Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬುದ್ಧಿವಂತರು ಏಕೆ ಹೆಚ್ಚು ಒಂಟಿಯಾಗಿರುತ್ತಾರೆ ಗೊತ್ತಾ?
ನೀವು ನೋಡಿರಬಹುದು, ತುಂಬಾ ಬುದ್ಧಿವಂತರು ಸ್ವಲ್ಪ ವಿಚಿತ್ರವಾಗಿ ಇರುತ್ತಾರೆ, ಯಾರ ಜೊತೆ ಸೇರದೆ ಒಂಟಿಯಾಗಿರುತ್ತಾರೆ.. ನಿಮಗೊಂದು ಗೊತ್ತಾ? ಭಾರೀ ಬುದ್ಧಿವಂತ ಜನರು ತಮ್ಮ ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆಯಲು ಇಷ್ಟಪಡುತ್ತಾರೆ.
ಸಮಯವನ್ನು ಅವರು ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಏಕಾಂಗಿಯಾಗಿ ಇರಲು ಬಯಸುತ್ತಾರೆ. ಸುಮ್ಮನೆ ಜನರೊಂದಿಗೆ ಸೇರಿ ಹರಟೆ ನಡೆಸಿದರೆ ಅದು ವೇಸ್ಟ್ ಎಂದು ಅವರು ನಂಬಿದ್ದಾರೆ. ಹೀಗಾಗಿ ಹೆಚ್ಚಿನ ಸಮಯವನ್ನು ಅವರನ್ನು ಏಕಾಂಗಿಯಾಗಿ ಕಳೆಯುತ್ತಾ ಜ್ಞಾನ ಸಂಪಾದಿಸುವಲ್ಲಿ ತಲ್ಲೀನರಾಗಿರುತ್ತಾರೆ. ಇದರ ಹಿಂದೆ ಕಾರಣಗಳೂ ಇವೆ.. ಹಾಗಾದ್ರೆ ಬುದ್ಧಿವಂತರು ಏಕಾಂಗಿಯಾಗಿ ಸಮಯ ಕಳೆಯಲು ಕಾರಣವೇನು? ಅದರ ಹಿಂದೆ ಇರುವ ಉದ್ದೇಶವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

1. ಬುದ್ಧಿವಂತ ಜನರು ಪ್ರೊಡಕ್ಟಿವಿಟಿ ಬಗ್ಗೆ ಯೋಚಿಸುತ್ತಾರೆ!
ಮೊದಲನೇ ಕಾರಣ ಬುದ್ಧಿವಂತರು ಯಾವಾಗಲೂ ಪ್ರೊಡಕ್ಟಿವಿಟಿ ಬಗ್ಗೆ ಯೋಚಿಸುತ್ತಾರೆ. ಸುಮ್ಮನೆ ಗೆಳೆಯರೊಂದಿಗೆ ಸಮಯ ಕಳೆಯುತ್ತಾ ಹರಟೆ ಹೊಡೆದರೆ ಅದರಿಂದ ಏನು ಸಿಗುವುದಿಲ್ಲ. ಆದರೆ ಅದೇ ಸಮಯದಲ್ಲಿ ಏನಾದರೂ ಕೆಲಸ ಮಾಡಿದರೆ ಹಣವೂ ಸಂಪಾದನೆ ಆಗುತ್ತೆ, ಜ್ಞಾನವೂ ಸಿಗುತ್ತೆ. ಹೀಗಾಗಿ ಅವರು ಯಾವತ್ತೂ ಪ್ರೊಡಕ್ಟಿವಿಟಿ ಬಗ್ಗೆ ಯೋಚಿಸುತ್ತಾರೆ. ಇನ್ನು ಬುದ್ಧಿವಂತರು ಪರಿಶ್ರಮ ಪಡುವವರು ಆಗಿರುವುದರಿಂದ ಅವರು ಸಾಮಾನ್ಯ ಜನರೊಂದಿಗೆ ಸೇರಲು ಬಯಸುವುದಿಲ್ಲ ಬದಲಾಗಿ ತಮ್ಮಂತೆ ಕೆಲಸ ಮಾಡುವ ಜನರೊಂದಿಗೆ ಸೇರಲು ಬಯಸುತ್ತಾರೆ. ಸುಮ್ಮನೆ ಟೈಂ ಪಾಸ್ ಮಾಡಲು ಬಯಸುವುದಿಲ್ಲ. ಸುಮ್ಮನೆ ಸಮಯ ಕಳೆಯುವುದಕ್ಕಿತ ಬುದ್ಧಿವಂತ ಜನರು ವ್ಯಾಯಾಮ, ಓದುವಿಕೆ, ಬರವಣಿಗೆ ಮತ್ತು ಇತರ ಏಕಾಂತ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಸಹ ಹೆಚ್ಚು ಶ್ರಮವಹಿಸಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಆಲೋಚನೆಯನ್ನು ಒಳಗೊಂಡಿರುತ್ತಾರೆ. ಅಂದರೆ ಏಕಾಂಗಿಯಾಗಿದ್ದರೆ ಪ್ರೊಡಕ್ಟಿವಿಟಿ ಸಿಗುತ್ತದೆ ಎನ್ನುವ ವಿಶ್ವಾಸ ಅವರದ್ದು.

2. ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾರೆ ಬುದ್ಧಿವಂತರು
ಏಕಾಂಗಿಯಾಗಿದ್ದರೆ ವಿಭಿನ್ನ ದೃಷ್ಟಿಕೋನದಿಂದ ಜಗತ್ತನ್ನು ನೋಡಬಹುದು ಎನ್ನುವ ಕಾರಣಕ್ಕೆ ಬುದ್ದಿವಂತರು ಏಕಾಂಗಿಯಾಗಿ ಸಮಯ ಕಳೆಯುತ್ತಾರೆ. ನೀವು ಗಮನಿಸಿರಬಹುದು ಬುದ್ದಿವಂತರು ಹಲವು ವಿಚಾರಗಳ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ. ಈ ಬಗ್ಗೆ ಅವರು ವಿಭಿನ್ನ ದೃಷ್ಟಿಕೋನದಿಂದ ಯೋಚಿಸುತ್ತಾರೆ. ಅವರು ಏಕಾಂಗಿಯಾಗಿರುವಾಗ ಅವರು ಬ್ರಹ್ಮಾಂಡದೊಂದಿಗೆ ಹೆಚ್ಚು ಸಂಪರ್ಕ ಹೊಂದುತ್ತಾರೆ. ವಿಭಿನ್ನವಾಗಿ ಯೋಚಿಸುತ್ತಾರೆ. ಈ ಮೂಲಕ ಸಂಶೋಧಕರು ಮತ್ತು ಸೃಜನಶೀಲ ಪ್ರತಿಭೆಗಳಾಗಿ ಅವರು ಹೊರಹೊಮ್ಮುತ್ತಾರೆ.ಏಕಾಂಗಿತನ ಅವರನ್ನು ವಿಭಿನ್ನ ದೃಷ್ಟಿಕೋನವನ್ನು ತೆರೆಯಲು ಸಹಾಯ ಮಾಡುತ್ತದೆ.

3.ಸರಿಯಾದ ಯೋಜನೆಗಾಗಿ ಏಕಾಂತತೆಯನ್ನು ಬಯಸುತ್ತಾರೆ!
ನೀವು ನೋಡಿರಬಹುದು ಬುದ್ಧಿವಂತ ಜನರು ಯೋಜನೆಯನ್ನು ರೂಪಿಸಿದರೆ ಅದು ಪರ್ಫೆಕ್ಟ್ ಆಗಿರುತ್ತದೆ. ಅಲ್ಲದೇ ಅದು ಯಶಸ್ಸು ಆಗುತ್ತದೆ. ಯಾಕೆಂದರೆ ಬುದ್ಧಿವಂತ ಜನರು ಸಾಮಾನ್ಯವಾಗಿ ಸುಮ್ಮನೆ ಯಾವ ಕೆಲಸವನ್ನು ಮಾಡಿ ಪೈಲ್ ಆಗುವುದಿಲ್ಲ. ಅವರು ಯಾವುದಾದರೂ ಒಂದು ಯೋಜನೆ ಬಗ್ಗೆ ಯೋಚಿಸಿದರೆ ಅದರ ಬಗ್ಗೆ ಸರಿಯಾದ ವಿಶ್ಲೇಷಣೆ ಮಾಡಿಯೇ ಮುನ್ನುಗುತ್ತಾರೆ. ಅವರ ಲೆಕ್ಕಚಾರ ಪಕ್ಕಾ ಆಗಿರುತ್ತದೆ. ಇನ್ನು ಯೋಜನೆಗಳು ಮತ್ತು ಗುರಿಗಳನ್ನು ಸರಿಯಾಗಿ ರೂಪಿಸಲು ಅವರು ಏಕಾಂಗಿಯಾಗಲು ಬಯಸುತ್ತಾರೆ. ಏಕಾಂಗಿಯಾಗಿ ಇದ್ದರೆ ಅವರು ಅವರ ಯೋಜನೆಯಲ್ಲಿ ಯಶಸ್ಸುಗಳಿಸುತ್ತಾರೆ. ಅವರ ಯೋಜನೆ ಬಗ್ಗೆ ಬೇರೆಯವರ ಜೊತೆ ಹಂಚಿಕೊಂಡು ನಿರ್ಧಾರ ತೆಗೆದುಕೊಳ್ಳುವುದಿಲ್ಲ.

