Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಎಡಗೈ ಜನರು ತುಂಬಾ ಸ್ಮಾರ್ಟ್ ಅಂತೆ ಗೊತ್ತಾ ? ನೀವು ತಿಳಿಯದ ಹಲವು ಸೀಕ್ರೆಟ್ ವಿಷಯಗಳು ಇಲ್ಲಿವೆ!
ಈ ಜಗತ್ತಲ್ಲಿ ಎಡಗೈ ಬಳಕೆದಾರರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ಎಡಗೈ ಬಳಕೆದಾರರನ್ನು ಅದೃಷ್ಟವಂತರೆಂದು ಭಾವಿಸುತ್ತಾರೆ. ಅಲ್ಲದೇ ಎಡಗೈ ಬಳಕೆದಾಋರರು ಭಯಂಕರ ಸ್ಮಾರ್ಟ್ ಆಗಿರುತ್ತಾರೆ ಅನ್ನುವ ನಂಬಿಕೆ ಸಾಮಾನ್ಯವಾಗಿ ಇದೆ. ಇದು ನಿಜ ಕೂಡ ಹೌದು, ಹಲವಾರು ಅಧ್ಯಯನಗಳಲ್ಲಿ ಎಡಗೈ ಬಳಸುವವರು ಎಲ್ಲರಿಗಿಂತಲೂ ಸ್ಮಾರ್ಟ್ ಎನ್ನುವುದು ತಿಳಿದುಬಂದಿದೆ. ಹಾಗಾದರೆ ಅಧ್ಯಯನಗಳ ಪ್ರಕಾರ ಎಡಕೈ ಬಳಸುವವರು ಯಾಕೆ ಸ್ಮಾರ್ಟ್ ಆಗಿದ್ದಾರೆ? ಯಾಕೆ ಎಡ ಕೈ ಬಳಕೆದಾರರು ವಿಭಿನ್ನವಾಗಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ವಿಭಿನ್ನ ಚಿಂತನೆ!
ಎಡಕಿ ಬಳಕೆದಾರರು ವಿಭಿನ್ನ ಹಾಗೂ ಸೃಜನಶೀಲ ಚಿಂತನೆಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಎಡಗೈಯ ಜನರು ಮೆದುಳಿನ ಎರಡೂ ಭಾಗಗಳನ್ನು ಬಳಸಲು ಸಮರ್ಥರಾಗಿರುವುದರಿಂದ ಅವರ ಯೋಚನಾಶಕ್ತಿ ವಿಭಿನ್ನವಾಗಿರುತ್ತದೆ. ಇನ್ನು ಎಡಕೈ ಬಳಕೆದಾರರು ಮೆದುಳಿನ ಬಲ ಗೋಳಾರ್ಧವನ್ನು ಅಭಿವೃದ್ದಿಪಡಿಸಿಕೊಂಡಿರುತ್ತಾರೆ. ಮೆದುಳಿನ ಬಲ ಗೋಳಾರ್ಧಕ್ಕೆ ವಿಭಿನ್ನವಾಗಿ ಯೋಚಿಸುವ ಗುಣ ಇದೆಯಂತೆ ಹೀಗಾಗಿ ಇದು ಕೂಡ ಎಡಗೈ ಬಳಕೆದಾರರಿಗೆ ವರದಾನವಾಗಿದೆ. ಎಡ ಕೈ ಬಳಕೆದಾರರು, ಹೆಚ್ಚು ವೈಯಕ್ತಿಕವಾದ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುತ್ತಾರೆ. ಕಡಿಮೆ ಜನರಿರುವ ತಂಡದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ಸ್ವತಂತ್ರ ಮನಸ್ಸಿನ ಚೌಕಟ್ಟು ಮತ್ತು ಸೃಜನಶೀಲ ಪ್ರತಿಭಾನ್ವಿತತೆಯು ಸಾಮಾನ್ಯವಾಗಿ ಎಡ ಕೈ ಬಳಕೆದಾರರನ್ನು ಅತ್ಯಂತ ಪ್ರತಿಭಾನ್ವಿತನಾಗಿ ಮಾಡುತ್ತದೆ.

