Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಶಾಲಾ ವ್ಯವಸ್ಥೆಯ ಬಗ್ಗೆ ಗುಜರಾತಿ ಬಾಲಕಿಯ ಕೋಪ, ಸಕತ್ ಮಜಾ ನೀಡುವ ಈ ವೀಡಿಯೋ ವೈರಲ್
ರಜಾ ದಿನಗಳಲ್ಲಿ ಸೂರ್ಯ ಹುಟ್ಟುವ ಮುನ್ನ ಎದ್ದು ಆಟ ಆಡಲು ಶುರು ಮಾಡುವ ಮಕ್ಕಳು, ಶಾಲೆ ಇರುವ ದಿನ ಮಾತ್ರ ಗಟ್ಟಿ ನಿದ್ದೆ ಮಾಡುತ್ತವೆ. ಶಾಲೆ ವ್ಯಾನ್ ಬರುವುದಕ್ಕೆ ಹೊತ್ತಾಯಿತು ಎಂದು ಅವರನ್ನು ಎಬ್ಬಿಸಲು ಹೋದರೆ ಅಮ್ಮಾ... ಫೈವ್ ಮಿನಿಟ್ ಪ್ಲೀಸ್...ಎಂದು ಹೇಳಿ ಮಗ್ಗುಲು ಬದಲಾಯಿಸುತ್ತವೆ.

ಅವರನ್ನು ಎಬ್ಬಿಸಿ, ಬ್ರೆಷ್ ಮಾಡಲು ಹೇಳಿ, ಸ್ನಾನ ಮಾಡಿಸಿ ಬರುವಷ್ಟರಲ್ಲಿ ಶಾಲೆ ವ್ಯಾನ್ ಬರುವ ಹೊತ್ತಾಗಿ ಬಿಟ್ಟಿರುತ್ತದೆ, ತಿಂಡಿ ತಿಂದಿರುವುದಿಲ್ಲ, ತಿಂಡಿ ತಿನ್ನಲು ಕೊಟ್ಟರೆ ಅದನ್ನು ಬಾಯಿಗೆ ಹಾಕುವುದೇ ಕಷ್ಟದ ಕೆಲಸ ಎಂಬಂತೆ ಕೂತಿರುತ್ತವೆ, ಅವರ ಕೈಯಿಂದ ಆ ತಿಂಡಿ ತಗೊಂಡು ಬಾಯಿಗೆ ತುರುಕಿ, ಬಿಸಿ ಬಿಸಿ ಹಾಲನ್ನು ಕುಡಿಸುತ್ತಿರುವಾಗ ವ್ಯಾನ್ ಬಂದಿರುತ್ತದೆ, ಅವರ ಲಂಚ್ ಬಾಕ್ಸ್ ತುರುಕಿ, ಶಾಲೆಗೆ ಹೋಗಲು ಮನಸ್ಸಿಲ್ಲದ ಅವರನ್ನು ಎಳೆದುಕೊಂಡು ಹೋಗಿ ವ್ಯಾನ್ ಹತ್ತಿಸಿ ವಾಪಾಸ್ ಬರುವಷ್ಟರಲ್ಲಿ ಅಮ್ಮನಿಗೆ ಮ್ಯಾರಾಥಾನ್ ಓಡಿದಷ್ಟು ಸುಸ್ತಾಗಿ ಬಿಟ್ಟಿರುತ್ತದೆ.
ಆದರೆ ಮಕ್ಕಳಿಗೆ ನಮ್ಮ ಕಷ್ಟ ಕೇಳುವರು ಯಾರು? ಓದಿ-ಓದಿ ಸುಸ್ತಾಗಿದೆ ಯಾವಾಗಪ್ಪಾ ರಜೆ ಸಿಗುವುದು ಎಂದು ಅನಿಸಿ ಬಿಟ್ಟಿರುತ್ತದೆ. ಆದರೆ ಇಲ್ಲೊಂದು ಬಾಲಕಿ ಶಾಲಾ ವ್ಯವಸ್ಥೆ ಹಾಗೂ ಅದನ್ನು ಕಂಡು ಹಿಡಿದವರ ಬಗ್ಗೆ ತನ್ನ ಕೋಪ ಪ್ರಕಟಿಸಿರುವ ಕ್ಯೂಟ್ ವೀಡಿಯೋ ವೈರಲ್ ಆಗಿದೆ.
