Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಿಮ್ಮ ನ್ಯೂ ಇಯರ್ ರೆಸ್ಯೂಲೇಷನ್ ಹೀಗಿದೆಯೇ?
ಹೊಸ ವರ್ಷ ಬಂದಾಗ ಪ್ರತಿಯೊಬ್ಬರು ಏನಾದರೂ ಒಂದು ಸಂಕಲ್ಪ ಮಾಡುತ್ತಾರೆ. ವರ್ಷ ಹಾಗೇ ಇರುತ್ತೇನೆ, ಹೀಹೆ ಇರುತ್ತೇನೆ, ಈ ಚಟ ಬಿಡುತ್ತೇನೆ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತೇನೆ ಹೀಗೆ ಏನಾದರೂ ಒಂದು ಸಂಕಲ್ಪ ಮಾಡಿಯೇ ಮಾಡುತ್ತಾರೆ. ಹೊಸ ವರ್ಷದ ಸಂಕಲ್ಪದ ಒಂದು ವಿಷಯವೆಂದರೆ ಎಲ್ಲರೂ ಒಂಥರಾ ಕ್ರಾಂತಿಕಾರಿ ರೆಸ್ಯೂಲೇಷನ್ ಹೇಳುತ್ತಾರೆ, ಆದರೆ ಈ ರೆಸ್ಯೋಲೇಷನ್ ಕಾಪಾಡುವವರು ಕೆಲವೇ ಕೆಲವರಷ್ಟೇ.
ಹೊಸ ವರ್ಷ ಪ್ರಾರಂಭವಾಗಿ ಜನವರಿ ಮುಗಿಯುತ್ತಿದ್ದಂತೆ ನಾವೇನು ರೆಸ್ಯೂಲೇಷನ್ ಮಾಡಿದ್ದೇವೆ ಎಂಬುವುದನ್ನೇ ಮರೆತು ಹೋಗುತ್ತಾರೆ. ನೀವೇ ಒಂದ್ಸಲ ಕಳೆದ ವರ್ಷ ಏನು ರೆಸ್ಯೂಲೇಷನ್ ಮಾಡಿಕೊಂಡಿದ್ದೆ ಎಂಬುವುದನ್ನು ನೆನಪುಮಾಡಿಕೊಳ್ಳಿ, ಖಂಡಿತ ನಿಮ್ಮ ತುಟಿಯಂಚಿನಲ್ಲಿ ನಗುವೊಂದು ಮೂಡುವುದು, ಅದು ಏನೇ ಇರಲಿ ಈ ವರ್ಷನು ಏನಾದರೂ ಒಂದು ರೆಸ್ಯೂಲೇಷನ್ ನಿಮ್ಮ ಮನಸ್ಸಿನಲ್ಲಿ ಇರುತ್ತದೆ ತಾನೆ? ನಾವಿಲ್ಲಿ ಹೊಸ ವರ್ಷಕ್ಕೆ ಸಾಮಾನ್ಯವಾಗಿ ಕಾಂಸಿಗುವ ರೆಸ್ಯೂಲೇಷನ್ ಬಗ್ಗೆ ಹೇಳಿದ್ದೇವೆ ನೋಡಿ:

1. 2020ಕ್ಕೆ ಗುಡ್‌ಬೈ ಹೇಳುವಾಗ ನಾನು ಸಿಗರೇಟ್, ಮದ್ಯಕ್ಕೆ ಗುಡ್‌ಬೈ ಹೇಳುತ್ತೇನೆ, ಇದು ನನ್ನ ರೆಸ್ಯೂಲೇಷನ್. ವೆಲ್‌ಕಮ್ 2021.
2. ಈ ವರ್ಷ ನೋ ಶಾರ್ಟ್ ಕಟ್, ಆರೋಗ್ಯಕರವಾಗಿಯೇ ಮೈ ತೂಕ ಇಳಿಸುತ್ತೇನೆ, ಇದು ನನ್ನ ಪ್ರತಿಜ್ಞೆ 2021!
3. ಬದುಕಿನ ಹೊಸದೊಂದು ಅಧ್ಯಾಯ ನನ್ನ ಮುಂದಿದೆ. ಸರಿಯಾಗಿ ಬಳಸಿಕೊಳ್ಳುತ್ತೇನೆ, ಇದು ನನ್ನ ನ್ಯೂ ಇಯರ್ ರೆಸ್ಯೂಲೇಷನ್.
4. ಈ ವರ್ಷ ತುಂಬಾ ಹಣ ಗಳಿಸಬೇಕು ಇದೇ ಕಣ್ರೀ ನನ್ನ ನ್ಯೂ ಇಯರ್ ರೆಸ್ಯೂಲೇಷನ್, ಅದಕ್ಕಾಗಿ ಒಂದು ಹೆಲ್ಪ್ ಬೇಕು ಮಾಡುತ್ತೀರಾ ತಾನೆ? ಏನಿಲ್ಲ ನಿಮ್ಮ ಎಟಿಎಂ ಜೊತೆಗೆ ಪಾಸ್‌ವರ್ಡ್ ಕೊಟ್ಟರಷ್ಟೇ ಸಾಕು.
5. 12 ತಿಂಗಳು , 52 ವಾರ , 365 ದಿನಗಳು, 8760 ಗಂಟೆ, 525600 ನಿಮಿಷ 31536000 ಸೆಕೆಂಡ್ ಇವುಗಳನ್ನು ಸರಿಯಾಗಿಯೇ ಬಳಸಿಕೊಳ್ಳುತ್ತೇನೆ ಇದು ನನ್ನ ನ್ಯೂ ಇಯರ್ ರೆಸ್ಯೂಲೇಷನ್.
6. ಈ ವರ್ಷ ಬೆಳಗ್ಗೆ ವ್ಯಾಯಾಮ ಮಾಡಿಯೇ ಮಾಡುತ್ತೇನೆ....ಏನು, ಕಳೆದ ವರ್ಷ ಹೀಗೆ ಹೇಳಿದೆ ಅಂದ್ರಾ...
7. ಈ ವರ್ಷ ಹೊಸ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತೇನೆ, ಅಧ್ಯಾಯನದ ಕಡೆ ಹೆಚ್ಚು ಗಮನ ಹರಿಸುತ್ತೇನೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
8. ಕೆಲಸದ ನಡುವೆ ನನ್ನ ಕುಟುಂಬದವರಿಗೂ ಸಮಯ ಕೊಡುತ್ತೇನೆ, ನನ್ನಿಂದ ಯಾರಿಗೂ ಬೇಸರ ಆಗದಂತೆ ನಡೆದುಕೊಳ್ಳುತ್ತೇನೆ , ಇದು ನನ್ನ ಹೊಸ ವರ್ಷದ ರೆಸ್ಯೂಲೇಷನ್.
9. ನನ್ನ ಕೋಪವೇ ಎಲ್ಲಾ ಅನಾಹುತಕ್ಕೆ ಕಾರಣವೆಂದು ಗೊತ್ತು, ಮೊದಲು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇನೆ, ಇದುವೇ ನನ್ನ ಈ ವರ್ಷದ ರೆಸ್ಯೂಲೇಷನ್.
10. ಈ ವರ್ಷದ ರೆಸ್ಯೂಲೇಷನ್ ಎಂದರೆ ನನ್ನ ಜೀವನಶೈಲಿ ಬದಲಾಯಿಸುತ್ತೇನೆ ಎಂದು ನನಗೆ ನಾನೇ ಸುಳ್ಳು ಹೇಳುವುದನ್ನು ಬಿಡುವುದು.



Click it and Unblock the Notifications









