Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
International Men’s Day 2022: ಅಂತಾರಾಷ್ಟ್ರೀಯ ಪುರುಷರ ದಿನ ಇತಿಹಾಸ, ಮಹತ್ವ
ಪುರುಷರು ಸಮಾಜದ ಒಂದು ಕಣ್ಣು ಇದ್ದಂತೆ. ಸಮಾಜ, ಸಮುದಾಯ, ಕುಟುಂಬಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ವ್ಯಕ್ತಿ. ಪುರುಷರು ಹಗಲಿರುಳು ದುಡಿದು, ಬೆವರು ಸುರಿಸಿ, ಕುಟುಂಬವನ್ನು ಮೇಲಕೆತ್ತುವ ಕೆಲಸ ಮಾಡುತ್ತಾನೆ. ತಂದೆಯಾಗಿ, ಪತಿಯಾಗಿ, ಮಗನಾಗಿ ನಿಲ್ಲುವ ಪುರುಷರು ಪ್ರತಿಫಲ ಬಯಸದೆ ಜೀವಿಸುವವರು. ಹೀಗಾಗಿ ಎಲ್ಲರಿಗೂ ಪುರುಷರ ಬಗ್ಗೆ ಗೌರವವಿದೆ.
ಹೀಗಾಗಿಯೇ ಪುರುಷರಿಗೆ ಗೌರವ ನೀಡುವ ಉದ್ದೇಶದಿಂದ ಪುರುಷರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿನವೂ ಹೌದು, ಜೊತೆಗೆ ಅವರು ಮಾಡುವ ಕೆಲಸಗಳಿಗಾಗಿ ಅವರನ್ನು ಗುರುತಿಸಿ ಗೌರವದ ಮೂಲಕ ಆಚರಣೆ ಮಾಡಲಾಗುತ್ತಿದೆ. ಹಾಗಾದರೆ ಅಂತರಾಷ್ಟ್ರೀಯ ಪುರುಷರ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ? ಇದರ ಇತಿಹಾಸವೇನು? ಈ ಬಾರಿಯ ಥೀಮ್ ಏನು? ಆಚರಣೆ ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಯಾವ ದಿನ ಆಚರಣೆ ಮಾಡಲಾಗುತ್ತದೆ?
ನವೆಂಬರ್ 19 ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪುರುಷರ ಕಲ್ಯಾಣಕ್ಕಾಗಿ ಪ್ರಯತ್ನಗಳನ್ನು ಕೇಂದ್ರೀಕರಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೇ ಪುರುಷರಲ್ಲಿ ಪಾಸಿಟಿವ್ ಆಗಿ ಬದಲಾವಣೆ ತರುವ ಉದ್ದೇಶದಿಂದ ವಿಶ್ವದಾದ್ಯಂತ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ಪುರುಷರ ದಿನದ ಇತಿಹಾಸವೇನು?
ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಡಾ ಜೆರೋಮ್ ಟೀಲುಕ್ ಸಿಂಗ್ ಅವರು ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿದರು. ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ 1999 ರಲ್ಲಿ ಅಂತರರಾಷ್ಟ್ರೀಯ ಪುರುಷರ ದಿನವನ್ನು ಮೊದಲ ಬಾರಿಗೆ ಅವರು ಆಚರಿಸಿದರು. ಮುಂದಿನ ದಿನಗಳಲ್ಲಿ ಪುರುಷರು ಮತ್ತು ಹುಡುಗರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆರೆದಿಡಲು ಈ ದಿನವನ್ನು ಬಳಸಿಕೊಳ್ಳುವಂತೆ ಅವರು ಎಲ್ಲರಿಗೂ ಮನವಿ ಮಾಡಿದರು.
