Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇ ತಿಂಗಳಲ್ಲಿ ಅದೃಷ್ಟವು ಈ ರಾಶಿಯವರಿಗೆ ಬೆನ್ನಿಗಂಟಿಕೊಂಡೇ ಇರುತ್ತೆ
ಈ ಕೆಳಗಿನ ರಾಶಿಯವರಿಗೆ ಈ ವರ್ಷದಲ್ಲೇ ಮೇ ಅನ್ನುವುದು ಅದೃಷ್ಟದ ತಿಂಗಳು. ಈ ತಿಂಗಳಲ್ಲಿ ನಿಮ್ಮ ಅದೃಷ್ಟವು ನೀವು ಅಂದುಕೊಂಡಿರುವುದಕ್ಕಿಂತ ಮೇಸ್ತರದಲ್ಲಿ ಇರುತ್ತದೆ. ಈ ತಿಂಗಳಲ್ಲಿ ನಿಮಗೆ ಕೆಟ್ಟದಾಗುವುದು ಬಹಳ ಕಡಿಮೆ. ಕಡಿಮೆ ಅನ್ನುವುದಕ್ಕಿಂದ ಆಗುವುದೇ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಹಾಗಾದ್ರೆ ಅದ್ಯಾವ್ಯಾವ ರಾಶಿಯವರಿಗೆ ಅದೃಷ್ಟ ಲಕ್ಷ್ಮೀ ಈ ತಿಂಗಳಲ್ಲಿ ಒಲಿಯುತ್ತಾಳೆ ಅನ್ನುವುದನ್ನು ಇಲ್ಲಿ ನೋಡಿ.
ಈಗಾಗಲೇ ಮೇ ತಿಂಗಳ ಅರ್ಧ ಭಾಗ ಕಳೆದಿದ್ದೇವೆ., ಆದರೂ ಈ ತಿಂಗಳು ಕೆಲವು ರಾಶಿಯವರಿಗೆ ಬಹಳ ಅದೃಷ್ಟವಾಗಿರುವ ತಿಂಗಳಾಗಿದೆ. ಲಕ್ ಅಥವಾ ಅದೃಷ್ಟ ಇವರಿಗೆ ಈ ತಿಂಗಳಲ್ಲಿ ಬೆನ್ನಿಗೆ ಅಂಟಿಕೊಂಡೇ ಇರುತ್ತೆ. ಮುಟ್ಟಿದ್ದೆಲ್ಲ ಚಿನ್ನವಾಗುವ ಸಮಯ ಇದು. ಹಾಗಾದ್ರೆ ಅದ್ಯಾವ ರಾಶಿಯವರಿಗೆ ಈ ರೀತಿ ಅದೃಷ್ಟವಿದೆ ಎಂದು ತಿಳಿದುಕೊಳ್ಳಬೇಕಾ.. ಮುಂದೆ ಓದಿ..

ಸಿಂಹ (ಜುಲೈ 23 - ಅಗಸ್ಟ್ 23)
ಸಿಂಹ ರಾಶಿಯವರಿಗೆ ಕೇವಲ ಮೇ ತಿಂಗಳು ಮಾತ್ರವಲ್ಲ ಬದಲಾಗಿ ಈ ವರ್ಷವಿಡೀ ಒಂದು ರೀತಿಯಲ್ಲಿ ಅದೃಷ್ಟದ ವರ್ಷವೆಂದೇ ಹೇಳಬೇಕು.ಯಾಕೆಂದರೆ ಹಲವಾರು ಅವಕಾಶಗಳು ಮತ್ತು ಲಾಭಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಜೀವನದ ಹಲವು ಮಜಲುಗಳಲ್ಲಿ ಇವರಿಗೆ ಈ ವರ್ಷ ಅದೃಷ್ಟದಾಯಕವಾಗಿರುತ್ತದೆ. ಪ್ರೀತಿಪ್ರೇಮದ ವಿಚಾರಾದಲ್ಲಿ ಸ್ವಲ್ಪ ಏರುಪೇರುಗಳಾದ್ರೂ ಹಣಕಾಸಿನ ವಿಚಾರದಲ್ಲಿ ಸಿಂಹ ರಾಶಿಯವರಿಗೆ ಬಹಳ ಅದೃಷ್ಟವಿದೆ. ಒಟ್ಟಾರೆಯಾಗಿ ತಮ್ಮ ಜೀವನದ ಅಧ್ಬುತ ಕ್ಷಣಗಳು ಈ ವರ್ಷ ಇವರಿಗೆ ತೆರೆದುಕೊಳ್ಳಲಿದೆ. ಕರಿಯರ್ ನಲ್ಲಿ ಉತ್ತುಂಗಕ್ಕೆ ಏರುವ ಅವಕಾಶವಿದೆ.
