Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಧನು ರಾಶಿಯವರಿಗೆ 2018ರ ಮೇ ತಿಂಗಳು ಸಿಹಿಯೋ, ಕಹಿಯೋ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಚಕ್ರಗಳಿವೆ. ಅವುಗಳಲ್ಲಿ ಪ್ರತಿಯೊಂದು ಸಹ ತನ್ನದೇ ಆದ ವಿಶೇಷತೆಯಗಳನ್ನು ಒಳಗೊಂಡಿವೆ. ಅಂತಹ ಒಂದು ವಿಶೇಷ ಗುಣಗಳು ಹಾಗೂ ಅದೃಷ್ಟಗಳನ್ನು ಹೊಂದಿರುವ ರಾಶಿಚಕ್ರವೆಂದರೆ ಧನು ರಾಶಿ. 9ನೇ ರಾಶಿಚಕ್ರವಾದ ಧನು ರಾಶಿಯು ವ್ಯಕ್ತಿಯ ಮೇಲೆ ಗಣನೀಯವಾದ ಬದಲಾವಣೆಗಳನ್ನು ತಂದುಕೊಡತ್ತದೆ.
ಈ ರಾಶಿಚಕ್ರದ ವ್ಯಕ್ತಿಗಳನ್ನು ಇತರ ರಾಶಿಚಕ್ರದ ವ್ಯಕ್ತಿಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರವಾಸಿಗರು ಎಂದು ಹೇಳಬಹುದು. ತಾತ್ವಿಕ ದೃಷ್ಟಿಕೋನವನ್ನು ಹೊಂದಿರುವ ಇವರು ತೆರೆದ ಮನಸ್ಸಿನವರಾಗಿರುತ್ತಾರೆ. ಬದಲಾವಣೆಯನ್ನು ಇಷ್ಟಪಡುವ ಇವರು ಬಾಹ್ಯಮುಖಿ ವ್ಯಕ್ತಿತ್ವದವರಾಗಿರುತ್ತಾರೆ.

ಆಶಾವಾದಿಗಳು, ಉತ್ಸಾಹ ಪೂರ್ಣರು ಹಾಗೂ ದೃಢ ಆಲೋಚನೆಗಳನ್ನು ಹೊಂದಿದವರು ಆಗಿರುತ್ತಾರೆ. ಒಮ್ಮೆ ಕೈಗೊಂಡ ನಿರ್ಧಾರಗಳು ಅಥವಾ ಗುರಿಯನ್ನು ಅವರು ಸಾಧಿಸದೆ ಬಿಡರು. ಗುರಿ ಸಾಧನೆಯ ದಾರಿಯಲ್ಲಿ ಎಂತಹದ್ದೇ ಸಮಸ್ಯೆಗಳು ಎದುರಾದರೂ ಸಹ ಅದನ್ನು ಎದುರಿಸಿ ಮುನ್ನುಗ್ಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಹಾಸ್ಯ ಪ್ರಜ್ಞೆ ಉಳ್ಳವರು, ಪ್ರಾಮಾಣಿಕರು, ಸಹನಾ ಶೀಲರು ಹಾಗೂ ನಿಷ್ಠಾವಂತರಾದ ಈ ರಾಶಿಚಕ್ರದ ವ್ಯಕ್ತಿಗಳ ಭವಿಷ್ಯ 2018ರ ಮೇ ತಿಂಗಳಲ್ಲಿ ಹೇಗಿರುತ್ತದೆ? ಹಾಗೂ ಯಾವೆಲ್ಲಾ ಬಗೆಯ ಬದಲಾವಣೆಯನ್ನು ಕಾಣುವರು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ಮಾಹಿತಿಯೊಂದಿಗೆ ವಿವರಿಸಿದೆ.
ಆರೋಗ್ಯ ಸ್ಥಿತಿ:
ಈ ತಿಂಗಳಲ್ಲಿ ಧನು ರಾಶಿಯ ವ್ಯಕ್ತಿಗಳು ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿರುತ್ತಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ ನೀವು ಉತ್ತಮ ಅದೃಷ್ಟಗಳೊಂದಿಗೆ ದೇವರ ಆಶೀರ್ವಾದವನ್ನು ಹೊಂದಿರುತ್ತೀರಿ ಎಂದು ಹೇಳಲಾಗುವುದು.
