Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Womens Day: ಪುರುಷರೇ, ತಾಯಿ, ಪತ್ನಿ, ಸಹೋದರಿ, ಮಗಳು ನಿಮ್ಮಿಂದ ಬಯಸುವ ದೊಡ್ಡ ಗಿಫ್ಟ್ಸ್ ಏನು ಗೊತ್ತೇ? ಹಣದಿಂದ ಪಡೆಯಲು ಸಾಧ್ಯವೇ
ಮಾರ್ಚ್ 8ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುವುದು. ಪ್ರತಿಯೊಬ್ಬ ಪುರುಷನ ಬದುಕಿನಲ್ಲಿ ಸ್ತ್ರೀ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅವಳಿಗೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ ಸ್ತ್ರೀ ಇರುತ್ತಾಳೆ. ಅವಳನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂಬ ನೀವು ಅವಳಿಗೆ ನೀಡುವ ಅತಿ ದೊಡ್ಡ ಗಿಫ್ಟ್ ಆಗಿರುತ್ತದೆ.

ತಾಯಿಗೆ ಮಗನಾಗಿ ಯಾವ ಉಡುಗೊರೆ ನೀಡಬೇಕು, ಪತ್ನಿಗೆ ಗಂಡನಾಗಿ ಯಾವ ಉಡುಗೊರೆ ನೀಡಬೇಕು, ಸಹೋದರಿ ತನ್ನ ಸಹೋದರನಿಂದ ಬಯಸುವ ಗಿಫ್ಟ್ ಏನು, ತಂದೆಯಿಂದ ಮಗಳು ಏನು ಗಿಫ್ಟ್ ಬಯಸುತ್ತಾಳೆ ಎಂದು ನೋಡೋಣ ಬನ್ನಿ:

ಒಬ್ಬ ತಾಯಿಯಾಗಿ ಮಗನಿಂದ ಬಯಸುವ ಉಡುಗೊರೆ ಏನು?
ಒಬ್ಬ ತಾಯಿ ತನ್ನ ಮಗ ತನಗೆ ವಯಸ್ಸಾದಾಗ ನನ್ನನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಾಳೆ. ತನ್ನ ಕೊನೆಯುಸಿರು ಇರುವವರೆಗೆ ಮಗ ನನ್ನ ಜೊತೆ ಇರಬೇಕೆಂದು ಬಯಸುತ್ತಾಳೆ. ನೀವು ನಿಮ್ಮ ತಾಯಿಗೆ ಕೊಡುವ ಅತಿ ದೊಡ್ಡ ಉಡುಗೊರೆಯೆಂದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು. ತಾಯಿ ಮಕ್ಕಳನ್ನು ಕಷ್ಟಪಟ್ಟು ಸಾಕಿ ದೊಡ್ಡದು ಮಾಡಿದ ಮೇಲೆ ವಯಸ್ಸಾದ ತಾಯಿ ಎಷ್ಟೋ ಜನರಿಗೆ ಭಾರವಾಗಿ ಬಿಡುತ್ತಾರೆ. ಒಬ್ಬ ತಾಯಿ ನನ್ನ ಮಗನಿಂದ ಬಯಸುವ ಉಡುಗೊರೆಯೆಂದರೆ ತನ್ನ ದೇಹದಲ್ಲಿ ಶಕ್ತಿಯಿಲ್ಲದಿದ್ದಾಗ ಮಗ ನೀಡುವ ರಕ್ಷಣೆ.

ಪತ್ನಿ ಗಂಡನಿಂದ ಬಯಸುವ ಉಡುಗೊರೆಯೇನು?
ಪ್ರತಿಯೊಬ್ಬ ಪತ್ನಿ ತನ್ನ ಗಂಡನಿಂದ ಬಯಸುವ ದೊಡ್ಡ ಉಡುಗೊರೆಯೆಂದರೆ ಸುರಕ್ಷತೆ. ಹೌದು ತನ್ನ ಪತ್ನಿಗೆ ಸುರಕ್ಷತೆ ಮನೋಭಾವ ಮೂಡಿಸುವುದು ಗಂಡನಾದವನ ದೊಡ್ಡ ಕರ್ತವ್ಯವಾಗಿರುತ್ತದೆ. ಆಕೆ ಅವನಿಂದ ಮಾನಸಿಕವಾದ ಹಾಗೂ ಆರ್ಥಿಕವಾದ ಸುರಕ್ಷತೆ ಬಯಸುತ್ತಾಳೆ. ನೀವು ಅವಳಿಗೆ ಎಂದೂ ಮೋಸ ಮಾಡಲ್ಲ ಎಂಬ ಸುರಕ್ಷತೆ ಭಾವ ಅವಳಿಗೆ ಮೂಡಿಸಿದರೆ, ಅವಳ ಬದುಕಿಗೆ ಆರ್ಥಿಕ ಭದ್ರತೆ ನೀಡಿದರೆ ನೀವು ಅವಳಿಗೆ ನೀಡುವ ಅತೀದೊಡ್ಡ ಸುರಕ್ಷತೆಯಾಗಿದೆ.