ತುಲಾ (ಸೆಪ್ಟೆಂಬರ್ 24 - ಅಕ್ಟೋಬರ್ 23)
ತುಲಾ ರಾಶಿಯವರಿಗೆ ಈ ವರ್ಷ ವಿದ್ಯಾಲಕ್ಷ್ಮೀಯ ಕೃಪಾಕಟಾಕ್ಷ ಬಹಳವಾಗಿ ಇರುತ್ತದೆ. ಹಾಗಾಗಿ ಎಜುಕೇಷನ್ ವಿಚಾರದಲ್ಲಿ ಇವರದ್ದು ಈ ಬಾರಿ ಮೇಲುಗೈ.IAS ಮತ್ತು UPSC ಪರೀಕ್ಷೆಗಳನ್ನು ಎದುರಿಸುವವರಿಗೆ ಈ ತಿಂಗಳು ಒಳ್ಳೆಯ ಸುದ್ದಿ ಬರಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕಾಗಬಹುದು. ಸಣ್ಣ ಆರೋಗ್ಯ ಸಮಸ್ಯೆಯೂ ದೊಡ್ಡದಾಗಬಹುದು. ಹಣಕಾಸಿನ ವಿಚಾರದಲ್ಲಿ ಮತ್ತು ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಮಟ್ಟದ ಬೆಳವಣಿಗೆಗಳಿವೆ. ಅದೃಷ್ಟ ಲಕ್ಷ್ಮೀ ನಿಮ್ಮ ಜೊತೆಗಿರುತ್ತಾಳೆ.
ವೃಶ್ಚಿಕ ( ಅಕ್ಟೋಬರ್ 24 -ನವೆಂಬರ್ 22)
ವೃಶ್ಚಿಕ ರಾಶಿಯವರ ರಾಶಿಫಲದ ಪ್ರಕಾರ ಈ ತಿಂಗಳಲ್ಲಿ ಇವರ ಬಹಳ ಅದೃಷ್ಟವಿದೆ. ಅದ್ರಲ್ಲೂ ಪ್ರಮುಖವಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಅದು ಒಲಿದು ಬಿಡುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಕಳೆದ ಹಲವು ದಿನಗಳಿಂದ ಯಾವುದೋ ವಿಚಾರದಲ್ಲಿ ನೀವು ಬಹಳ ಕಾರ್ಯಪ್ರವೃತ್ತರಾಗಿದ್ದು., ಅದಕ್ಕಾಗಿ ಪರಿಶ್ರಮ ಪಡುತ್ತಿದ್ದರೆ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವ ಸಮಯ ಈ ತಿಂಗಳು ಬರಲಿದೆ. ಯಾವುದರಲ್ಲಾದರೂ ಹಣ ತೊಡಗಿಸಬೇಕು ಎಂದು ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಆದರೆ ಒಂದು ವಿಚಾರದ ಬಗ್ಗೆ ಗಮನ ಹರಿಸಬೇಕು. ಯಾರೊಂದಿಗೂ ಕೆಟ್ಟ ವಾದಕ್ಕೆ ಇಳಿಯದಿರುವುದು ಒಳಿತು.
ಇಂತಹ ಇನ್ನಷ್ಟು ಕುತೂಹಲಕಾರಿ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾ.. ನಿಮ್ಮ ರಾಶಿ ಫಲಾಫಲಗಳ ವಿವರಣೆ ಬೇಕಾ.. ಹಾಗಿದ್ದರೆ ನಮ್ಮ ಈ ಸೆಕ್ಷನ್ ಓದುವುದನ್ನು ಮರೆಯಬೇಡಿ.



Click it and Unblock the Notifications


