Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಈ ರಾಶಿಯವರು ತಮ್ಮ ತಪ್ಪುಗಳನ್ನು ಯಾವಾಗಲೂ ಒಪ್ಪಿಕೊಳ್ಳಲು ಸಿದ್ಧರಿರುವುದೇ ಇಲ್ಲ
ನೀವು ಯಾವಾಗಲಾದರೂ ಕೆಟ್ಟ ಸನ್ನಿವೇಶವನ್ನು ಎದುರಿಸಿದ್ದೀರಾ.. ಹೌದು ನಮ್ಮ ಸುತ್ತ ಕೆಲವು ಮಂದಿ ಇರುತ್ತಾರೆ. ಅವರು ತಮ್ಮದೇ ತಪ್ಪಿದ್ದರೂ ಕೂಡ ತಪ್ಪಿನ ಬಗ್ಗೆ ಕ್ಷಮೆಯಾಚಿಸಲು ಹಿಂದೆಮುಂದೆ ನೋಡುತ್ತಾರೆ. ಯಾವುದೇ ಕಾರಣಕ್ಕೂ ಕ್ಷಮೆಯಾಚಿಸಲಾರರು. ಒಂದು ವೇಳೆ ಅವರೇ ತಪ್ಪು ಮಾಡಿದ್ದು, ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಇದ್ದರೂ ಕೂಡ ತಪ್ಪಾಯ್ತು ಎಂದು ಕೇಳಲು ಅವರು ಮುಂದೆ ಬರುವುದಿಲ್ಲ. ಇವರೊಂಥರಾ ಮೊಂಡು ಸ್ವಭಾವದವರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸ್ವಭಾವದ ಮನುಷ್ಯರನ್ನು ಅವರ ಹುಟ್ಟು ರಾಶಿಯೊಂದಿಗೆ ಹೋಲಿಸಿ ಪರಿಶೀಲಿಸಬಹುದು. ಅವರ ರಾಶಿಯೇ ಈ ಸ್ವಭಾವದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತೆ ಅನ್ನೋದು ನಂಬಿಕೆ. ಈ ಲೇಖನದಲ್ಲಿ ನಾವು ನಾಲ್ಕು ರಾಶಿಯವರ ಪಟ್ಟಿಯನ್ನು ಇಡುತ್ತಿದ್ದೇವೆ. ಇವರು ತಮ್ಮ ಜೀವನದಲ್ಲಿ ತಪ್ಪು ಮಾಡಿದ್ದರೂ ಕೂಡ ಅದನ್ನು ಒಪ್ಪಿಕೊಳ್ಳಲಾರರು. ಯಾವುದೇ ತಪ್ಪಿಗೆ ತಪ್ಪಾಯ್ತು ಎಂದು ಕೇಳುವ ಬದಲು ಸೀದ ಮುಖ ತಿರುಗಿಸಿ ಹೊರಟು ಬಿಡುತ್ತಾರೆ. ಅವರಿಗೆ ಅವರದ್ದೇ ತಪ್ಪಾಗಿದ್ದರೂ ಕೂಡ, ತಮ್ಮ ತಪ್ಪಿನಿಂದಲೇ ಇದಾದದ್ದು, ಇವರೇ ತಪ್ಪು ಅನ್ನುವ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲದೆ ಇರಬಹುದು ಅಥವಾ ಪಶ್ಚಾತ್ತಾಪವಿದ್ದರೂ ಅದನ್ನು ತೋರ್ಪಡಿಸಿ ಕ್ಷಮೆ ಕೇಳಲು ಅವರು ಮುಂದಾಗುವುದಿಲ್ಲ.
ಹಾಗಾದ್ರೆ ಅವರು ಯಾರ್ಯಾರು ಪರಿಶೀಲಿಸಿಕೊಳ್ಳಿ.

