Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಪ್ರೀಂ ಹಾಗೂ ಕೈ ಕೋರ್ಟ್‌ನಲ್ಲಿರುವ ಮಹಿಳಾ ಅಡ್ವೋಕೇಟ್ ಸಂಖ್ಯೆ ಬರೀ ಶೇ. 3: ಭಾರತದ 9 ಪ್ರಸಿದ್ಧ ಮಹಿಳಾ ಲಾಯರ್‌ಗಳು
ಮಾರ್ಚ್ 8ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ್ದೇವೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಇದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ, ಆದರೆ ಬೆರಳಿಣಿಕೆಯಷ್ಟು ಮಹಿಳೆಯರಷ್ಟೇ ಇಂದು ಕೆಲವೊಂದು ಮಹತ್ವದ ಸ್ಥಾನದಲ್ಲಿದ್ದಾರೆ. ಅದಕ್ಕೆ ಉದಾಹರಣೆ ನಮ್ಮ ಸುಪ್ರೀಂಕೋರ್ಟ್.

ಹೌದು ಸುಪ್ರೀಂಕೋರ್ಟ್‌ನಲ್ಲಿ ಶೆ. 3ರಷ್ಟು ಮಾತ್ರ ಸೀನಿಯರ್ ಮಹಿಳಾ ಅಡ್ವೊಕೇಟ್ಸ್(ವಕೀಲರು) ಇದ್ದಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿರುವ ಡಿ ವೈ ಚಂದ್ರಚೂಡ್ ಭವಿಷ್ಯದಲ್ಲಿ ಕಾನೂನು ವೃತ್ತಿಯಲ್ಲಿ ಮಹಿಳೆಯರು ಅಧಿಕ ಇರುತ್ತಾರೆ ಎಂದು ಹೇಳಿದ್ದಾರ. ಆದರೆ ಇತ್ತೀಚಿನ ವಾಸ್ತಾವಂಶವೆಂದರೆ ಶೇ. 3ರಷ್ಟು ಮಹಿಳೆಯರು ಮಾತ್ರ ಉಚ್ಛ ನ್ಯಾಯಾಲಯದಲ್ಲಿ ಸೀನಿಯರ್ ಅಡ್ವೊಕೇಟ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾರತದಲ್ಲಿ ಒಟ್ಟು 3, 146 ಸೀನಿಯರ್ ಅಡ್ವೊಕೇಟ್ಸ್ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಲ್ಲಿ ಶೇ. 3.4ರಷ್ಟು ಅಂದರೆ 106ರಷ್ಟು ಮಹಿಳಾ ವಕೀಲೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ 488 ವಕೀಲರಿದ್ದಾರೆ. ಅವರಲ್ಲಿ 19 ಮಹಿಳೆಯರಷ್ಟೇ ಇದ್ದಾರೆ ಅಂದರೆ ಪುರುಷರಿಗೆ ಹೋಲಿಸಿದರೆ 1/4 ಭಾಗದಷ್ಟೂ ಇಲ್ಲ. ಇನ್ನು ಕೋಲ್ಕತ್ತಾ, ಬಾಂಬೆ, ಮದ್ರಾಸ್ ಹೈ ಕೋರ್ಟ್‌ನಲ್ಲೂ ಕೂಡ ಮಹಿಳಾ ವಕೀಲರ ಸಂಖ್ಯೆ ತುಂಬಾ ಕಡಿಮೆ ಇದೆ.
ಮಹಾರಾಷ್ಟ್ರ ಹೈಕೋರ್ಟ್‌ನಲ್ಲಿ 8 ಜನ ವಕೀಲೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 4 ಜನರಷ್ಟೇ ಸಕ್ರೀಯರಾಗಿದ್ದಾರೆ. ಕರ್ನಾಟಕ ಹೈ ಕೋರ್ಟ್‌ನಲ್ಲಿ 6 ಜನ ಸೀನಿಯರ್ ಮಹಿಳಾ ವಕೀಲೆಯರಿದ್ದಾರೆ. ವಕೀಲೆ ವೃತ್ತಿಗೆ ಬರುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇದೆ, ಆದರೂ ಕೆಲವು ಮಹಿಳಾ ವಕೀಲೆಯರು ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಪ್ರಸಿದ್ಧ ವಕೀಲೆ ಎಂದು ಗುರುತಿಸಿಕೊಂಡಿದ್ದಾರೆ, ಅವರ ಕಿರುಪರಿಚಯ ಇಲ್ಲಿದೆ ನೋಡಿ:
1. ವೃಂದಾ ಗ್ರೋವರ್
ಇವರು ಪ್ರಸಿದ್ಧ ಲಾಯರ್ ಮಾತ್ರವಲ್ಲ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಸಂಶೋಧಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
2. ಮೀನಾಕ್ಷಿ ಅರೋರಾ
1986ರಲ್ಲಿ ಸುಪ್ರೀಂಕೋರ್ಟ್ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಅವರಲ್ಲಿ ಸೀನಿಯ್ ಅಡ್ವೊಕೇಟ್ ಆಗಿ ಆಯ್ಕೆ ಮಾಡಲಾಯಿತು. ಈ ಪದವಿ ಪಡೆದ ಐವರು ಮಹಿಳೆಯಲ್ಲಿ ಒಬ್ಬರಾಗಿದ್ದಾರೆ.
