Latest Updates
-
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು -
ಅರ್ನಬ್ ಚಂಡಮಾರುತದ ಅಬ್ಬರ: ಅಡುಗೆ ಇಲ್ಲದೆ 48 ಗಂಟೆಗಳ ಕಾಲ ಬದುಕುವುದು ಹೇಗೆ? -
ಅರ್ನಬ್ ಚಂಡಮಾರುತ ಅಬ್ಬರ: ಆಂಧ್ರ ಕರಾವಳಿಯತ್ತ ಭೀಕರ ಸೈಕ್ಲೋನ್, ಇಂದೇ ಮಾಡಿಕೊಳ್ಳಿ ಈ ಮುನ್ನೆಚ್ಚರಿಕೆ! -
2026ರ ಕರ್ವಾ ಚೌತ್: ಆಫೀಸ್ ಕೆಲಸದ ನಡುವೆ ಉಪವಾಸ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ!
ಜುಲೈ 13ಕ್ಕೆ ಸೂಪರ್ಮೂನ್: ಈ ದಿನ ಸಮುದ್ರ ಬಳಿ ಹೋಗುವಾಗ ಜಾಗ್ರತೆ!
2022ರ ವರ್ಷದ ಅತೀ ದೊಡ್ಡ ಸೂಪರ್ ಮೂನ್ ಜುಲೈ 13ರಂದು ಕಾಣ ಸಿಗಲಿದೆ. ಈ ದಿನ ನೀವು ಬೃಹದಾಕಾರದ ಚಂದ್ರನನ್ನು ಕಣ್ತುಂಬಿಕೊಳ್ಳಹುದು. ಇದನ್ನು ಸೂಪರ್ ಮೂನ್ ಎಂದು ಕರೆಯಲಾಗಿದೆ.
ಸೂಪರ್ ಮೂನ್ನ ವಿಶೇಷತೆ ಏನು? ಈ ದಿನ ಚಂದ್ರ ಉಳಿದ ಸಮಯದಲ್ಲಿ ಕಾಣುವುದಕ್ಕಿಂತ ಅತಿ ದೊಡ್ಡ ಗಾತ್ರದಲ್ಲಿ ಕಾಣುವುದು ಏಕೆ ಎಂದು ನೋಡೋಣ ಬನ್ನಿ:

ಸೂಪರ್ ಮೂನ್ ಎಂದರೇನು?
ಚಂದ್ರ ಭೂಮಿಯ ಸುತ್ತ ಸುತ್ತುವ ಉಪಗ್ರಹವಾಗಿದೆ. ಈ ಚಂದ್ರ ಹೀಗೆ ಭೂಮಿಯ ಸುತ್ತ ಸುತ್ತುವಾಗ ಈ ದಿನದಂದು ಭೂಮಿಯ ಸಮೀಪಕ್ಕೆ ಬರಲಿದೆ. ಅಂದರೆ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿ. ಮೀ ಸಮೀಪ ಬರುವುದರಿಂದ ಈ ದಿನದಂದು ಚಂದ್ರ ಉಳಿದೆಲ್ಲಾ ದಿನಕ್ಕಿಂತ ತುಂಬಾ ದೊಡ್ಡದಾಗಿ ಕಾಣಲಿದೆ. ಹೀಗಾಗಿ ಮಾಮೂಲಿಯಾಗಿ ಕಾಣುವುದಕ್ಕಿಂತ ಶೇ. 15ರಷ್ಟು ದೊಡ್ಡದಾಗಿ ಕಾಣಲಿದೆ. ಇದನ್ನು ಸೂಪರ್ ಮೂನ್ ಎಂದು ಕರೆಯಲಾಗುವುದು.

ಚಂದ್ರ ತುಂಬಾ ಪ್ರಕಾಶಮಾನವಾಗಿ ಕಾಣಲಿದೆ
ಈ ಜ್ಯೇಷ್ಠ ಮಾಸದ ಹುಣ್ಣಿಮೆಯಲ್ಲಿ ಚಂದ್ರ ಭೂಮಿಗೆ ತುಂಬಾ ಸಮೀಪಕ್ಕೆ ಬರಲಿದೆ. ಅಂದರೆ ಉಳಿದ ಸಮಯದಲ್ಲಿ ಚಂದ್ರ-ಭೂಮಿ ನಡುವೆ ಇರುವ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ ಇದ್ದರೆ ಈ ದಿನ 3 ಲಕ್ಷದ 57 ಸಾವಿರ ಕಿ.ಮೀ ಮಾತ್ರ ಇರುತ್ತದೆ. ಹೀಗಾಗಿ ಚಂದ್ರ ಪ್ರಕಾಶಮಾನವಾಗಿ ಕಾಣಲಿದೆ.

ಈ ದಿನ ಸಮುದ್ರ ಬಳಿಗೆ ಹೋಗುವಾಗ ಹುಷಾರ್
ನಮ್ಮ ಪೂರ್ವಿಕರು ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ಜ್ಯೇಷ್ಠ ನಕ್ಷತ್ರವೂ ಒಂದು. ಜ್ಯೋತಿಷ್ಯವನ್ನು ಕೂಲಂಕಷವಾಗಿ ಅಲೋಕಿಸಿದರೆ ನಮ್ಮ ಪೂರ್ವಿಕರು ಪ್ರತಿಯೊಂದು ವಿಷಯವನ್ನು ವೈಜ್ಞಾನಿಕವಾಗಿ ಹೇಳಿದ್ದಾರೆ, ಆದರೆ ಜನರಿಗೆ ಅರ್ಥವಾಗಲು ಜ್ಯೋತಿಷ್ಯದ ಮೂಲಕ ಹೇಳಿದ್ದಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಲ್ಲಿ ಜ್ಯೇಷ್ಠ ನಕ್ಷತ್ರ ಕೂಡ ಒಂದು, ಇದನ್ನು ವೈಜ್ಞಾನಿಕವಾಗಿ ಅಂಟಾರಸ್ ಎಂದು ಕರೆಯಲಾಗಿದೆ. ಜ್ಯೇಷ್ಠ ಅಂದರೆ ದೊಡ್ಡದು ಎಂದರ್ಥ, ಇನ್ನು ಈ ಸಮಯದಲ್ಲಿ ಸಮುದ್ರದ ಅಲೆಗಳ ರಭಸ ಜೋರಾಗಿರುತ್ತೆ. ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಆದ್ದರಿಂದ ಈ ದಿನ ಸಮುದ್ರ ಪಕ್ಕ ಹೋಗಿ ಸೆಲ್ಫಿ ಹುಚ್ಚಾಟಗಳನ್ನು ಮಾಡದಿರಿ.



Click it and Unblock the Notifications
