Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಯಾವ ರಾಶಿಯವರದ್ದು ಯಾವ ಆಕರ್ಷಕ ದೈಹಿಕ ವೈಶಿಷ್ಟ್ಯ ಹೊಂದಿರುತ್ತಾರೆ ಅನ್ನುವುದು ನಿಮಗೆ ತಿಳಿದಿದೆಯೇ
ಪ್ರತಿಯೊಬ್ಬರಿಗೂ ಅವರದ್ದೇ ದೈಹಿಕ ಗುಣಗಳಿದ್ದು, ಅವುಗಳೇ ನಾವು ಮತ್ತೊಬ್ಬರನ್ನು ಆಕರ್ಷಿಸಲು ಸಹಕಾರಿಯಾಗಿರುವುದು. ಆದರೆ ಅದರಲ್ಲಿ ಎಷ್ಟು ಜನರಿಗೆ ತಿಳಿದಿದೆ ಹೇಳಿ. ನಮ್ಮ ಆಕರ್ಷಕ ದೈಹಿಕ ಗುಣಲಕ್ಷಣಗಳು ನಾವು ಹುಟ್ಟಿರುವ ರಾಶಿಯನ್ನು ಅವಲಂಬಿಸಿ ಇರುತ್ತೆ ಮತ್ತು ಅವೆರಡಕ್ಕೂ ಒಂದಕ್ಕೊಂದು ಸಂಬಂಧವಿದೆ ಅನ್ನೋದು.
ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ಪ್ರತಿ ರಾಶಿಯವರಿಗೂ ಅವರದ್ದೇ ಆದ ಕೆಲವು ದೇಹಾಕೃತಿಗಳಿವೆ. ನೋಡೋಕೆ ಒಬ್ಬೊಬ್ಬರು ಒಂದೊಂದು ರೀತಿ ಅನ್ನಿಸಿದರೂ ರಾಶಿ ಚಕ್ರದ ಆಧಾರದ ಮೇಲೆ ಕೆಲವು ಗುಣಲಕ್ಷಣಗಳನ್ನು ರಾಶಿಯ ಜೊತೆ ಹೊಂದಿಸಬಹುದು.
ಹಾಗಾದ್ರೆ ನಿಮ್ಮ ರಾಶಿ ಯಾವುದು ಮತ್ತು ಅದಕ್ಕೆ ಅನುಗುಣವಾಗಿ ಯಾವ ದೈಹಿಕ ಗುಣಲಕ್ಷಣಗಳನ್ನು ನೀವು ಹೊಂದಿರುತ್ತೀರಿ ಅನ್ನುವುದನ್ನ ಈ ಕೆಳಗಿನ ಲೇಖನ ಓದಿ ಪರೀಕ್ಷಿಸಿಕೊಳ್ಳಿ. ಆಶ್ಚರ್ಯವಾದರೂ ಇದು ಸತ್ಯ. ಮುಂದೆ ಓದಿ.

ಮೇಷ ( ಮಾರ್ಚ್ 21- ಎಪ್ರಿಲ್ 19)
ನೀವು ಒಂದು ರೀತಿ ಬೆಂಕಿಚೆಂಡಿನಂತೆ. ನಿಮ್ಮಲ್ಲಿ ಎಲ್ಲರನ್ನೂ ಆಕರ್ಷಿಸುವ ಮತ್ತು ಎಲ್ಲರನ್ನೂ ನೋಡಿದ ಕೂಡಲೇ ಸೆಳೆದು ಬಿಡುವ ತಾಕತ್ತಿರುವ ನಿಮ್ಮ ಹುಬ್ಬುಗಳಿವೆ.
ನಿಮ್ಮ ಹುಬ್ಬುಗಳೇ ನಿಮ್ಮ ಮುಗ್ಧತೆ ಮತ್ತು ಬೆಂಕಿಯಂತ ಸ್ವಭಾವವನ್ನು ಮತ್ತೊಬ್ಬರ ಮುಂದೆ ಪ್ರದರ್ಶಿಸಲು ಸಹಕರಿಸುವುದು. ಅಷ್ಟೇ ಅಲ್ಲ ನಿಮ್ಮ ಮನಸಿನ ಸ್ಥಿತಿಗತಿಯ ವರ್ಣನೆಯನ್ನು ಮಾಡುವುದು ಕೂಡ ನಿಮ್ಮ ಹುಬ್ಬುಗಳೇ.

