Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
Happy Buddha Purnima 2023 ಬುದ್ಧ ಪೌರ್ಣಿಮ : ಬುದ್ಧನ ತತ್ವ ಸಾರುವ ಕೋಟ್ಸ್, ವಾಟ್ಸಾಪ್ ಸಂದೇಶಗಳು
ಏಷ್ಯಾದ ಬೆಳಕು ಎಂದೇ ಪ್ರಖ್ಯಾತಿ ಪಡೆದ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ. ಸಕಲ ಸೌಕರ್ಯ, ಮಹಾ ವೈಭೋಗದ ಜೀವನದಿಂದ ಮುಕ್ತಿ ಪಡೆದು ತನ್ನ 29ನೇ ವಯಸ್ಸಿಗೇ ಜಗದ ಸತ್ಯ ಶೋಧನೆಗಾಗಿ ಪ್ರಪಂಚ ಪರ್ಯಟನೆ ನಡೆಸಿದ ಮಹಾನ್ ಸಂತ.
ಬಡವರು ಹಾಗೂ ದುರ್ಬಲರಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟು, ಸತ್ಯ ದರ್ಶನದ ಬಗ್ಗೆ ಜನರಿಗೆ ಬೋಧನೆಗಳನ್ನು ನೀಡುತ್ತಿದ್ದ ಬುದ್ಧನ ಸಾವಿರಾರು ಹೇಳಿಕೆಗಳು ಇಂದಿಗೂ ಪ್ರಸ್ತುತ ಹಾಗೂ ಎಲ್ಲರಿಗೂ ಜೀವನಪಾಠವಾಗಿದೆ.
ಮೇ5 ಭಗವಾನ್ ಬುದ್ಧ ಜಯಂತಿ, ಇದನ್ನು ಬುದ್ಧ ಪೌರ್ಣಿಮ ಎಂದೂ ಕರೆಯುತ್ತಾರೆ. ಈ ದಿನದ ವಿಶೇಷ ನಾವಿಂದು ಈ ಲೇಖನದಲ್ಲಿ ಬುದ್ಧ ಬೋಧಿಸಿದ ತತ್ವಗಳನ್ನು (ಕೋಟ್ಸ್) ಹಾಗೂ ಬುದ್ಧ ಪೌರ್ಣಿಮ ಶುಭಾಶಯಗಳನ್ನು ಇಲ್ಲಿ ನೀಡಲಿದ್ದೇವೆ:

1. ನಿಮ್ಮೆಲ್ಲರ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ. ಆದ್ದರಿಂದ ಸ್ಪಂದಿಸಲು ಕಲಿಯಿರಿ, ಪ್ರತಿಕ್ರಿಯಿಸಬೇಡಿ. -ಗೌತಮ ಬುದ್ಧಬುದ್ಧ ಪೌರ್ಣಿಮ ಶುಭಾಶಯಗಳು
2. ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮ, ಇದೇ ನಿಜವಾದ ವಿಜಯ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. -ಗೌತಮ ಬುದ್ಧ ಪೂರ್ಣಿಮೆ ಶುಭಾಶಯಗಳು
3. ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ನೋಡಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ. -ಗೌತಮ ಬುದ್ಧಬುದ್ಧ ಪೌರ್ಣಿಮ ಶುಭಾಶಯಗಳು
4. ಪ್ರತಿ ಮನುಷ್ಯ ತನ್ನ ಮತ್ತು ಅನಾರೋಗ್ಯದ ಲೇಖಕನಾಗಿರುತ್ತಾನೆ. -ಗೌತಮ ಬುದ್ಧಬುದ್ಧ ಪೌರ್ಣಿಮ ಶುಭಾಶಯಗಳ
