Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
ಎಂಥಾ ಹಿರಿಯರಿಂದ ಚಿಕ್ಕ ಮಕ್ಕಳವರೆಗೂ ಎಲ್ಲರಿಗೂ ಬಹಳ ಇಷ್ಟವಾಗುವ ಮೆಚ್ಚಿನ ಪ್ರಾಣಿ ಎಂದರೆ ಪಾಂಡಾ. ಪಾಂಡಾಗಳು ಒಂದೆಡೆ ತನ್ನ ಆಕರ್ಷಕ ಬಣ್ಣಗಳ ವೈಶಿಷ್ಟ್ಯ, ಮೈತುಂಬಾ ನಯವಾದ ಕೂದಲ ಮೂಲಕ ಎಲ್ಲರನ್ನು ಸೆಳೆದರೆ ಮತ್ತೊಂದೆಡೆ ತನ್ನ ತುಂಟಾಟ, ಚೆಲ್ಲಾಟದ ಮೂಲಕ ಎಂಥವರು ಸಹ ಎತ್ತಿ ಮುದ್ದಾಡುವಂತೆ ಮಾಡುತ್ತವೆ.

ಪಾಂಡಾಗಳ ಹಲವು ವಿಡಿಯೋಗಳನ್ನು ನೀವು ಈವರೆಗೂ ನೋಡಿರಬಹುದು, ಈ ಆದರೆ ನಾವಿಲ್ಲಿ ತೋರಿಸುತ್ತಿರುವ ವಿಡಿಯೋ ಖಂಡಿತವಾಗಿಯೂ ನಿಮ್ಮ ಮೊಗದಲ್ಲೊಂದು ಮಂದಹಾಸವನ್ನು ಮೂಡಿಸುವುದು ಗ್ಯಾರೆಂಟಿ. ಈ ವಿಡಿಯೋ ವೀಕ್ಷಿಸಿದ ನಂತರ ನಾವು ಮನೆಯಲ್ಲೊಂದು ಮುದ್ದು ಮುದ್ದಾದ ಪಾಂಡಾ ಸಾಕಬಹುದೇ ಎಂಬ ಆಲೋಚನೆ ಬರೆದೇ ಇರದು.
ಪಾಂಡಾ ಸಂಗ್ರಹಾಲಯವೊಂದರಲ್ಲಿ ನೂರಾರು ಪಾಂಡಾಗಳು ಚಿತ್ರ-ವಿಚಿತ್ರವಾಗಿ ಆಡುವ ಮೂಲಕ ನಿಮ್ಮ ಹೊಟ್ಟೆಹುಣ್ಣಾಗುವಂತೆ ನಗಿಸುತ್ತದೆ. ತನ್ನ ಪಾಡಿಗೆ ತಿನ್ನುತ್ತಾ ಇದ್ದ ಪಾಂಡಾವನ್ನು ಮಗುವೊಂದು ದಿಢೀರನೆ ಚೀರುವ ಮೂಲಕ ತಾಯಿಯನ್ನೆ ಬೆದರಿಸುವ ದೃಶ್ಯವಂತೂ ತುಂಬಾ ಮಜವಾಗಿದೆ. ಮುಂದೆ, ನಾ ಮುಂದು ತಾ ಮುಂದು ಎಂದು ಜಾರಾಬಂಡಿ ಆಡುತ್ತಾ ಒಂದರ ಮೇಲೆ ಒಂದು ಬಿದ್ದು ಒದ್ದಾಡು ಪಾಂಡಾಗಳು, ಬೋನಿನ ಒಳಗಿದ್ದ ಪಾಂಡಾಗಳ ತರ್ಲೆಯನ್ನು ದೃಶ್ಯೀಕರಿಸುವ ವೇಳೆ ತುಂಟ ಪಾಂಡಾವೊಂದು ಹತ್ತಿ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸುತ್ತಾ ವಿಡಿಯೋ ಗ್ರಾಫರ್ ಅನ್ನೇ ಪೇಚಿಗೆ ಸಿಲುಕಿಸಿದೆ.
ಓಡಿಹೋಗುತ್ತಿರುವ ತುಂಟ ಮಗುವನ್ನು "ಎಲ್ಲಿ ಹೋಗುತ್ತಿದ್ದೀಯಾ, ಬಾ ಇಲ್ಲಿ,'' ಎಂದು ಓಡಿ ಹಿಡಿಯುವ ತಾಯಿ ಪಾಂಡಾ, ಒಂದರ ಕಾಲನ್ನು ಮತ್ತೊಂದು ಎಳೆದು ಕೆಳಗೆ ಬೀಳಿಸಿ ನಗುವ ಪಾಂಡಾಗಳ ಗುಂಪು, ತನ್ನ ಮಾರ್ಗದರ್ಶರಿಗೇ ಚತುರತೆಯಿಂದ ಆಟಆಡಿಸುವ ಪಾಂಡಾಗಳು, ಒಂದನ್ನೊಂದು ತಬ್ಬಿ ಮುದ್ದಾಡುತ್ತಾ ಉಯ್ಯಾಲೆ ಆಡುವ ದೃಶ್ಯಗಳೆಲ್ಲಾ ಎಷ್ಟು ಚೆಂದಾ ಪ್ರಾಣಿಗಳ ಬದುಕು ಎನ್ನಲು ಉದಾಹರಣೆಯಂತಿದೆ. ಹೀಗೆ ಹತ್ತು ಹಲವು ದೃಶ್ಯಗಳು ಈ ವಿಡಿಯೋದಲ್ಲಿ ಸಂಕಲಿಸಿದ್ದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ದಿನಕ್ಕೊಂದು ಇಂತಹ ಖುಷಿಯ ವಿಡಿಯೋ ನೋಡಿದರೆ ನೀವು ಸಹ ಆರೋಗ್ಯವಾಗಿರುತ್ತೀರಿ ಎಂಬುದು ನಿಮಗೆ ತಿಳಿದಿರಲಿ.
ಮೂಲತಃ ಸೆಂಟ್ರಲ್ ಚೀನಾದಲ್ಲಿ ಹೆಚ್ಚು ಕಂಡು ಬರುವ ಪಾಂಡಾಗಳು ಕರಡಿಯ ಪ್ರಬೇಧಕ್ಕೆ ಸೇರುತ್ತದೆ. ಆದರೆ ಕರಡಿಗಿಂತ ಭಿನ್ನವಾಗಿ ಕಣ್ಣು, ಕಿವಿ, ದೇಹದ ವಿವಿಧ ಭಾಗಗಳಲ್ಲಿ ಬಿಳಿ ಬಣ್ಣಗಳನ್ನು ಹೊಂದಿರುವುದು ಇದರ ವಿಶೇಷ.



Click it and Unblock the Notifications