3. ಇಂದಿರಾ ಜಯ್‌ಸಿಂಗ್
ಸುಪ್ರೀಂಕೋರ್ಟ್‌ನ ಪ್ರಸಿದ್ಧ ವಕೀಲೆ ಎಂದು ಗುರುತಿಸಿಕೊಂಡಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ. ಇವರು LLM (postgraduate degree in law)ಸ್ನಾತಕೋತ್ತರ ಪದವಿಯನ್ನು ಬಾಂಬೆ ಯೂನಿವರ್ಸಿಟಿಯಿಂದ ಪಡೆದುಕೊಳ್ಳುತ್ತಾರೆ. ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.
4. ಪಿಂಕಿ ಆನಂದ್
ಪಿಂಕ್ ಆನಂದ್ ಭಾರತದ ಟಾಪ್ ಲಾಯರ್‌ಗಳಲ್ಲಿ ಒಬ್ಬರು. ಇವರೀಗ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಯ ಅಖಿಲ ಭಾರತ ಲೀಗಲ್ ಸೆಲ್ ಹೆಡ್ ಆಗಿ ಕೂಡ ಕಾರ್ನಿರ್ವಹಿಸುತ್ತಿದ್ದರು.
5. ಕರುಣಾ ನೌಂಡಿ
ಭಾರತೀಯ ಸಾಂವಿಧಾನಿಕ, ವಾಣಿಜ್ಯ ಮತ್ತು ಮಾಧ್ಯಮ ವಕೀಲೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಟಿವಿ ಜರ್ನಲಿಸ್ಟ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಎಕಾನಮಿಕ್ ಟೈಮ್ಸ್ ಸರ್ವೇ 'Corporate India's Fastest Rising Women Leaders'ಯಲ್ಲಿ ಇವರ ಹೆಸರು ಕೂಡ ಇದೆ. ಇವರು ನ್ಯೂಯಾರ್ಕ್, ಯುನೈಟೆಡ್ ನೇಷನ್‌ನಲ್ಲಿ ಲಾಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
6. ಫ್ಲೇವಿಯಾ ಏಗ್ನೆಸ್
ಭಾರತದ ಪ್ರಸಿದ್ಧ ಸೀನಿಯರ್ ಲಾಯರ್ ಆಗಿರುವ ಇವರು ವೈವಾಹಿಕ ಜೀವನದ ಕಲಹ, ವಿಚ್ಛೇದನ ಹಾಗೂ ಆಸ್ತಿಗೆ ಸಂಬಂಧಿಸಿದ ಕೇಸ್‌ಗಳನ್ನು ನಿಭಾಯಿಸುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಮಹಾರಾಷ್ಟ್ರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಲಹೆಗಾರರಾಗಿದ್ದಾರೆ.
7. ಮೀನಾಕ್ಷಿ ಲೇಖಿ
ಸುಪ್ರೀಂಕೋರ್ಟ್ ಲಾಯರ್ ಆಗಿರುವ ಇವರು ಲೋಕ ಸಭೆಯ ಸದಸ್ಯರೂ ಹೌದು. ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.
8. ಜಿಯಾ ಮೋಡಿ
ಇವರು ಭಾರತೀಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಪ್ರಸಿದ್ಧ ಲಾಯರ್‌ಗಳಲ್ಲಿ ಇವರು ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
9. ಮೇನಕಾ ಗುರುಸ್ವಾಮಿ
ನವದೆಹಲಿಯಲ್ಲಿ ಲಾಯರ್ ಆಗಿರುವ ಮೇನಕಾ ಗುರುಸ್ವಾಮಿ ಕೂಡ ಪ್ರಭಾವಿ ಲಾಯರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ನ್ಯೂಯಾರ್ಕ್ ಕಾನೂನು ಸಂಸ್ಥೆಯಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ.



Click it and Unblock the Notifications


