Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
ಈ ಭೂಮಿಯಲ್ಲಿರುವ ಪ್ರತಿಯೊಬ್ಬರು ಕೂಡ ಭಿನ್ನವೇ, ಒಬ್ಬರಂತೆ ಮತ್ತೊಬ್ಬರ ಸ್ವಭಾವ ಇರುವುದಿಲ್ಲ, ಕೆಲವೊಂದು ಹೋಲಿಕೆಗಳಿರಬಹುದು. ನಾವು ಜನಿಸಿದ ತಿಂಗಳಿಗೆ ತಕ್ಕಂತೆ ನಮ್ಮ ಗುಣದಲ್ಲಿ ಕೆಲವೊಂದು ವೈಶಿಷ್ಠ್ಯತೆಗಳನ್ನು ಹೊಂದಿರುತ್ತೇವೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.

ನಾವಿಲ್ಲಿ ಫೆಬ್ರವರಿಯಲ್ಲಿ ಜನಿಸಿದವರಲ್ಲಿ ಕಂಡು ಬರುವ ಕೆಲವೊಂದು ಆಸಕ್ತಿಕರ ಗುಣಗಳನ್ನು ಹೊಂದಿದೆ:

ಫೆಬ್ರವರಿಯಲ್ಲಿ ಜನಿಸಿದವರು ಪ್ರಸಿದ್ಧಿಯನ್ನು ಹೊಂದುತ್ತಾರೆ
ಫೆಬ್ರವರಿಯಲ್ಲಿ ಜನಿಸಿದವರು ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಜನಿಸುತ್ತಾರೆ ಎಂದು ಹೇಳಲಾಗುವುದು. ಇವರು ಸ್ವಾಭಾವಿಕವಾಗಿ ಅನುಕೂಲಸ್ಥರಾಗಿರುತ್ತಾರೆ. ಇವರು ಬೇಗನೆ ಇತರರ ಗಮನವನ್ನು ಸೆಳೆಯುತ್ತಾರೆ. ಇವರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ.ತಾವು ಯಾವ ವೃತ್ತಿ ಮಾಡುತ್ತಾರೋ ಅದರಲ್ಲಿ ಗಮನ ಸೆಳೆಯುತ್ತಾರೆ.

ತುಂಬಾ ನೇರ ಸ್ವಭಾವದವರು
ಫೆಬ್ರವರಿಯಲ್ಲಿ ಜನಿಸಿದವರು ತುಂಬಾ ನೇರ ಸ್ವಭಾವದವರು ಎಂದು ಹೇಳಲಾಗುವುದು. ಇವರು ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ ಮಾತನಾಡಲ್ಲ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಅವರು ತಮಗೆ ಸರಿ ಅನಿಸಿದ್ದನ್ನು ಮಾಡುತ್ತಾರೆ, ಅಲ್ಲದೆ ತಮಗೆ ನೋಯಿಸಿದವರನ್ನು ಅವರು ಕ್ಷಮಿಸುವುದಿಲ್ಲ.
ಇವರು ಸಂಬಂಧದಲ್ಲಿ ತುಂಬಾ ನಿಯತ್ತಿನಿಂದ ಇರುತ್ತಾರೆ. ಇವರು ಮೋಸ ಮಾಡುವುದಿಲ್ಲ. ತಮ್ಮನ್ನು ಪ್ರೀತಿಸಿದವರಿಗೆ ಸದಾ ಒಳಿತನ್ನು ಮಾಡಲು ಪ್ರಯತ್ನಿಸುತ್ತಾರೆ. ತಾವು ಪ್ರೀತಿಸುತ್ತಿರುವವರನ್ನು ಖುಷಿಯಾಗಿಡಲು ಸದಾ ಪ್ರಯತ್ನಿಸುತ್ತಾರೆ.

ಸ್ವಲ್ಪ ವಿಚಿತ್ರ ಅನಿಸುತ್ತಾರೆ
ಫೆಬ್ರವರಿಯಲ್ಲಿ ಜನಿಸಿದವರು ಸ್ವಲ್ಪ ವಿಚಿತ್ರ ಅನಿಸುತ್ತಾರೆ, ಅವರು ತಮ್ಮ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ, ರಹಸ್ಯ ಕಾಪಾಡುವುದರಲ್ಲಿ ಎತ್ತಿದ ಕೈ. ತುಂಬಾ ಕ್ಲೋಸ್ ಇದ್ದರೂ ಕೂಡ ಇವರು ಎಲ್ಲಾ ವಿಷಯಗಳನ್ನು ಹೇಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಸ್ವಭಾವ ಕೆಲವೊಮ್ಮೆ ಒಳ್ಳೆಯದು ಅನಿಸಿದರೂ ಇನ್ನು ಕೆಲವೊಮ್ಮೆ ಕೆಟ್ಟದು ಅನಿಸುವುದು, ನಾವು ಇಷ್ಟು ಕ್ಲೋಸ್ ಇದ್ದರೂ ನಮಗೆ ಏನೂ ಹೇಳಲ್ಲ ಅಲ್ವಾ ಎಂದನಿಸುವಷ್ಟು ವಿಚಿತ್ರ ಸ್ವಭಾವದವರು.
ಕೆಲವೊಮ್ಮೆ ಅವರು ನಿಮಗೆ ಓಪನ್ ಬುಕ್‌ನಂಗತೆ ಅನಿಸಬಹುದು, ಆದರೂ ಕೆಲವೊಂದು ರಹಸ್ಯಗಳನ್ನು ನಿಮ್ಮಿಂದ ಮುಚ್ಚಿಡುವವರೇ ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದವರು.