1.ವೃಷಭ
ವೃಷಭ ರಾಶಿಯವರು ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಕಳಂಕಿತರು. ಯಾವುದಾದರೂ ತಪ್ಪು ಎಸಗುತ್ತಾರೆ ಆದರೆ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರುವುದಿಲ್ಲ. ಇವರು ತುಂಬಾ ವಾದಿಸುತ್ತಾರೆ. ತಮ್ಮ ತಪ್ಪನ್ನು ತಪ್ಪೆಂದು ಹೇಳಲು ತಯಾರಿರುವುದಿಲ್ಲ. ಒಂದು ವೇಳೆ ನೀವು ಇವರ ತಪ್ಪಿನ ವಿರುದ್ಧ ನಿಂತರೆ ಹುಷಾರಾಗಿರಿ, ಯಾಕೆಂದರೆ ಇವರು ಅವರ ದೃಷ್ಟಿಕೋನದಲ್ಲಿ ಮಾತ್ರ ನೋಡುತ್ತಾರೆ ಮತ್ತು ಅದನ್ನು ಅದೇ ರೀತಿಯಲ್ಲಿ ವಾದಿಸುತ್ತಾರೆ. ಯಾಕೆಂದರೆ ಅವರು ಆ ವಿಚಾರಕ್ಕೆ ಸಂಬಂಧ ಪಟ್ಟಂತೆ ತಮ್ಮನ್ನು ತಾವು ಫಿಕ್ಸ್ ಮಾಡಿಕೊಂಡಿರುತ್ತಾರೆ. ಮತ್ತೊಂದು ಮುಖದಲ್ಲಿ ಆ ವಿಚಾರವನ್ನು ನೋಡಲು ಅವರು ಬಯಸುವುದಿಲ್ಲ.

2.ಸಿಂಹ
ಸಿಂಹ ರಾಶಿಯವರ ವಿಚಾರದಲ್ಲಿ ಇವರು ಯಾವಾಗಲೂ ಒಳ್ಳೆಯವರಾಗಿರುತ್ತಾರೆ. ಇವರು ಇವರ ಬಗ್ಗೆ ಯಾವಾಗಲೂ ತಮ್ಮನ್ನು ತಾವು ಹಿರೋಗಳೆಂದೇ ಭಾವಿಸುತ್ತಾರೆ. ಇವರು ಇವರ ಕನಸಿನಲ್ಲೂ ಕೂಡ ತಮ್ಮನ್ನು ತಾವು ಕೆಟ್ಟವರು, ತಪ್ಪು ಎಸಗುವವರು ಎಂದು ಭಾವಿಸುವುದೇ ಇಲ್ಲ. ಬದಲಾಗಿ ಇವರದ್ದು ಯಾವಾಗಲೂ ದೊಡ್ಡ ಮಟ್ಟದ ಆಲೋಚನೆಗಳೇ.. ಇವರು ತಮ್ಮ ಋಣಾತ್ಮಕ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಯಾಕೆಂದರೆ ಇವರು ಯಾವಾಗಲೂ ತಪ್ಪಾಯ್ತು ಎಂದು ಕೇಳಲು ಇಚ್ಛಿಸುವುದಿಲ್ಲ. ಇವರು ಇವರ ಸ್ಟೋರಿಯಲ್ಲಿ ಇನ್ನೂ ಹಲವರು ಇದ್ದಾರೆ ಅನ್ನುವುದನ್ನೇ ಮರೆತು ಬಿಡುತ್ತಾರೆ. ಎಲ್ಲವೂ ತಮ್ಮಿಂದ ಅನ್ನೋ ಭಾವನೆ ಇವರದ್ದು. ಮತ್ತು ತಾವು ಪರ್ಫೆಕ್ಚ್ ಎಂದು ಭಾವಿಸುತ್ತಾರೆ.

