Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೈಕಲ್ ಜಾಕ್ಸನ್, ರಾಜಕುಮಾರಿ ಡಯಾನಾ ಈಗ ಬದುಕಿದ್ದರೆ ಹೀಗೆ ಕಾಣಿಸುತ್ತಿದ್ದರಂತೆ!
ನಾವು ವಯಸ್ಸಾದಾಗ ಹೇಗೆ ಕಾಣುತ್ತೇವೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಂದು ಆ್ಯಪ್‌ಗಳು ಕೂಡ ನಾವು ವಯಸ್ಸಾದಾಗ ಹೇಗೆ ಕಾಣಿಸುತ್ತೇವೆ ಎಂದು ತೋರಿಸುತ್ತವೆ, ಅವುಗಳನ್ನು ನೋಡಿ ನಾವು ತುಂಬಾ ಖುಷಿ ಪಡುತ್ತೇವೆ. ನಾವು ಅದೇ ರೀತಿ ಕಾಣುತ್ತೇವೋ, ಇಲ್ವೋ ಗೊತ್ತಿಲ್ಲ ಆದರೆ ನಾವು ವಯಸ್ಸಾದಾಗ ಹೇಗೆ ಕಾಣುತ್ತೇವೆ ಎಂಬುವುದನ್ನು ನೋಡಲು ತುಂಬಾನೇ ಖುಷಿಯಾಗುವುದು ಅಲ್ವಾ?

ಆದರೆ ಕೆಲ ಕಲಾಗಾರರು ತಮ್ಮ ಕಲ್ಪನೆ ಮೂಲಕ ವಯಸ್ಸಾದಾಗ ನಾವು ಹೇಗೆ ಕಾಣುತ್ತೇವೆ ಎಂದು ಚಿತ್ರ ಬಿಡಿಸುತ್ತಾರೆ. ಇದೀಗ ಟ್ಯೂಕಿ ಮೂಲದ ಕಲಾಗಾರ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಬಳಸಿ ಅಗಲಿರುವ ಅನೇಕ ಸೆಲೆಬ್ರಿಟಿಗಳ ಫೋಟೋ ಬಿಡಿಸಿದ್ದು ಅವುಗಳು ತುಂಬಾನೇ ವೈರಲ್ ಆಗಿವೆ.
ಆಲ್ಪರ್ ಯೆಸಿಲ್ಟಾಸ್ ಮೈಕಲ್ ಜಾಕ್ಸನ್, ಪ್ರಿನ್ಸಸ್ ಡಯಾನಾ, ಜೋನ್ ಲೆನನ್, ಪೌಲ್ ವಾಕರ್, ಹೀತ್ ಲೆಡ್ಜರ್ ಫೋಟೋಗಳನ್ನು ಬಿಡಿಸಿದ್ದು ಆ ಫೋಟೋಗಳು ತುಂಬಾನೇ ವೈರಲ್ ಆಗಿವೆ.
ಇವರೆಲ್ಲಾ ಬದುಕಿದ್ದರೆ ಹೇಗೆ ಕಾಣುತ್ತಿದ್ದರು ಎಂಬುವುದನ್ನು ಚಿತ್ರದ ಮೂಲಕ ತೋರಿಸಿದ್ದಾರೆ ನೋಡಿ:
ರಾಜಕುಮಾರಿ ಡಯಾನಾ
ರಾಜಕುಮಾರಿ ಡಯಾನಾ 1997 ಆಗಸ್ಟ್ 31ರಂದು ನಡೆದ ಅಪಘಾತದಲ್ಲಿ ಸಾವನ್ನಪ್ಪಿದರು. ಡಯಾನಾ ಮರಣವೊಂದಿ ಇಷ್ಟು ವರ್ಷಗಳಾದರೂ ಇನ್ನೂ ಜನರ ನೆನಪಿನಲ್ಲಿದ್ದಾರೆ. ಇಂಗ್ಲೆಂಡ್‌ನ ಜನರು ಪ್ರಿನ್ಸಸ್ ಡಯಾನಾ ಎಂದೆಂದಿಗೂ ನಮ್ಮ ರಾಣಿ ಎಂಬುವುದಾಗಿ ಹೇಳುತ್ತಾರೆ. ಇಂಗ್ಲೆಂಡ್‌ನ ರಾಜಮನೆತನಕ್ಕೆ ಸೊಸೆಯಾಗಿ ಹೋದ ಮೇಲೆ ಡಯಾನಾ ಬದುಕು ಸಂಪೂರ್ಣ ಬದಲಾಯಿತು, ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನಭವಿಸಿದ ಡಯಾನಾ ಪ್ರಿನ್ಸ್ ಚಾರ್ಲ್ಸ್‌ಗೆ ವಿಚ್ಛೇದನ ನೀಡುವ ಮೂಲಕ ರಾಜಮನೆತನದಿಂದ ದೂರಾದರೂ ಜನರು ಇಂದಿಗೂ ತಮ್ಮ ಪ್ರಿನ್ಸಸ್ ಆಗಿಯೇ ಆಕೆಯನ್ನು ಸ್ಮರಿಸುತ್ತಾರೆ..
ಮೈಕಲ್ ಜಾಕ್ಸನ್
ತಮ್ಮ ಅದ್ಭುತ ನೃತ್ಯದ ಮೂಲಕ ಜಗತ್ತನ್ನೇ ಮೋಡಿ ಮಾಡಿದ್ದ ಮೈಕಲ್ ಜಾಕ್ಸನ್ ಜೂನ್ 25, 2009ರಲ್ಲಿ ನಿಗೂಢವಾಗಿ ಸಾವನ್ನಪ್ಪಿದರು. ಮೈಕಲ್ ಜಾಕ್ಸನ್ ಒಬ್ಬ ಅಗಾಧ ಪ್ರತಿಭೆ, ಆದರೆ ಅವರಿಗೆ ತಾವು ಸುಂದರವಾಗಿಲ್ಲ ಎಂಬ ಕೊರಗು ಇದ್ದೇ ಇತ್ತು, ಹಾಗಾಗಿ ಬೆಳ್ಳಗೆ ಕಾಣಲು ಅವರು ಶಸ್ತ್ರ ಚಿಕಿತ್ಸೆ ಕೂಡ ಮಾಡಿಸಿದ್ದರು, ಹಾಗಾಗಿ ಅವರ ಮೂಲ ಸ್ವರೂಪವೇ ಜನರಿಗೆ ಮರೆತು ಹೋಗಿತ್ತು, ಇದೀಗ ಕಲಾವಿದ ಮೈಕಲ್ ಜಾಕ್ಸನ್ ಈಗ ಇದ್ದಿದ್ದರೆ ಹೇಗೆ ಕಾಣುತ್ತಿದ್ದರು ಎಂಬುವುದನ್ನು ಚಿತ್ರದ ಮೂಲಕ ತೋರಿಸಿದ್ದಾರೆ.
ಇನ್ನು ಸೆಲೆನಾ, ಜೋನ್ ಲೆನನ್, ಪೌಲ್ ವಾಕರ್, ಹೀತ್ ಲೆಡ್ಜರ್ ಫೋಟೋಗಳನ್ನು ಬಿಡಿಸಿದ್ದಾರೆ ನೋಡಿ:



Click it and Unblock the Notifications
