Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ವಯಸ್ಸು 50 ಆದ್ರು, 25ರ ಯುವಕನಂತಿರುವ ಮಹೇಶ್ ಬಾಬು ವರ್ಕೌಟ್, ಡಯೆಟ್ ಸೀಕ್ರೆಟ್ ಏನು?
ತೆಲುಗು ನಟ ಮಹೇಶ್ ಬಾಬು ತಮ್ಮ ಯಂಗ್ ಅಂಡ್ ಎನರ್ಜಿಟಿಕ್ ಲುಕ್‌ನಿಂದ ಸದಾ ಗಮನ ಸೆಳೆಯುತ್ತಾರೆ. ಅಭಿಮಾನಿಗಳು ಅವರನ್ನು ಹಾಲಿವುಡ್ ಹೀರೋ ಎಂದು ಮೆಚ್ಚುಗೆ ಸೂಚಿಸುತ್ತಾರೆ. ವಯಸ್ಸು 50 ದಾಟಿದ್ರು 25ರ ಯುವಕರನ್ನು ನಾಚಿಸುವಂತೆ ಟಾಲಿವುಡ್ ಪ್ರಿನ್ಸ್ ಗಮನ ಸೆಳೆಯುತ್ತಾರೆ. ಅಂದಹಾಗೆ ಮಹೇಶ್ ಬಾಬು ವರ್ಔಟ್ ಹೇಗಿರುತ್ತೆ? ಡಯೆಟ್ ಏನು? ಬನ್ನಿ ನೋಡೋಣ.
ತಂದೆ ಕೃಷ್ಣ ಘಟ್ಟಮನೇನಿ ಹಾದಿಯಲ್ಲಿ ಬಾಲಕನಾಗಿದ್ದಾಗಲೇ ಮಹೇಶ್ ಬಾಬು ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹೀರೊ ಆಗಿ ಸಕ್ಸಸ್ ಕಂಡರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜೀವನಶೈಲಿ ವಿಚಾರದಲ್ಲಿ ಮಹೇಶ್ ಬಹಳ ಕಟ್ಟುನಿಟ್ಟು. ಯಾವುದನ್ನು ತಿನ್ನಬೇಕು, ತಿನ್ನಬಾರದು ಎನ್ನುವ ವಿಚಾರದಲ್ಲಿ ಸದಾ ಜಾಗ್ರತೆ ವಹಿಸುತ್ತಾರೆ. ವರ್ಕೌಟ್ ಕೂಡ ಮಿಸ್ ಮಾಡುವುದಿಲ್ಲ.

ಸದಾ ಖುಷಿಯಾಗಿರುವುದೇ ತಮ್ಮ ಸೌಂದರ್ಯದ ಗುಟ್ಟು ಎಂದು ಮಹೇಶ್ ಬಾಬು ಹೇಳುತ್ತಿರುತ್ತಾರೆ. ಹೆಚ್ಚು ಚಿಂತೆ ಮಾಡಬಾರದು, ಸದಾ ಖುಷಿಯಾಗಿರಬೇಕು, ಯಾವುದೇ ವಿಚಾರವನ್ನು ತಲೆಗೆ ಹಾಕಿಕೊಂಡು ಕೊರಗಬಾರದು. ಏನಾದರೂ ಇದ್ದರೆ ಹೇಳಿಬಿಡಬೇಕು ಎನ್ನುತ್ತಾರೆ. ಇನ್ನು ಊಟ, ವ್ಯಾಯಾಮ, ನಿದ್ದೆ ಎಲ್ಲದರಲ್ಲೂ ಶ್ರದ್ಧೆ ವಹಿಸುತ್ತಾರೆ. ಸಾಧ್ಯವಾದಷ್ಟು ಮೊಬೈಲ್ ಫೋನ್‌ನಿಂದ ದೂರ ಉಳಿಯುತ್ತಾರೆ. ಇತ್ತೀಚೆಗೆ ನಿರ್ದೇಶಕ ರಾಜಮೌಳಿ 'ವಾರಣಾಸಿ' ಚಿತ್ರದ ಕಾರ್ಯಕ್ರಮದಲ್ಲಿ ಈ ವಿಚಾರ ಹೇಳಿದ್ದರು. ಮಹೇಶ್ ಬಾಬು ಒಮ್ಕೆ ಫೋನ್ ಕಾರ್ ಒಳಗೆ ಇಟ್ಟು ಚಿತ್ರೀಕರಣಕ್ಕೆ ಬಂದುಬಿಟ್ಟರೆ ಬಳಿಕ ಚಿತ್ರೀಕರಣ ಮುಗಿಸಿ ಹೋಗುವಾಗಲೇ ಫೋನ್ ನೋಡುವುದು. ನಾನು ಕೂಡ ಇನ್ನು ಅಳವಡಿಸಿಕೊಳ್ಳಬೇಕು ಎಂದಿದ್ದರು.
