Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
ಮೇ ತಿಂಗಳಲ್ಲಿ ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ ನೋಡಿ
ಕನ್ಯಾ ರಾಶಿಯ ವ್ಯಕ್ತಿಗಳು ಪರಿಪೂರ್ಣತೆಗೆ ಒತ್ತ ನೀಡುವವರಾಗಿದ್ದು ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವವರಾಗಿರುತ್ತಾರೆ. ಈ ವ್ಯಕ್ತಿಗಳು ತಮಗೆ ಇಷ್ಟವಿರುವ ಕೆಲಸದಲ್ಲಿ ಮಗ್ನರಾಗುವ ಮೂಲಕ ಸಂತುಷ್ಟರಾಗುತ್ತಾರೆ.
ಈ ವ್ಯಕ್ತಿಗಳು ಸಾಮಾನ್ಯವಾಗಿ ಅಪಾರ ತಾಳ್ಮೆಯುಳ್ಳವರೂ, ಕಾಳಜಿ ವಹಿಸುವವರೂ ತಮ್ಮ ಆತ್ಮೀಯರಿಗೆ ಕೈಲಾದ ಸಹಾಯ ಮಾಡುವ ಗುಣವುಳ್ಳವರೂ ಆಗಿರುತ್ತಾರೆ. ಅಲ್ಲದೇ ಇವರು ತಮ್ಮ ಸ್ವಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ಹೊಂದಿರುತ್ತಾರೆ ಹಾಗೂ ನೈತಿಕತೆ, ವಿಧೇಯತೆ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಗಳೂ ಆಗಿರುತ್ತಾರೆ.
ಈ ಮಾಹಿತಿಗಳ ಹೊರತಾಗಿ ಈ ರಾಶಿಯ ವ್ಯಕ್ತಿಗಳು ಇಡಿಯ ತಿಂಗಳಲ್ಲಿ ಎದುರಾಗುವ ಪ್ರಮುಖ ವಿದ್ಯಮಾನಗಳನ್ನು ಗಮನಿಸಿ ತಮ್ಮ ಚಟುವಟಿಕೆಗಳನ್ನು ಯೋಜಿಸಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ಖ್ಯಾತ ಜ್ಯೋತಿಶ್ಯಾಸ್ತ್ರಜ್ಞರು ಪ್ರಸ್ತುತಪಡಿಸಿರುವ ಮಾಹಿತಿಗಳನ್ನು ಪರಿಗಣಿಸಿ ಆದಷ್ಟೂ ನಿಖರವಾದ ಹಾಗೂ ಕನ್ಯಾರಾಶಿಯ ವ್ಯಕ್ತಿಗಳು ಮೇ ತಿಂಗಳಲ್ಲಿ ಯಾವ ರೀತಿಯಲ್ಲಿ ತಮ್ಮ ಯೋಜನೆಗಳನ್ನು ಮುಂದುವರೆಸಬೇಕೆಂಬ ಅಮೂಲ್ಯ ಮಾಹಿತಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
ಬನ್ನಿ, ಕನ್ಯಾ ರಾಶಿಯವರಿಗೆ ಮೇ ತಿಂಗಳ ಭವಿಷ್ಯ ಭಂಡಾರದಲ್ಲಿ ಏನೇನಿದೆ ಎಂಬುದನ್ನು ನೋಡೋಣ:
ಆರೋಗ್ಯ ಭಾಗ್ಯ:
ಕನ್ಯಾರಾಶಿಯ ವ್ಯಕ್ತಿಗಳ ಆರೋಗ್ಯ ಇಡಿಯ ತಿಂಗಳು ಉತ್ತಮವಾಗಿಯೇ ಇದ್ದರೂ 21ರ ಬಳಿಕ ಕೊಂಚ ಶಿಥಿಲವಾಗುವ ಸಾಧ್ಯತೆಯಿದೆ. ಹಾಗಾಗಿ ನೀವು ಸಾಕಶ್ಟು ವಿರಾಮವನ್ನು ತೆಗೆದುಕೊಳ್ಳಬೇಕು ಹಾಗೂ ಉತ್ತಮ ಆರೋಗ್ಯ ಹೊಂದಲು ಶಕ್ತಿಯನ್ನು ಹೆಚ್ಚಾಗಿ ನಷ್ಟವಗಲು ಬಿಡಬಾರದು. ಆದರೆ ಈ ತಿಂಗಳಲ್ಲಿ ಗಂಭೀರವಾದ ಕಾಯಿಲೆಗಳೇನೂ ಆವರಿಸುವ ಸಾಧ್ಯತೆಯಿಲ್ಲದಿದ್ದರೂ ಆದಷ್ಟೂ ಕಾಳಜಿಯನ್ನು ವಹಿಸಬೇಕು.
ವೃತ್ತಿಜೀವನದ ಬಗ್ಗೆ:
ಈ ತಿಂಗಳಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೇಳುವಷ್ಟೇನೋ ಗುರುತರವಾದ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ಆದರೆ ಕೆಲವು ವ್ಯಕ್ತಿಗಳಿಗೆ ಕ್ಷಿಪ್ರವಾಗಿ ಹಣವನ್ನು ಸಂಪಾದಿಸುವ ಕೆಲವು ಕಾನೂನಿಗೆ ವಿರುದ್ದವಾದ ಕ್ರಮಗಳನ್ನು ಕೈಗೊಳ್ಳಲು ಮನ ವಾಲುವ ಸಾಧ್ಯತೆ ಇದೆ.
