ಮಹಿಳೆಯರೇ ಮನೆ ಮತ್ತು ಕಚೇರಿ ಕೆಲಸ ನಿಭಾಯಿಸಲು ಸಮಸ್ಯೆ ಆಗುತ್ತಿದ್ಯಾ? ಒತ್ತಡ ಬೇಡ ಕೂಲ್‌ ಆಗಿ ಸಂದರ್ಭಗಳನ್ನು ಹೀಗೆ ನಿಭಾಯಿಸಿ!

ಮಹಿಳೆಯರಷ್ಟು ಹಾರ್ಡ್ ವರ್ಕಿಂಗ್ ಯಾರು ಇಲ್ಲ. ಮನೆ ಕೆಲಸ, ವೃತಿ ಜೀವನದಲ್ಲೂ ಅತ್ಯುತ್ತಮವಾಗಿ ಹಾರ್ಡ್ ವರ್ಕ್ ಮಾಡುವವರು ಮಹಿಳೆಯರು. ಮನೆ ಮತ್ತು ಕಚೇರಿ ಅಂದರೆ ಎರಡು ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಹಿಳೆಯರು ನಿರ್ವಹಿಸುತ್ತಾರೆ.

Lifestyle Tips

ಮಲ್ಟಿ ಟಾಸ್ಕಿಂಗ್ ಗುಣವನ್ನು ಹೊಂದಿರುವ ಇವರು ಮನೆಯಲ್ಲಿ ಅಡುಗೆ, ಕ್ಲೀನಿಂಗ್, ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಕಚೇರಿ ಕೆಲಸ, ಅಧ್ಯಯನ ಹೀಗೆ ಎಲ್ಲಾ ಕೆಸಲಗಳನ್ನು ಮಾಡುತ್ತಾರೆ. ಪುರುಷರು ಕೂಡ ಮಹಿಳೆಯರು ಕೆಲಸ ಮಾಡಲು ಮಾತ್ರ ಇರುವುದು ಎಂಬಂತೆ ಯಾವುದಕ್ಕೂ ಸಹಾಯ ಮಾಡಲು ಹೋಗೋದಿಲ್ಲ. ಹೀಗಾಗಿ ಬಿಡುವಿಲ್ಲದ ಕೆಲಸದಿಂದ ಮಹಿಳೆಯರ ದೇಹ ಸಂಪೂರ್ಣ ದಣಿದಿರುತ್ತದೆ.

ಆಯಾಸಗೊಂಡ ದೇಹವು ಅನೇಕ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ತಮ್ಮ ಪರ್ನಸಲ್ ಜೀವನವನ್ನು ಕೆಲವೊಂದು ಬಾರಿ ನಿಭಾಯಿಸಲು ಸಾಧ್ಯವಾಗದೆ ಮಾನಸಿಕ ಒತ್ತಡ, ಖಿನ್ನತೆಯೂ ಅವರಿಗೆ ಕಾಡುತ್ತದೆ. ಇನ್ನು ಕೆಲ ಮಹಿಳೆಯರು ತಮ್ಮ ಮನೆ ಕೆಲಸ, ಕಚೇರಿಯ ಕೆಲಸದಿಂದಾಗಿ ಅನಾರೋಗ್ಯಕ್ಕೀಡಾದರು ಕೇರ್ ಮಾಡದೆ ಕೆಲಸ ಮಾಡುತ್ತಾರೆ. ಇದೆಲ್ಲ ಭವಿಷ್ಯದಲ್ಲಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕೆಲವರು ಈ ಎಲ್ಲಾ ಒತ್ತಡಗಳಿಂದ ಬ್ರೇಕ್ ಸಿಗಬೇಕು ಎಂದು ಬಯಸುವುದುಂಟು. ಹಾಗಾದರೆ ಮಹಿಳೆಯರು ಮನೆ ಮತ್ತು ಕಛೇರಿಯನ್ನು ಸರಿಯಾಗಿ ಸಮತೋಲನಗೊಳಿಸುವುದು ಹೇಗೆ? ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಳ್ಳುವುದು ಹೇಗೆ? ಹೇಗೆ ಮಹಿಳೆಯರು ಕೂಡ ತಮಗೆ ಇಷ್ಟವಾದ ಕೆಲಸವನ್ನು ಮಾಡಿಕೊಂಡು ಖುಷಿ, ಆರೋಗ್ಯದಿಂದ ಇರುವುದು? ಇಲ್ಲಿದೆ ಈ ಬಗ್ಗೆ ಟಿಪ್ಸ್!