ಕೆಲವು ಗ್ರಹಗತಿಗಳ ಬದಲಾವಣೆಯಿಂದಾಗಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ತಕ್ಷಣ ಔಷಧಿಯನ್ನು ಮಾಡಿದರೆ ಆರೋಗ್ಯ ಬಹುಬೇಗ ಸುಧಾರಣೆಯಾಗುವುದು.
ವೃತ್ತಿ ಜೀವನ:
ಈ ತಿಂಗಳಲ್ಲಿ ಧನು ರಾಶಿಯವರಿಗೆ ವೃತ್ತಿ ಜೀವನಕ್ಕೆ ಸೇರಿದಂತೆ ಅನೇಕ ಅವಕಾಶಗಳು ಕೈಗೂಡಿ ಬರುವುದು. ಲಾಭವನ್ನು ನೀಡುವಂತಹ ಸಾಹಸ ಯೋಜನೆಗಳನ್ನು ನೀವು ಕೈಗೊಳ್ಳುವಿರಿ ಅಥವಾ ಲಾಭದೆಡೆಗೆ ಹೆಜ್ಜೆ ಹಾಕುವಿರಿ. ಇವರ ಖ್ಯಾತಿಯು ಉನ್ನತ ಮಟ್ಟದಲ್ಲಿ ಇರುತ್ತದೆ. ಇದು ಕೆಲಸಗಾರರ ನಡುವೆ ಘರ್ಷಣೆಯನ್ನು ರಚಿಸುವುದು. ಹಾಗಾಗಿ ಇವರು ನಿಯಮಿತವಾದ ವಿರಾಮ ಹಾಗೂ ಅಗತ್ಯವಿದ್ದಾಗ ವಿಶ್ರಾಂತಿಯನ್ನು ಪಡೆಯಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಹಣಕಾಸಿನ ಸ್ಥಿತಿ:
ಈ ತಿಂಗಳಲ್ಲಿ ಹಣಕಾಸಿನ ಸ್ಥಿತಿಯು ಅಷ್ಟು ಅನುಕೂಲಕರವಾಗಿರದು. ನೀವು ತೊಡಗಿಕೊಂಡಿರುವ ವಿವಾದದಲ್ಲಿ ನಿಮ್ಮ ವಿರುದ್ಧವಾದ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಮುಂಚೆ ಸಾಕಷ್ಟು ಚಿಂತನೆ ನಡೆಸುವುದು ಸೂಕ್ತ.
ಪ್ರೀತಿಯ ಜೀವನ:
ಈ ತಿಂಗಳು ನೀವು ವೃತ್ತಿ ಜೀವನಕ್ಕೆ ಸಂಬಂಧೀಸಿದಂತೆ ಕೆಲಸದಲ್ಲಿ ಹೆಚ್ಚು ತಲ್ಲೀನತೆ ನೀಡುವಿರಿ. ಹಾಗಾಗಿ ನಿಮ್ಮ ಪ್ರೀತಿ ಅಥವಾ ಸಂಬಂಧಕ್ಕೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗದು. ನಿಮ್ಮ ಪಾಲುದಾರರ ಅಗತ್ಯತೆಯನ್ನು ಅರಿತು, ಅವರಿಗಾಗಿ ಸ್ವಲ್ಪ ಸಮಯ ನೀಡುವುದನ್ನು ಮರೆಯದಿರಿ. ಆಗ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.
ಅದೃಷ್ಟ ದಿನಾಂಕ ಮತ್ತು ಬಣ್ಣಗಳು:
ಈ ತಿಂಗಳು ಧನು ರಾಶಿಯವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆಯೆಂದರೆ 17, 40, 46, 61 ಮತ್ತು 76.
ಅದೃಷ್ಟದ ದಿನಾಂಕ- 6,7,8,17,18,25,26.
ಅದೃಷ್ಟದ ಬಣ್ಣಗಳು- ಖಾಕಿ ಹಸಿರು ಬಣ್ಣ, ಕಿತ್ತಳೆ ಕೇಸರಿ ಮತ್ತು ಕೆಂಪು ಬಣ್ಣಗಳು.



Click it and Unblock the Notifications