ವೃಷಭ ( ಎಪ್ರಿಲ್ 20- ಮೇ 20)
ನೀವು ವಸ್ತುಗಳನ್ನು ಮುಟ್ಟಲು ಮತ್ತು ವಸ್ತುಗಳ ಬಗ್ಗೆ ನಿಮ್ಮ ಭಾವನೆ ವ್ಯಕ್ತಪಡಿಸಲು ಬಳಸುವುದು ನಿಮ್ಮ ದೇಹದ ಬಹಳ ಸೂಕ್ಷ್ಮ ಭಾಗವನ್ನು. ಅಂದರೆ ನಿಮ್ಮ ತುಟಿಗಳನ್ನು..
ನಿಮ್ಮ ಸುಂದರವಾದ ತುಟಿಗಳೇ ನಿಮ್ಮ ಮುಖದಲ್ಲಿ ಅಟ್ರ್ಯಾಕ್ಟೀವ್ ಅನ್ನಿಸುವ ಭಾಗವಾಗಿದ್ದು ಎಲ್ಲರನ್ನೂ ಒಮ್ಮೆಲೆ ಸೆಳೆದುಬಿಡುವಂತ ತಾಕತ್ತಿರುತ್ತೆ.

ಮಿಥುನ (ಮೇ 21 - ಜೂನ್ 20)
ನಿಮ್ಮಲ್ಲಿ ಎಲ್ಲರನ್ನೂ ಸೆಳೆದುಬಿಡುವಂತ ತಾಕತ್ತಿರುವುದು ನಿಮ್ಮ ಚರ್ಮದ ಬಣ್ಣದಲ್ಲಿ. ಆದ್ರೆ ನಿಮ್ಮ ಚರ್ಮದ ಬಣ್ಣದ ಆರೈಕೆಗಾಗಿ ನೀವು ಸಾಕಷ್ಟು ಜಾಗೃತೆ ವಹಿಸಬೇಕು. ಪ್ರತಿಯೊಬ್ಬರೂ ನಿಮ್ಮ ಚರ್ಮದ ಆಕರ್ಷಣೆಯಿಂದಾಗಿ ನಿಮ್ಮನ್ನು ಇಷ್ಟಪಡುತ್ತಾರೆ, ತಿಳಿ ಕೆಂಬಣ್ಣದ ಚರ್ಮ ನಿಮ್ಮ ಆರೋಗ್ಯಕಾರಿ ಮತ್ತು ಯಂಗ್ ಆಗಿ ಕಾಣಿಸಲು ಸಹಕಾರಿಯಾಗಿರುತ್ತೆ.

ಕರ್ಕಾಟಕ (ಜೂನ್ 21 - ಜುಲೈ 22)
ನಿಮ್ಮ ಹೊಟ್ಟೆಯೇ ನಿಮ್ಮ ದೇಹದ ಆಕರ್ಷಕ ಭಾಗ. ಆದರೆ ನಿಮ್ಮ ಹೊಟ್ಟೆಯ ಬಗ್ಗೆ ಅಪರೋಕ್ಷಜ್ಞಾನ ಮತ್ತು ಸ್ವಲ್ಪ ಅದರ ಬಗ್ಗೆ ನೀವು ಸಹಾನುಭೂತಿ ತೋರಬೇಕು.
ಯಾಕಂದರೆ ಬೇರೆಯವರು ಹೇಳುವ ಸುಳ್ಳುಗಳು ನಿಮ್ಮ ಹೊಟ್ಟೆಯ ಮೇಲೆ ಪರಿಣಾಮಗಳನ್ನುಂಟು ಮಾಡುತ್ತೆ ಮತ್ತು ಸಮಸ್ಯೆಯನ್ನು ತಂದೊಡ್ಡುತ್ತೆ. ಕೆಲವೊಮ್ಮೆ ನಿಮ್ಮ ಹೊಟ್ಟೆಯೇ ತೀರಾ ಸೂಕ್ಷ್ಮವಾಗಿ ಬಿಡಲು ಮತ್ತು ನಿಮ್ಮನ್ನು ತಲೆಕೆಡಿಸಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿರುತ್ತೆ. ಆದರೆ ನೀವು ನಿಮ್ಮ ಹೊಟ್ಟೆಯನ್ನು ಪ್ರೀತಿಸಿ ಮತ್ತು ಹೆಚ್ಚು ಕಾಳಜಿ ತೆಗೆದುಕೊಳ್ಳಿ.