ವೇಗದ ಕಣ್ಣು-ಕೈನ ಸಮನ್ವಯ!
ಮತ್ತೊಂದು ಅಧ್ಯಯನ ಪ್ರಕಾರ ಎಡ ಕೈ ಬಳಕೆದಾರರ ಕೈ ಹಾಗೂ ಕಣ್ಣು ಅತ್ಯಂತ ವೇಗವಾಗಿ ಹಾಗೂ ಉತ್ತಮವಾಗಿ ಸಮನ್ವಯ ಸಾಧಿಸುತ್ತಂತೆ. ಉದಾಹರಣೆಗೆ ಬಾಲ್ ನೋಡಿ ಟೆನಿಸ್ ನಲ್ಲಿ ಖಾಲಿ ಜಾಗಕ್ಕೆ ಹೊಡೆಯುವುದು. ಇಲ್ಲಿ ಕಣ್ಣು ಹಾಗೂ ಕೈನಲ್ಲಿ ಸಮನ್ವಯತೆ ಇರುತ್ತದೆ ಅಂದರೆ ಬಾಲ್ ಬರುವುದನ್ನು ಕಣ್ಣು ನೋಡುತ್ತದೆ ಅದಕೆ ಬ್ಯಾಟ್ ನಿಂದ ಪ್ರತಿಕ್ರಿಯೆ ನೀಡುತ್ತದೆ. ಕಣ್ಣು ಇದೆ ವೇಳೆ ಖಾಲಿ ಜಾಗವನ್ನು ಹುಡುಕುತ್ತದೆ ಕೈ ಖಾಲಿ ಜಾಗಕ್ಕೆ ಹೊಡೆಯುತ್ತದೆ. ಇಲ್ಲಿ ಒಂದೇ ತರಹದ ಸಮಾನತೆ ಇರುತ್ತದೆ. ಈ ರೀತಿಯ ಸಮನ್ವಯತೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ಬೇಸ್ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಟೆನಿಸ್ ಹೀಗೆ ಹಲವು ಆಟದಲ್ಲಿ ವೇಗದ ಕಣ್ಣು-ಕೈನ ಸಮನ್ವಯವನ್ನು ಲೆಫ್ಟ್ ಹ್ಯಾಂಡಿಗಳು ಹೊಂದಿರುತ್ತಾರೆ.

ಎಲ್ಲರನ್ನೂ ಆಕರ್ಷಿಸುವ ಗುಣ!
ಎಡಗೈ ಬಳಕೆದಾರರ ಪೈಕಿ ಅನೇಕರು ಉತ್ತಮ ವಾಗ್ಮೀಗಳು, ಚರಿಷ್ಮಾ ಹೊಂದಿರುತ್ತಾರಂತೆ. ಅವರು ಆಕರ್ಷಿಸುವ ಗುಣವನ್ನು ಹೊಂದಿದ್ದಾರೆ. ಉದಾಹರಣೆಗೆ ಯಾವುದೇ ಕೆಲಸದಲ್ಲಿ ಸೇರಲಿ ಅವರ ಮಾತಿಗೆ ಅಲ್ಲಿ ಮನ್ನಣೆ ಇರುತ್ತದೆ. ಅವರು ಅಲ್ಲಿನ ಪ್ರಮುಖ ಹುದ್ದೆಗೂ ಏರುತ್ತಾರೆ. ಅವರನ್ನು ಜನರು ಇಷ್ಟಪಡುವಂತಹ ಸನ್ನಿವೇಶಗಳು ನಡೆಯುತ್ತದೆ.

