Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಟೊಮೆಟೊಗಳನ್ನೇ ಆಭರಣವಾಗಿ ತೊಟ್ಟ ಮದುಮಗಳ ಫೋಟೋ ವೈರಲ್
ಮದುಮಗಳು ಎಂದ ಮೇಲೆ ಮೈ ಮೇಲೆ ಒಂದಿಷ್ಟು ಒಡವೆ ಹಾಕಿ ಮಿಂಚುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಮದುಮಗಳು ಧರಿಸಿರುವ ಆಭರಣ ನೋಡಿ ಕೆಲವರಿಗೆ ಪರ್ವಾಗಿಲ್ಲ ಈ ಫ್ಯಾಷನ್ ಕೂಡ ಚೆನ್ನಾಗಿ ಕಾಣಿಸುತ್ತದೆ ಅಲ್ವಾ ಎಂದೆನಿಸಿದರೆ, ಮತ್ತೆ ಕೆಲವರಿಗೆ ಮದುಮಗಳು ಹೀಗೂ ಕಾಣಿಸಬಹುದಾ ಎಂಬ ಸೋಜಿಗ ಉಂಟಾಗಿದೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಹೆಣ್ಣು ಮಗಳು ತನ್ನ ಮದುವೆ ದಿನದಂದು ಈ ರೀತಿ ಟೊಮೆಟೊ ಅಲಂಕಾರ ಮಾಡುವ ಮೂಲಕ ಅಲ್ಲಿಯ ಸರಕಾರವನ್ನು ಟೀಕೆ ಮಾಡಿದ್ದಾರೆ. ಅಲ್ಲಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ದಿನಸಿ ವಸ್ತುಗಳು ದುಬಾರಿಯಾಗಿವೆ. ಇನ್ನು ಟೊಮೆಟೊ ಬೆಲೆ ಕೇಳಿದರೆ ಇದನ್ನು ಕೊಳ್ಳುವ ಬದಲು ಚಿನ್ನ ಕೊಳ್ಳಬಹುದು ಎನ್ನುವಷ್ಟರಮಟ್ಟಿಗೆ ದುಬಾರಿಯಾಗಿದ್ದು, ಅಲ್ಲಿಯ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ.
ಇದೀಗ ಮದುಮಗಳು ತನ್ನ ಮದುವೆ ದಿನ ಹೂವಿನ ಹಾರದ ಬದಲಿಗೆ ಟೊಮೆಟೊ ಹಾರ ಧರಿಸಿ, ಕೈಗಳಿಗೆ ಬ್ರಾಸ್‌ಲೆಟ್ ಬದಲಿಗೆ ಟೊಮೆಟೊಗಳ ಬ್ರಾಸೆಲೆಟ್ ಧರಿಸಿ, ಟೊಮೆಟೊವನ್ನೇ ನೆತ್ತಿಸರವಾಗಿ ಮುಡಿದು ಮದುವಣಿಗಿತ್ತಿಯಾಗಿ ಕಂಗೊಳಿಸುತ್ತಿರುವ ಫೋಟೋ ವೈರಲ್ ಆಗಿದೆ.
ಮದುಮಗಳು ತಾನೇಕೆ ಟೊಮೆಟೊ ಅಲಂಕಾರ ಮಾಡಿದೆ ಎಂದು ಹೇಳುತ್ತಾ 'ನನ್ನ ಮದುವೆಗೆ ಪೋಷಕರು 3 ಬಾಕ್ಸ್ ಟೊಮೆಟೊ ಹಾಗೂ ಪೈನ್‌ನಟ್ಸ್ ನೀಡಿದ್ದನ್ನು ನೋಡಿ ನೆರೆದವರೂ ಅಚ್ಚರಿಗೆ ಒಳಗಾದರು, ಆದ್ದರಿಂದ ಈ ಟೊಮೆಟೊ ಅಲಂಕಾರ ಮಾಡಲು ತೀರ್ಮಾನಿಸಿದೆ. ಇಲ್ಲಿ ಈಗ ಪೈನ್‌ನಟ್ಸ್ ಹಾಗೂ ಟೊಮೆಟೊ ದುಬಾರಿಯಾಗುತ್ತಿರುವುದರಿಂದ ಈ ಟೊಮೆಟೊವನ್ನು ರಕ್ಷಿಸಿದರೆ ಹತ್ತು ವರ್ಷದ ಬಳಿಕ ನನಗೇ ಒಳ್ಳೆಯದಾಗುತ್ತದೆ' ಎಂದು ಪಾಕಿಸ್ತಾನ ಪರಿಸ್ಥಿತಿ ಕುರಿತು ವ್ಯಂಗ್ಯವಾಡಿದ್ದಾರೆ.
ಮದುಮಗಳ ಈ ಅಲಂಕಾರ ನೋಡಿ ಪಾಕಿಸ್ತಾನ ಆರ್ಥಿಕ ಪರಿಸ್ಥಿತಿಯನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.



Click it and Unblock the Notifications