ಜವಾಬ್ದಾರಿಯನ್ನು ಹಂಚಿಕೊಳ್ಳಿ!

ಜವಾಬ್ದಾರಿಯನ್ನು ಹಂಚಿಕೊಳ್ಳಿ!

ಜವಾಬ್ದಾರಿಯನ್ನು ಹಂಚಿಕೊಂಡರೆ ಆಲ್ ಮೋಸ್ಟ್ ಎಲ್ಲಾ ಸಮಸ್ಯೆಗಳು ಪರಿಹಾರವಾದಂತೆ. ಹೌದು, ನೀವು ಕಚೇರಿಗೆ ತೆರಳಿ ಕೆಲಸ ಮಾಡುವ ಮಹಿಳೆಯಾದರೆ ನೀವು ಮೊಟ್ಟ ಮೊದಲ ಪ್ರೀಯಾರಿಟಿ ನಿಮ್ಮ ಕೆಲಸಕ್ಕೆ ಕೊಡಬೇಕಾಗುತ್ತದೆ.

ಯಾಕೆಂದರೆ ಎರಡು ಕೆಲಸ ಮಾಡಿಕೊಳ್ಳುವುದು ಈಗೀನ ಸಮಯದಲ್ಲಿ ತುಂಬಾ ಕಷ್ಟ. ಹೀಗಾಗಿ ನೀವು ವೈಯಕ್ತಿಕ ಮತ್ತು ಕಚೇರಿ ಜೀವನವನ್ನು ಪ್ರತ್ಯೇಕಿಸಬೇಕು. ಕಚೇರಿ ಕೆಲಸಕ್ಕೆ ಹೆಚ್ಚಿನ ಪ್ರಾತಿನಿದ್ಯ ಕೊಡಬೇಕು. ಮನೆ ಕೆಲಸದಿಂದ ಕೊಂಚ ಅಂತರ ಕಾಯ್ದುಕೊಳ್ಳಬೇಕು. ಅಂದರೆ ರಜೆ ಇದ್ದಾಗಲೂ ಸಂಪೂರ್ಣವಾಗಿ ಮನೆ ಕೆಲಸ ಮಾಡುವುದಲ್ಲ. ಬದಲಾಗಿ ಎಲ್ಲಾ ಕೆಲಸಗಳನ್ನು ನಿಮ್ಮ ಕುಟುಂಬಸ್ಥರೊಂದಿಗೆ ಹಂಚಿಕೊಳ್ಳಬೇಕು. ರಜೆ ಸಮಯದಲ್ಲಿ ನಿಮಗೆ ಸಮಯ ಮೀಸಲಿಡಬೇಕು. ಆ ಸಮಯದಲ್ಲಿ ವಿಶ್ರಾಂತಿಯೋ, ನಿಮ್ಮ ಇಷ್ಟದ ಕೆಲಸವನ್ನು ಮಾಡಬಹುದು. ಹೀಗೆ ಪರ್ಸನಲ್ ಹಾಗೂ ಕಚೇರಿ ಕೆಲಸವನ್ನು ನಿಭಾಯಿಸಿಕೊಳ್ಳಬಹುದು.

ಟೈಮ್ ಮ್ಯಾನೇಜ್ ಮೆಂಟ್!

ಟೈಮ್ ಮ್ಯಾನೇಜ್ ಮೆಂಟ್!

ಸಮಯದ ಮ್ಯಾನೇಜ್ ಮೆಂಟ್ ಮೂಲಕವೂ ನೀವು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನವನ್ನು ಸರಿಯಾಗಿ ನಡೆಸಿಕೊಂಡು ಹೋಗಬಹುದು. ಹೌದು, ಎಲ್ಲಾವನ್ನೂ ಯೋಚಿಸಿ ಟೈಂ ಟೇಬಲ್ ತರ ಮಾಡಿಕೊಳ್ಳಬೇಕು. ಜೀವನದಲ್ಲಿ ಫ್ಲ್ಯಾನಿಂಗ್ ಇರಬೇಕು.

