Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೀರಿಹೋದ ಅಪ್ಪ ಪದೇ ಪದೇ ಕನಸಿನಲ್ಲಿ ಬಂದರೆ ಏನು ಅರ್ಥ? ಈ ಸೂಚನೆವಿರಬಹುದು
"ಅಪ್ಪ ಎಂದರೆ ಆಕಾಶ" ಅಪ್ಪನ ಜಾಗವನ್ನು ತುಂಬೋದಕ್ಕೆ ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಅದ್ರಲ್ಲೂ ಅಪ್ಪನನ್ನು ಕಳೆದುಕೊಂಡ ನೋವು ಬದುಕಿರುವವರೆಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ತೀರಿ ಹೋದ ಅಪ್ಪ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ರಾತ್ರಿ ಅಪ್ಪನನ್ನು ನೆನೆದು ಒಮ್ಮೆಲೆ ಬೆಚ್ಚಿ ಬೀಳ್ತಿದ್ದೀರಾ? ಹಾಗಾದ್ರೆ ತೀರಿಕೊಂಡ ಅಪ್ಪ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವುದಕ್ಕು ಒಂದು ಬಲವಾದ ಕಾರಣವಿದೆ.

ನಮಗೆ ಕಾಣೋ ಪ್ರತಿಯೊಂದು ಕನಸಿನ ಬಗ್ಗೆನೂ ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಸ್ವಪ್ನ ಶಾಸ್ತ್ರ ಇಂತಹ ಕನಸುಗಳ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ಹೇಳ್ತಿವಿ.

1. ನಿಮ್ಮ ಮೃತ ತಂದೆಗೆ ಬಗೆಹರಿಯದ ಸಮಸ್ಯೆ ಇದೆ.
ತೀರಿಕೊಂಡ ನಿಮ್ಮ ಅಪ್ಪ ಪದೇ ಪದೇ ಕನಸಿನಲ್ಲಿ ಬರುತ್ತಿದ್ದಾರೆ ಅಂದರೆ ಇದಕ್ಕೆ ಕಾರಣ ಬದುಕಿದ್ದಾಗ ಅವರು ಒಂದು ಸಮಸ್ಯೆ ಸಿಲುಕಿಕೊಂಡಿದ್ರು ಅಥವಾ ಏನನ್ನೋ ಮಾಡಬೇಕು ಅಂದು ಕೊಂಡಿರ್ಬೇಕು. ಆದರೆ ಅದು ಈಡೇರಲಿಲ್ಲ ಹೀಗಾಗಿ ನಿಮ್ಮ ಮೂಲಕ ಅದನ್ನು ಪೂರೈಸಲು ಇಚ್ಚಿಸುತ್ತಿದ್ದಾರೆ. ಈಗ ಅವರು ಮನಶಾಂತಿ ಇಲ್ಲದೆ ಅಲೆಯುತ್ತಿದ್ದಾರೆ ಎಂದರ್ಥ. ಆದ್ರೆ ಅವರ ಸಮಸ್ಯೆ ಏನು ಅನ್ನೋದನ್ನ ತಿಳಿದುಕೊಳ್ಳಲು ನಿಮಗೆ ಕಷ್ಟ ಆಗಬಹುದು. ಆಗ ನೀವು ಅಪ್ಪನನ್ನ ನೆನೆದು ಭಕ್ತಿಯಿಂದ ಆ ಸಮಸ್ಯೆ ಯಾವುದು ಮತ್ತು ಅದಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಿ.

2. ಅನಾರೋಗ್ಯದ ಬಗ್ಗೆ ಸೂಚನೆ
ಸತ್ತು ಹೋದ ತಂದೆಯ ಜೊತೆಗೆ ನೀವು ಕನಸಿನಲ್ಲಿ ಮಾತನಾಡುತ್ತಿದ್ದೀರಿ ಎಂದರೆ ಇದರರ್ಥ ನಿಮಗೆ ಸದ್ಯದಲ್ಲೇ ಅನಾರೋಗ್ಯ ಕಾಡಲಿದೆ ಎಂಬ ಸೂಚನೆಯಿದು. ಹೀಗಾಗಿ ಹೊರಗಡೆ ಹೋಗುವಾಗ ಮುಂಜಾಗೃತೆಯಿಂದಿರಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿ. ಇನ್ನೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅತಿಯಾದ ಆತ್ಮವಿಶ್ವಾಸ ಬೇಡ. ಇತರರ ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆಇಡಿ.