ಆದರೆ ಈ ಪ್ರಲೋಭನೆಗಳಿಗೆ ಮನಸೋಲದಂತೆ ಮನಸ್ಸನ್ನು ಸ್ಥಿಮಿತದಲ್ಲಿಡುವುದು ನಿಮ್ಮ ವೃತ್ತಿಜೀವನದ ಉಳಿವಿಗೆ ಅಗತ್ಯವಾಗಿದೆ. ಈ ತಿಂಗಳಲ್ಲಿ ನಿಮ್ಮ ಹಲವಾರು ಪ್ರಯತ್ನಗಳು ಯಾರ ಗಮನಕ್ಕೂ ಬಾರದೇ ಪ್ರಯೋಜನವಿಲ್ಲದಂತಾಗುತ್ತವೆ. ಆದರೆ ತಾಳ್ಮೆ ಇರಲಿ, ಮುಂದಿನ ದಿನಗಳಲ್ಲಿ ಇಂದಿನ ದಿನಗಳ ಶ್ರಮಕ್ಕೆ ಸೂಕ್ತವಾದ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಈ ತಿಂಗಳಲ್ಲಿ ನಿಮ್ಮ ಹಣಕಾಸಿನ ವ್ಯವಸ್ಥೆ:
ವೃತ್ತಿಪರರಿಗೆ ಈ ತಿಂಗಳು ಅಷ್ಟೇನೋ ಹೇಳಿಕೊಳ್ಳುವಂತಹ ಸಮಯವಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಹೆಚ್ಚೇ ಕಷ್ಟಪಡಬೇಕಾಗುತ್ತದೆ ಹಾಗೂ ನಿಮ್ಮ ಎಷ್ಟೇ ಪ್ರಯತ್ನಗಳಿಗೂ ಹೊರತಾಗಿ ಪರಿಸ್ಥಿತಿ ಉತ್ತಮಗೊಳ್ಳದಿರುವುದು ನಿಮಗೆ ಹತಾಶೆಯುಂಟುಮಾಡಬಹುದು. ಹಾಗಾಗಿ ಈ ತಿಂಗಳಲ್ಲಿ ನಿಮ್ಮ ಖರ್ಚುಗಳನ್ನು ಆದಷ್ಟೂ ಕಡಿಮೆಯಾಗಿಸಲು ನಿಮ್ಮ ಜೀವನಕ್ರಮವನ್ನು ಸರಳವಾಗಿಸುವುದೇ ಸೂಕ್ತವಾದ ಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಉತ್ತಮಗೊಳ್ಳುವವರೆಗೂ ಹೀಗೇ ಮುಂದುವರೆಸಬೇಕು.
ಪ್ರಣಯ ಜೀವನ:
ಈ ತಿಂಗಳಲ್ಲಿ ಕನ್ಯಾರಾಶಿಯ ವ್ಯಕ್ತಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಒಂದು ವೇಳೆ ನಿಮಗೆ ಎದುರಾಗಿರುವ ಪರಿಸ್ಥಿತಿ ವಿಕೋಪದತ್ತ ತೆರಳುತ್ತಿದೆ ಎಂದೆನ್ನಿಸಿದರೆ ನಿಮ್ಮ ಸಂಗಾತಿಯೊಡನೆ ಮುಖಾಮುಖಿ ಕುಳಿತು ಸಕಾರಾತ್ಮಕವಾದ ಕ್ರಮಗಳನ್ನು ಕೈಗೊಂಡು ವೈಮನಸ್ಸನ್ನು ತಿಳಿಗೊಳಿಸಬೇಕು.
ಪರ್ಯಾಯವಾಗಿ, ನಿಮ್ಮ ಸಂಗಾತಿಯೊಡನೆ ಕೆಲವೇ ದಿನಗಳ ಅವಧಿಯ ಪುಟ್ಟ ಪ್ರವಾಸಕ್ಕೆ ಹೋಗಿ ಬರುವುದೂ ಸಂಬಂಧ ಉತ್ತಮಗೊಳಿಸಲು ನೆರವಾಗಲಿದೆ. ಅಲ್ಲದೇ ಧಾರ್ಮಿಕ ಅರಿವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕವೂ ಜೀವನದಲ್ಲಿ ಶಾಂತಿ ನೆಲೆಸಲಿದೆ.
ಅದೃಷ್ಟ ದಿನಾಂಕ, ಸಂಖ್ಯೆಗಳು ಮತ್ತು ಬಣ್ಣಗಳು:
ಕನ್ಯಾರಾಶಿಯವರಿಗೆ ಈ ತಿಂಗಳಿ ಅದೃಷ್ಟ ತರಲಿರುವ ಸಂಖ್ಯೆಗಳೆಂದರೆ: 16, 29, 79, 80, ಮತ್ತು 90.
ಅದೃಷ್ಟ ದಿನಾಂಕಗಳು: 4, 5, 14, 15, 16, 23, 24.
ಅದೃಷ್ಟ ತರುವ ಬಣ್ಣಗಳು: ವೈಡೂರ್ಯ ಹಸಿರು ಹಾಗೂ ತಿಳಿನೀಲಿ ಬಣ್ಣ



Click it and Unblock the Notifications