ಉದಾಹರಣೆಗೆ ಬೆಳಗ್ಗೆ ಎದ್ದು ಇಷ್ಟು ಗಂಟೆಯಿಂದ ಇಷ್ಟು ಗಂಟೆ ವರೆಗೆ ಮನೆ ಕೆಲಸ ನಂತರ ಕಚೇರಿ ಕೆಲಸ ಮತ್ತು ತನಗೆ ಖುಷಿ ನೀಡುವ ಕೆಲಸ ಎಂದು ಡಿವೈಡ್ ಮಾಡಿಕೊಂಡು ಅದಕ್ಕಾಗಿ ಪ್ಲ್ಯಾನಿಂಗ್ ಮಾಡಿಕೊಳ್ಳಿ. ಇದರೊಂದಿಗೆ, ನೀವು ಮಾನಸಿಕವಾಗಿ ಸಂತೋಷ ಮತ್ತು ಸ್ಥಿರವಾಗಿರುತ್ತೀರಿ ಮತ್ತು ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ

ನಮಗೆ ಇಷ್ಟವಾದ ಕೆಲಸ ಮಾಡಿ!

ನಮಗೆ ಇಷ್ಟವಾದ ಕೆಲಸ ಮಾಡಿ!

ನಾವು ನಮಗೆ ಇಷ್ಟವಾದ ಕೆಲಸ ಮಾಡಿದಾಗ ನಮ್ಮ ಜೀವನವು ಸುಖಕರ ವಾಗಲಿದೆ. ನಮ್ಮ ಇಷ್ಟದ ಕೆಲಸ ಮಾಡಿದಾಗ ಖಿನ್ನತೆ, ಒತ್ತಡ ಇಲ್ಲದೆ ಇರಬಹುದು. ನೀವು ನಿಮಗೆ ಇಷ್ಟದ ಕೆಲಸ ಮಾಡಿದರೆ ಅದು ನಮಗೆ ಹೊರೆ ಎಂದು ಅನಿಸಲ್ಲ. ಕಣ್ಣು ಮುಚ್ಚಿ ತೆರೆಯೋದರೊಳಗೆ ಈ ಕೆಲಸವೂ ಆಗಿ ಬಿಡುತ್ತದೆ. ಉದಾಹರಣೆಗೆ ಇಷ್ಟವಾದ ಮನೆ ಕೆಲಸವನ್ನು ಮಾಡಿ, ವೃತ್ತಿ ಜೀವನವೂ ನೀವು ಇಷ್ಟವಾದದನ್ನೇ ಆಯ್ಕೆ ಮಾಡಿ. ಕಷ್ಟ ಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದರೆ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡು ಬ್ಯಾಲೆನ್ಸ್ ಆಗಿ ಇರುತ್ತದೆ. ಈ ಸೂತ್ರವನ್ನು ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬಹುದು.

ಒಂದು ಕೆಲಸದ ಮೇಲೆ ಫೋಕಸ್!

ಒಂದು ಕೆಲಸದ ಮೇಲೆ ಫೋಕಸ್!

ನಾವು ಒಂದು ಸಮಯದಲ್ಲಿ ಎರಡು ಕೆಲಸ ಮಾಡಿದರೆ ನಮಗೆ ಯಾವಾಗಲೂ ಖಿನ್ನತೆ ಹಾಗೂ ಒತ್ತಡವಿರುತ್ತದೆ. ಹೀಗಾಗಿ ಒಂದು ಸಮಯದಲ್ಲಿ ಒಂದು ಕೆಲಸ ಮಾಡಲು ಕಲಿಯಬೇಕು. ನೀವು ಆಫೀಸ್ ಕೆಲಸ ಮಾಡುವಾಗ, ಮನೆ ಮತ್ತು ಕುಟುಂಬದ ಬಗ್ಗೆ ಚಿಂತಿಸಬೇಡಿ ಮತ್ತು ಮನೆಗೆ ಬಂದ ನಂತರ ಕಚೇರಿಯ ಒತ್ತಡವನ್ನು ಮರೆತುಬಿಡಿ. ಈ ರೀತಿ ಜೀವನವನ್ನು ಹೊಂದಿಸಿಕೊಂಡು ಹೋದರೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಂತೋಷ ಉಳಿಯುತ್ತದೆ.

