿಶಿಷ್ಟತೆಯಿಂದ ಕೂಡಿರುವ ಆಚರಣೆಗಳನ್ನು ಅವರು ಆಚರಿಸುತ್ತಾರೆ. ಅವುಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅಂತಹ ಒಂದು ವಿಶೇಷ ಸಂಗತಿಗಳನ್ನು ಲೇಕನದ ಮುಂದಿನ ಭಾಗ ತಿಳಿಸುವುದು.

ಆಸಕ್ತಿದಾಯಕ ವಾಸ್ತವ

ಆಸಕ್ತಿದಾಯಕ ವಾಸ್ತವ

ಐಎಸ್‍ಒ ಪ್ರಕಾರ ಪ್ರತಿ ವರ್ಷದ ಮೊದಲ ವಾರ ಜನವರಿ 4 ಅನ್ನು ಒಳಗೊಂಡಿರುತ್ತದೆ.

ವಿಚ್ಛೇದನಗಳ ತಿಂಗಳು

ವಿಚ್ಛೇದನಗಳ ತಿಂಗಳು

ವಿವಿಧ ದೇಶಗಳಲ್ಲಿ ಜನವರಿ ತಿಂಗಳನ್ನು ವಿಚ್ಛೇದನಗಳ ತಿಂಗಳು ಎಂದು ಕರೆಯುತ್ತಾರೆ. ದಾಂಪತ್ಯದಿಂದ ಪ್ರತ್ಯೇಕವಾಗಿರಲು ಹೆಚ್ಚಿನ ದಂಪತಿಗಳು ಜನವರಿ ತಿಂಗಳಲ್ಲಿ ವಿಚ್ಛೇದನವನ್ನು ಪಡೆಯುತ್ತಾರೆ ಎಂದು ವಕೀಲರು ಅಭಿಪ್ರಾಯಿಸುತ್ತಾರೆ. ನಿರುದ್ಯೋಗದ ಕಾರಣದಿಂದ 2000ಕ್ಕೂ ಅಧಿಕ ಪತ್ನಿಯರು ಜನವರಿಯಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಸೇಲ್ ಆಫರ್

ಸೇಲ್ ಆಫರ್

ಜನವರಿ ಮಾರಾಟವು ಡಿಸೆಂಬರ್ 26ರ ನಂತರ ಪ್ರಾರಂಭವಾಗುತ್ತದೆ. ಅದನ್ನು ಅವರು "ದಿ ಬಾಕ್ಸಿಂಗ್ ಡೇ" ಎಂದು ಆಚರಿಸುವರು. ಲಂಡನ್ ಬೀದಿಯಲ್ಲಿ ಇರುವ ಎಲ್ಲಾ ವ್ಯಾಪಾರಿಗಳು ತಮ್ಮ ಅಂಗಡಿಯ ಬ್ಯಾನರ್‍ಗಳಲ್ಲಿ ದೊಡ್ಡ ದೊಡ್ಡ ರಿಯಾಯತಿ ಮಾರಾಟದ ಬಗ್ಗೆ ತಿಳಿಸುತ್ತಾರೆ. ಆ ಮಾರಾಟದಲ್ಲಿ ಉಡುಡು, ಪೀಠೋಪಕರಣ ಸೆರಿದಂತೆ ಎಲ್ಲಾ ಬಗೆಯ ವಸ್ತುಗಳು ಸಹ ರಿಯಾಯತಿ ಬೆಲೆಯಲ್ಲಿ ದೊರೆಯುತ್ತವೆ.

ರಾಷ್ಟ್ರೀಯ ಸೂಪ್ ತಿಂಗಳು

ರಾಷ್ಟ್ರೀಯ ಸೂಪ್ ತಿಂಗಳು

ಯುಎಸ್‍ಎ ರಾಷ್ಟ್ರದಲ್ಲಿ ಜನವರಿ ತಿಂಗಳನ್ನು ರಾಷ್ಟ್ರೀಯ ಸೂಪ್ ತಿಂಗಳು ಎಂದು ಕರೆಯುತ್ತಾರೆ. ಜನವರಿ ತಿಂಗಳಲ್ಲಿ ಚಳಿಯು ಅತ್ಯಂತ ಉತ್ತುಂಗದಲ್ಲಿ ಇರುತ್ತದೆ. ಅಂತಹ ಸಮಯದಲ್ಲಿ ಬೆಚ್ಚಗಿನ ಪಾಕವಿಧಾನ ಹಾಗೂ ಸೂಪ್ ಸೇವನೆಯು ಆರೋಗ್ಯವನ್ನು ಬೆಚ್ಚಗಿರಿಸುತ್ತದೆ. ಜೊತೆಗೆ ಉತ್ತಮ ಆನಂದ ಹಾಗೂ ಅನುಭವವನ್ನು ನೀಡುವುದು. ಚಳಿಯಲ್ಲಿ ಸೂಪ್ ಸೇವನೆ ಮಾಡಿದಾಗ ಅತ್ಯಂತ ನಿರಾಳತೆಯ ಭಾವನೆಯು ಮೂಡುವುದು. ಈ ಹಿನ್ನೆಲೆಯಲ್ಲಿಯೇ ಯುಎಸ್‍ಎ ಮಾರುಕಟ್ಟೆಗಳು ಜನವರಿಯ ತಿಂಗಳಲ್ಲಿ ಸಾಮಾನ್ಯವಾಗಿ ಬಿಸಿ-ಬಿಸಿ ಸೂಪ್ ಮಾರಾಟದಲ್ಲಿ ತುಂಬಿರುತ್ತದೆ. ಆ ಸಮಯದಲ್ಲಿ ಅಮೆರಿಕದವರು ತಯಾರಿಸುವ ವಿವಿಧ ಬಗೆಯ ಸಾಂಪ್ರದಾಯಿಕ ಸೂಪ್‍ಗಳು ಲಭ್ಯವಿರುತ್ತವೆ.

