Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಜ್ಯೋತಿಷ್ಯ: ಮಾರ್ಚ್ 2022 ಈ ರಾಶಿಗಳಿಗೆ ಅದೃಷ್ಟದ ಮಾಸವಂತೆ
ಪ್ರತಿಯೊಂದು ಮಾಸವೂ ಕೆಲವು ರಾಶಿಚಕ್ರಗಳಿಗೆ ಶುಭವನ್ನು ತಂದರೆ ಇನ್ನು ಕೆಲವು ರಾಶಿಗಳಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಇದೆಲ್ಲವೂ ಗ್ರಹಗಳ ಚಲನೆಯ ಆಧಾರದ ಮೇಲೆ ನಿರ್ಧರಿತವಾಗಿದೆ. ಮಾರ್ಚ್ 2022 ಯಾವ ರಾಶಿಗಳಿಗೆ ಶುಭ ತರಲಿದೆ, ಯಾರಿಗೆ ಅದೃಷ್ಟ ಇದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.
ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಗ್ರಹಗಳ ಚಲನೆಯು ಶುಭವನ್ನು ತರಲಿದೆ, ಉದ್ಯೋಗ, ಮಾನಸಿಕ ಆರೋಗ್ಯ, ವ್ಯಾಪಾರ, ಕೌಟುಂಬಿಕ ಜೀವನ ಎಲ್ಲ ದೃಷ್ಟಿ ಕೋನದಲ್ಲು ಈ ರಾಶಿಗಳಿಗೆ ಅದೃಷ್ಟ ಇದೆಯಂತೆ. ಮಾರ್ಚ್ ಯಾವ ರಾಶಿಗೆ ಶುಭ ತರಲಿದೆ ಮುಂದೆ ನೋಡೋಣ:

ಮೇಷ ರಾಶಿ
ನೀವು ಈ ತಿಂಗಳು ಬಹುಶಃ ಆಧ್ಯಾತ್ಮಿಕತೆಗೆ ಹೆಚ್ಚು ಒಲವು ತೋರುತ್ತೀರಿ, ನಿಮ್ಮ ಉನ್ನತ ಆತ್ಮದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ. ಸೂರ್ಯನು ಆತ್ಮಾವಲೋಕನದ 12ನೇ ಮನೆಯಲ್ಲಿರುತ್ತಾನೆ. ಉದ್ಯೋಗದಲ್ಲಿ ನಿಮಗೆ ಕೆಲವು ಸಕಾರಾತ್ಮಕ ಸುದ್ದಿ ಸಿಗಬಹುದು. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ. ಆರ್ಥಿಕವಾಗಿ ಸಹ ಯೋಜಿಸಿದರೆ ಉಳತಾಯ ಸಾಧ್ಯ. ನೀವು ಹುಡುಕುತ್ತಿರುವ ಪ್ರೀತಿ ಮತ್ತು ಸ್ಪಷ್ಟತೆಯನ್ನು ಚೆನ್ನಾಗಿತಿಳಿಯಿರ, ಏಕೆಂದರೆ ಅದು ನಿಮ್ಮನ್ನು ತುಂಬಾ ಬೆಳವಣಿಗೆಯತ್ತ ಕೊಂಡೊಯ್ಯುತ್ತದೆ.