ಸಹಾಯ ಕೇಳಿ!

ಸಹಾಯ ಕೇಳಿ!

ಎರಡು ಕೆಲಸವನ್ನು ಸಮತೋಲನದಲ್ಲಿಟ್ಟುಕೊಳ್ಳಲು ನಿಮಗೆ ತೊಂದರೆಯಾಗಿದ್ದರೆ, ಸಹಾಯಕ್ಕಾಗಿ ಜನರನ್ನು ಕೇಳಿ. ಮನೆಯ ಇತರ ಸದಸ್ಯರಿಗೆ ನಿಮ್ಮ ಮನೆ ಕೆಲಸದಲ್ಲಿ ಕೈ ಜೋಡಿಸಲು ಹೇಳಿ. ಮತ್ತೊಂದೆಡೆ, ಕಚೇರಿಯಲ್ಲಿ ಹೆಚ್ಚಿನ ಕೆಲಸದ ಒತ್ತಡವಿದ್ದರೆ, ನಿಮ್ಮ ಸಹೋದ್ಯೋಗಿಗಳ ಸಹಾಯವನ್ನು ತೆಗೆದುಕೊಳ್ಳಿ. ಇದು ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಆರಾಮವಾಗಿರುತ್ತೀರಿ. ಇದರೊಂದಿಗೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಹೊಂದಲು ನಿಮಗೆ ಸಾಧ್ಯವಾಗುತ್ತದೆ.

ಬೇರೆ ಯಾವ ರೀತಿ ನಿಭಾಯಿಸಬಹುದು?

ಬೇರೆ ಯಾವ ರೀತಿ ನಿಭಾಯಿಸಬಹುದು?

ಇನ್ನು ನಿಮ್ಮ ಮನೆ ಕೆಲಸ ನಿಮಗೆ ತೀವ್ರ ಸಮಸ್ಯೆ ಆದರೆ ಕೆಲವೊಂದಕ್ಕೆ ನೀವು ಕೆಲಸದಾಳುವನ್ನು ಇಡಬಹುದು. ಉದಾಹರಣೆಗೆ ಅಡುಗೆ ಕೆಲಸ ನೀವು ಮಾಡಿ ಪಾತ್ರೆ ತೊಳೆಯಲು, ಮನೆ ಒಳಗೆ ಹಾಗೂ ಹೊರಗೆ ಕ್ಲೀನ್ ಮಾಡಲು ಕೆಲಸಕ್ಕೆ ಜನರನ್ನು ತೆಗೆದುಕೊಳ್ಳಬಹುದು.

ಈ ಸಮಯದಲ್ಲಿ ನೀವು ಆರಾಮವಾಗಿರಬಹುದು. ಇನ್ನು ಮನೆ ಹಾಗೂ ಕಚೇರಿ ಕೆಲಸದ ಒತ್ತಡವಿದ್ದರೆ ಅದನ್ನು ನಿಭಾಯಿಸಲು ಯೋಗ, ವ್ಯಾಯಾಮದ ಮೊರೆ ಹೋಗಬಹುದಾಗಿದೆ. ಹೀಗೆ ನೀವು ನಿಮ್ಮ ಮನೆ ಹಾಗೂ ಕಚೇರಿ ಕೆಲಸವನ್ನು ಸಮತೋಲನದಲ್ಲಿ ಇಡಬಹುದಾಗಿದೆ. ಅಲ್ಲದೇ ಒತ್ತಡ, ಮಾನಸಿಕ ಖಿನ್ನತೆಯಿಂದ ಹೊರಬರಬಹುದಾಗಿದೆ.

English summary

Balance in Personal and Professional Life for Women: Challenges Women Face in Work Life In Kannada

Balance in Personal and Professional Life for Women: Challenges Women Face in Work Life In Kannada, Read on
X
Desktop Bottom Promotion