ಈ ರೀತಿಯ ಸ್ವಪ್ನ ಬಿದ್ದರೆ ಅದು ನಮ್ಮ ಬಗ್ಗೆ ಏನನ್ನು ಸೂಚಿಸುತ್ತದೆ?

ಸ್ವಪ್ನ ಬೀಳದವರು ಯಾರಿದ್ದಾರೆ ಹೇಳಿ? ಎಲ್ಲರಿಗೂ ಒಂದೆಲ್ಲಾ ಒಂದು ರೀತಿಯ ಸ್ವಪ್ನ ಬೀಳುವುದು. ಗಾಢ ನಿದ್ದೆಯಲ್ಲಿದ್ದಾಗ ಒಂದು ಸ್ವಪ್ನ ಬೀಳುವುದು... ಆ ಸ್ವಪ್ನ ತುಂಬಾ ಸುಂದರವಾಗಿದ್ದರೆ ಅದನ್ನು ಹಾಗೇ ಆಸ್ವಾದಿಸುತ್ತೇವೆ ಅದೇ ದುಃಸ್ವಪ್ನ ಬಿದ್ದಾಗ ಬೆಚ್ಚಿ ಬಿದ್ದು ಎದ್ದೇಳುತ್ತೇವೆ.

ಇನ್ನು ಕೆಲವೊಮ್ಮೆ ಸ್ವಪ್ನ ಬೀಳುವುದು, ಎಚ್ಚರವಾದಾಗ ಏನು ಸ್ವಪ್ನ ಎಂದು ಎಷ್ಟು ಯೋಚಿಸಿದರೂ ನೆನಪಿಗೆ ಬರಲ್ಲ, ಇನ್ನು ಬಂದರೂ ಅರ್ಧಂಬರ್ಧ ನೆನಪಿಗೆ ಬರುವುದು. ಕೆಲವರು ನಾವು ಯಾವುದಾದರೂ ವಿಷಯದ ಬಗ್ಗೆ ಚಿಂತಿಸಿದರೆ ಸ್ವಪ್ನ ಬೀಳುವುದು ಎಂದು ಹೇಳುತ್ತಾರೆ, ಕೆಲವೊಮ್ಮೆ ಅದು ಅತ್ಯವಿರಬಹುದು, ಆದರೆ ಎಷ್ಟೋ ಬಾರಿ ನಾವು ಯೋಚಿಸಿಯೇ ಇರದ ಕೆಲವೊಂದು ವಿಷಯಗಳು ಸ್ವಪ್ನದಲ್ಲಿ ಬರುವುದು, ಇದುವರೆಗೆ ನೋಡೇ ಇರದ ವ್ಯಕ್ತಿಗಳ ಮುಖ ಕಣ್ಣೆದುರಿಗೆ ಬರುವುದು ಅಲ್ವಾ?

ಕೆಲವರಿಗೆ ತಾವು ಗರ್ಭಿಣಿಯಾಗಿರುವಂತೆ ಕನಸು ಬೀಳುವುದು, ಆದರೆ ಅವರು ಗರ್ಭಿಣಿಯಾಗಿರಲ್ಲ.. ಇನ್ನು ಕೆಲವರಿಗೆ ತರಕಾರಿ ತರೋಕೆ ಹೋಗುವಾಗ ತಾವು ಬೆತ್ತಲೆ ಹೋದಂತೆ ಕನಸು ಬೀಳುವುದು.. ಹೀಗೆ ಕನಸುಗಳು ತುಂಬಾ ಚಿತ್ರ-ವಿಚಿತ್ರವಾಗಿ ಬೀಳುವುದು.

ಇನ್ನು ನಮಗೆ ಬೀಳುವ ಸ್ವಪ್ನಗಳು ನಮ್ಮ ಭಾವನಾತ್ಮಕ, ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ, ಅಲ್ಲದೆ ಯಾವ ವಿಷಯದ ಬಗ್ಗೆ ನಾವು ಗಮನ ಹರಿಸಬೇಕು ಎಂಬುವುದನ್ನು ಸೂಚ್ಯವಾಗಿ ತೋರಿಸುತ್ತದೆ.

ಸ್ವಪ್ನದ ಬಗ್ಗೆ ಮಾನಸಿಕ ತಜ್ಞರು ಏನು ಹೇಳುತ್ತಾರೆ?

ಸ್ವಪ್ನದ ಬಗ್ಗೆ ಮಾನಸಿಕ ತಜ್ಞರು ಏನು ಹೇಳುತ್ತಾರೆ?