3. ಶುಭ ಸೂಚನೆಯ ಸಂಕೇತ
ಅಪ್ಪ ನಿಮ್ಮ ಕನಸಿನಲ್ಲಿ ಜೀವಂತವಾಗಿದ್ದಂತೆ ಭಾಸವಾದರೆ ಖಂಡಿತ ಇದು ಶುಭ ಸೂಚನೆ. ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿದೆ ಮತ್ತು ನೀವು ಅಂದುಕೊಂಡ ಗುರಿ ಈಡೇರುತ್ತದೆ ಎಂದರ್ಥ. ಒಂದು ವೇಳೆ ಕನಸಿನಲ್ಲಿ ಅಪ್ಪ ನಿಮ್ಮನ್ನು ತಪ್ಪಿಕೊಂಡರೆ ಇತರರಿಂದ ಸಹಾಯವನ್ನು ಪಡೆಯಿರಿ ಎಂಬ ಸೂಚನೆ.

4. ನಿಮ್ಮವರೊಂದಿಗೆ ಜಗಳವಾಗುತ್ತದೆ
ಸತ್ತು ಹೋಗಿರುವ ತಂದೆಯ ದೇಹ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ನಿಮಗೆ ಹತ್ತಿರವಾದವರೊಂದಿಗೆ ಜಗಳವಾಡುತ್ತೀರಿ ಎಂದರ್ಥ. ಅದು ನಮ್ಮ ತಾಯಿ, ಸಂಗಾತಿ, ಅಥವಾ ಪ್ರಾಣಸ್ನೇಹಿತನೇ ಆಗಿರಬಹುದು. ಇದರಿಂದ ನಿಮಗೆ ಸಮಸ್ಯೆ ಉಂಟಾಗಲಿದೆ ಎಂಬ ಸೂಚನೆಯಿದು.

5. ಶಾಂತಿಯನ್ನು ಕಾಪಾಡಲು ಸೂಚನೆ
ನಿಮ್ಮ ಕನಸಿನಲ್ಲಿ ಸತ್ತು ಹೋಗಿರುವ ತಂದೆ ಮನೆಗೆ ಬಂದಂತೆ ಕನಸು ಬಿದ್ದರೆ ಅವರು ನಿಮಗೆ ಕ್ಷಮೆಯನ್ನು ಯಾಚಿಸಿ ಮತ್ತು ಶಾಂತಿಯಿಂದ ಇರಿ ಎಂದು ಹೇಳುತ್ತಿದ್ದಾರೆ. ನಿಮ್ಮ ಗರ್ವವನ್ನು ಕಡಿಮೆಗೊಳಿಸಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸುತ್ತಿದ್ದಾರೆ.

6. ನಿಮ್ಮ ಸ್ನೇಹ ದೀರ್ಘವಾಗಿರಲಿದೆ
ಈಗಾಗಲೇ ಸತ್ತು ಹೋಗಿರುವ ತಂದೆ ಮತ್ತೆ ನಿಮ್ಮ ಕನಸಿನಲ್ಲಿ ಸತ್ತರೆ ಇದು ಅಶುಭದ ಸೂಚನೆಯಲ್ಲ. ಬದಲಿಗೆ ದೀರ್ಘಾಯುಷ್ಯ, ಸಾಮರಸ್ಯ ಮತ್ತು ಆಶಾವಾದದ ಸೂಚನೆಯಾಗಿದೆ. ಇದು ನಿಮ್ಮ ಜೊತೆಗಿರುವವರೊಂದಿಗೆ ಗಟ್ಟಿಯಾದ ಸ್ನೇಹ ಸಂಬಂಧವನ್ನು ಹೊಂದುತ್ತೀರಿ ಎಂಬ ಶುಭ ಸೂಚನೆಯಾಗಿದೆ.

7. ಸರಿ ತಪ್ಪನ್ನು ಗುರುತಿಸಲಾಗದೆ ಒದ್ದಾಡುತ್ತಿದ್ದೀರಿ
ಸತ್ತು ಹೋದ ತಂದೆ ನಿಮಗೆ ಆತ್ಮಸಾಕ್ಷಿಯ ಬಗ್ಗೆ ನೆನಪಿಸುತ್ತಿದ್ದರೆ ಖಂಡಿತ ನೀವು ಸರಿತಪ್ಪುಗಳನ್ನು ಗುರುತಿಸಲಾಗದೆ ಒದ್ದಾಡುತ್ತಿದ್ದೀರಿ ಎಂದರ್ಥ. ಅಪ್ಪನು ನಮ್ಮ ತಪ್ಪು-ಸರಿಗಳನ್ನು ಗುರುತಿಸುವ ಮೊದಲ ಗುರು ಇದ್ದಂತೆ. ತಪ್ಪಾದಾಗ ತಿದ್ದಿ ನಡೆಯುವಂತೆ ಬುದ್ಧಿ ಹೇಳುತ್ತಾರೆ. ಇದಿಷ್ಟೇ ಅಲ್ಲ, ನಾವು ತೊಂದರೆಯಲ್ಲಿದ್ದಾಗ ನಮ್ಮ ರಕ್ಷಣೆ ಮಾಡುತ್ತಾರೆ. ಒಂದು ವೇಳೆ ನಮ್ಮ ನಿರ್ಧಾರದಿಂದ ನಮಗೆ ತೊಂದರೆ ಆಗುತ್ತೇ ಅಂದಾಗ ಎಚ್ಚರಿಸುತ್ತಾರೆ.