4. ಹೆಚ್ಚು ಬುದ್ಧಿವಂತ ಜನರು ವಿಭಿನ್ನವಾಗಿರುವುದನ್ನು ಇಷ್ಟಪಡುತ್ತಾರೆ!
ಬುದ್ಧಿವಂತ ಜನರು ವಿಭಿನ್ನವಾಗಿರುವುದನ್ನು ಇಷ್ಟಪಡುತ್ತಾರೆ. ಜನಸಮೂಹಕ್ಕಿಂತ ವಿಭಿನ್ನವಾಗಿ ಅವರು ಯೋಚಿಸುತ್ತಾರೆ. ಒಬ್ಬರೇ ಇರಲು ಬಯಸುತ್ತಾರೆ. ಕೆಲವರು ಅವರನ್ನು ಒಂಟಿ ವ್ಯಕ್ತಿ, ವಿಚಿತ್ರ ವ್ಯಕ್ತಿ ಎಂದರೂ ಅವರು ಕೇರ್ ಮಾಡೋದಿಲ್ಲ ಯಾಕೆಂದರೆ ಅವರು ಏಕಾಂಗಿಯಾಗಿರುವುದನ್ನು ಇಷ್ಟಪಡುತ್ತಾರೆ. ಇನ್ನು ಹೀಗೆ ವಿಭಿನ್ನವಾಗಿರುವುದು ಅವರಿಗೆ ಸಂತೋಷ ಕೊಡುವುದಲ್ಲದೇ ಅವರಿಗೆ ಮಹತ್ವಾಕಾಂಕ್ಷಿಯಾಗಿರುವಂತೆ ಹಾಗೂ ಕೂತುಹಲಕಾರಿಯಾಗಿರುವಂತೆ ಮಾಡುತ್ತದೆ.ಇದೇ ಕಾರಣಕ್ಕೆ ಬುದ್ಧಿವಂತರು ಏಕಾಂಗಿಯಾಗಿ ಇರುತ್ತಾರೆ. ಹರಟೆ ಹೊಡೆಯುವ ಗುಂಪಿನಿಂದ ಅಂತರ ಕಾಯ್ದುಕೊಳ್ಳುತ್ತಾರೆ.

5. ಸೃಜನಶೀಲತೆ ಬೆಳೆಸಲು ಟೈಂ ಸ್ಪೆಂಡ್ ಮಾಡುತ್ತಾರೆ!
ನೀವು ಗಮನಿಸಿರಬಹುದು ಅನೇಕ ಬುದ್ಧಿವಂತರು ಸೃಜನಶೀಲರಾಗಿರುತ್ತಾರೆ. ಎಲ್ಲಾ ವಿಚಾರಗಳಲ್ಲಿ ಸೃಜನಶೀಲರಾಗಿರುತ್ತಾರೆ. ಅದಕ್ಕೆ ಕಾರಣ ಅವರು ಏಕಾಂಗಿಯಾಗಿ ಅದರ ಬಗ್ಗೆ ಹೆಚ್ಚು ಗಮನಕೊಟ್ಟು ಅಧ್ಯಯನ ನಡೆಸುವ ಕಾರಣ. ಉದಾಹರಣೆಗೆ ಒಂದು ವಿಷಯವನ್ನು ಪ್ರಸ್ತುತ ಪಡಿಸಬೇಕು ಎಂದರೆ ಹೇಗೆ ಆರಂಭಿಸಬೇಕು ಹೇಗೆ ಜನರನ್ನು ಅದಕ್ಕೆ ಆಕರ್ಷಣೆ ಮಾಡಬೇಕು ಎನ್ನುವುದನ್ನು ಅವರ ಚಿಂತಿಸುತ್ತಾರೆ. ಈ ಸೃಜನಶೀಲತೆಗೆ ಅವರು ಸಮಯ ನೀಡುತ್ತಾರೆ. ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ.