ಹೆಚ್ಚು ಬುದ್ಧಿವಂತರು!
ಇದನ್ನು ಸಾಮಾನ್ಯವಾಗಿ ನಾವೆಲ್ಲಾ ಕೇಳಿರುತ್ತೇವೆ. ಸಂಶೋಧನೆಯ ಪ್ರಕಾರ, ಎಡಗೈಯಲ್ಲಿ ಬರೆಯವವರನ್ನು ಹೆಚ್ಚು ಬುದ್ಧಿವಂತರೆಂಬುದು ಸಾಬೀತಾಗಿದೆ. ಎಡಗೈಯ ಜನರು ಮೆದುಳಿನ ಎರಡೂ ಭಾಗಗಳನ್ನು ಬಳಸಲು ಸಮರ್ಥರಾಗಿರುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವೇಗವಾಗಿ ಗುಣಪಡಿಸಲು ಸಹಾಯವಾಗುತ್ತದೆ.

ಎಡಗೈ ಬಳಕೆದಾರರು ನೀರಿನಲ್ಲಿ ಮುಳುಗುವ ಸಾಧ್ಯತೆ ಕಡಿಮೆ!
ಎಡಗೈಯಲ್ಲಿ ಬರೆಯುವವರು ನೀರಿನಲ್ಲಿ ಮುಳುಗುವ ಸಾಧ್ಯತೆ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಬಲಗೈಗಿಂತ ಎಡಗೈಯಲ್ಲಿ ವೇಗವಾಗಿ ಈಜಬಹುದು. ಇದು ಎಡಗೈ ಬಳಕೆದಾರರಿಗೆ ವರದಾನವಾಗಲಿದೆ. ಎಡಗೈ ಬಳಕೆದಾರರಿಗೆ ಎಡಗೈಗೆ ಶಕ್ತಿ ಜಾಸ್ತಿ ಹೀಗಾಗಿ ಈಜಲು ಅವರಿಗೆ ಶಕ್ತಿ ಜಾಸ್ತಿಯಾಗಿ ಇರಲಿದೆ.

ಕ್ರೀಡೆಯಲ್ಲಿ ಮುಂದೆ!
ಎಡಗೈ ಆಟಗಾರರನ್ನು ಕ್ರೀಡೆಯ ವಿಷಯದಲ್ಲಿ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅವರಿಗೆ ಕ್ರೀಡೆ ಅಂದರೆ ಅಚ್ಚುಮೆಚ್ಚು. ಎಡಗೈ ಬಳಸಿಕೊಂಡೇ ಕ್ರೀಡೆಯಲ್ಲಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಎಡಗೈ ಬಳಸುವ ಜನರು ಬಾಕ್ಸಿಂಗ್, ಟೆನಿಸ್ ನಂತಹ ಕ್ರೀಡೆಗಳಲ್ಲಿ ಉತ್ತಮರಾಗಿರುತ್ತಾರೆ.

ಮಲ್ಟಿ ಟಾಸ್ಕಿಂಗ್ ಮಾಡುವವರು!
ಎಡಗೈ ಬಳಕೆದಾರರು ವಿಭಿನ್ನವಾಗಿ ಯೋಚನೆ ಮಾಡುವುದಲ್ಲದೇ ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಬಲ್ಲರು. ಆ ಶಕ್ತಿ ಅವರಿಗಿದೆ. ಜೊತೆಗೆ ಕೆಲಸಗಳಿಗೆ ಹೆಚ್ಚು ಶ್ರದ್ಧೆ, ಬದ್ಧತೆಯನ್ನು ಹೊಂದಿರುತ್ತಾರೆ. ಇದರೊಂದಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರ ಎರಡೂ ಕೈಗಳ ವೇಗವೂ ಒಂದೇ ಆಗಿರುತ್ತದೆ. ಅದೇ ವೇಗದಲ್ಲೇ ಕೆಲಸಮಾಡುತ್ತಾರೆ.