ಇದಕ್ಕೆ ಭಾರೀ ಪ್ರೋತ್ಸಾಹ ಸಿಕ್ಕಿತ್ತು. ತಂದೆಯ ಹುಟ್ಟುಹಬ್ಬ ಮಾತ್ರವಲ್ಲ ಇದೇ ದಿನ ಡಾ ಜೆರೋಮ್ ಟೀಲುಕ್ ಸಿಂಗ್, ಒಂದು ದಶಕದ ಹಿಂದೆ (1989) ಟ್ರಿನಿಡಾಡ್ ಮತ್ತು ಟೊಬಾಗೋದ ಫುಟ್ಬಾಲ್ ತಂಡವು ಸಾಕರ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ದೇಶವನ್ನು ಹೇಗೆ ಒಗ್ಗೂಡಿಸಿತು ಎಂಬುದನ್ನು ಸಹ ಇದೇ ದಿನದಂದು ಆಚರಿಸಲಾಗಿತ್ತು. ಹೀಗಾಗಿ ಈ ದಿನ ಭಾರೀ ಮಹತ್ವ ಪಡೆಯಿತು.
ಇನ್ನು ಈ ದಿನವನ್ನು ಲಿಂಗದ ಆಧಾರದಲ್ಲಿ ಆಚರಿಸುವ ಬದಲು, ಡಾ ಟೀಲಕ್ ಸಿಂಗ್ ಅವರು ವಿಶ್ವಾದ್ಯಂತ ಪುರುಷರು ಮತ್ತು ಹುಡುಗರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದಿನವಾಗಿ ಅಂತರರಾಷ್ಟ್ರೀಯ ಪುರುಷರ ದಿನವನ್ನು ಪ್ರಚಾರ ಮಾಡಿದರು. ಪ್ರತಿ ವರ್ಷ ನವೆಂಬರ್ 19 ರಂದು ಬರುವ ದಿನವು ಮೂವೆಂಬರ್ ನೊಂದಿಗೆ ಸೇರಿಕೊಳ್ಳುತ್ತದೆ, ಅಲ್ಲಿ ಪುರುಷರು ಅಥವಾ ಮೋ ಬ್ರದರ್ಸ್ ಶೇವಿಂಗ್ ಮಾಡುವುದಿಲ್ಲ ಮತ್ತು ಪುರುಷರ ಆರೋಗ್ಯಕ್ಕಾಗಿ ಹಣವನ್ನು ಸಂಗ್ರಹಿಸಲು ತಮ್ಮ ಮೀಸೆ ಮತ್ತು ಗಡ್ಡವನ್ನು ಬೆಳೆಸುತ್ತಾರೆ. ಹೀಗಾಗಿಯೇ ಈಗಲೂ ನೋ ಶೇವ್ ನವೆಂಬರ್ ಎನ್ನುವ ವಿಚಾರವಿದೆ.

ಈ ದಿನದ ಮಹತ್ವವೇನು?
ಈ ದಿನದಂದು ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ಕೊಡಲಾಗುತ್ತದೆ. ಅವರ ಲೈಂಗಿಕ ಹೋರಾಟಗಳು ಮತ್ತು ಅವರು ಒಳಗಾಗುವ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಲು ಈ ದಿನವನ್ನು ಮೀಸಲಿಡಲಾಗಿದೆ. ಅವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಮಾತನಾಡುವ ಮತ್ತು ಉತ್ತಮ ಲಿಂಗ ಸಂಬಂಧಗಳನ್ನು ರಚಿಸುವ ಭರವಸೆ ನೀಡುವ ದಿನವೂ ಹೌದು. ಈ ದಿನದ ಅಂತಿಮ ಗುರಿಯು ಮೂಲಭೂತ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಮತ್ತು ಪುರುಷರ ಬಗ್ಗೆ ಅರಿವು ಮೂಡಿಸುವುದಾಗಿದೆ.