5. ನೀವು ಮೌನವಾಗಿದ್ದರೆ ಹೆಚ್ಚಾಗಿ ಕೇಳಿಸಿಕೊಳ್ಳಬಹುದು. -ಗೌತಮ ಬುದ್ಧಬುದ್ಧ ಪೌರ್ಣಿಮ ಶುಭಾಶಯಗಳು
6. ಕೋಪವನ್ನು ಹಿಡಿದಿಟ್ಟುಕೊಳ್ಳುವುದು ಒಂಥರಾ ನಾವು ವಿಷ ಕುಡಿದು ಬೇರೆಯವರು ಸಾಯಲಿ ಎಂದು ನಿರೀಕ್ಷೆ ಮಾಡಿದಂತೆ. -ಗೌತಮ ಬುದ್ಧ
7. ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಎಂದಿಗೂ ಇತರರಿಗೆ ತೊಂದರೆ ಕೊಡಲಾರ. -ಗೌತಮ ಬುದ್ಧ
8. ಯಾರ ಮನಸ್ಸಿನಲ್ಲಿ ತಾನೇ ಎಂಬ ಅಹಂ ಇರುತ್ತದೆಯೋ ಅವರಿಗೆ ತನ್ನ ತಪ್ಪಿನ ಅರಿವೇ ಆಗುವುದಿಲ್ಲ. -ಗೌತಮ ಬುದ್ಧ
9. ನಿಮ್ಮ ಬಳಿ ಏನಿದೆಯೋ ಅದಕ್ಕೆ ಸಂತೋಷಪಡಿ ಹಾಗೂ ಅದನ್ನು ಎಂದಿಗೂ ಗೌರವಿಸಿ, ಏಕೆಂದರೆ ಕೆಲವರ ಬಳಿ ಏನೂ ಇರುವುದಿಲ್ಲ. -ಗೌತಮ ಬುದ್ಧ ಬುದ್ಧ ಪೌರ್ಣಿಮ ಶುಭಾಶಯಗಳು
10. ನಿಮ್ಮ ಕೋಪ ನಿಮಗೆ ಶಿಕ್ಷೆಯಾಗುವುದಿಲ್ಲ, ನಿಮ್ಮ ಕೋಪದಿಂದ ನಿಮಗೆ ಶಿಕ್ಷೆಯಾಗುತ್ತದೆ. -ಗೌತಮ ಬುದ್ಧ
11. ನಿಮ್ಮ ಅತಿ ಕೆಟ್ಟ ಶತ್ರು ಸಹ ನಿಮ್ಮ ಸ್ವಂತ ಅಸುರಕ್ಷಿತ ಆಲೋಚನೆಗಳಂತೆ ನಿಮಗೆ ಹಾನಿ ಮಾಡಲು ಸಾಧ್ಯವಿಲ್ಲ. -ಗೌತಮ ಬುದ್ಧ
12. ತನ್ನನ್ನು ಗೆಲ್ಲುವುದು ಇತರರನ್ನು ಗೆಲ್ಲುವುದಕ್ಕಿಂತ ದೊಡ್ಡ ಸವಾಲು. -ಗೌತಮ ಬುದ್ಧ
ಬುದ್ಧ ಪೌರ್ಣಿಮ ಶುಭಾಶಯಗಳು
13. ಜಗತ್ತಿನ ಅತಿ ದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ. -ಗೌತಮ ಬುದ್ಧ.
ಬುದ್ಧ ಪೌರ್ಣಿಮ ಶುಭಾಶಯಗಳು
14. ಆಸೆಗಳಿಗಾಗಿ ಬದುಕಲ್ಲ, ಆದರ್ಶಗಳಿಗಾಗಿ ಬದುಕು. ದೀರ್ಘ ಜೀವನ ಮುಖ್ಯವಲ್ಲ, ದಿವ್ಯ ಜೀವನ ನಡೆಸಬೇಕು. -ಗೌತಮ ಬುದ್ಧ
ಬುದ್ಧ ಪೌರ್ಣಿಮ ಶುಭಾಶಯಗಳು
15. ಧ್ಯಾನ ಹೆಚ್ಚಾದಂತೆ ಜ್ಞಾನ ಹೆಚ್ಚಾಗುವುದು, ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುವುದು. -ಗೌತಮ ಬುದ್ಧ
ಬುದ್ಧ ಪೌರ್ಣಿಮ ಶುಭಾಶಯಗಳು



Click it and Unblock the Notifications