8. ಬದುಕಿದ್ದಾಗ ತಂದೆಯ ಬಳಿ ಹೇಳದಿರುವ ವಿಚಾರ
ತಂದೆ ಬದುಕಿದ್ದಾಗ ನೀವು ಏನನ್ನೋ ಹೇಳಬೇಕು ಅಂದುಕೊಂಡಿದ್ರಿ ಆದ್ರೆ ಆ ಮಾತನ್ನು ಹೇಳಲು ಸಾಧ್ಯವಾಗಿಲ್ಲ. ಹಾಗಾಗಿ ಪಶ್ವಾತಾಪ, ಅಪರಾಧಭಾವ ನಿಮ್ಮನ್ನು ಕಾಡುತ್ತಿರಬಹದು. ಇಂತಹ ಸಂದರ್ಭದಲ್ಲಿ ತಂದೆ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.

9. ನಿಮ್ಮ ಬಗ್ಗೆ ಬೇಸರಗೊಂಡಿದ್ದಾಗ
ಸತ್ತ ತಂದೆಯು ಕನಸಿನಲ್ಲಿ ಬರಲು ಇದು ಒಂದು ಕಾರಣ. ಜೀವನದಲ್ಲಿ ನೀವು ನೊಂದುಕೊಂಡಿದ್ದು, ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಒಳಗೊಳಗೆ ಬೇಸರ ಪಟ್ಟುಕೊಂಡಾಗ ಅಪ್ಪ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತು ದೈರ್ಯ ತುಂಬುತ್ತಾರೆ.

10. ಬೇರೆಯವರು ನಿಮ್ಮ ಮೇಲೆ ಅಧಿಕಾರ ಚಲಾಯಿಸಿದಾಗ
ಕೆಲಸದ ಜಾಗದಲ್ಲಿ ಅಥವಾ ಶಾಲಾ-ಕಾಲೇಜಿನಲ್ಲಿ ನಿಮ್ಮ ಮೇಲೆ ಯಾರಾದರೂ ಅಧಿಕಾರ ಚಲಾಯಿಸುತ್ತಿದ್ದರೆ ಅಥವಾ ನಿಮ್ಮನ್ನು ಟೀಕಿಸುತ್ತಿದ್ದಾಗ ತಂದೆ ಕನಸಿನಲ್ಲಿ ಬರುತ್ತಾರೆ. ಇದು ಏನನ್ನು ಸೂಚಿಸುತ್ತಿದೆ ಎಂದರೆ ಆ ವ್ಯಕ್ತಿ ನಿಮ್ಮ ಮೇಲೆ ಪ್ರಾಬಲ್ಯ ಚಲಾಯಿಸಲು ಯತ್ನಿಸುತ್ತಿದ್ದಾನೆ ಹಾಗೂ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತಿದ್ದಾನೆ ಎಚ್ಚೆತ್ತುಕೊಳ್ಳಿ ಎಂದರ್ಥ.
ಸತ್ತ ತಂದೆ ಕನಸಿನಲ್ಲಿ ಬರುತ್ತಿದ್ದಾರೆ ಅಂದರೆ ಅದು ಒಳ್ಳೆಯದೇ ನಮ್ಮ ಹಿತಕ್ಕಾಗಿ, ನಮ್ಮ ರಕ್ಷಣೆಗಾಗಿ ಸೂಚನೆಯನ್ನು ನೀಡುತ್ತಿದ್ದಾರೆ. ಇಂತಹ ಸೂಚನೆಯನ್ನು ಧನಾತ್ಮಕವಾಗಿ ಸ್ವೀಕರಿಸಿ ಜೀವನದಲ್ಲಿ ಮುನ್ನಡೆಯಿರಿ.



Click it and Unblock the Notifications