ಕುಂಭ ರಾಶಿ
ನೀವು ಸ್ಫೂರ್ತಿ, ಪ್ರೀತಿ ಮತ್ತು ಜೀವನದಲ್ಲಿ ವ್ಯಾಮೋಹ ಹೊಂದಿದ್ದೀರಿ. ವಾಸ್ತವವಾಗಿ ಮಾರ್ಚ್ ತಿಂಗ, ನೀವು ಹಿಂದೆಂದಿಗಿಂತಲೂ ಉತ್ತಮ ಕಳೆಯುತ್ತಿದ್ದೀರಿ ಎನಿಸದೇ ಇರದು. ಶುಕ್ರ ಮತ್ತು ಮಂಗಳ ಕುಂಭ ರಾಶಿಯಲ್ಲಿ ನಿಖರವಾಗಿ 0 ಡಿಗ್ರಿಯಲ್ಲಿ ಭೇಟಿಯಾಗುವುದರಿಂದ, ನೀವು ಪ್ರೀತಿಸಲ್ಪಟ್ಟಿದ್ದೀರಿ ಮತ್ತು ನೀವು ಆಶೀರ್ವದಿಸಲ್ಪಟ್ಟಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ಈ ತಿಂಗಳು, ನೀವು ನಿಮ್ಮ ನಿಜವಾದ ಸಾಮರ್ಥ್ಯಕ್ಕೆ ಹೊಂದಿಕೆಯಾಗುವ ಆತ್ಮವಿಶ್ವಾಸದ ಮಟ್ಟವನ್ನು ಹೊರಸೂಸಲು ಸಿದ್ಧರಾಗಿರುವಿರಿ. ನಿಮ್ಮನ್ನು ಇನ್ನು ಹೇಗೆ ಉತ್ತಮವಾಗಿ ವ್ಯಕ್ತಪಡಿಸಬೇಕು ಎಂಬುದನ್ನು ಹೆಚ್ಚು ಕಲಿಯುತ್ತೀರಿ, ಇತರರು ನಿಮ್ಮನ್ನು ಹೇಗೆ ಪ್ರೀತಿಸಬೇಕೆಂದು ಅರ್ಥಮಾಡಿಕೊಳ್ಳುತ್ತಾರೆ. ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ನೋವಾದಾರೂ ಚಿಂತೆ ಇಲ್ಲ ನಿಮ್ಮ ಸತ್ಯವನ್ನು ಹಂಚಿಕೊಳ್ಳಿ. ಉದ್ಯೋಗ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ.

ಮೀನ ರಾಶಿ
ನೀವು ನಿಜವಾದ ಆತ್ಮವಿಶ್ವಾಸವನ್ನು ಸ್ವೀಕರಿಸುತ್ತಿದ್ದೀರಿ ಮತ್ತು ನಿಮ್ಮ ಬೆಳವಣಿಗೆಯನ್ನು ಗೌರವಿಸುತ್ತಿದ್ದೀರಿ. ಮಾರ್ಚ್ ತಿಂಗಳು ನಿಮ್ಮದೇ ಆದ ಖಾಸಗಿ ಕನಸಿನ ಲೋಕದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಮುಳುಗಿಸಿ. ನಿಮ್ಮ ಆಧ್ಯಾತ್ಮಿಕತೆ, ಸೃಜನಶೀಲತೆ ಮತ್ತು ನಿಮ್ಮ ಸ್ವಯಂ ಪ್ರಜ್ಞೆಯೊಂದಿಗೆ ನೀವು ನಿಮ್ಮನ್ನು ಮರು ಸಂಪರ್ಕಿಸುತ್ತಿದ್ದೀರಿ. ನಿಮ್ಮ ಸಾಮರ್ಥ್ಯಗಳನ್ನು ಹೇಗೆ ಆಚರಿಸುತ್ತೀರೋ ಹಾಗೆಯೇ ನಿಮ್ಮ ದೌರ್ಬಲ್ಯಗಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಸಹ ನೀವು ಕಲಿಯುತ್ತಿದ್ದೀರಿ. ಮುಂದಿನ ಕೆಲವು ವಾರಗಳು ನಿಮ್ಮ ಸ್ವಂತ ಸ್ವಯಂ ವಿಕಾಸದ ಮೇಲೆ ಕೇಂದ್ರೀಕಸಿ, ಏಕೆಂದರೆ ನೀವು ಕಳೆದ ವರ್ಷ ಇದ್ದ ಅದೇ ವ್ಯಕ್ತಿಯಲ್ಲ. ಈಗ, ನೀವು ಎಂದಿಗಿಂತಲೂ ಹೆಚ್ಚು "ನೀವು" ಆಗಿದ್ದೀರಿ. ವ್ಯಾಪಾರಿಗಳು ಹೆಚ್ಚಿನ ಲಾಭದಾಯಕ ಮಾಸವಾಗಲಿದೆ.



Click it and Unblock the Notifications