ಕೆಲ ಸಂದರ್ಶನಗಳಲ್ಲಿ ಮಹೇಶ್ ಬಾಬು ತಮ್ಮ ಡಯೆಟ್ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ 'ಸರ್ಕಾರಿವಾರಿ ಪಾಟು' ಚಿತ್ರದ ಸಂದರ್ಶನವೊಂದರಲ್ಲಿ ಅವರ ಡಯೆಟ್ ಬಗ್ಗೆ ನಿರೂಪಕಿ ಸುಮಾ ಪ್ರಶ್ನಿಸಿದ್ದರು. ಮೊಸರನ್ನ, ಪೇಸ್ಟ್ರೀ, ಬರ್ಗರ್ ಇಟ್ಟು ಈ ಮೂರರಲ್ಲಿ ಯಾವುದನ್ನು ತಿಂತೀರಾ ಎನ್ನುವ ಪ್ರಶ್ನೆಗೆ ಯಾವುದು ಮಟ್ಟಲ್ಲ ಎಂದು ಮಹೇಶ್ ಬಾಬು ಹೇಳಿದ್ದರು. ಮೊಸರನ್ನ ಅದರಲ್ಲಿ ಮೊಸರು ಡೈರಿ ಪ್ರಾಡೆಕ್ಟ್ ಹಾಗಾಗಿ ತಿನ್ನಲ್ಲ, ಬರ್ಗರ್ ಅಂದ್ರೆ ಬ್ರೆಡ್ ಮುಟ್ಟಲ್ಲ, ಪ್ರೇಸ್ಟ್ರೀ ಸಹವಾಸವೇ ಬೇಡ ಎಂದಿದ್ದರು.
ಮತ್ತೊಂದು ಸಂದರ್ಶನದಲ್ಲಿ ಮಹೇಶ್ ಬಾಬು ಮಾತನಾಡಿ ಇಡ್ಲಿ, ಪೂರಿ ಯಾವುದು ಬೇಕಾದರೂ ತಿನ್ನಿ. ಆದರೆ ಕಮ್ಮಿ ತಿನ್ನಿ, 10 ಪೂರಿ ಒಮ್ಮೆಲೆ ತಿನ್ನುವ ಬದಲು 2 ಪೂರಿ ತಿನ್ನಿ. ಊಟದ ವಿಚಾರದಲ್ಲಿ ಶಿಸ್ತು ಇರಬೇಕು. ಎಲ್ಲವರನ್ನು ಒಟ್ಟಿಗೆ ತಿಂದುಬಿಡುವುದಲ್ಲ ಎಂದಿದ್ದರು. ಹಿತಮಿತವಾಗಿ ಊಟ ಸೇವಿಸಿ ವ್ಯಾಯಾಮ ಮಾಡಿ ಸದಾ ಖುಷಿಯಾಗಿದ್ದರೆ ಆರೋಗ್ಯವಾಗಿ ಇರಬಹುದು ಎನ್ನುವುದು ಮಹೇಶ್ ಬಾಬು ಮಾತು.