ಪೊಲೀಸ್ ಆಫೀಸರೊಬ್ಬರು ಈ ವೀಡಿಯೋ ಶೇರ್ ಮಾಡಿದ್ದು, ಈ ಪ್ರಪಂಚದಲ್ಲಿ ಶಾಲೆ ಯಾರು ಪ್ರಾರಂಭಿಸಿದರೋ ಅವರ ಬದುಕು ಅಪಾಯದಲ್ಲಿದೆ, ಈ ಹುಡುಗಿ ಅವರನ್ನು ಹುಡುಕುತ್ತಿದ್ದಾರೆ ಎಂದು ಕ್ಯಾಪ್ಷನ್ ನೀಡಿ ವೀಡಿಯೋ ಶೇರ್ ಮಾಡಿದ್ದಾರೆ.
ದಿನಾ ಬೆಳಗ್ಗೆ ಎದ್ದು ಪಟ್-ಪಟ್ ಅಂತ ರೆಡಿಯಾಗಿ, ಬೇಗ-ಬೇಗನೆ ತಿಂದು, ಬಿಸಿ ಹಾಲನ್ನು ಪಟ್ ಅಂತ ಕುಡಿದು ಶಾಲೆಗೆ ಓಡುವುಸು, ಅಲ್ಲಿ ಓದ ಮೇಲೆ, ಒಂದರ ನಂತರ ಮತ್ತೊಂದು ಎಂಬಂತೆ ಬರುವ ಪಠ್ಯಗಳು ಇವುಗಳಿಂದ ಎಷ್ಟು ಬೇಸತ್ತು ಹೋಗಿದ್ದೇನೆ ಎಂದು ಹೇಳುವ ರೀತಿ ಇದೆಯೆಲ್ಲಾ ಸಕತ್ ಮಜಾವಾಗಿದೆ. ಶಾಲೆ ಎಂದರೆ ಆ ಬಾಲಕಿಗೆ ಎಷ್ಟೊಂದು ಕೋಪವಿದೆ ಎಂಬುವುದನ್ನು ವೀಡಿಯೋ ನೋಡಿದರೆ ತಿಳಿಯುತ್ತದೆ.
ವೀಡಿಯೋದಲ್ಲಿ ಬಾಲಕಿ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಿದ್ದು ನನಗೆ ಚುಟ್‌ಕಾರ (ಶಾಲೆಯಿಂದ ಸ್ವತಂತ್ರ) ಬೇಕಾಗಿದೆ ಎಂದು ಹೇಳುತ್ತಾ ಓದುವ ಒತ್ತಡವನ್ನು ಹೀಗೆ ಹೇಳುತ್ತಾ ಹೋಗುತ್ತಾಳೆ... ಮೊದಲಿಗೆ ಪ್ರಾರ್ಥನೆ, ನಂತರ ಇಂಗ್ಲಿಷ್, ನಂತರ ಗಣಿತ, ನಂತರ ಗುಜರಾತಿ, ಮತ್ತೆ ಜಿಕೆ ಅಂತ ಕೋಪದಿಂದ ಹೇಳುತ್ತಿರುವಾಗ ಮಗುವಿನ ಬಳಿ ಶಾಲೆ ಪ್ರಾರಂಭಿಸಿದವರು ಸಿಕ್ಕರೆ ಏನು ಮಾಡುತ್ತೀಯಾ ಅಂತ ಕೇಳುತ್ತಾರೆ, ಅದಕ್ಕೆ ಆ ಬಾಲಕಿ ಅವರೆಲ್ಲಾದರೂ ಸಿಕ್ಕರೆ ಅವರ ಮೇಲೆ ನೀರು ಎರಚಿ, ಇಸ್ತ್ರಿ ಮಾಡಿ ಬಿಡುತ್ತೇನೆ' ಎಂದು ಹೇಳಿರುವ ವೀಡಿಯೋ ವೈರಲ್ ಆಗಿದ್ದು, ಆ ವೀಡಿಯೋ ನೋಡಿ ಆ ಮಗುವಿಗಿರುವ ಓದುವ ಒತ್ತಡ ನೋಡಿ ಅಯ್ಯೋ... ಪಾಪ! ಅಂತ ಹೇಳುತ್ತಲೇ ನಿಮ್ಮ ಮುಖದಲ್ಲಿ ನಗು ಮೂಡುವುದು ನೋಡಿ.



Click it and Unblock the Notifications
