ರಾಶಿಚಕ್ರದ ಅನುಸಾರ ನಮ್ಮ ವ್ಯಕ್ತಿತ್ವದ ಆಕರ್ಷಣೀಯ ಅಂಗಗಳು ಇವು

Posted By: Divya Pandit
Subscribe to Boldsky

ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಆಕರ್ಷಣೀಯ ವಿಚಾರಗಳು ಅಡಗಿರುತ್ತವೆ. ಕೆಲವೊಂದು ಅದ್ಭುತ ಗುಣಗಳು ವ್ಯಕ್ತಿತ್ವಕ್ಕೆ ಹೊಸ ಮೆರಗನ್ನು ನೀಡುತ್ತವೆ. ಇಲ್ಲವೇ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಗಳಂತೆ ಮಾಡುತ್ತವೆ. ಕೆಲವರಲ್ಲಿ ಋಣಾತ್ಮಕ ಗುಣಗಳಿಂದ ಸಮಾಜದಲ್ಲಿ ಘಾತಕ ವ್ಯಕ್ತಿಗಳಾಗಿರುವಂತೆ ಮಾಡುತ್ತದೆ. ಆದರೆ ಕೆಲವು ಭೌತಿಕ ಗುಣಲಕ್ಷಣಗಳು ವ್ಯಕ್ತಿಯ ಕಲ್ಪನೆ ಅಥವಾ ಅಭಿಪ್ರಾಯಗಳನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತವೆ.

ನಮ್ಮ ನಡೆ-ನುಡಿ ಹಾಗೂ ಭೌತಿಕ ಲಕ್ಷಣಗಳು ನಾವು ಎಂತಹ ವ್ಯಕ್ತಿಗಳು ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ಅವು ನಕಾರಾತ್ಮಕ ವಾಗಿರಬಹುದು ಅಥವಾ ಸಕಾರಾತ್ಮಕ ಗುಣಗಳೇ ಆಗಿರಬಹುದು. ಇಂತಹ ಗುಣಗಳು ನಮ್ಮಲ್ಲಿ ಹುಟ್ಟಲು ಕಾರಣ ನಮ್ಮ ರಾಶಿಚಕ್ರಗಳು. ಅಂತೆಯೇ ಪ್ರತಿಯೊಂದು ರಾಶಿಚಕ್ರದವರಲ್ಲೂ ಕೆಲವು ದೇಹದ ಅಂಗಾಂಗಗಳು ಆಕರ್ಷಣೀಯವಾಗಿರಲು ರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ರಾಶಿಚಕ್ರದ ಅನುಸಾರ ನಿಮ್ಮ ಗುಣ ಹಾಗೂ ಭೌತಿಕ ನೋಟದಲ್ಲಿ ಯಾವ ರೀತಿಯ ವೈಶಿಷ್ಟ್ಯವನ್ನು ಹೊಂದಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾಗಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ:

ಮೇಷ:

ಈ ರಾಶಿಚಕ್ರವು ಬೆಂಕಿಯ ಚಿಹ್ನೆಯನ್ನು ಹೊಂದಿರುತ್ತದೆ. ಈ ರಾಶಿಚಕ್ರದವರ ಆಕರ್ಷಕ ಭೌತಿಕ ಲಕ್ಷಣವೆಂದರೆ ಹುಬ್ಬುಗಳು. ಇವರ ಹುಬ್ಬುಗಳು ಇವರಲ್ಲಿರುವ ಕಠಿಣ ಗುಣಗಳನ್ನು ಮರೆಮಾಚಿ, ಮುಗ್ಧತೆಯನ್ನು ಪ್ರದರ್ಶಿಸುವಂತೆ ಮಾಡಲು ಸಹಾಯಮಾಡುತ್ತದೆ. ಅಲ್ಲದೆ ಮಾನಸಿಕವಾಗಿ ಚಿತ್ತಸ್ಥಿತಿಗಳ ಬಗ್ಗೆ ಬಹಿರಂಗಪಡಿಸುತ್ತವೆ.