ಸಿಂಹ (ಜುಲೈ 23- ಅಗಸ್ಟ್ 23)
ನಿಮ್ಮ ನೀಳವಾದ ಮತ್ತು ಆಕರ್ಷಕ ಕೂದಲು ನಿಮ್ಮ ದೇಹದಲ್ಲಿ ಎಲ್ಲರನ್ನೂ ಸೆಳೆಯುವ ಅಂಗವಾಗಿದೆ. ನಿಮ್ಮನ್ನು ರಾಜ ಅಥವಾ ರಾಣಿಯಂತೆ ಕಂಗೊಳಿಸುವ ತಾಕತ್ತು ನಿಮ್ಮ ಕೂದಲಲ್ಲಿದೆ. ನೀವು ಮನೆಯಿಂದ ಹೊರ ಕಾಲಿಟ್ಟರೆ ಎಲ್ಲರೂ ನಿಮ್ಮತ್ತ ಒಮ್ಮೆ ಕಣ್ಣೆತ್ತಿ ನೋಡುವಂತೆ ಮಾಡುವುದು ನಿಮ್ಮ ತಲೆಕೂದಲು.

ಕನ್ಯಾ ( ಅಗಸ್ಟ್ 24 ರಿಂದ ಸೆಪ್ಟೆಂಬರ್ 23)
ನಿಮ್ಮ ಚರ್ಮವೇ ನಿಮ್ಮ ದೇಹದ ಆಕರ್ಷಣೆ. ಇದು ನಿಮಗೆ ಗೊತ್ತಿರುತ್ತೆ ಮತ್ತು ಅದರ ಬಗ್ಗೆ ನೀವು ಹೆಚ್ಚೆಚ್ಚು ಕಾಳಜಿ ತೆಗೆದುಕೊಳ್ಳುತ್ತೀರಿ.
ನಿಮ್ಮ ಶ್ರಮದ ಕೆಲಸ, ಕ್ರಮಬದ್ಧವಾದ ದಾರಿ ಕೇವಲ ನಿಮ್ಮ ಕಾರ್ಯದಲ್ಲಿ ಮಾತ್ರವಲ್ಲ ಬದಲಾಗಿ ಮೆದು ತ್ವಚೆಗಾಗಿಯೂ ಇರಬೇಕು ಮತ್ತು ಅದು ನಿಮ್ಮಿಂದ ಸಾಧ್ಯವಿದೆ.

ತುಲಾ ( ಸೆಪ್ಟೆಂಬರ್ 24 - ಅಕ್ಟೋಬರ್ 23)
ನಿಮಗೆ ನಿಮ್ಮ ಮತ್ತು ಇನ್ನೊಬ್ಬರ ನಡುವಿನ ಸಾಮರಸ್ಯ ಮತ್ತು ಹೊಂದಾಣಿಕೆ ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಿಮಗೆ ಸಹಕರಿಸುವುದು ನಿಮ್ಮ ದೇಹದ ಹಿಂಭಾಗ ಅಂದರೆ ಬೆನ್ನು.
ನೀವು ಹೇಗೆ ನಿಲ್ಲುತ್ತೀರಿ, ಹೇಗೆ ಕೂರುತ್ತೀರಿ ಅನ್ನುವುದು ನಿಮ್ಮನ್ನ ಮತ್ತೊಬ್ಬರು ಅಳೆಯುವ ಮಾನದಂಡವಾಗುತ್ತೆ. ನಿಮ್ಮ ಮತ್ತೊಬ್ಬರು ಅಳೆದು ತೂಗುವುದು ನಿಮ್ಮ ಪೋಷ್ಚರ್ ನಿಂದ.

ವೃಷ್ಚಿಕ ( ಅಕ್ಟೋಬರ್ 24 - ನವೆಂಬರ್ 22)
ನಿಮ್ಮ ಭಾವಭಂಗಿಗಳೇ ನಿಮ್ಮ ಅಟ್ರ್ಯಾಕ್ಷನ್ ಗಳು. ನಿಮ್ಮ ಭಂಗಿಗಳಿಂದಲೇ ಇನ್ನೊಬ್ಬರು ಪರವಶಗೊಳಿಸೋ ಮತ್ತು ಅವರನ್ನು ಸ್ವಾಧೀನಪಡಿಸಿಕೊಳ್ಳೋ ತಾಕತ್ತು ನಿಮ್ಮಲ್ಲಿರುತ್ತೆ.

ಧನು ( ನವೆಂಬರ್ 23- ಡಿಸೆಂಬರ್ 22)
ಬ್ಯಾಕ್ ಲೆಸ್ ಡ್ರೆಸ್ ತೊಡುವುದು ಮತ್ತು ನಿಮ್ಮ ಬೆನ್ನಿನ ಭಾಗದ ಪ್ರದರ್ಶನದಿಂದ ನೀವು ಹೆಚ್ಚು ಜನರನ್ನು ನಿಮ್ಮೆಡೆಗೆ ಬಹಳ ಸುಲಭದಲ್ಲಿ ಸೆಳೆದುಕೊಂಡು ಬಿಡುತ್ತೀರಿ. ನಿಮ್ಮ ಬೆನ್ನು ನಿಮ್ಮ ರಾಶಿಯ ಪ್ರಕಾರ ದೈಹಿಕ ವೈಶಿಷ್ಟ್ಯವಾಗಿದ್ದು ಅದನ್ನು ನೀವು ಬಳಕೆ ಮಾಡಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ.

