Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಆಟದ ನಡುವೆ ಮಗುವಿಗೆ ಎದೆ ಹಾಲುಣಿಸಿದ ವಾಲ್‌ಬಾಲ್ ಆಟಗಾರ್ತಿ, ಫೋಟೋ ವೈರಲ್
ತಾಯಿ ಹೃದಯ ಪ್ರತಿಯೊಂದು ಕ್ಷಣ ತನ್ನ ಮಗುವಿಗಾಗಿ ಮಿಡಿಯುತ್ತಿರುತ್ತದೆ. ಎಲ್ಲೇ ಹೋಗಲಿ, ಏನೇ ಕೆಲಸ ಮಾಡುತ್ತಿರಲಿ ನನ್ನ ಮಗು ಏನು ಮಾಡುತ್ತಿದೆ, ಅದು ಹಾಲು ಕುಡೀತಾ? ಆಹಾರ ಸೇವಿಸುತ್ತಾ? ಎಂಬ ಆತಂಕ ಅವಳಲ್ಲಿ ಇದ್ದೇ ಇರುತ್ತದೆ. ಇನ್ನು ತಾಯಿ ಆದ ಮೇಲೆ ಆಕೆ ಎಷ್ಟೇ ಸುಸ್ತಾಗಿರಲಿ, ಅವುಗಳನ್ನು ಲೆಕ್ಕಿಸದೆ ಮಗುವಿನ ಕಾರ್ಯ ಹಾಗೂ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾಳೆ.

ಇಲ್ಲೊಬ್ಬ ತಾಯಿ ಆಟದ ನಡುವೆ ಸಿಕ್ಕ ಬಿಡುವಿನ ವೇಳೆ ಓಡಿ ಹೋಗಿ ಹಸಿದ ತನ್ನ ಕಂದನಿಗೆ ಹಾಲುಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಮಿಜುರಾಂನ ವಾಲಿಬಾಲ್ ಆಟಗಾರ್ತಿ ನಿಂಗುಲನ್ ಹಾಂಗ್‌ಹಾಲ್ ಆಟದ ನಡುವೆ ಓಡಿ ಹೋಗಿ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ವೈರಲ್ ಆಗಿದೆ. ಎಲ್ಲರೂ ಆ ತಾಯಿ ಕರುಳಿತ ತುಡಿತ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಈಗ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾಳೆ. ತನ್ನ ವೃತ್ತಿ ಜವಾಬ್ದಾರಿ ಜತೆ ತಾಯಿಯಾಗಿ ಮಗುವಿಗೆ ಮಾಡಬೇಕಾದ ಕರ್ತವ್ಯದ ಜವಾಬ್ದಾರಿ ಅವಳ ಮೇಲಿರುತ್ತದೆ. ಸಾವಿರಾರು ಜನ ಸೇರಿರುವ ಗ್ರೌಂಡ್ ಆಗಿದ್ದರೂ ಅವೆನ್ನೆಲ್ಲಾ ಲೆಕ್ಕಿಸದೆ ತನ್ನ ತಾಯ್ತನದ ಜವಾಬ್ದಾರಿ ಮೆರೆದ ಆಟಗಾರ್ತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.
ಮಿಜುರಾಂನ ರಾಜ್ಯ ಮಟ್ಟದ ಆಟ 2019ರಲ್ಲಿ ವಾಲಿಬಾಲ್ ಆಟಗಾರ್ತಿಯಾಗಿದ್ದ ನಿಂಗುಲನ್ ಆಟ ಆಡುವಾಗ ಸಿಕ್ಕ ಸ್ವಲ್ಪ ಬಿಡುವಿನ ವೇಳೆಯಲ್ಲಿ ಮಗುವಿಗೆ ಹಾಲುಣಿಸಿದ್ದಾರೆ. ಆಟದ ನಡುವೆಯೂ ತಾಯಿಯಾದ ತನ್ನ ಜವಾಬ್ದಾರಿ ಮರೆಯದ ಆಕೆಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದು ಮಿಜುರಾಂ ಸರ್ಕಾರ ಇತರ ತಾಯಿಂದಿರಿಗೆ ಸ್ಪೂರ್ತಿ ತುಂಬುವಂತೆ ಆಕೆ ನಡೆದು ಕೊಂಡಿರುವುದಕ್ಕೆ ರೂ. 10,000 ಬಹುಮಾನ ಘೋಷಿಸಿದೆ.



Click it and Unblock the Notifications