ಎಡಗೈ ಜನರು ತಮ್ಮ ಶೂವನ್ನು ವಿಭಿನ್ನವಾಗಿ ಕಟ್ಟುತ್ತಾರೆ!
ಎಡಗಿ ಬಳಸುವ ಜನರು ಶೂನ ಲೇಸನ್ನು ವಿಭಿನ್ನವಾಗಿ ಕಟ್ಟುತ್ತಾರೆ. ಹೌದು, ಅನೇಕ ಎಡಗೈ ಜನರು ತಮ್ಮ ಬಲಗೈಯಿಂದ ತಮ್ಮ ಬೂಟುಗಳನ್ನು ಕಟ್ಟುವಂತಹ ಕೆಲಸವನ್ನು ಮಾಡುತ್ತಾರೆ. ಸಾಮಾನ್ಯರಂತೆ ಅಲ್ಲ, ಅವರು ಬೂಟ್ ಗೆ ಲೇಸ್ ಹಾಕುವುದು ಹಾಗೂ ಕಟ್ಟುವುದು ಡಿಫರೆಂಟ್ ಆಗಿ ಇರುತ್ತದೆ. ಈ ಸಮಯದಲ್ಲಿ ಎಡ ಕೈ ಬದಲು ಬಲ ಕೈ ಬಳಸುತ್ತಾರೆ.

ವಿಭಿನ್ನವಾಗಿ ಊಟ ಮಾಡುವುದು!
ಎಡಕೈ ಬಳಕೆದಾರರು ಬಲಗೈ ಜನರಿಗಿಂತ ಡಿಫರೆಂಟ್ ಆಗಿ ಊಟ ಮಾಡುತ್ತಾರೆ. ಹೌದು, ಅವರು ಲೆಫ್ಟ್ ಹ್ಯಾಂಡ್ ಪೀಪಲ್ ಆದರೂ ಬಲ ಗೈನಲ್ಲಿ ಊಟ ಮಾಡುತ್ತಾರೆ. ಎಲ್ಲಾ ಕಾರ್ಯಕ್ಕೂ ಎಡಗೈ ಬಳಸಿದರೂ ಬಲಗೈನಲ್ಲಿ ಊಟ ಮಾಡುತ್ತಾರೆ. ಉದಾಹರಣೆಗೆ ಊಟದ ವೇಳೆ ಎಡಗೈನಲ್ಲಿ ಸ್ಪೂನ್ ಹಿಡಿದುಕೊಂಡಿರುತ್ತಾರೆ. ಬಲಗೈನಲ್ಲೂ ಸ್ಪೂನ್ ಹಿಡಿದುಕೊಂಡಿರುತ್ತಾರೆ. ಪ್ಲೇಟ್ ನಲ್ಲಿರುವ ಆಹಾರವನ್ನು ಕತ್ತರಿಸಲು ಎಡಗೈಯನ್ನು ಬಳಸುತ್ತಾರೆ. ಆದರೆ ಬಲಗೈಯಿಂದಲೇ ಆಹಾರ ಸೇವಿಸುತ್ತಾರೆ.