'ಸ್ವಪ್ನದಲ್ಲಿ ಬರುವ ಚಿತ್ರಗಳು ಅಥವಾ ವಿಷಯಗಳು ಅರ್ಥವಾದಾಗ ಮಾತ್ರ ಅವುಗಳಿಂದ ಪ್ರಯೋಜನ ಸಿಗುವುದು' ಎಂದು ಫಿಲಿಡೆಲ್ಫಿಯಾದ ಮಾನಸಿಕ ತಜ್ಞರಾದ ಜೋನ್‌ ಮಚಾಲ್ಬಾ ಹೇಳಿದ್ದಾರೆ.

ಉದಾಹರಣೆಗೆ ಗರ್ಭಿಣಿ ಎಂಬಂತೆ ಕನಸು ಬಿದ್ದಾಗ ಅದು ನಿಮ್ಮ ಆಸೆ ಅಥವಾ ಭರವಸೆಯಾಗಿರುತ್ತದೆ ಅಥವಾ ನೀವು ತುಂಬಾ ಯೋಚಿಸುತ್ತಿರುವ ವಿಷಯವಾಗಿರುತ್ತದೆ.

ನಿಮಗೆ ಬಿದ್ದ ಕನಸ್ಸಿನ ಬಗ್ಗೆ ನೀವೇ ಅವಲೋಕಿಸುವುದರಿಂದ ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯುವುದು.

ಎಲ್ಲರಿಗೆ ಒಂದೇ ರೀತಿಯ ಕನಸು ಬೀಳುವುದಿಲ್ಲ, ಆದರೆ ಕೆಲವೊಂದು ಸಾಮಾನ್ಯ ಸ್ವಪ್ನ ಬೀಳುವುದು. ಇಲ್ಲಿ ಕೆಲವೊಂದು ಕನಸುಗಳು ನಮ್ಮ ಭಾವನೆ, ಮಾನಸಿಕ ಸ್ಥಿತಿ ಬಗ್ಗೆ ಏನು ಸೂಚಿಸುತ್ತದೆ ಎಂದು ಮಾನಸಿಕ ತಜ್ಞೆ ಲೋವೆನ್‌ಬರ್ಗ್‌ ಹೇಳಿದ್ದಾರೆ ( ಇವುಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ)

ಕೆಲವೊಂದು ಸಾಮಾನ್ಯ ಸ್ವಪ್ನಗಳು

ಕೆಲವೊಂದು ಸಾಮಾನ್ಯ ಸ್ವಪ್ನಗಳು

* ಸಮುದ್ರದ ಅಲೆಗಳು

* ಹಲ್ಲು ಬೀಳುವುದು

* ಸಾರ್ವಜನಿಕವಾಗಿ ಬೆತ್ತಲಾಗಿರುವುದು

* ಕೆಲಸ ಅಥವಾ ಶಾಲೆಯಲ್ಲಿ ತೊಂದರೆಯಾಗುವುದು

* ಬೀಳುವುದು

* ಮೋಸ ಮಾಡಿದಂತೆ

* ಮದುವೆ

* ಯಾರೋ ಓಡಿಸಿಕೊಂಡು ಬರುವಂತೆ (ಬೆದರಿಸುವಂತೆ)

* ಗರ್ಭಿಣಿಯಾದಂತೆ

ಸಮುದ್ರದ ಅಲೆಗಳ ಸ್ವಪ್ನ

ಸಮುದ್ರದ ಅಲೆಗಳ ಸ್ವಪ್ನ

ಸುನಾಮಿ ಅಥವಾ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಂತೆ ಕನಸು ಬಿದ್ದರೆ ನೀವು ತುಂಬಾ ಬಳಲಿದ್ದೀರಿ ಎಂದರ್ಥ. ನಿಮ್ಮ ಭರವಸೆ ಕಡಿಮೆಯಾದಾಗ ಈ ರೀತಿಯ ಸ್ವಪ್ನ ಬೀಳುವುದು ಎಂದು ಹೇಳಲಾಗುವುದು.

ಹಲ್ಲು ಬೀಳುವುದು

ಲೋವೆನ್‌ಬರ್ಗ್‌ ಹೇಳುವಂತೆ ನಾವು ಯಾರನ್ನಾದರೂ ತುಂಬಾ ನೋಯಿಸಿದಾಗ , ಕುರಿತು ತುಂಬಾ ಪಶ್ಚಾತಾಪವಿದ್ದಾಗ ಈ ರೀತಿಯ ಸ್ವಪ್ನ ಬೀಳುವುದಂತೆ.

ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆಯಾಗಿರುವುದು

ನಮ್ಮ ಬಗ್ಗೆ ಬೇರೆಯವರು ಏನು ಅಂದುಕೊಳ್ಳುತ್ತಾರೆ, ನಮ್ಮನ್ನು ಹೇಗೆ ನೋಡುತ್ತಾರೆ ಎಂಬ ಅತೀಯಾದ ಹಿಂಜರಿಕೆಯಿದ್ದಾಗ ಈ ರೀತಿಯ ಕನಸು ಬೀಳುವುದು ಎಂದುದಾಗಿ ಲೋವೆನ್‌ಬರ್ಗ್‌ ಹೇಳಿದ್ದಾರೆ. ಅಲ್ಲದೆ ಈ ಸ್ವಪ್ನವೂ ಬೇರೆಯವರು ನಮ್ಮನ್ನು ಗುರುತಿಸುತ್ತಿಲ್ಲ ಎಂಬ ನಮ್ಮ ಒಳಮನಸ್ಸಿನ ನಿರಾಸೆಯೂ ಆಗಿದೆ.

ಕೆಲಸ ಅಥವಾ ಶಾಲೆಗೆ ಹೋದಂತೆ

ತಮ್ಮ ವೃತ್ತಿ ಜೀವದನಲ್ಲಿ ಅಭದ್ರತೆ ಇದ್ದಾಗ ಅಥವಾ ಮುಂದೇನು ಎಂಬ ಸ್ಪಷ್ಟವಾದ ಯಾವುದೇ ಕಲ್ಪನೆ ಇಲ್ಲದೇ ಹೋದಾಗ ನಮ್ಮ ಮನಸ್ಸಿನಲ್ಲಿರುವ ಆತಂಕ ಇವೆಲ್ಲಾ ಈ ಸ್ವಪ್ನದ ಅರ್ಥವಂತೆ.

ಬೀಳುವುದು

ನಿಮಗೆ ಬೇಕಾದ ಯಾರಾದರೂ ತಪ್ಪಾದ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ನಿಮಗೆ ಅನಿಸಿದಾಗ ಈ ರೀತಿಯ ಕನಸು ಬೀಳಬಹುದು.

ಮೋಸ ಮಾಡಿದಂತೆ

ಸಂಬಂಧದಲ್ಲಿ ಏನಾದ್ರೂ ಅಭದ್ರತೆ ಉಂಟಾದಾಗ ಈ ರೀತಿಯ ಕನಸು ಬೀಳುವುದು. ಈ ಈ ರೀತಿಯ ಸ್ವಪ್ನ ಮನಸ್ಸಿನ ಅವ್ಯಕ್ತ ಭಯವಾಗಿದೆ. ನೀವು ನಿಮ್ಮ ಸಂಗಾತಿ ಜೊತೆ ತುಂಬಾ ಸಮಯ ಕಳೆಯಬೇಕೆಂದು ಬಯಸಿ ಅದು ಸಾಧ್ಯವಾಗದಿದ್ದಾಗ ಕೂಡ ಈ ರೀತಿಯ ಕನಸು ಬೀಳುವುದು.

ಮೊದಲು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾದಂತೆ

ಮೊದಲು ಪ್ರೀತಿಸಿದ ವ್ಯಕ್ತಿ ಬದುಕಿನಿಂದ ದೂರವಾಗಿ ಎಷ್ಟೋ ವರ್ಷಗಳೇ ಕಳೆದಿದ್ದರೂ ಆ ವ್ಯಕ್ತಿ ಜೊತೆ ಮಾತನಾಡಿಯೇ ಇಲ್ಲದಿದ್ದರೂ ಅವರು ಸ್ವಪ್ನದಲ್ಲಿ ಬಂದ್ರೆ ಸುಪ್ತ ಮನಸ್ಸು ಅವರನ್ನು ಬಯಸುತ್ತಿದೆ ಎಂದರ್ಥ. ಈಗ ಸಿಂಗಲ್‌ ಆಗಿದ್ದರೆ ಅಥವಾ ಈ ರಿಲೇಷನ್‌ನಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಸುಪ್ತ ಹಳೆಯ ಪ್ರೀತಿ ಬಯಸುವುದು.

ನಿಮ್ಮನ್ನು ಅಟ್ಟಿಸಿಕೊಂಡು ಬಂದಂತೆ

ಈ ಸ್ವಪ್ನ ಹೆಚ್ಚಿನವರಿಗೆ ಬೀಳುತ್ತದೆ. ನಿಜ ಜೀವನದಲ್ಲಿ ಏನಾದರೂ ಬಚ್ಚಿಟ್ಟಿದ್ದರೆ ಅಥವಾ ಏನಾದರೂ ವಿಷಯದಿಂದ ದೂರ ಹೋಗಲು ಬಯಸಿದರೆ , ಆ ವಿಷಯವನ್ನು ಅಥವಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿಲ್ಲದಿದ್ದಾಗ ಈ ಕನಸು ಬೀಳುವುದು.

ಗರ್ಭಿಣಿಯಾದಂತೆ

ಇದು ಭರವಸೆಯನ್ನು ಸೂಚಿಸುತ್ತದೆ ಜೀವನದಲ್ಲಿ ಏನಾದರೂ ಬೆಳವಣಿಗೆಯಾದಾಗ ಅಥವಾ ಹೊಸ ಭರವಸೆ ಮೂಡಿದಾಗ ಈ ರೀತಿಯ ಕನಸು ಬೀಳಬಹುದು.

