Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಹಣದ ಕನಸ್ಸು ಬಿದ್ದರೆ ಅದು ಏನನ್ನು ಸೂಚಿಸುತ್ತೆ ಗೊತ್ತಾ?
ಗಾಢ ನಿದ್ದೆಗೆ ಜಾರಿದಾಗ ಸ್ವಪ್ನಗಳು ಬೀಳುತ್ತವೆ, ಕೆಲವೊಂದು ಸ್ವಪ್ನ ಎಷ್ಟು ಚೆನ್ನಾಗಿರುತ್ತದೆ ಅಂದ್ರೆ ಎಚ್ಚರವಾದಾಗ ಛೇ... ಒಳ್ಳೆಯ ಸ್ವಪ್ನ ಹಾಳಾಯ್ತು ಎಂದನಿಸುವುದು...ಅದೇ ಕಲವೊಮ್ಮೆ ಬೀಳುವ ಸ್ವಪ್ನ ನಮಲ್ಲಿ ಆತಂಕ ಉಂಟು ಮಾಡುತ್ತೆ, ಅಂಥ ದುಃಸ್ವಪ್ನ ಏತಕ್ಕಾಗಿ ಬಿತ್ತೋ, ಅದರ ಅರ್ಥವೇನಿರಬಹುದು ಎಂದೆಲ್ಲಾ ಮನಸ್ಸಿನಲ್ಲಿ ಭಯ ಮೂಡುತ್ತೆ. ಹಾಗಾಗಿ ನಾವು ಎಷ್ಟೋ ಸ್ವಪ್ನಗಳ ಅರ್ಥ ತಿಳಿಯಲು ಬಯಸುತ್ತೇವೆ ಅಲ್ವಾ?

ನಾವಿಲ್ಲಿ ಕನಸ್ಸಿನಲ್ಲಿ ಹಣ ಕಂಡರೆ ಏನರ್ಥ? ಹಣದ ಕನಸ್ಸು ಬಿದ್ದರೆ ಒಳ್ಳೆಯದೇ? ಅದರ ಹಿಂದಿನ ಅರ್ಥವೇನು ಎಂದು ನೋಡೋಣ ಬನ್ನಿ:

ಸ್ವಪ್ನದಲ್ಲಿ ಹಣ ಬಂದರೆ ಏನರ್ಥ?
ಕನಸ್ಸಿನಲ್ಲಿ ಹಣ ಕಾಣಿಸಿದರೆ ಮುಂಬರುವ ಪರಿಸ್ಥಿತಿಯನ್ನು ಹೇಳುತ್ತದೆ ಎಂದು ಹೇಳಾಗುವುದು. ಕನಸ್ಸಿನಲ್ಲಿ ಹಣ ಬಂದರೆ ಮುಂಬರುವ ಸಂಪತ್ತಿನ ಸೂಚಕವಾಗಿದೆ ಎಂದು ಹೇಳಲಾಗುವುದು ಅಥವಾ ಹಣ ಗಳಿಸಬೇಕೆಂಬ ನಿಮ್ಮ ಬಲವಾದ ಆಸೆ ನೆರವೇರುವುದು ಎಂದು ಹೇಳಲಾಗುವುದು,ಆದರೆ ಕೆಲವೊಮ್ಮೆ ಹಣ ಆರ್ಥಿಕವಾಗಿ ಸಂಕಟ ಎದುರಾಗಲಿದೆ ಎಂಬುವುದನ್ನೂ ಸೂಚಿಸುತ್ತದೆ.

ಕನಸ್ಸಿನಲ್ಲಿ ಹಣ ಸ್ವೀಕರಿಸುವಂತೆ ಕಂಡರೆ ಏನರ್ಥ?
ಕನಸ್ಸಿನಲ್ಲಿ ಹಣ ಸ್ವೀಕರಿಸುವಂತೆ ಕಂಡರೆ ನಿಮಗೆ ಸಂಪತ್ತು ಬರಲಿದೆ ಎಂದರ್ಥ. ನಿಮಗೆ ಸಂಪತ್ತು, ಪ್ರೀತಿ, ಜ್ಞಾನ, ಗೌರವ ಸಿಗಲಿದೆ ಎಂಬುವುದರ ಸೂಚನೆಯಂತೆ.

ಇನ್ನು ಕನಸ್ಸಿನಲ್ಲಿ ಹಣ ಬರುವುದು ಮತ್ತೊಂದು ಅರ್ಥವನ್ನು ಸೂಚಿಸುವುದಂತೆ
ನಿಮ್ಮ ಬದುಕಿನಲ್ಲಿ ಬೇರೆಯವರ ಸಹಾಯದ ಅಶ್ಯಕತೆ ಇರುವಾಗ , ಅದನ್ನು ನಮ್ಮ ಸುಪ್ತ ಮನಸ್ಸು ಬಯಸಿದಾಗ, ನಮ್ಮ ವೃತ್ತಿ ಜೀವನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಈ ರೀತಿ ಕನಸ್ಸು ಬೀಳುವುದಂತೆ.
ಕನಸ್ಸಿನಲ್ಲಿ ಹಣ ಪಡೆಯುವಂತೆ ಕಂಡರೆ ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಸೂಕ್ತ ವ್ಯಕ್ತಿಯಿಂದ ಸಲಹೆ ಪಡೆಯಿರಿ.