ತುಂಬಾನೇ ಕ್ರಿಯೇಟಿವ್ ಸ್ವಭಾವದವರು
ಇವರು ತುಂಬಾ ಕ್ರಿಯೇಟಿವ್ ಸ್ವಭಾವದವರು. ಹೊಸದನ್ನು ಕಲಿಯಲು ತುಂಬಾ ಆಸಕ್ತಿ ತೋರಿಸುತ್ತಾರೆ. ಅವರು ಯಾವುದೇ ಕೆಲಸ ಮಾಡಲಿ ತುಂಬಾ ಕ್ರಿಯೇಟಿವ್ ಆಗಿ ತೊಡಗಿಕೊಳ್ಳುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಆರ್ಟಿಸ್ಟ್, ಫೋಟೋಗ್ರಾಫರ್, ಕ್ರಿಯೇಟಿವ್ ಡಿಸೈನರ್, ಉದ್ಯಮಿಗಳು, ವಿಜ್ಞಾನಿಗಳು ಈ ರೀತಿಯ ಕ್ರಿಯೇಟಿವ್ ಕ್ಷೇತ್ರದಲ್ಲಿದ್ದರೆ ತುಂಬಾನೇ ಬೆಳೆಯುತ್ತಾರೆ.

ಬೇಗನೆ ಕಾಯಲೆ ಬೀಳುತ್ತಾರೆ
ಯಾರು ಫೆಬ್ರವರಿಯಲ್ಲಿ ಜನಿಸುತ್ತಾರೋ ಅವರು ಕಾಯಿಲೆ ಬೀಳುವುದು ಅಧಿಕ. ಈ ತಿಂಗಳಿನಲ್ಲಿ ಜನಿಸಿದವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆಗಾಗ ಕಾಯಿಲೆ ಬೀಳುತ್ತಿರುತ್ತಾರೆ, ಈ ತಿಂಗಳಿನಲ್ಲಿ ಜನಿಸಿದವರು ಆರೋಗ್ಯದ ಬಗ್ಗೆ ತುಂಬಾನೇ ಗಮನ ನೀಡಬೇಕು. ಇವರಿಗೆ ನರಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು ಕಡಿಮೆ ಆದರೆ ಇವರಿಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ
ಫೆಬ್ರವರಿಯಲ್ಲಿ ಜನಿಸಿದವರು ಬೇರೆಯವರ ಕಷ್ಟಕ್ಕೆ ಬೇಗನೆ ಮರಗುತ್ತಾರೆ. ಇವರಿಗೆ ಮನುಷ್ಯತ್ವ ತುಂಬಾನೇ ಜಾಸ್ತಿ, ಬೇರೆಯವರ ಕಷ್ಟಕ್ಕೆ ಸುಲಭವಾಗಿ ಮರಗುತ್ತಾರೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಗ್ಯತವಿರುವವರಿಗೆ ತಮ್ಮಿಂದ ಆಗುವ ಸಹಾಯ ಮಾಡುತ್ತಾರೆ.

ಫೆಬ್ರವರಿ 29ಕ್ಕೆ ಜನಿಸಿದ್ದರೆ
ಇನ್ನು ಫೆಬ್ರವರಿ 29ಕ್ಕೆ ಜನಿಸಿದರೆ 4 ವರ್ಷಗಳಿಗೊಮ್ಮೆ ಅವರಿಗೆ ತಮ್ಮ ಜನ್ಮ ದಿನಾಂಕದಂದು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಅವಕಾಶ ಸಿಗುತ್ತದೆ. 12 ತಿಂಗಳಿನಲ್ಲಿ ಅಧಿಕ ಕಡಿಮೆ ದಿನಾಂಕಗಳನ್ನು ಹೊಂದಿರುವ ತಿಂಗಳೆಂದರೆ ಅದು ಫೆಬ್ರವರಿ. ಈ ತಿಂಗಳಿನಲ್ಲಿ ಬರೀ 28 ದಿನಗಳು ಮಾತ್ರ, ನಾಲ್ಕು ವರ್ಷಕ್ಕೊಮ್ಮೆ ಒಂದು ದಿನಕ ಅಧಿಕ ಬರುತ್ತದೆ.
ಇವರಿಗೆ ವಿಲ್ ಪವರ್ ಜಾಸ್ತಿ
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರಿಗೆ ವಿಲ್ ಪವರ್ ಜಾಸ್ತಿ. ಇವರು ಅಂದುಕೊಂಡಿದ್ದನ್ನು ಸಾಧಿಸುವವರಿಗೆ ತಮ್ಮ ಛಲ ಬಿಡುವುದಿಲ್ಲ. ತಾವು ಅಂದುಕೊಂಡಿದ್ದನ್ನು ಸಾಧಿಸಲು ಎಷ್ಟು ಕಷ್ಟವಾದರೂ ಸರಿ, ಎಷ್ಟು ಸಮಯ ತೆಗೆದುಕೊಂಡರೂ ಸರಿ ತಮ್ಮ ಗುರಿ ತಲುಪುವವರಿಗೆ ಪ್ರಯ



Click it and Unblock the Notifications