ಸ್ವಪ್ನ ಅರ್ಥ ಮಾಡಲು ಪ್ರಯತ್ನಿಸಿದರೆ ದೊರೆಯುವ ಪ್ರಯೋಜನಗಳು

ಸ್ವಪ್ನ ಅರ್ಥ ಮಾಡಲು ಪ್ರಯತ್ನಿಸಿದರೆ ದೊರೆಯುವ ಪ್ರಯೋಜನಗಳು

* ನಮ್ಮನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು

* ನಮ್ಮಲ್ಲಿ ನಮಗೇ ಗೊತ್ತಿಲ್ಲದೆ ಇರುವ ಸುಪ್ತ ಆಸೆಗಳು, ಭಯ ಎಲ್ಲವೂ ತಿಳಿಯುವುದು.

* ಏನಾದರೂ ಸಮಸ್ಯೆಯಿದ್ದರೆ ಅದರ ಸೂಚನೆ ನೀಡುವುದು.

* ಸ್ವಪ್ನ ನಮ್ಮ ಭಾವನೆಗಳನ್ನು ಸೂಚಿಸುತ್ತದೆ

* ನಮ್ಮ ಪೂರ್ಣವಾಗದೇ ಇರುವ ಬಯಕೆಯನ್ನು ತೋರಿಸುತ್ತದೆ, ನಮ್ಮಲ್ಲಿರುವ ಅವ್ಯಕ್ತ ಭಯವನ್ನು ಸೂಚಿಸುತ್ತದೆ.

ಸ್ವಪ್ನ ಬೀರುವ ಪರಿಣಾಮಗಳು

ಸ್ವಪ್ನ ಬೀರುವ ಪರಿಣಾಮಗಳು

ಮಾನಸಿಕ ತಜ್ಞರಾದ ಡಿಮಿಟ್ರಿಯು ಸ್ವಪ್ನ ಬಿದ್ದಾಗ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು, ಬದಲಿಗೆ ಭಯ ಪಡಬರದು ಎಂದು ಹೇಳಿದ್ದಾರೆ. ಕೆಲವೊಂದು ಸ್ವಪ್ನ ನಮ್ಮ ಭಾವನೆಗಳ ಮೇಲೆ ದೊಡ್ಡ ಪರಿಣಾಮ ಬೀರಬಹುದು, ಸ್ವಪ್ನದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡರೆ ಒಳ್ಳೆಯದಕ್ಕಿಂತ ಕೆಟ್ಟದೇ ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಏನಾದರೂ ಕಸನು ಅಥವಾ ಸ್ವಪ್ನ ಕಂಡರೆ ಅದರ ಬಗ್ಗೆ ತುಂಬಾ ಯೋಚಿಸಬೇಡಿ.

ಕೊನೆಯದಾಗಿ:

ಕೊನೆಯದಾಗಿ:

ನಾವು ನಿದ್ದೆ ಮಾಡಿದಾಗ ನಮ್ಮ ಮನಸ್ಸು ಎಚ್ಚರವಾಗಿಯೇ ಇರುತ್ತದೆ. ನಾವು ಕಂಡ ಎಲ್ಲಾ ಸ್ವಪ್ನಗಳು ನೆನಪಿನಲ್ಲಿ ಇರಲ್ಲ, ಆದರೆ ನೆನಪಿಗೆ ಬಂದರೆ ಖಂಡಿತವಾಗಿಯೂ ಅವು ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುವುದು.

ಇನ್ನು ಸ್ವಪ್ನದ ಬಗ್ಗೆ ವಿಶ್ಲೇಷಣೆ ಮಾಡುವುದರಿಂದ ನಿಮ್ಮ ಭಾವನೆಗಳನ್ನು ಅರಿಯಬಹುದು. ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳಲು ಸಹಾಯವಾಗುವುದು. ಕೆಲವೊಂದು ಸ್ವಪ್ನಗಳು ಸುಂದರವಾಗಿರುತ್ತದೆ, ಸುಂದರವಾಗಿದ್ದರೆ ಅದನ್ನು ಆನಂದಿಸಿ. ದುಃಸ್ವಪ್ನ ಬಿದ್ದಾಗ ತುಂಬಾ ಯೋಚಿಸಿ ತಲೆ ಕೆಡಿಸಿಕೊಳ್ಳುವುದು, ಭಯ ಪಡುವುದು ಬೇಡ.

English summary

Common Dreams Images and What They Mean in kannada

Common dreams images and what they mean in kannada, read on....
Story first published: Thursday, July 8, 2021, 11:30 [IST]
X
Desktop Bottom Promotion