6. ಏಕಾಂತತೆಯು ಇತರರನ್ನು ಪ್ರಶಂಸುಸಲು ಬುದ್ಧಿವಂತರನ್ನು ಸಹಾಯ ಮಾಡುತ್ತದೆ!
ಬುದ್ಧಿವಂತ ಜನರು ಹೆಚ್ಚು ಏಕಾಂತತೆಯನ್ನು ಬಯಸುತ್ತಾರೆ ಎಂದರೆ ಅವರೆಲ್ಲರೂ ಯಾರ ಜೊತೆಯೂ ಮಾತನಾಡುವುದಿಲ್ಲ ಎಂದು ಅರ್ಥವಲ್ಲ. ಅನೇಕ ಬುದ್ದಿವಂತರು ಇತರರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಾರೆ ಮತ್ತು ಅತ್ಯಂತ ಉದಾರ ಮಾನವತಾವಾದಿಗಳಾಗಿರುತ್ತಾರೆ. ಏಕಾಂಗಿಯಾಗಿ ಸಮಯವನ್ನು ಕಳೆಯುವುದರಿಂದ ಬುದ್ಧಿವಂತರಿಗೆ ಇತರರ ಬಗ್ಗೆ ಹೆಚ್ಚಿನ ಮೆಚ್ಚುಗೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಅವರ ಬಗ್ಗೆ ಯೋಚನೆ ಮಾಡುತ್ತ ಅವರ ಸಾಧನೆಯನ್ನು ಸ್ಮರಿಸಬಹುದಾಗಿದೆ. ಇನ್ನು ಬುದ್ಧಿವಂತರು ದೊಡ್ಡ ಗುಂಪುಗಳೊಂದಿಗೆ ಬೆರೆಯುವುದಿಲ್ಲವಾದ್ದರಿಂದ, ಅವರು ತಮ್ಮ ವಲಯದಲ್ಲಿರುವ ಕೆಲವು ನಿಕಟ ಜನರೊಂದಿಗೆ ಸಮಯ ಕಳೆಯಲು ಹೆಚ್ಚು ಮುಂದಾಗುತ್ತಾರೆ. ಇದು ಆಳವಾದ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಮತ್ತು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

7. ಸಮಾಜ ಏನು ಯೋಚಿಸುತ್ತೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ!
ಸಮಾಜದಲ್ಲಿ ನಮಗೆ ಗೌರವ ಸಿಗಬೇಕು ಎನ್ನುವ ಯೋಚನೆ ಆಲ್ ಮೋಸ್ಟ್ ಎಲ್ಲರಿಗೂ ಇದೆ. ಆದರೆ ಬುದ್ಧಿವಂತರು ಈ ಬಗ್ಗೆ ಯೋಚಿಸಲು ಹೋಗುವುದಿಲ್ಲ. ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ, ಯಾವ ರೀತಿಯ ಮೌಲ್ಯ ಕೊಡುತ್ತಾರೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬುದ್ಧಿವಂತರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರು ಅವರು ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಏಕಾಂಗಿಯಾಗಿ ಸಮಯ ಕಳೆಯುವ ಮೂಲಕ ಈ ಬಗ್ಗೆ ದೀರ್ಘವಾಗಿ ಬುದ್ಧಿವಂತರು ಯೋಚನೆ ಮಾಡಿಕೊಂಡಿರುತ್ತಾರೆ. ಜನರು ನೆಗೆಟಿವ್ ಆಗಿ ಮಾತನಾಡಿದರೆ ಯಾವ ರೀತಿಯ ಕಾರ್ಯವನ್ನು ನಾವು ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತಾರೆ. ಈ ಬಗ್ಗೆ ಆತ್ಮವಿಶ್ವಾಸವನ್ನು ಕೂಡ ಹೊಂದಿರುತ್ತಾರೆ.
8. ಸಾಕಷ್ಟು ಸಮಯವನ್ನು ಓದಿನಲ್ಲಿ ಕಳೆಯುತ್ತಾರೆ!
ಪುಸ್ತಕಗಳನ್ನು ಓದುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಓದುವುದರಿಂದ ಶಬ್ದಕೋಶ, ಮೌಖಿಕ ಕೌಶಲ್ಯ ಮತ್ತು ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಬುದ್ಧಿವಂತ ವ್ಯಕ್ತಿಗಳು ಯಾವಾಗಲೂ ತಮಗೆ ಸಿಗುವ ಯಾವುದನ್ನಾದರೂ ಓದುವ ಮೂಲಕ ತಮ್ಮನ್ನು ತಾವು ಶಿಕ್ಷಣ ಪಡೆಯುವ ಅತ್ಯಾಸಕ್ತಿಯ ಓದುಗರಾಗಲು ಒಲವು ತೋರುತ್ತಾರೆ. ಅವರು ಜನರು, ಸಂಸ್ಕೃತಿ, ಪ್ರಾಣಿಗಳು, ಇತಿಹಾಸ ಮತ್ತು ಪ್ರಪಂಚದ ಬಗ್ಗೆ ಕಲಿಯುವುದನ್ನು ಆನಂದಿಸುತ್ತಾರೆ. ಮತ್ತು ಓದುವಿಕೆಗೆ ಶಾಂತಿ ಮತ್ತು ಸ್ತಬ್ಧ ಅಗತ್ಯವಿರುವುದರಿಂದ, ಅವರು ಜನರ ಜೊತೆ ಹರಟೆ ಹೊಡೆಯುವುದನ್ನು ಬಿಟ್ಟು ಓದಲು ಏಕಾಂತ ಸ್ಥಳವನ್ನು ಹುಡುಕುತ್ತಾರೆ



Click it and Unblock the Notifications