ಅಂತಾರಾಷ್ಟ್ರೀಯ ಪುರುಷರ ದಿನವು ಆರು ಸ್ತಂಭಗಳನ್ನು ಆಧರಿಸಿದ್ದು, ಮೊದಲ ಸ್ಥಂಭವು ಇದು ದಿನ ನಿತ್ಯ ಜೀವನದ ಕಾರ್ಮಿಕ ವರ್ಗದ ನಾಯಕರ ಸಕಾರಾತ್ಮಕ ಪುರುಷ ರೋಲ್ ಮಾಡೆಲ್‌ಗಳನ್ನು ನಿರ್ಮಿಸಲು ಕೇಂದ್ರೀಕರಿಸುತ್ತದೆ. ಎರಡನೇ ಸ್ಥಂಭವು ಸಮಾಜ, ಸಮುದಾಯ, ಕುಟುಂಬ, ಮದುವೆ, ಮಕ್ಕಳ ಆರೈಕೆ ಮತ್ತು ಪರಿಸರಕ್ಕೆ ಪುರುಷರ ಕೊಡುಗೆಗಳನ್ನು ಆಚರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೆಯ ಸ್ತಂಭವು ಪುರುಷರ ಆರೋಗ್ಯ ಮತ್ತು ಸಾಮಾಜಿಕ, ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡುತ್ತದೆ.
ಇದು ಅನೇಕ ಕ್ಷೇತ್ರಗಳಲ್ಲಿ ಅವರು ಎದುರಿಸುತ್ತಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ಅಂತರಾಷ್ಟ್ರೀಯ ಪುರುಷರ ದಿನವು ಲಿಂಗ ಸಂಬಂಧಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಪ್ರತಿ ಜೀವಿಯು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಅಭಿವೃದ್ಧಿ ಹೊಂದುವಂತಹ ಉತ್ತಮ ಮತ್ತು ಸುರಕ್ಷಿತ ಜಗತ್ತನ್ನು ಸೃಷ್ಟಿಸಲು ಈ ದಿನ ಭರವಸೆ ನೀಡುತ್ತದೆ.

ಆಚರಣೆ ಹೇಗೆ?
ಪುರುಷರದ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಕಚೇರಿ, ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪುರುಷರಿಗೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಪುರುಷರಿಗೆ ವಿವಿಧ ಸೆಷನ್ ಗಳು ನಡೆಯುತ್ತದೆ. ಈ ದಿನದಂದು ಪುರುಷರ ಮಾನಸಿಕ ಆರೋಗ್ಯ, ಪುರುಷ ಆತ್ಮಹತ್ಯೆಯ ಪ್ರಭುತ್ವ, ಪುರುಷರ ಆರೋಗ್ಯವನ್ನು ಉತ್ತೇಜನೆ, ಲಿಂಗ ಸಂಬಂಧಗಳನ್ನು ಸುಧಾರಿಸುವ ಸಂಬಂಧ ಕಾರ್ಯಗಳನ್ನು ಮಾಡಲಾಗುತ್ತದೆ. ಇನ್ನು ಈ ದಿನದಂದು, ಪುರುಷರ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಗೆ ದೇಣಿಗೆ ನೀಡಿ, ಅಥವಾ ಪುರುಷರ ಮಾನಸಿಕ ಆರೋಗ್ಯ ಮತ್ತು ದೈಹಿಕ ಕಾಯಿಲೆಗಳ ಬಗ್ಗೆ ಮಾತನಾಡುವ ಪೋಸ್ಟರ್ ಗಳನ್ನು ಮಾಡಿ, ಹಂಚಿಕೊಳ್ಳುವ ಮೂಲಕ ಪುರುಷರ ದಿನವನ್ನು ಆಚರಿಸಬಹುದು. ಶುಭಾಶಯಗಳನ್ನು ತಿಳಿಸಬಹುದು.

ಈ ಬಾರಿಯ ಥೀಮ್ ಏನು?
ಅಂತರಾಷ್ಟ್ರೀಯ ಪುರುಷರ ದಿನದ ಈ ವರ್ಷದ ಥೀಮ್ 'ಪುರುಷರು ಮತ್ತು ಹುಡುಗರಿಗೆ ಸಹಾಯ ಮಾಡುವುದು' ಎಂಬುವುದಾಗಿದೆ. ಪುರುಷರು ಮತ್ತು ಹುಡುಗರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತನಾಡುವ, ಸಮಸ್ಯೆಗಳನ್ನು ಚರ್ಚಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.



Click it and Unblock the Notifications