ವೃಷಭ:

ವೃಷಭ:

ಈ ರಾಶಿಯ ಚಿಹ್ನೆಯು ಭೂಮಿ. ಇವರು ತಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗವನ್ನು ಸ್ಪರ್ಶಿಸುವುದರಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ಇವರ ತುಟಿಗಳು ಅತ್ಯಂತ ಅದ್ಭುತವಾದ ದೇಹ ವೈಶಿಷ್ಟ್ಯಗಳಲ್ಲಿ ಒಂದು ಎಂದು ಜ್ಯೋತಿಷ್ಯ ಶಾಸ್ತ್ರ ಬಹಿರಂಗಪಡಿಸುತ್ತದೆ.

ಮಿಥುನ:

ಮಿಥುನ:

ಈ ರಾಶಿಚಕ್ರದವರ ಅತ್ಯುತ್ತಮ ದೈಹಿಕ ಲಕ್ಷಣವೆಂದರೆ ಇವರ ಮೈಬಣ್ಣ. ಹಾಗಾಗಿ ಇವರು ತಮ್ಮ ದೇಹವನ್ನು ಅತ್ಯುತ್ತಮ ಆರೈಕೆಯಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಲಾಗುವುದು. ಈ ಚಿಹ್ನೆಯ ಕಿರಿಯ ಮತ್ತು ಹಿರಿಯ ವ್ಯಕ್ತಿಗಳಲ್ಲಿ ಆರೋಗ್ಯ ಪೂರ್ಣವಾದ ಗುಲಾಬಿ ಬಣ್ಣದ ಕೆನ್ನೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಕರ್ಕ:

ಕರ್ಕ:

ಈ ರಾಶಿಚಕ್ರದವರ ಅತ್ಯುತ್ತಮ ದೇಹ ವೈಶಿಷ್ಟ್ಯವು ಹೊಟ್ಟೆಯ ಭಾಗವಾಗಿದೆ. ಸುಂದರ ಹೊಟ್ಟೆಯ ಭಾಗವು ಇತರರನ್ನು ಬಹು ಬೇಗ ಆಕರ್ಷಿಸುವುದು. ಜೊತೆಗೆ ಸಹಾನೂಭೂತಿಯನ್ನು ಹುಟ್ಟಿಸುವಂತೆ ಮಾಡುತ್ತದೆ. ಸ್ವಭಾವವು ಸೂಕ್ಷ್ಮತೆಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಸಿಂಹ:

ಸಿಂಹ:

ಈ ರಾಶಿಯವರ ಕೂದಲು ಅತ್ಯುತ್ತಮ ದೈಹಿಕ ಲಕ್ಷಣವನ್ನು ವ್ಯಾಖ್ಯಾನಿಸುತ್ತದೆ. ಈ ಗುಣಲಕ್ಷಣವು ಇವರ ಭವಿಷ್ಯದಲ್ಲಿ ಶ್ರೀಮಂತಿಕೆ ಇದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಇವರು ನಡೆದಾಡುವ ಪ್ರತಿ ಬಾರಿಯೂ ಇತರರ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ.

ಕನ್ಯಾ:

ಕನ್ಯಾ:

ಈ ರಾಶಿಚಕ್ರದ ಚಿಹ್ನೆಯ ಪ್ರಕಾರ ಇವರ ಚರ್ಮವು ಅತ್ಯುತ್ತಮ ಗುಣಲಕ್ಷಣವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುವುದು. ತ್ವಚೆಯನ್ನು ಸದಾ ಆರೈಕೆಯಲ್ಲಿ ಇಡುವ ನಿಮಗೆ ಈಗಾಗಲೇ ಈ ವಿಚಾರವನ್ನು ತಿಳಿದಿದ್ದೀರಿ ಎಂದು ಹೇಳಲಾಗಿದೆ. ಶ್ರಮದಾಯಕವಾಗಿರುವ ನಿಮ್ಮ ಕೆಲಸ ಹಾಗೂ ಕ್ರಮಬದ್ಧವಾದ ವಿಧಾನವು ತ್ವಚೆಯ ಮೇಲೆ ಪ್ರಭಾವ ಬೀರುವುದು.