ವಿಭಿನ್ನ ಬರವಣಿಗೆ ಸ್ಟೈಲ್!
ಅಧ್ಯಯನಗಳ ಪ್ರಕಾರ ಎಡಗೈ ಬಳಕೆದಾರರ ಕೈ ಬರಹ ಅಷ್ಟೇನೂ ಚೆನ್ನಾಗಿ ಇರೋದಿಲ್ಲವಂತೆ. ಎಲ್ಲರಲ್ಲೂ ಹಾಗೇ ಹೇಳಲು ಸಾಧ್ಯವಿಲ್ಲ. ಕೆಲವರು ಅತ್ಯುತ್ತಮ ಹ್ಯಾಂಡ್ ವ್ರೈಟಿಂಗ್ ಹೊಂದಿರುತ್ತಾರೆ. ಇನ್ನು ನೀವು ಗಮನಿಸಿದ್ದಿರೋ ಗೊತ್ತಿಲ್ಲ. ಎಡಗೈ ಬಳಕೆದಾರರು ಬರೆಯಲು ಹೆಚ್ಚಿನ ಜಾಗ ತೆಗೆದುಕೊಳ್ಳುತ್ತಾರೆ. ಯಾಕೆಂದರೆ ಅವರು ನೇರವಾಗಿ ಬರೆಯಲು ಕುಳಿತುಕೊಳ್ಳುವುದಿಲ್ಲ. ಬದಲಾಗಿ ಅಡ್ಡವಾಗಿ ಬರೆಯಲು ಕುಳಿತುಕೊಳ್ಳುತ್ತಾರೆ. ಅಲ್ಲದೇ ಅವರ ಕೈ ಕೂಡ ಅಡ್ಡವಾಗಿ ಇರುತ್ತಾರೆ. ಹಾಗೇ ಅವರು ಪೆನ್ನು ಹಿಡಿಯುವ ರೀತಿ ಕೂಡ ವಿಭಿನ್ನವಾಗಿರುತ್ತದೆ. ಎಡಗೈ ಜನರು ಬರೆಯುವಾಗ ಈ ಸವಾಲುಗಳನ್ನು ಎದುರಿಸುತ್ತಾರೆ.
ಕತ್ತರಿ ಬಳಕೆ ಸುಲಭ!
ಬಲಗೈ ಜನರು ಎಡಗೈನಲ್ಲಿ ಕತ್ತರಿ ಬಳಕೆ ಮಾಡಿ ಏನಾದರೂ ಕತ್ತರಿಸಲು ತುಂಬಾನೇ ಕಷ್ಟ. ಕತ್ತರಿ ಹಿಡಿದುಕೊಳ್ಳುವುದೇ ಹರಸಾಹಸವಾಗಿರುತ್ತದೆ. ಆದರೆ ಎಡಗೈ ಜನರಿಗೆ ಹಾಗೇ ಇರುವುದಿಲ್ಲ ಸುಲಭವಾಗಿ ಎಡಗೈನಲ್ಲಿ ಕತ್ತರಿ ಹಿಡಿದುಕೊಂಡು ಏನು ಬೇಕಾದರೂ ಕತ್ತರಿಸುತ್ತಾರೆ.
ಸೂಕ್ಷ್ಮ ದೃಷ್ಟಿ !
ಬಲಗೈ ಜನರ ದೃಷ್ಟಿಗಿಂತ ಎಡಗೈ ಜನರ ದೃಷ್ಟಿ ಉತ್ತಮವಂತೆ. ಅವರ ದೃಷ್ಟಿ ಅತೀ ಸೂಕ್ಷ್ಮ ಹಾಗೂ ವೇಗವಾಗಿರುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಎಡಗೈ ಬರವಣಿಗೆ ಸಾಧಕರು!
ಎಡಗೈಯಲ್ಲಿ ಬರೆಯುವವರು ಸಾಧಕರಾಗುತ್ತಾರೆ ಎಂಬ ಮಾತಿದೆ. ಅಮೆರಿಕದ ಅಧ್ಯಕ್ಷರಲ್ಲಿ ಹೆಚ್ಚಿನವರು ಎಡಗೈಯಲ್ಲಿ ಬರೆಯುವವರು. ಇವುಗಳಲ್ಲಿ ಜೇಮ್ಸ್ ಎ. ಗಾರ್ಫೀಲ್ಡ್, ರೊನಾಲ್ಡ್ ರೇಗನ್, ಜಾರ್ಜ್ ಎಚ್‌ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಕೂಡ ಸೇರಿದ್ದಾರೆ. ಇವರೆಲ್ಲ ಎಡಗೈ ಬಳಕೆದಾರರಾಗಿದ್ದಾರೆ.



Click it and Unblock the Notifications