3.ವೃಶ್ಚಿಕ
ನೀವು ವೃಶ್ಚಿಕ ರಾಶಿಯವರು ಕ್ಷಮೆಯಾಚಿಸುತ್ತಾರೆ ಎಂದು ಭಾವಿಸುತ್ತಿದ್ದರೆ ಅದು ಕನಸು ಅಷ್ಟೇ...ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಏನನ್ನೂ ಮಾಡುವುದಿಲ್ಲ. ಆದರೆ ಅವರ ಕೆಲವು ಕೆಲಸಗಳು ತಪ್ಪಾಗಿರುತ್ತದೆ. ಆದರೆ ಇವರದ್ದು ಮೋಸ ಮಾಡುವ ವ್ಯಕ್ತಿತ್ವ. ಯಾವಾಗಲೂ ಏನಾದರೂ ಲಾಭವಾಗಬೇಕೆಂದೇ ಆಲೋಚಿಸುವ ಮನಸ್ಥಿತಿಯವರು. ಕಷ್ಟದ ಸನ್ನಿವೇಶಗಳಲ್ಲೂ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ. ಒಂದು ವೇಳೆ ಇವರದ್ದೇ ತಪ್ಪಾಗಿದ್ದರೂ ಕೂಡ ಇವರು ಕ್ಷಮೆ ಕೇಳುವುದಿಲ್ಲ ಬದಲಾಗಿ ಇತರರೇ ಇವರ ಬಳಿ ಕ್ಷಮೆಯಾಚಿಸುವಂತೆ ಮಾಡುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.

4.ಕುಂಭ
ಕುಂಭ ರಾಶಿಯವರು ಹೇಗೆಂದರೆ ಕೂಡಲೇ ಯಾವುದೇ ತಪ್ಪಿಗೂ ಕ್ಷಮೆ ಕೇಳುವುದಿಲ್ಲ. ಒಂದು ವೇಳೆ ನೀವು ಅವರನ್ನು ಕ್ಷಮೆ ಕೇಳುವಂತೆ ಮಾಡುತ್ತೇನೆ ಎಂದು ಹೊರಟರೆ ನಾವು ನಿಮಗೆ ಆಲ್ ದಿ ಬೆಸ್ಟ್ ಹೇಳಬೇಕಷ್ಟೇ. ಯಾಕೆಂದರೆ ಕುಂಭ ರಾಶಿಯವರು ಕಾದು ನೋಡುವ ತಂತ್ರಗಾರಿಕೆಯವರು. ಕುಂಭ ರಾಶಿಯವರು ಕ್ಷಮೆ ಕೇಳುವಂತೆ ಮಾಡಬೇಕು ಎಂದು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅವರ ಪ್ರಯತ್ನ ಕೂಡಲೇ ನೆರವೇರುವುದಿಲ್ಲ. ತಮ್ಮ ತಪ್ಪನ್ನು ಎದುರಿಸುವುದು ಕುಂಭ ರಾಶಿಯವರು ಭಯ ಪಡುವ ವಿಚಾರವೇ ಆಗಿರುವುದಿಲ್ಲ. ಕುಂಭ ರಾಶಿಯವರು ಸಮಯ ಬರಲಿ ಜನರು ತಮ್ಮ ತಪ್ಪನ್ನು ಮರೆತು ಬಿಡುತ್ತಾರೆ ಅಲ್ಲಿಯವರೆಗೂ ಕಾಯೋಣ ಎಂಬಂತೆ ವರ್ತಿಸುತ್ತಾರೆ ಇವರು. ಒಂದು ವೇಳೆ ಅವರಿಗೆ ಮತ್ತೊಬ್ಬರು ತಮ್ಮಿಂದ ಕ್ಷಮೆಯಾಚಿಸುವುದನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿದರೂ ಕೂಡ ಇವರು ಕ್ಷಮೆ ಕೇಳಲು ಮುಂದಾಗುವುದಿಲ್ಲ.
ನೀವು ನಮ್ಮ ರಾಶಿಯ ಈ ಲೆಕ್ಕಾಚಾರವನ್ನು ಒಪ್ಪುತ್ತೀರಾ..ಹಾಗಾದ್ರೆ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ. ಇನ್ನಷ್ಟು ರಾಶಿಫಲದ ಬಗ್ಗೆ ಇಲ್ಲಿ ಕ್ಲಿಕ್ಕಿಸಿ ನೋಡಿ.



Click it and Unblock the Notifications