ತುಲಾ:

ತುಲಾ:

ಇತರರ ನಡುವೆ ಸಾಮರಸ್ಯಕ್ಕೆ ನಿಮ್ಮ ಬಯಕೆಯು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಅತ್ಯುತ್ತಮ ವೈಶಿಷ್ಟ್ಯ ಎಂದರೆ ನಿಮ್ಮ ಹಿಂಭಾಗ. ಅತ್ಯುತ್ತಮ ಹಿಂಭಾಗವನ್ನು ಹೊಂದಿರುವ ನೀವು ಬಹಳ ಮೃದು ಸ್ವಭಾವದವರು ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

ವೃಶ್ಚಿಕ:

ವೃಶ್ಚಿಕ:

ಈ ರಾಶಿಚಕ್ರದವರ ಗುಪ್ತ ಅಂಗಾಂಗಗಳು ಉತ್ತಮ ಗುಣಲಕ್ಷಣಗಳನ್ನು ಒಳಗೊಂಡಿರುತ್ತವೆ. ಅವುಗಳ ಶಕ್ತಿಯನ್ನು ನೀವು ತಿಳಿದಿರುತ್ತೀರಿ. ಅವುಗಳನ್ನು ಹೇಗೆ ನಿಯಂತ್ರಿಸಬೇಕು ಹಾಗೂ ಆರೈಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನೀವು ತಿಳಿದಿರುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.

ಧನು:

ಧನು:

ಈ ರಾಶಿಚಕ್ರದವರ ಬೆನ್ನಿನ ದೇಹ ವೈಶಿಷ್ಟ್ಯವು ಅತ್ಯುತ್ತಮವಾಗಿದೆ. ಹಿಂಭಾಗ ತೋರುವ ಉಡುಪುಗಳನ್ನು ಧರಿಸಿದರೆ ಸುಲಭವಾಗಿ ನಿಮ್ಮ ಆಕರ್ಷಣೆಗೆ ಇತರರು ಒಳಗಾಗುತ್ತಾರೆ ಎಂದು ಹೇಳಲಾಗುವುದು.

ಮಕರ:

ಮಕರ:

ಈ ರಾಶಿಚಕ್ರದವರ ಅತ್ಯುತ್ತಮ ಭೌತಿಕ ಗುಣಲಕ್ಷಣಗಳೆಂದರೆ ಕಾಲುಗಳು. ಸುಂದರ ಕಾಲುಗಳು ನಿಮ್ಮ ನಡಿಗೆಯ ಸೊಬಗು ಹಾಗೂ ನೃತ್ಯ ವೈಖರಿಗೆ ಹೆಚ್ಚಿನ ಮೆರಗನ್ನು ನೀಡುವುದು. ಜೊತೆಗೆ ಜನರನ್ನು ಬಹುಬೇಗ ಆಕರ್ಷಿಸುವುದು.

ಕುಂಭ:

ಕುಂಭ:

ಈ ರಾಶಿಚಕ್ರದವರ ಅತ್ಯುತ್ತಮ ಭೌತಿಕ ಲಕ್ಷಣವೆಂದರೆ ಪಾದಗಳು. ಪಾದಗಳ ಪಾಲನೆ ಹಾಗೂ ಚಲನೆಗಳನ್ನು ನೀವು ಇಷ್ಟಪಡುವಿರಿ. ಉತ್ತಮ ನಡಿಗೆಯ ಮೂಲಕ ನೈಸರ್ಗಿಕವಾಗಿಯೇ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಮೀನ:

ಮೀನ:

ಈ ರಾಶಿಚಕ್ರದವರ ಅತ್ಯುತ್ತಮ ಬಾಹ್ಯ ಲಕ್ಷಣವೆಂದರೆ ಅವರ ಕಣ್ಣುಗಳು. ಸುಂದರ ಕಣ್ಣುಗಳಿಂದಲೇ ಪ್ರಪಂಚವನ್ನು ಗೆಲ್ಲಬಹುದಾದ ಶಕ್ತಿಯನ್ನು ಹೊಂದಿರುತ್ತೀರಿ. ಅತ್ಯುತ್ತ ಕಣ್ಣಿನ ಆಕರ್ಷಣೆಗಳಿಂದ ನಿಮ್ಮ ಸೌಂದರ್ಯವು ಆಕರ್ಷಣೆಯಿಂದ ಕೂಡಿರುವಂತೆ ಮಾಡುವುದು.

For Quick Alerts
ALLOW NOTIFICATIONS
For Daily Alerts

    Read more about: life
    English summary

    ರಾಶಿಚಕ್ರದ ಅನುಸಾರ ನಮ್ಮ ವ್ಯಕ್ತಿತ್ವದ ಆಕರ್ಷಣೀಯ ಅಂಗಗಳು ಇವು.

    most-attractive-features-of-zodiacs
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more