ತೋಳಗಳ ತಿಂಗಳು

ತೋಳಗಳ ತಿಂಗಳು

ಆಂಗ್ಲೋಸ್ಯಾಕ್ಸನ್ ಕಾಲದಲ್ಲಿ ಜನವರಿ ತಿಂಗಳು ತೋಳಗಳಿಗೆ ಶ್ರೇಷ್ಠವಾದ ತಿಂಗಳಾಗುತ್ತಿತ್ತು. ಅಂದರೆ ಜನವರಿಯಲ್ಲಿ ತೋಳಗಳು ಹೆಚ್ಚು ಸಕ್ರೀಯವಾಗುತ್ತಿದ್ದವು ಎಂದು ಭಾವಿಸಲಾಗುತ್ತಿತ್ತು. ಅದಕ್ಕಾಗಿಯೇ ಜನವರಿ ತಿಂಗಳನ್ನು ತೋಳಗಳ ತಿಂಗಳು ಎಂದು ಕರೆಯುತ್ತಾರೆ.

ವರ್ಷದ ಮೊದಲ ಸೋಮವಾರ ಮಕ್ಕಳಿಗೆ ಉಡುಗೊರೆ

ವರ್ಷದ ಮೊದಲ ಸೋಮವಾರ ಮಕ್ಕಳಿಗೆ ಉಡುಗೊರೆ

ಸ್ಕಾಟಿಷ್ ಸಂಪ್ರದಾಯಗಳ ಪ್ರಕಾರ ಹೊಸ ವರ್ಷದ ಮೊದಲ ಸೋಮವಾರ ಮಕ್ಕಳಿಗೆ ವಿಶೇಷ ಉಡುಗೊರೆಯನ್ನು ನೀಡಲಾಗುವುದು. ಪುರಾತನ ಕಾಲದಲ್ಲಿ ಕ್ರಿಸ್‍ಮಸ್ ಆಚರಣೆಯನ್ನು 12 ದಿನಗಳ ಕಾಲ ಆಚರಿಸಲಾಗುತ್ತಿತ್ತು. ಆ ಆಚರಣೆ ಜನವರಿ 5ರಂದು ಕೊನೆಗೊಳ್ಳುತ್ತಿತ್ತು. ಈ ಆಚರಣೆ ಮುಕ್ತಾಯವಾಗುವಾಗ ಮಕ್ಕಳಿಗೆ ಉಡುಗೊರೆ ನೀಡಲಾಗುತ್ತಿತ್ತು. ಈ ಆಚರಣೆಯನ್ನು ಈಗಲೂ ಪಾಲಿಸಿಕೊಂಡು ಬರ್ತಾ ಇದ್ದಾರೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಜನನ-ರಾಷ್ಟ್ರೀಯ ರಜೆ ದಿನ

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಜನನ-ರಾಷ್ಟ್ರೀಯ ರಜೆ ದಿನ

ಗೌರವಾನ್ವಿತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ 1929 ಜನವರಿ 15 ರಂದು ಜನಿಸಿದರು. ಇವರನ್ನು ಪುರೋಹಿತರ ಮಂತ್ರಿ ಎಂದು ಕರೆಯಲಾಗುವುದು. ನಾಗರೀಕ ಹಕ್ಕುಗಳ ನಾಯಕರು ಆಗಿದ್ದ ಇವರು ನೋಬೆಲ್ ಪ್ರಶಸ್ತಿಯ ವಿಜೇತರು ಹೌದು. ನ್ಯಾಯ ಮತ್ತು ಸಮಾನತೆಯ ವಿರುದ್ಧ ನಡೆದ ಯುದ್ಧದಲ್ಲಿ ವಿಜೇತರಾಗಿದ್ದರು. ಇವರ ಮಾತು ಮತ್ತು ತೀರ್ಪಿನಲ್ಲಿ ಸತ್ಯವಿರುತ್ತಿತ್ತು. ಎಲ್ಲಿ ಅನ್ಯಾಯ ನಡೆಯುವುದೋ ಅಲ್ಲಿ ನ್ಯಾಯಕ್ಕೆ ಅಪಾಯ ಉಂಟಾಗುವುದು ಎಂದು ಹೇಳುತ್ತಿದ್ದರು. ಮಾರ್ಟಿನ್ ಲೂಥರ್ ಅತ್ಯುತ್ತಮ ಭಾಷಣಕಾರರು ಆಗಿದ್ದರು. ಈ ದಿನವನ್ನು ಕೆಲವು ರಾಷ್ಟ್ರಗಳಲ್ಲಿ ರಾಷ್ಟ್ರೀಯ ರಜಾ ದಿನವನ್ನಾಗಿ ಪರಿಗಣಿಸಿದ್ದಾರೆ.

English summary

Some Interesting Facts About January Month

January is always a special month. So many special celebration will conduct this month, Here are interesting facts about January month.
X
Desktop Bottom Promotion