ಸಹೋದರಿ ಸಹೋದರನಿಂದ ಏನು ರಕ್ಷಣೆ ಬಯಸುತ್ತಾಳೆ?
ಒಬ್ಬ ಸಹೋದರಿ ತನ್ನ ಸಹೋದರ ನನ್ನನ್ನು ಎಲ್ಲಾ ಪರಿಸ್ಥಿತಿಯಿಂದಲೂ ರಕ್ಷಿಸಬೇಕೆಂದು ಬಯಸುತ್ತಾಳೆ. ರಕ್ಷಾ ಬಂಧನ ಆಚರಣೆಯ ವಿಶೇಷತೆ ಕೂಡ ಇದಾಗಿದೆ. ತನ್ನ ಸಹೋದರಿಗೆ ಎಂಥದ್ದೇ ಪರಿಸ್ಥಿತಿ ಎದುರಾದರೂ ಅದರಿಂದ ರಕ್ಷಣೆ ಮಾಡುವವನೇ ನಿಜವಾದ ಸಹೋದರ. ನನ್ನ ರಕ್ಷಣೆಗೆ ಅಣ್ಣ ಇದ್ದಾನೆ ಎಂಬ ಮನೋಭಾವನೇ ಅವಳ ಪಾಲಿಗೆ ದೊಡ್ಡ ಉಡುಗೊರೆ.

ಒಬ್ಬ ಮಗಳಿಗೆ ಅಪ್ಪ ನೀಡಬೇಕಾದ ಉಡುಗೊರೆಯೇನು?
ಒಬ್ಬ ಮಗಳಿಗೆ ಅಪ್ಪ ಯಾವ ಉಡುಗೊರೆ ನೀಡಬೇಕೆಂದರೆ ಪ್ರೀತಿ ಮತ್ತು ಭದ್ರತೆ. ಒಬ್ಬ ಮಗಳಿಗೆ ಅಪ್ಪ ನೀಡುವ ಭದ್ರತೆ ಇದೆಯೆಲ್ಲಾ ಅದು ತುಂಬಾನೇ ಅವಶ್ಯಕವಾಗಿರುತ್ತದೆ. ಅಪ್ಪ ನನ್ನ ಜೊತೆ ಇದ್ದಾನೆ ಎಂಬ ಒಂದು ಶಕ್ತಿ ಸಾಕು ಅವಳನ್ನು ಬಹುದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಮಗಳಿಗೆ ದೊಡ್ಡ ಉಡುಗೊರೆ ನೀಡಬೇಕೆಂದು ಬಯಸುವುದಾದರೆ ನೀವು ನೀಡಬೇಕಾಗಿರುವುದು ಭದ್ರತೆ.

ಒಬ್ಬ ಸ್ನೇಹಿತೆ ನಿಮ್ಮಿಂದ ಏನು ನಿರೀಕ್ಷಿಸುತ್ತಾಳೆ?
ಒಬ್ಬ ಒಳ್ಳೆಯ ಸ್ನೇಹಿತೆ ನಿಮ್ಮಿಂದ ಏನು ನಿರೀಕ್ಷಿಸುತ್ತಾಳೆ ಅಂದರೆ ವಿಶ್ವಾಸ. ಹೌದು ಅವಳು ನಿಮ್ಮ ಮೇಲಿಟ್ಟವರ ವಿಶ್ವಾಸ ಕಾಪಾಡುವುದೇ ನಿಮ್ಮಿಂದ ಅವಳು ಬಯಸುವ ದೊಡ್ಡ ಉಡುಗೊರೆ.



Click it and Unblock the Notifications