ಕನಸ್ಸಿನಲ್ಲಿ ನಾಣ್ಯ ಕಂಡರೆ
ಹಣವನ್ನು ಪಡೆಯುವುದಕ್ಕೂ, ಕನಸ್ಸಿನಲ್ಲಿ ನಾಣ್ಯಗಳ ಕನಸ್ಸು ಬೀಳುವುದಕ್ಕೂ ವ್ಯತ್ಯಾಸವಿದೆಯಂತೆ. ಕನಸ್ಸಿನಲ್ಲಿ ನಾಣ್ಯ ಸ್ವೀಕರಿಸಿದಂತೆ ಕಂಡರೆ ಲೈಫ್‌ನಲ್ಲಿ ಬರ್ಡನ್ ಹೆಚ್ಚಾಗುವುದು ಎಂದರ್ಥವಂತೆ, ಅಲ್ಲದೆ ನಿಮ್ಮ ಪ್ರಯತ್ನದಲ್ಲಿ ಸಕ್ಸಸ್ ಕಾಣುವುದು ಕಷ್ಟ ಇದರಿಂದ ತುಂಬಾ ಮಾನಸಿಕ ಒತ್ತಡ ಉಂಟಾಗುವುದು ಎಂಬುವುದನ್ನು ಸೂಚಿಸುತ್ತದೆ.

ಕನಸ್ಸಿನಲ್ಲಿ ಹಣ ಪಡೆಯುವಂತೆ ಕಂಡರೆ ಬೈಬಲ್ ಅರ್ಥ
ಬೈಬಲ್‌ನಲ್ಲಿ ಹಣ ಒಳ್ಳೆಯದೂ ಅಂತನೂ ಹೇಳಿಲ್ಲ, ಕೆಟ್ಟದೂ ಅಂತನೂ ಹೇಳಿಲ್ಲ. ಹಣವನ್ನು ಹೇಗೆ ಬಳಸಿಕೊಳ್ಳುತ್ತಾರೋ ಅದರಂತೆ ಹಣ ಒಳ್ಳೆಯದೋ, ಕೆಟ್ಟದೋ ಎಂದು ಹೇಳಲಾಗುತ್ತಿದೆ.
ನಿಮಗೆ ಹಣದ ಸ್ವೀಕರಿಸುವ ಕನಸ್ಸು ಬಿದ್ದರೆ ನಿಮ್ಮಲ್ಲಿ ನೀವು ಈ ಪ್ರಶ್ನೆ ಕೇಳಬೇಕಂತೆ
* ಈ ಹಣ ಬಂದರೆ ನಾನು ಏನು ಮಾಡುತ್ತೇನೆ, ಅದನ್ನು ಹೇಗೆ ಬಳಸಿಕೊಳ್ಳುತ್ತೇನೆ, ಯಾವ ಕಾರ್ಯಕ್ಕೆ ಬಳಸುತ್ತೇನೆ ಎಂದು ಯೋಚಿಸಿ.
ಅದನ್ನು ಒಳ್ಳೆಯ ಕಾರ್ಯಕ್ಕೆ ಅಂದರೆ ಬಡ-ಬಗ್ಗರ ಒಳ್ಳೆಯದಕ್ಕೆ ಬಳಸಿದರೆ ಅದು ದೇವರಿಗೆ ಇಷ್ಟವಾಗುತ್ತೆ . ಆದ್ದರಿಂದ ಹಣವನ್ನು ಹೇಗೆ ಬಳಸುತ್ತೇವೋ ಅದರ ಮೇಲೆ ಒಳ್ಳೆಯದು-ಕೆಟ್ಟದು ಅಳೆಯಲಾಗುವುದು.

ಹಣವನ್ನು ಎಣಿಸುತ್ತಿರುವಂತೆ ಕನಸು ಕಂಡರೆ
ನೀವು ಹಣ ಎಣಿಸುತ್ತಿರುವಂತೆ ಕನಸು ಕಂಡರೆ ನೀವು ನಿಮ್ಮ ಬದುಕಿನಲ್ಲಿ ನಿರ್ಧಾರಗಳನ್ನು ಬದಲಾಯಿಸಬೇಕಾಗಿದೆ ಎಂದರ್ಥ. ಏಕೋ ನಿಮ್ಮಲ್ಲಿ ಕ್ರಿಯಾಶೀಲತೆ ಕಡಿಮೆಯಾಗಿದೆ, ಏಕೋ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಈ ರೀತಿ ಕನಸ್ಸು ಬಿದ್ದರೆ ಯಶಸ್ಸು ಸಿಗಲು ನಿಮ್ಮ ನಿರ್ಧಾರಗಳನ್ನು ಬದಲಾಯಿಸಬೇಕಾಗಿದೆ ಎಂದರ್ಥ.

ಹಣವನ್ನು ಕೈಯಲ್ಲಿ ಹಿಡಿದಿರುವಂತೆ ಕನಸ್ಸು ಬಿದ್ದರೆ
ಗೋಣಿ ಚೀಲದಲ್ಲಿ , ಬ್ಯಾಗ್‌ನಲ್ಲಿ ಅಥವಾ ಪರ್ಸ್‌ನಲ್ಲಿ ಹಣ ಇಟ್ಟಿರುವಂತೆ ಕಂಡರೆ ನೀವು ನಿಮ್ಮ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಿದ್ದೀರಿ ಎಂದರ್ಥ.
ಹೀಗೆ ಹಣದ ಕನಸ್ಸು ಬಿದ್ದರೆ ಒಂದೊಂದು ಅರ್ಥವಿದೆಯಂತೆ....



Click it and Unblock the Notifications