ವರ್ಕೌಟ್
ಮಹೇಶ್ ಬಾಬು ಯಾವುದೇ ಚಿತ್ರಕ್ಕಾಗಿ ವಿಶೇಷ ತಯಾರಿ ನಡೆಸಲ್ಲ. ಸದಾ ಫಿಟ್ ಆಗಿ ಇರಲು ವ್ಯಾಯಾಮ ಮಾಡುತ್ತಾರೆ ಎಂದು ಕೋಚ್ ಕುಮಾರ್ ಮನ್ನವ ಹಿಂದೆ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದರು. ಮಹೇಶ್ ಬಾಬು ವರ್ಕೌಟ್ ಅನ್ನು ವಾರದ 5 ದಿನಕ್ಕೆ ವಿಭಾಗಿಸುತ್ತಾರೆ. ಪ್ರತಿ ದಿನ ದೇಹದ ಒಂದೇ ಭಾಗದ ಮೇಲೆ ಕೇಂದ್ರೀಕರಿಸಿ ವರ್ಕೌಟ್ ಮಾಡುತ್ತಾರೆ. ಸಾಮಾನ್ಯವಾಗಿ ದಿನಕ್ಕೆ 1 ಗಂಟೆ ವ್ಯಾಯಾಮ ಮಾಡ್ತಾರೆ. ಕೆಲವೊಮ್ಮೆ ಒಂದೂವರೆ ಗಂಟೆ ದೇಹ ದಂಡಿಸುತ್ತಾರೆ. ವರ್ಕೌಟ್ ಕೊನೆಯಲ್ಲಿ ಸ್ಟ್ರೆಚಿಂಗ್ ಮರೆಯುವುದಿಲ್ಲ. ವಯಸ್ಸಾದಂತೆ ಸ್ನಾಯುಗಳ ಬಿಗಿತವನ್ನು ತಡೆಯಲು, ಚಲನೆ ಸುಲಭಗೊಳಿಸಲು ಇದು ಸಹಕಾರಿ ಎಂದು ಕುಮಾರ್ ವಿವರಿಸಿದ್ದರು.
ಮಹೇಶ್ ಬಾಬು ಡಯೆಟ್
ಹೇಳಿಕೇಳಿ ಮಹೇಶ್ ಬಾಬು ಕೋಟ್ಯಾಧಿಪತಿ. ಹಾಗಾಗಿ ಐಷಾರಾಮಿ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಅತ್ಯುತ್ತಮ ಡಯೆಟ್ ಫಾಲೋ ಮಾಡುತ್ತಾರೆ. ದಿನಕ್ಕೆ 3 ಬಾರಿ ಅಲ್ಲದೇ 5ರಿಂದ 6 ಬಾರಿ ಊಟ ಸೇವಿಸುತ್ತಾರೆ. ಅದರಲ್ಲಿ 2 ಬಾರಿ ಸಪ್ಲಿಮೆಂಟ್ ಶೇಕ್ಸ್ ಕುಡಿಯುತ್ತಾರೆ. ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಆರೋಗ್ಯಕರ ಕೊಬ್ಬು ಇರುವ ಪದಾರ್ಥಗಳನ್ನು ಸೇವಿಸುತ್ತಾರೆ.
ಉಪಹಾರಕ್ಕೆ ಓಟ್ಸ್, ಮೊಟ್ಟೆ, ನಟ್ಸ್ ಹಾಗೂ ಹಣ್ಣು ಹಂಪಲು ಮಹೇಶ್ ಬಾಬು ಸೇವಿಸುತ್ತಾರೆ. ವರ್ಕೌಟ್ ಬಳಿಕ ಪ್ರೋಟಿನ್, ನ್ಯುಟ್ರಿಷಿಯನ್ ಶೇಕ್ ಕುಡಿತ್ತಾರೆ. ಮಧ್ಯಾಹ್ನ ಊಟಕ್ಕೆ ಚಿಕನ್, ಮಟನ್, ಫಿನ್ ಅನ್ನು ಬ್ರೌನ್ ರೈಸ್ ಜೊತೆ ಸೇವಿಸುತ್ತಾರೆ. ರಾತ್ರಿ ಊಟಕ್ಕೆ ಮೊಟ್ಟೆ ಅಥವಾ ಕೋಳಿ ಮಾಂಸದೊಂದಿಗೆ ಬ್ರೆಡ್ ಅಥವಾ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಶೇಕ್ ತೆಗೆದುಕೊಳ್ತಾರೆ ಎಂದು ಕುಮಾರ್ ವಿವರಿಸಿದ್ದರು.



Click it and Unblock the Notifications












