Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮೊಹರಂ 2021: ಬಂಧುಭಾಂಧವರಿಗೆ ಶುಭಕೋರಲು ಇಲ್ಲಿದೆ ಶುಭಾಶಯಗಳು
ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳೇ ಮೊಹರಂ. ಚಂದ್ರನ ಚಲನೆಯನ್ನು ಆಧರಿಸಿರುವ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಮೊದಲನೇಯ ತಿಂಗಳಾದ ಮೊಹರಂ, ಏಳನೇ ತಿಂಗಳಾದ ರಂಜಾನ್, ಹನ್ನೊಂದನೇ ತಿಂಗಳಾದ ದುಲ್ ಖಾಯ್ದಾ, ಹನ್ನೆರಡನೇ ತಿಂಗಳಾದ ದುಲ್ ಹಜ್ಜ್ ಅನ್ನು ಅತ್ಯಂತ ಪವಿತ್ರ ಮಾಸಗಳೆಂದು ಪರಿಗಣಿಸಲಾಗಿದೆ. 2021ರಲ್ಲಿ ಮೊಹರಂ ಆಗಸ್ಟ್ 10ರಂದು ಪ್ರಾರಂಭವಾಗಿದೆ. ಆಗಸ್ಟ್ 19ರಂದು ಅಶುರಾ ಆಚರಿಸಲಾಗುವುದು,
ಮೊಹರಂ ಕೇವಲ ಹಬ್ಬದ ಆಚರಣೆಗಷ್ಟೇ ಸೀಮಿತವಾಗಿಲ್ಲ, ಈ ದಿನ ತಮ್ಮ ಹಿರಿಯರ ಹೋರಾಟ ಹಾಗೂ ತ್ಯಾಗವನ್ನು ಸ್ಮರಿಸಲಾಗುವುದು. ಶಾಂತಿ ಹಾಗೂ ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಹತ್ತು ದಿನಗಳ ಶೋಕಾಚರಣೆ ಮಾಡಲಾಗುವುದು. 10ನೇ ದಿನವನ್ನು ಅಶುರಾ ಎಂದು ಕರೆಯಲಾಗುವುದು.
ಅಶುರಾ ದಿನದಂದು ಬಂಧು ಬಾಂಧವರಿಗೆ ಶುಭಾಶಯಗಳನ್ನು ಕೋರಿ ಆಚರಣೆ ಮಾಡಲಾಗುವುದು. ನಾವಿಲ್ಲಿ ಮೊಹರಂ ಆಚರಣೆ ಖುಷಿ ಹೆಚ್ಚಿಸುವ ಕೆಲ ಸುಂದರ ಶುಭಾಶಯಗಳು ಅಥವಾ ಕೋಟ್ಸ್ ನೀಡಿದ್ದೇವೆ ನೋಡಿ:

ಶುಭಾಶಯ 1
ಮೊಹರಂ2021

ಶುಭಾಶಯ 2
ಇಸ್ಲಾಮಿಕ್ ವರ್ಷದ ಮೊದಲ ತಿಂಗಳಾದ ಮೊಹರಂ ಅಲ್ಲಾನ ನಂಬಿರುವವರಿಗೆ ತುಂಬಾ ಮಹತ್ವವಾದದ್ದು-ಅಲ್ಲಾನ ಆಶೀರ್ವಾದ ನಿಮ್ಮ ಮೇಲಿರಲಿ

ಶುಭಾಶಯ 3
ಮೊಹರಂ
ಇಸ್ಲಾಮಿಕ್ ಹೊಸ ವರ್ಷದ ಶುಭಾಶಯಗಳು

ಶುಭಾಶಯ 4
ಇಸ್ಲಾಮಿಕ್ ಹೊಸ ವರ್ಷ ಪ್ರಾರಂಭವಾಗುವಾಗ ಈ ವರ್ಷ ಪೂರ್ತಿ ಅಲ್ಲಾ ನಿಮಗೆ ಆರೋಗ್ಯ-ಐಶ್ವರ್ಯ ನೀಡಿ ಆಶೀರ್ವದಿಸಲಿ.

ಶುಭಾಶಯ 5
ಈ ಮೊಹರಂನಲ್ಲಿ ಇಮಾನ್ ಹುಸೈನ್ ತ್ಯಾಗವನ್ನು ಸ್ಮರಿಸೋಣ ಆತನ ತಿಳಿಸಿದ ಮೌಲ್ಯಗಳನ್ನು ಕಲಿಯೋಣ.

ಶುಭಾಶಯ 6
ಮೊಹರಂ-ಇಸ್ಲಾಮಿಕ್ ವರ್ಷ ನಿಮಗೆ ಆರೋಗ್ಯ, ಐಶ್ವರ್ಯ, ಶಾಂತಿ, ಜ್ಞಾನ, ನೆಮ್ಮದಿಯನ್ನು ತರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು.

ಶುಭಾಶಯ 7
ನಿಮಗೂ, ನಿಮ್ಮ ಕುಟುಂಬಕ್ಕೂ ಅಲ್ಲಾನ ಕೃಪೆಯಿಂದ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಹಾರೈಸುವಿ. ಹಿಜ್ರಿ ಹೊಸ ವರ್ಷದ ಶುಭಾಶಯಗಳು



Click it and Unblock the Notifications