ಮಕರ ( ಡಿಸೆಂಬರ್ 23- ಜನವರಿ 20)
ನಿಮ್ಮ ದೇಹದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿರುವ ದೈಹಿಕ ವೈಶಿಷ್ಟ್ಯವೆಂದರೆ ನಿಮ್ಮ ಕಾಲುಗಳು. ನೀವು ಕೇವಲ ನಡೆದಾಡುತ್ತಿರಿ ಇಲ್ಲವೇ ಒಂದು ಡ್ಯಾನ್ಸ್ ಫ್ಲೋರ್ ನಲ್ಲಿ ಕುಣಿದಾಡುತ್ತಿರಿ, ಜನರನ್ನು ನಿಮ್ಮೆಡೆಗೆ ಸೆಳೆದು ಕಟ್ಟಿಹಾಕಿಕೊಳ್ಳುವಂತ ಸಾಮರ್ಥ್ಯ ನಿಮ್ಮ ಕಾಲುಗಳಲ್ಲಿವೆ.

ಕುಂಭ ( ಜನವರಿ 21 - ಫೆಬ್ರವರಿ 18)
ರಾಶಿಚಕ್ರದ ಆಧಾರದಲ್ಲಿ ಹೇಳುವುದಾದರೆ ನಿಮ್ಮ ಕಾಲಿನ ಪಾದಗಳೇ ನಿಮ್ಮ ದೇಹದ ಆಕರ್ಷಕ ಅಂಗಗಳು. ನೀವು ನಿಮ್ಮ ಪಾದಗಳಲ್ಲಿ ಓಡಲು ಬಯಸುತ್ತೀರಿ ಆಗ ಅವು ನೈಸರ್ಗಿಕವಾಗಿಯೇ ಅಧ್ಬುತವಾಗಿ ಕಾಣಲು ಆರಂಭಿಸಿಬಿಡುತ್ತವೆ. ಈ ಪ್ರಪಂಚವನ್ನು ಬದುಕಲು ಯೋಗ್ಯಗೊಳಿಸುವ ನಿಟ್ಟಿನಲ್ಲಿ ನೀವು ಬಹಳಷ್ಟು ನಡೆದಾಡಲು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತೀರಿ.

ಮೀನ ( ಫೆಬ್ರವರಿ 19- ಮಾರ್ಚ್ 20)
ನಿಮ್ಮ ಅಂದದ ಕಣ್ಣುಗಳೇ ಎಲ್ಲರನ್ನೂ ಆಕರ್ಷಿಸುವ ನಿಮ್ಮ ದೇಹದ ಅಂಗ. ಇನ್ನೊಬ್ಬರನ್ನು ಕಣ್ಣುಗಳಲ್ಲೇ ಕೊಲ್ಲುವ ತಾಕತ್ತು ನಿಮ್ಮಲ್ಲಿರುತ್ತೆ. ನೀವು ಅದಕ್ಕಾಗಿ ಇನ್ನೊಬ್ಬರನ್ನು ಆಳವಾಗಿ ನೋಡಬೇಕು ಆಗ ಅವರನ್ನು ನೀವು ಸೆಳೆದುಬಿಡಬಹುದು.
ನೀವು ಮತ್ತೊಬ್ಬರ ಜೊತೆ ಉತ್ತಮ ಸಂಬಂಧ ಹೊಂದಲು ನಿಮ್ಮ ಕಣ್ಣುಗಳೇ ನಿಮಗೆ ಸಹಕರಿಸುತ್ತೆ.
ಇವುಗಳನ್ನು ಓದಿದ ಮೇಲೆ ನಿಮ್ಮ ದೇಹದ ಆಕರ್ಷಕ ಅಂಗಗಳನ್ನು ಪ್ರೀತಿಸಲು ಶುರು ಮಾಡುತ್ತೀರಿ ಮತ್ತು ಆ ಮೂಲಕ ಮತ್ತೊಬ್ಬರನ್ನು ಸೆಳೆಯುತ್ತೀರಿ ಎಂದು ಭಾವಿಸುತ್ತೇವೆ. ನಿಮ್ಮ ಕಮೆಂಟ್ ಗಳನ್ನು ಹಾಕಲು ಮರೆಯಬೇಡಿ.



Click it and Unblock the Notifications